ಚಾಮರಾಜನಗರ: ನಗರದ ಸಮೀಪ ವಿರುವ ದೊಡ್ಡರಾಯಪೇಟೆ ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆ ಯಲು ನಗರಸಭೆಯು ೨೫ ಲಕ್ಷ ರೂ.ಗಳ ಕ್ರಿಯಾ ಯೋಜನೆ ತಯಾರಿಸಿದೆ. ಅನುಮೋದನೆ ಗಾಗಿ ನಗರಸಭೆಯ ಆಡಳಿತಾಽಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಕಳುಹಿಸಿದೆ.
ನಗರದ ಕೆಲವು ಬಡಾವಣೆಗಳ ಬಟ್ಟೆ ತೊಳೆದ, ಮಾಂಸ ಮಾರಾಟದ ಅಂಗಡಿಗಳ ನೀರು, ಶೌಚ ನೀರು ಸೇರಿದಂತೆ ಇತರೆ ಕೊಳಚೆ ನೀರು ರಾಜ ಕಾಲುವೆಯ ಮೂಲಕ ದೊಡ್ಡರಾಯಪೇಟೆ ಕೆರೆ ಸೇರಿ ನೀರು ಕಲುಷಿತವಾಗುತ್ತಿದೆ ಎಂಬ ದೂರು ದೊಡ್ಡರಾಯಪೇಟೆಯ ಗ್ರಾಮಸ್ಥರಿಂದ ಕೇಳಿಬಂದಿತ್ತು.
ಇದಲ್ಲದೆ ಈ ಕೆರೆಯಲ್ಲಿ ಮೀನುಗಳನ್ನು ಕೂಡ ಸಾಕಲಾಗುತ್ತಿದೆ. ಹಾಗಾಗಿ ಕೊಳಚೆ ನೀರು ಕೆರೆಯ ಅಂಗಳ ಸೇರುವುದನ್ನು ತಡೆಗಟ್ಟಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಗರ ಸಭೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದರು. ಇದಲ್ಲದೆ ಈ ವಿಚಾರ ಸಂಸದರು ನಡೆಸಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಚರ್ಚೆ ಯಾಗಿತ್ತು. ಸಂಸದ ಸುನಿಲ್ ಬೋಸ್ ಅವರು ಸಹ ಕೊಳಚೆ ನೀರು ಕೆರೆ ಸೇರದಂತೆ ಕ್ರಮ ವಹಿಸಬೇಕೆಂದು ಸೂಚಿಸಿದ್ದರು.
ಕೊಳಚೆ ನೀರು ಕೆರೆ ಸೇರದಂತೆ ತಡೆಯಲು ನಗರಸಭೆಯ ಅಧಿಕಾರಿಗಳು ೨೫ ಲಕ್ಷ ರೂ.ಗಳ ಕ್ರಿಯಾ ಯೋಜನೆತಯಾರಿಸಿದ್ದಾರೆ. ಕೊಳಚೆ ನೀರನ್ನು ಬೇರೆಡೆಗೆ ತಿರುಗಿಸಲು ಪೈಪ್‌ಲೈನ್ ಅಳವಡಿಕೆ ಮಾಡುವುದು. ನೀರಿನ ಶುದ್ಧೀಕರಣ ಘಟಕ ನಿರ್ಮಾಣ ಮಾಡುವ ಪ್ರಸ್ತಾವನೆ ಸಲ್ಲಿಸಿದೆ.
ನಗರದ ವಿವಿಧ ಬಡಾವಣೆಗಳ ಕೊಳಚೆ ನೀರು ನಂಜನಗೂಡು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿಯಿಂದ ಹಾದು ಸಂತೇಮರಹಳ್ಳಿ ರಸ್ತೆ ಮಾರ್ಗವಾಗಿ ಸಾಗಿ ಜಾಲಹಳ್ಳಿ ಹುಂಡಿ ಬಳಿ ಬಲಕ್ಕೆ ತಿರುಗುತ್ತದೆ. ಅಲ್ಲಿಂದ ಹಳ್ಳದ ಮೂಲಕ ದೊಡ್ಡ ರಾಯಪೇಟೆ ಕೆರೆ ಸೇರುತ್ತಿತ್ತು. ಸ್ಥಳೀಯ ರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸದ್ಯ ನೀರು ಕೆರೆ ಸೇರದಂತೆ ಹಳ್ಳಕ್ಕೆ ತಿರುಗಿಸಲಾಗಿದೆ.
ಕ್ರಿಯಾಯೋಜನೆಗೆ ಅನುಮೋದನೆ ದೊರೆತರೆ ಕೊಳಚೆ ನೀರನ್ನು ಕೆರೆಯ ಬಳಿ ಯಿಂದ ಪೈಪ್‌ಲೈನ್ ಮೂಲಕ ಬೇರೆಡೆಗೆತಿರುಗಿಸಲಾಗುವುದು. ಇದಕ್ಕಾಗಿ ನಗರ ಸಭೆಯು ಅನುಮೋದನೆಗಾಗಿ ಸಂಬಂಧಪಟ್ಟ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದೆ. ಬೇಗ ಅನುಮೋದನೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ.
” ಕೆರೆಗೆ ಕೊಳಚೆ ನೀರು ಸೇರಿದರೆ ಕಲುಷಿತವಾಗಲಿದೆ. ಕೆರೆಯ ನೀರನ್ನು ಜಾನುವಾರುಗಳು ಹಾಗೂ ಪ್ರಾಣಿ ಪಕ್ಷಿಗಳು ಕುಡಿಯುತ್ತವೆ. ಅವುಗಳ ಜೀವಕ್ಕೆ ತೊಂದರೆ ಆಗಬಾರದು. ಆದ್ದರಿಂದ ಕೊಳಚೆ ನೀರನ್ನು ಶಾಶ್ವತವಾಗಿ ಬೇರೆಡೆಗೆ ತಿರುಗಿಸಬೇಕು.”
-ಕಿರಣ್, ದೊಡ್ಡರಾಯಪೇಟೆ
” ಕ್ರಿಯಾ ಯೋಜನೆ ಯನ್ನು ಜಿಲ್ಲಾ ನಗರಾ ಭಿವೃದ್ಧಿ ಕೋಶದ ಮೂಲಕ ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಅವರು ಪರಿಶೀಲಿಸಿ ಒಪ್ಪಿಗೆ ನೀಡಿದ ಬಳಿಕ ಡಿಪಿಆರ್ ತಯಾರಿಸಿ ಕಾಮಗಾರಿಗೆ ಗುತ್ತಿಗೆದಾರರನ್ನು ಆಹ್ವಾನಿಸಲಾಗುವುದು.”
– ಎಸ್.ಎ.ರಾಮದಾಸ್, ನಗರಸಭೆ ಪೌರಾಯುಕ್ತ
ರಾಜ್ಯ ಸರ್ಕಾರದಿಂದ ಅನುದಾನ ವಿಳಂಬ; ಚಿಕಿತ್ಸೆಗಾಗಿ ಬೆಂಗಳೂರು, ಮೈಸೂರಿನ ಆಸ್ಪತ್ರೆಗೆ ಅಲೆಯುತ್ತಿರುವ ರೋಗಿಗಳು ಮಂಡ್ಯ: ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ…
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…