ಕೆ.ಪಿ.ಮದನ್
ದೂಳು ಹಿಡಿಯುತ್ತಿರುವ ರಾಶಿ ರಾಶಿ ಪುಸ್ತಕಗಳು
ಮೈಸೂರು: ಗ್ರಂಥಾಲಯವೆಂದರೆ ಅಧ್ಯಯನಕ್ಕೆ ಪೂರಕವಾದ ಪ್ರಶಾಂತತೆ, ಅಕ್ಷರ ಒಲುಮೆ ಇರುವವರ ಕೈ ಬೀಸಿ ಕರೆಯುವಂತಿರುವ ಪುಸ್ತಕಗಳು, ಪರಾಮರ್ಶನಾ ಗ್ರಂಥಗಳು, ಸ್ವಚ್ಛತೆ, ಯಥೇಚ್ಛ ಗಾಳಿ – ಬೆಳಕು… ಮತ್ತಿತರ ಸೌಲಭ್ಯಗಳು ಇರಬೇಕು. ಆದರೆ, ನಗರದ ಬಡಾವಣೆಯಲ್ಲಿರುವ ಗ್ರಂಥಾಲಯವೊಂದು ಇದಕ್ಕೆ ತದ್ವಿರುದ್ಧವಾಗಿದೆ.
ಪುಸ್ತಕ ಓದಲು ಸರಿಯಾದ ಗಾಳಿ ಬೆಳಕು ಇಲ್ಲ. ಹಳೆಯ ಪುಸ್ತಕಗಳನ್ನು ಇಡಲು ಸೂಕ್ತ ಸ್ಥಳವಿಲ್ಲ. ಕಟ್ಟಡದ ನಿರ್ವಹಣೆ ಸಮರ್ಪಕವಾಗಿಲ್ಲ… ಇದು ನಗರದ ಸರಸ್ವತಿಪುರಂನಲ್ಲಿರುವ ಸಾರ್ವಜನಿಕ ಗ್ರಂಥಾಲಯದ ದುಸ್ಥಿತಿ.
ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ. ಕಟ್ಟಡಕ್ಕೆ ಬಣ್ಣ- ಸುಣ್ಣ ಬಳಿದು ಎಷ್ಟು ವರ್ಷಗಳಾಗಿವೆಯೋ? ಪುಸ್ತಕಗಳನ್ನು ಜೋಡಿಸಿರುವ ರ‍್ಯಾಕ್ ಯಾವಾಗ ಬೇಕಾದರೂ ಮುರಿದು ಬೀಳಬಹುದು.
ಶೌಚಾಲಯದ ವ್ಯವಸ್ಥೆ ಇಲ್ಲ: ಸ್ಪರ್ಧಾತ್ಮಕ ಪರೀಕ್ಷೆ ಗಾಗಿ ಅಭ್ಯಾಸ ಮಾಡುವುದಕ್ಕೆ ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು/ ವಿದ್ಯಾರ್ಥಿನಿಯರು ಗಂಟೆಗಟ್ಟಲೇ ಇರುತ್ತಾರೆ. ಹಿರಿಯ ನಾಗರಿಕರೂ ದಿನಪತ್ರಿಕೆಗಳು, ನಿಯತಕಾಲಿಕೆಗಳನ್ನು ಓದುವುದಕ್ಕೆ ಇಲ್ಲಿಗೆ ಬರುತ್ತಾರೆ. ಅಂತಹವರಿಗೆ ಕುಡಿಯಲು ನೀರು, ಶೌಚಾಲಯದ ಸೌಲಭ್ಯ ಅತ್ಯಗತ್ಯ. ಆದರೆ, ಇಲಾಖೆಯು ಅದರ ಬಗ್ಗೆ ಕಿಂಚಿತ್ತೂ ಚಿಂತಿಸಿದಂತೆಯೇ ಇಲ್ಲ.
ಈ ಗ್ರಂಥಾಲಯ ಉದ್ಯಾನದ ಆವರಣದಲ್ಲಿದ್ದು, ಅಲ್ಲಿ ನಗರಪಾಲಿಕೆಯಿಂದ ನಿರ್ಮಾಣವಾದ ಶೌಚಾಲಯ ಇದೆ. ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಸಾರ್ವಜನಿಕರ ಬಳಕೆಗೆ ಯೋಗ್ಯ ಇಲ್ಲದಂತಾಗಿದೆ. ದಿನಪತ್ರಿಕೆಗಳು ಹಾಗೂ ಮ್ಯಾಗ್‌ಜಿನ್ ವಿಭಾಗದಲ್ಲಿಯೇ ಹಳೆಯ ಪುಸ್ತಕಗಳು ಮತ್ತು ಹಳೆಯ ಪತ್ರಿಕೆಗಳನ್ನು ಗುಡ್ಡೆ ಹಾಕಲಾಗಿದೆ. ಅವು ದೂಳು ಹಿಡಿಯುತ್ತಿವೆ. ಗ್ರಂಥಾಲಯಕ್ಕೆ ಬಂದಿರುವ ನೂತನ ಪುಸ್ತಕಗಳನ್ನು ಹಳೆಯ ಪುಸ್ತಕಗಳ ಜೊತೆಯಲ್ಲಿಯೇ ಇಡಲಾಗಿದೆ. ಹಾಗಾಗಿ ಅವೂ ಹಾಳಾಗುತ್ತಿವೆ.
ಪುಸ್ತಕಗಳ ರಾಶಿ: ಗ್ರಂಥಾಲಯದಲ್ಲಿ ಪುಸ್ತಕಗಳನ್ನು ರಾಶಿಯಲ್ಲಿ ಎಸೆಯಲಾಗಿದೆ. ಅಲ್ಲಿನ ಒಳಾವರಣ ಗ್ರಂಥಾಲಯದಂತೆ ಕಾಣುವುದಿಲ್ಲ. ಗ್ರಂಥಾಲಯದ ಮೇಲ್ಭಾಗದ ಕೊಠಡಿಯಲ್ಲಿ ಉಪಯೋಗಕ್ಕೆ ಬಾರದ ವಸ್ತುಗಳು ಹಾಗೂ ಮುರಿದ ಕುರ್ಚಿ, ಟೇಬಲ್‌ಗಳನ್ನು ತುಂಬಲಾಗಿದೆ. ಸ್ವಚ್ಛತೆ ಇಲ್ಲದ ಕಾರಣ ಸಂಜೆಯ ವೇಳೆ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು. ಗ್ರಂಥಾಲಯವನ್ನು ಓದುಗ ಸ್ನೇಹಿಯನ್ನಾಗಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ
” ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗೂ ಓದುಗರು ನಿಗದಿಪಡಿಸಿರುವ ಸ್ಥಳದಲ್ಲಿ ಹಳೆಯ ಪುಸ್ತಕಗಳ ರಾಶಿಯನ್ನು ಇಡಲಾಗಿದೆ. ಗ್ರಂಥಾಲಯದಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲ ಹಾಗೂ ಪಾರ್ಕ್ನಲ್ಲಿರುವ ಶೌಚಾಲಯವನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಪ್ರತಿದಿನ ಗ್ರಂಥಾಲಯಕ್ಕೆ ಬರುವ ಓದುಗರಿಗೆ ತೊಂದರೆಗಳು ಹೆಚ್ಚಾಗಿವೆ.”
-ರಾಕೇಶ್, ಗ್ರಂಥಾಲಯಕ್ಕೆ ಬರುವ ಓದುಗ.
” ಮಹಾನಗರ ಪಾಲಿಕೆಯಿಂದ ಕಟ್ಟಡ ಹಸ್ತಾಂತರ ಮಾಡಿಲ್ಲ. ಆದ್ದರಿಂದ ಗ್ರಂಥಾಲಯ ಉನ್ನತೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಗ್ರಂಥಾಲಯದಲ್ಲಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು.”
-ಬಿ.ಮಂಜುನಾಥ್, ಉಪನಿರ್ದೇಶಕರು, ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ, ಮೈಸೂರು.
” ೬೦೦ ಮಂದಿ ಸದಸ್ಯರು”
” ಗ್ರಂಥಾಲಯದಲ್ಲಿ ಕುಳಿತುಕೊಳುವುದಕ್ಕೆ ಕನಿಷ್ಠ ಕುರ್ಚಿಗಳ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಗ್ರಂಥಾಲಯದಲ್ಲಿ ಖಾಯಂ ಗ್ರಂಥಪಾಲಕರೊಬ್ಬರು ಹಾಗೂ ಇಬ್ಬರು ಹಂಗಾಮಿ ನೌಕರರು ಇದ್ದಾರೆ. ೬೦೦ಕ್ಕೂ ಹೆಚ್ಚು ಮಂದಿ ಈ ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆದಿದ್ದಾರೆ.”
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…