ಬಿ.ಟಿ.ಮೋಹನ್ ಕುಮಾರ್
ಮಾಜಿ ಎಂಎಲ್‌ಸಿ ಎನ್.ಅಪ್ಪಾಜಿಗೌಡರನ್ನು ಕೆಎಂಎಫ್ ನಿರ್ದೇಶಕರನ್ನಾಗಿ ನೇಮಕ
ಮಾಡುವ ಸಂಭವ; ಇಬ್ಬರಿಗೂ ಅಧಿಕಾರ ಹಂಚಿಕೆ ಮಾಡುವ ಸಾಧ್ಯತೆಯೂ ಉಂಟು
ಮಂಡ್ಯ: ಜಿ ಹಾಲು ಉತ್ಪಾದಕರ ಒಕ್ಕೂಟದ ವರಿಷ್ಠರ ಚುನಾವಣೆ ಮೇ ೨೦ರಂದು ನಿಗದಿಯಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಮಂಡ್ಯ ತಾಲ್ಲೂಕಿನ ಯು.ಸಿ.ಶಿವಕುಮಾರ್ (ಶಿವಪ್ಪ) ಮತ್ತು ಮಾಜಿ ಎಂಎಲ್‌ಸಿ ನಾಗಮಂಗಲ ತಾಲ್ಲೂಕಿನ ಎನ್. ಅಪ್ಪಾಜಿಗೌಡ ನಡುವೆ ಮೇಲ್ನೋಟಕ್ಕೆ ಪೈಪೋಟಿ ಇದೆಯಾದರೂ ಯು.ಸಿ. ಶಿವಕುಮಾರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಶಿವಕುಮಾರ್ ಅವರು ಸತತ ೩ನೇ ಬಾರಿಗೆ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿರುವುದರಿಂದ ಕಾಂಗ್ರೆಸ್ ವರಿಷ್ಠರು ಅವರಿಗೆ ಮೊದಲ ಆದ್ಯತೆ ನೀಡಲಿದ್ದಾರೆ ಎನ್ನಲಾಗುತ್ತಿದ್ದು ಎನ್. ಅಪ್ಪಾಜಿಗೌಡ ಅವ ರನ್ನು ಕರ್ನಾಟಕ ಹಾಲು ಮಹಾ ಮಂಡಳದ ನಿರ್ದೇಶಕರನ್ನಾಗಿ ನೇಮಕ ಮಾಡಲಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ. ಯು.ಸಿ.ಶಿವಕುಮಾರ್ ಅವರು ಮೂರನೇ ಬಾರಿ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರೆ, ಎನ್. ಅಪ್ಪಾಜಿಗೌಡ ಅವರು ಇದೇ ಮೊದಲ ಬಾರಿಗೆ ಆಯ್ಕೆ ಯಾಗಿzರೆ. ಜಾತ್ಯತೀತ ಜನತಾ ದಳದಿಂದ ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಚಲುವರಾಯಸ್ವಾಮಿ ಕೃಪಾಕಟಾಕ್ಷ ಯಾರಿಗೆ?: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಜಾ.ದಳದಿಂದ ಎನ್.ಅಪ್ಪಾಜಿಗೌಡ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆ ಯಾಗಲು ಕಾರಣರಾಗಿದ್ದಾರೆ. ಈಗ ಅಧ್ಯಕ್ಷರ ಆಯ್ಕೆ ತಲೆ ನೋವಾಗಿ ಪರಿಣಮಿಸಿದೆ.
ಚಲುವರಾಯಸ್ವಾಮಿ ಅವರಿಗೆ ಎನ್. ಅಪ್ಪಾಜಿಗೌಡರನ್ನು ಅಧ್ಯಕ್ಷರನ್ನಾಗಿ ಮಾಡುವ ಆಸೆ ಇದ್ದರೂ ೩ ಬಾರಿ ಗೆದ್ದಿರುವ ಯು.ಸಿ.ಶಿವಕುಮಾರ್ ಅವರನ್ನು ಕೈಬಿಡುವುದಕ್ಕೂ ಆಗುತ್ತಿಲ್ಲ. ಇಬ್ಬರಿಗೂ ಸಮಾಧಾನ ವಾಗುವ ರೀತಿಯಲ್ಲಿ ಅಧಿಕಾರ ಹಂಚಿಕೆ ಮಾಡಿದರೂ ಮಾಡಬಹುದು. ಅದರಲ್ಲಿ ಮೊದಲ ಅವಧಿಗೆ ಅಧ್ಯಕ್ಷರಾಗುವ ವರು ಯಾರೆಂಬ ಬಗ್ಗೆ ಕುತೂಹಲ ಮೂಡಿದೆ.
ನಿರ್ದೇಶಕರ ವಿವರ: ಮಂಡ್ಯ ತಾಲ್ಲೂ ಕಿನ ಮೂರು ಸ್ಥಾನಗಳಿಗೆ ಬಿ.ಆರ್. ರಾಮಚಂದ್ರ, ಎಂ.ಎಸ್.ರಘುನಂದನ್ -ಜಾ.ದಳ, ಯು.ಸಿ.ಶಿವಕುಮಾರ್ – ಕಾಂಗ್ರೆಸ್, ಮದ್ದೂರು ತಾಲ್ಲೂಕಿನ ಎರಡು ಸ್ಥಾನಗಳಿಗೆ ಎಸ್.ಪಿ.ಸ್ವಾಮಿ -ಬಿಜೆಪಿ, ಹರೀಶ್‌ಬಾಬು – ಕಾಂಗ್ರೆಸ್, ಕೆ.ಆರ್.ಪೇಟೆಯ ಎರಡು ಸ್ಥಾನಗಳಿಗೆ ಡಾಲು ರವಿ, ಎಂ.ಬಿ.ಹರೀಶ್, ನಾಗ ಮಂಗಲದ ಎರಡು ಸ್ಥಾನಗಳಿಗೆ ಎನ್.ಅಪ್ಪಾಜಿಗೌಡ, ಲಕ್ಷ್ಮಿನಾರಾಯಣ (ಕಾಂಗ್ರೆಸ್), ಮಳವಳ್ಳಿ ಒಂದು ಸ್ಥಾನಕ್ಕೆ ಕೃಷ್ಣೇಗೌಡ (ಕಾಂಗ್ರೆಸ್), ಪಾಂಡವಪುರ ತಾಲ್ಲೂಕಿನ ಒಂದು ಸ್ಥಾನಕ್ಕೆ ಸಿ.ಶಿವಕುಮಾರ್ (ಜಾ.ದಳ) ಹಾಗೂ ಶ್ರೀರಂಗಪಟ್ಟಣದ ಒಂದು ಸ್ಥಾನಕ್ಕೆ ಬಿ.ಬೊರೇಗೌಡ (ಕಾಂಗ್ರೆಸ್) ಆಯ್ಕೆಯಾಗಿದ್ದಾರೆ.
೧೭ ಮಂದಿ ಮತದಾರರು: ಮನ್ ಮುಲ್ ಅಧ್ಯಕ್ಷ- ಉಪಾಧ್ಯಕ್ಷರ ಚುನಾ ವಣೆಯಲ್ಲಿ ಒಟ್ಟು ೧೭ ಮಂದಿಗೆ ಮತದಾನ ಮಾಡುವ ಅವಕಾಶವಿದೆ. ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘ ಗಳಿಂದ ಚುನಾಯಿತರಾದ ೧೨ ಮಂದಿ ನಿರ್ದೇಶಕರು, ತಲಾ ಒಬ್ಬೊಬ್ಬರಂತೆ ಸರ್ಕಾರದ ನಾಮನಿರ್ದೇ ಶಿತ ಸದಸ್ಯರು, ಮಂಡ್ಯ ಸಹಕಾರ ಸಂಘಗಳ ಉಪನಿಬಂಧಕರು, ಕರ್ನಾ ಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಪ್ರತಿನಿಧಿ, ಮಂಡ್ಯ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರು, ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳದ ಪ್ರತಿನಿಧಿ ಸೇರಿ ೧೭ ಮಂದಿ ಮತ ಚಲಾ ಯಿಸುವ ಹಕ್ಕನ್ನು ಹೊಂದಿದ್ದಾರೆ.
ವರಿಷ್ಠರ ತೀರ್ಮಾನಕ್ಕೆ ಬದ್ಧ
” ಮನ್‌ಮುಲ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಂಬಂಧ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಗುರುವಾರ ಸಭೆ ನಡೆಯಲಿದೆ. ಶಿವಕುಮಾರ್ ಹಾಗೂ ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದು, ಇದನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ. ಅಂತಿಮವಾಗಿ ವರಿಷ್ಠರು ಏನೇ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ಧನಾಗಿರುತ್ತೇನೆ.”
– ಎನ್.ಅಪ್ಪಾಜಿಗೌಡ, ಮಾಜಿ ಎಂಎಲ್‌ಸಿ
ನ್ಯಾಯ ಸಿಗುವ ವಿಶ್ವಾಸ
” ಸತತ ೩ನೇ ಬಾರಿ ಮನ್‌ಮುಲ್ ನಿರ್ದೇಶಕನಾಗಿ ಆಯ್ಕೆಯಾಗಿದ್ದು, ಗೆದ್ದವರೆಲ್ಲರೂ ಅಧ್ಯಕ್ಷರಾಗಬೇಕೆಂದು ಆಸೆಪಡು ವುದು ಸಹಜ. ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿ ದ್ದೇನೆ. ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ವರಿಷ್ಠರ ತೀರ್ಮಾನ. ಸಚಿವ ಚಲುವರಾಯ ಸ್ವಾಮಿ ಅವರು ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ನನಗಿದೆ.”
– ಯು.ಸಿ. ಶಿವಕುಮಾರ್, ನಿರ್ದೇಶಕರು, ಮನ್ಮುಲ್
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ. ಆ ಮೂಲಕ ನಮಗೆ…
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಯಾದ…
ಚಿಕ್ಕಮಗಳೂರು: ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಘಟನೆ ಕಡೂರು ತಾಲ್ಲೂಕಿನ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ವರ…
ಬೆಂಗಳೂರು: ಬಿಜೆಪಿ ಜೊತೆ ಸೇರಿಕೊಂಡ ಮೇಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಮನುವಾದಿ ಆಗಿಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.…
ಬೆಂಗಳೂರು: ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‌ಗೆ ಬೆನ್ನುನೋವು ಮಾಯವಾಯ್ತಾ ಎಂಬ ಕುತೂಹಲ ಮನೆ ಮಾಡಿದೆ. ದರ್ಶನ್…