Andolana originals

ವಿಶೇಷಚೇತನರಿಗೆ ಪ್ರತ್ಯೇಕ ಕಾಲೋನಿ; ಕನಸಿನ ಸೂರು ಸನಿಹ

ಅನುಚೇತನ್ ಕೆ.ಎಂ.

ದಡದಹಳ್ಳಿ ಭಾಗದಲ್ಲಿ ಸ್ಥಳ ಪರಿಶೀಲನೆ; ಯೋಜನೆಗೆ ನಾಲ್ಕು ಎಕರೆ ಭೂಮಿ ಗುರುತು  ವಿಶೇಷಚೇತನರಿಗೆ ಯೋಜನೆಯ ಸೌಲಭ್ಯ 

ಮೈಸೂರು: ಎಲ್ಲರಿಗೂ ಸ್ವಂತ ಮನೆ ಹೊಂದಬೇಕೆಂಬ ಆಸೆ ಇರುತ್ತದೆ. ಇಂತಹ ಆಸೆಯೊಂದಿಗೆ ಹಲವು ವರ್ಷಗಳಿಂದ ಸ್ವಂತ ಸೂರಿಗಾಗಿ ಪರಿತಪಿಸಿ, ಹೋರಾಟಕ್ಕಿಳಿದು ಪ್ರತಿಭಟಿಸಿ ಬಸವಳಿದಿದ್ದ ವಿಶೇಷಚೇತನರಿಗೆ ನೆರಳಾಗಲು ಮುಂದಾಗಿರುವ ಜಿಲ್ಲಾಡಳಿತ ಇದೀಗ ಪ್ರತ್ಯೇಕ ಕಾಲೋನಿ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ದಡದಹಳ್ಳಿಯಲ್ಲಿ ನಾಲ್ಕು ಎಕರೆ ಭೂಮಿಯನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಜ್ಜಾಗಿದೆ.

ಒಂದು ವರ್ಷದ ಹಿಂದೆ ನಡೆದಿದ್ದ ವಿಶೇಷಚೇತನರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿದ್ದ ವಿಶೇಷ ಚೇತನರು ತಮಗೆ ಸ್ವಂತ ಸೂರು ಕಲ್ಪಿಸಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಇದಕ್ಕೆ ಜಿಲ್ಲಾಡಳಿತ ಸ್ಪಂದಿಸಿತ್ತು. ಅದರಂತೆ ಹಿಂದೆ ಇದ್ದ ಜಿಲ್ಲಾಧಿಕಾರಿಗಳು ಸಭೆ ನಡೆಸಿ ನಗರದ ಸುತ್ತಮುತ್ತ ೧೦ ಕಿ.ಮೀ. ವ್ಯಾಪ್ತಿಯಲ್ಲಿ ೨-೩ ಎಕರೆ ಜಾಗದಲ್ಲಿ ವಿಶೇಷಚೇತನರಿಗೆ ಪ್ರತ್ಯೇಕ ಬಡಾವಣೆ ನಿರ್ಮಿಸಲು ತೀರ್ಮಾನಿಸಿದ್ದರು. ಇದೀಗ ಜಿಲ್ಲಾ ಡಳಿತ ಸ್ಥಳ ಪರಿಶೀಲನೆಯ ಜವಾಬ್ದಾರಿಯನ್ನು ತಹಸಿಲ್ದಾರರಿಗೆ ವಹಿಸಿದ್ದು, ನಗರದ ದಡದಹಳ್ಳಿ ಭಾಗದಲ್ಲಿ ಸರ್ವೆ ನಂಬರ್ ೬೬ರಲ್ಲಿ ಸ್ಥಳ ಗುರುತಿಸಲಾಗಿದೆ. ಈ ಬಗ್ಗೆ ಸದ್ಯದಲ್ಲೇ ಉಪ ವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ. ಜಿಲ್ಲಾಧಿಕಾರಿಗಳು ವರದಿ ಪರಿಶೀಲಿಸಿದ ನಂತರ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲಾಗುತ್ತದೆ.

ನಿರಾಶ್ರಿತರು, ಬಡವರಿಗೆ ಸೂರಿನ ಸೌಲಭ್ಯ: ವಿಶೇಷಚೇತನರಲ್ಲಿ ಹೆಚ್ಚಿನವರು ನಗರದ ಭಾಗದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಜೀವನ ನಿರ್ವಹಣೆ ಮಾಡಲು ಕಷ್ಟಪಡುತ್ತಿದ್ದಾರೆ. ಸರ್ಕಾರದಿಂದ ಸರಿಯಾದ ರೀತಿಯಲ್ಲಿ ಸಾಲ ಸೌಲಭ್ಯವಾಗಲಿ, ಉದ್ಯೋಗವಾಗಲಿ, ಇತರ ಯೋಜನೆಗಳ ಸೌಲಭ್ಯಗಳು ದೊರೆಯದೆ ಬದುಕು ಸಾಗಿಸಲು ಹರ ಸಾಹಸ ಪಡುತ್ತಿದ್ದಾರೆ. ಕೆಲವರಂತೂ ಎಲ್ಲೂ ಉದ್ಯೋಗ ಸಿಗದೆ ಭಿಕ್ಷಾಟನೆಯಲ್ಲಿ ತೊಡಗಿಕೊಂಡು ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ೨೦೧೧ರ ಜನಗಣತಿ ಪ್ರಕಾರ ೪೪,೦೯೪ ಜನ ವಿಶೇಷಚೇತನರಿದ್ದಾರೆಂದು ಗುರುತಿಸಲಾಗಿತ್ತು. ಪ್ರಸ್ತುತ ಸರ್ಕಾರಗಳ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ೭೦ ಸಾವಿರಕ್ಕೂ ಹೆಚ್ಚು ವಿಶೇಷಚೇತನರಿದ್ದು ನಗರ ಭಾಗದಲ್ಲೇ ೧೫ ಸಾವಿರಕ್ಕೂ ಹೆಚ್ಚಿನ ವಿಶೇಷಚೇತನರಿದ್ದಾರೆಂದು ಅಂದಾಜಿಸಲಾಗಿದೆ. ಈ ಯೋಜನೆಯನ್ನು ನಗರ ಭಾಗದ ವಿಶೇಷಚೇತನರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದ್ದು, ಅರ್ಹರಿಗೆ ಸೂರು ನೀಡಲು ಯೋಜನೆ ಅನುಷ್ಠಾನಗೊಳಿಸಲು, ಜಿಲ್ಲಾಡಳಿತ ತೀರ್ಮಾನಿಸಿದೆ. ಇದರಿಂದಾಗಿ ಬಡವರು ಹಾಗೂ ನಿರಾಶ್ರಿತರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

೧೯೮೩ರಲ್ಲಿ ಮನೆ ನಿರ್ಮಿಸಿಕೊಡಲಾಗಿತ್ತು: ಸರ್ಕಾರ ಈ ಹಿಂದೆ ೧೯೮೩-೮೪ನೇ ಸಾಲಿನಲ್ಲಿ ಇಂತಹದ್ದೇ ಯೋಜನೆಯನ್ನು ರೂಪಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷಚೇತನರಿಗಾಗಿ ನಗರದ ಎನ್.ಆರ್.ಮೊಹಲ್ಲಾದಲ್ಲಿ ಪ್ರತ್ಯೇಕವಾಗಿ ಮನೆಗಳನ್ನು ನಿರ್ಮಿಸಿ ವಿತರಿಸಲಾಗಿತ್ತು. ಅಲ್ಲಿಂದ ಇಲ್ಲಿಯ ವರೆಗೆ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸಿರಲಿಲ್ಲ. ೨೦ ವರ್ಷಗಳ ವಿಶೇಷಚೇತನರ ಹೋರಾಟದಿಂದ ಮತ್ತೊಮ್ಮೆ ಅಂದಿನ ಮಾದರಿಯಲ್ಲೇ ವಿಶೇಷಚೇತನರಿಗೆ ಸೂರು ಕಲ್ಪಿಸಲು ಮುಂದಾಗಿರುವುದು ಸಂತಸ ತಂದಿದೆ ಎಂದು ಕರ್ನಾಟಕ ರಾಜ್ಯ ವಿಶೇಷಚೇತನರ ವೇದಿಕೆ ರಾಜ್ಯ ಸಂಚಾಲಕ ಎಂ.ಪ್ರಭುಸ್ವಾಮಿ ತಿಳಿಸಿದ್ದಾರೆ.

” ಹಡಜನದಲ್ಲಿ ಸ್ಥಳ ಕೇಳಲಾಗಿತ್ತು. ಸದ್ಯ ಜಿಲ್ಲಾಡಳಿತ ದಡದಹಳ್ಳಿ ಭಾಗದಲ್ಲಿ ಸ್ಥಳ ಪರಿಶೀಲನೆ ಮಾಡಿದೆ. ಇದರಿಂದ ಹಲವು ವಿಶೇಷಚೇತನರಿಗೆ ಅನುಕೂಲವಾಗಲಿದೆ. ಅರ್ಹ ಪಲಾನುಭವಿಗಳಿಗೆ ಈ ಯೋಜನೆಯ ಅನುಕೂಲ ದೊರಯಬೇಕು. ಹಂತ ಹಂತವಾಗಿ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಿ. ಇದರ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತ ವಹಿಸಬೇಕು.”

– ಎಂ.ಪ್ರಭುಸ್ವಾಮಿ, ರಾಜ್ಯಸಂಚಾಲಕಕರ್ನಾಟಕ ರಾಜ್ಯ ವಿಶೇಷಚೇತನರ ವೇದಿಕೆ.

” ದಡದಹಳ್ಳಿಯಲ್ಲಿ ಸರ್ವೆ ನಂಬರ್ ೬೬ರಲ್ಲಿ ನಾಲ್ಕು ಎಕರೆ ಭೂಮಿ ಗುರುತಿಸಿ ನಕ್ಷೆ ಸಿದ್ಧಪಡಿಸಲಾಗಿದೆ. ಸದ್ಯದಲ್ಲೇ ಉಪವಿಭಾಗೀಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದೇವೆ. ನಂತರ ಜಿಲ್ಲಾಧಿಕಾರಿಗಳು ವರದಿ ಪರಿಶೀಲಿಸಿ, ಮಹಾನಗರಪಾಲಿಕೆ ಮೂಲಕ ಯೋಜನೆ ಕಾರ್ಯರೂಪಕ್ಕೆ ಬರಲಿದೆ.”

ಮಹೇಶ್ ಕುಮಾರ್, ತಹಸಿಲ್ದಾರ್

ಆಂದೋಲನ ಡೆಸ್ಕ್

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಎಲ್ಲ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರುವಂತಾದರೆ!

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…

57 mins ago

2025ರ ನೆನಪು: ಅಗಲಿದ ಗಣ್ಯರ ನೆನಪಿನ ಮಾಲಿಕೆ…

2025ರಲ್ಲಿ ವಿಧಿವಶರಾದ ಗಣ್ಯರ ಮಾಹಿತಿ  ಜನವರಿ... ನಾ.ಡಿಸೋ’ಜಾ: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಕಾದಂಬರಿಕಾರ ನಾ ಡಿ’ಸೋಜಾ ಅವರು ಜನವರಿ…

1 hour ago

ಆಪರೇಟರ್ ಸಮಯ ಪ್ರಜ್ಞೆ: ನಕಲಿ ಜಿಪಿಎಗೆ ಬ್ರೇಕ್

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಎಚ್ಚರಿಕೆ ವಹಿಸಿದಲ್ಲಿ ನಡೆಯ ಬಹುದಾದ ವಂಚನೆಗಳನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ವಿಧಾನಪರಿಷತ್…

1 hour ago

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

11 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

12 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

13 hours ago