ಕೆ.ಬಿ.ರಮೇಶನಾಯಕ
ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್, ಹೊಸ ವರ್ಷದ ಸಂಭ್ರಮಾಚರಣೆಗಾಗಿಪ್ರವಾಸಿಗರು ಅರಮನೆ ನಗರಿಯತ್ತ ಆಗಮಿಸುತ್ತಿದ್ದಾರೆ.
ಸಫಾರಿ ಬಂದ್ ಮಾಡಿದ್ದರಿಂದಾಗಿ ಬಂಡೀ ಪುರ, ನಾಗರಹೊಳೆ ವ್ಯಾಪ್ತಿಯ ಜೆಎಲ್‌ಆರ್, ರೆಸಾರ್ಟ್‌ಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಲು ನಿರುತ್ಸಾಹ ತೋರಿದರೆ, ಸಾಂಸ್ಕೃತಿಕ ನಗರಿಯತ್ತ ಪ್ರವಾಸಿಗರ ದಂಡು ಆಗ ಮಿಸುತ್ತಿರುವು ದರಿಂದ ಮೈಸೂರಿನ ಬಹುತೇಕ ಹೋಟೆಲ್, ಲಾಡ್ಜ್‌ಗಳ ಕೊಠಡಿಗಳು ಮೂರ ದಿನಗಳ ಮಟ್ಟಿಗೆ ಬಹುತೇಕ ಭರ್ತಿಯಾಗಿವೆ.
ಕಳೆದ ಅಕ್ಟೋ ಬರ್-ನವೆಂಬರ್ ತಿಂಗಳಲ್ಲಿ ಹುಲಿ ದಾಳಿಗೆ ನಾಲ್ವರು ಬಲಿಯಾಗಿದ್ದ ಕಾರಣ ಬಂಡೀಪುರ, ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸರ್ಕಾರ ಸಫಾರಿ ಬಂದ್ ಮಾಡಿದೆ.
ಇದರಿಂದಾಗಿ ಹೊರ ರಾಜ್ಯ ಗಳ, ವಿದೇಶಿ ಪ್ರವಾಸಿಗರು ಮೈಸೂರಿಗೆ ಬಂದರೂ ಸ-ರಿ ಇಲ್ಲದ ಕಾರಣ ಬೇರೆ ಕಡೆಗೆ ಪಯಣ ಬೆಳೆಸುತ್ತಿದ್ದಾರೆ. ಆದರೆ, ಇದೀಗ ಹೊಸ ವರ್ಷದ ಸಂಭ್ರಮಕ್ಕೆ ದಿನಗಣನೆ ಶುರುವಾಗಿರುವ ನಡುವೆ ಪ್ರವಾಸಿಗರು ಒಂದೆರಡು ದಿನಗಳ ಮಟ್ಟಿಗೆ ಕೊಠಡಿಗಳನ್ನು ಕಾಯ್ದಿರಿಸುತ್ತಿರುವ ಪರಿಣಾಮ ಡಿಸೆಂಬರ್ ತಿಂಗಳಲ್ಲಿ ದೊಡ್ಡ ನಷ್ಟವಾಗಿದೆ. ಬಂಡೀಪುರ ಜೆಎಲ್‌ಆರ್‌ನಲ್ಲಿ ಅತಿ ಹೆಚ್ಚು ಸಫಾರಿ ವೀಕ್ಷಣೆಗೆ ಬರುವ ಕಾರಣ ಕಳೆದ ವರ್ಷ ಶೇ.೧೦೦ರಷ್ಟು ಭರ್ತಿಯಾಗಿದ್ದರೆ, ಈ ಬಾರಿ ಶೇ.೨೦ರಷ್ಟು ಕಾಯ್ದಿರಿಸಲಾಗಿದೆ. ಕಳೆದ ವರ್ಷ ಎಲ್ಲ ಖರ್ಚುಗಳೂ ಕಳೆದು ಒಂದೂವರೆ ಕೋಟಿ ರೂ.ಗಳಷ್ಟು ಆದಾಯ ಬಂದಿದ್ದರೆ, ಈ ಬಾರಿ ೧೦ ಲಕ್ಷ ರೂ. ದಾಟುವುದೂ ಅನುಮಾನವಾಗಿದೆ.
ಕಬಿನಿ ಜೆಎಲ್‌ಆರ್, ಕಿಂಗ್ ಸ್ಯಾಂಚುರಿಯಲ್ಲಿ ಡಿಸೆಂಬರ್ ೨೯, ೩೦ ಮತ್ತು ೩೧ಕ್ಕೆ ಮಾತ್ರ ಶೇ.೭೦ರಷ್ಟು ಬುಕ್ಕಿಂಗ್ ಆಗಿದ್ದು, ಜ.೧ರಂದು ಕೊಠಡಿಗಳು ಬುಕ್ಕಿಂಗ್ ಆಗಿಯೇ ಇಲ್ಲ. ಈ ತಿಂಗಳು ಪೂರ್ಣ ಬಿಸಿನೆಸ್ ಇಲ್ಲದ ಕಾರಣ ಅಂದಾಜು ೫ ಕೋಟಿ ರೂ. ನಷ್ಟವಾಗಿದೆ. ಹೊಸ ವರ್ಷಕ್ಕೆ ಕೊಠಡಿಗಳನ್ನು ಕಾಯ್ದಿರಿಸಿದ್ದ ವಿದೇಶಿ ಪ್ರವಾಸಿಗರು ಈಗಾಗಲೇ ರದ್ದುಪಡಿಸಿಕೊಂಡಿದ್ದಾರೆ. ಇಲ್ಲಿಗೆ ಬಹುತೇಕ ಎಲ್ಲ ವಿದೇಶಿಗರೂ ಸಫಾರಿಗಾಗಿ ಮಾತ್ರ ಬರುತ್ತಿದ್ದರು.
ಇದೀಗ ತಮಿಳುನಾಡು, ಮಧ್ಯ ಪ್ರದೇಶ ದತ್ತ ಮುಖ ಮಾಡಿದ್ದಾರೆ. ಈ ಬೆಳವಣಿಗೆಯು ಮುಂದಿನ ವರ್ಷದ ಮುಂಗಡ ಕಾಯ್ದಿರಿಸು ವಿಕೆಯ ಮೇಲೂ ಪರಿಣಾಮ ಬೀರಲಿದೆ ಎನ್ನುವ ಆತಂಕ ಅಧಿಕಾರಿಗಳಲ್ಲಿ ಮನೆ ಮಾಡಿದೆ. ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಸಫಾರಿ ಬಂದ್ ಮಾಡಿದ್ದರೂ ಜೆಎಲ್‌ಆರ್‌ನಲ್ಲಿ ಸ್ವಿಮ್ಮಿಂಗ್, ಬರ್ಡ್‌ವಾಚ್, ಸೈಕ್ಲಿಂಗ್ ವ್ಯವಸ್ಥೆ ಇರುವ ಕಾರಣಕ್ಕಾಗಿ ಅಲ್ಪ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಆದರೆ, ತಂಗುವುದಕ್ಕೆ ಒಲವು ತೋರದ ಕಾರಣ ಆದಾಯ ಬರುತ್ತಿಲ್ಲ. ಹೊಸ ವರ್ಷದ ಹಿಂದಿನ ಎರಡು ದಿನಗಳು ಮಾತ್ರ ಬುಕ್ಕಿಂಗ್ ಆಗಿವೆ. ನಂತರದಲ್ಲಿ ಬುಕ್ಕಿಂಗ್ ಮಾಡುವುದಕ್ಕೆ ಕರೆಯೇ ಬರುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ.೩೦ರಷ್ಟು ಆದಾಯ ಬರುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಕೊಠಡಿಗಳ ಬುಕ್ಕಿಂಗ್‌ಗೆ ಮುಗಿಬಿದ್ದ ಜನತೆ:
ಹೊಸ ವರ್ಷಾಚರಣೆಯನ್ನು ಮೈಸೂರಿನಲ್ಲೇ ಆಚರಿಸಬೇಕೆಂಬ ಆಸೆ ಹೊತ್ತವರು ಬುಕ್ಕಿಂಗ್ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ತಾರಾ ಹೋಟೆಲ್‌ಗಳು, ರೆಸಾರ್ಟ್‌ಗಳಲ್ಲಿ ಹೊಸ ವರ್ಷದ ಸಂಭ್ರಮ ಕಳೆಯಲು ಹಲವು ಬಗೆಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇದರಿಂದಾಗಿಯೇ ಬಹುತೇಕರು ದೂರವಾಣಿ, ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುವ ಕೆಲಸ ಪ್ರಾರಂಭಿಸಿದ್ದಾರೆ. ಈಗಾಗಲೇ ನಗರದಲ್ಲಿರುವ ಹೋಟೆಲ್‌ಗಳಲ್ಲಿ ಮೂರು ದಿನಗಳ ಮಟ್ಟಿಗೆ ಶೇ.೯೦ರಷ್ಟು ಮುಂಗಡ ಬುಕ್ಕಿಂಗ್ ಆಗಿದೆ ಎಂದು ಖಾಸಗಿ ಹೋಟೆಲ್ ಮ್ಯಾನೇಜರ್ ಒಬ್ಬರು ಹೇಳಿದರು.
ವಾಹನಗಳ ದಟ್ಟಣೆ:
ರಾಜ್ಯಾದ್ಯಂತ ವಿವಿಧೆಡೆಯಿಂದ ಮೈಸೂರಿಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ನೆರೆಯ ರಾಜ್ಯಗಳಿಂದಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ನಗರದ ಎಲ್ಲೆಂದರಲ್ಲಿ ಪ್ರವಾಸಿಗರನ್ನು ಹೊತ್ತ ವಾಹನಗಳ ಓಡಾಟವು ಜೋರಾಗಿದೆ. ನಗರಕ್ಕೆ ಒಮ್ಮೆಲೇ ಆಗಮಿಸುತ್ತಿರುವ ನೂರಾರು ವಾಹನಗಳಿಂದ ಕೆಲವು ಕಡೆ ಸಂಚಾರ ದಟ್ಟಣೆ ಆಗುತ್ತಿದೆ. ಅರಮನೆ ಪೂರ್ವದ್ವಾರ (ದೊಡ್ಡಕೆರೆ ಮೈದಾನದ ಕಡೆ)ದ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತಿದೆ.
ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗದ ಗ್ರಾಮಗಳಿಗೆ ಕಾಡಾನೆ ಭೀಮು ಎಂಟ್ರಿ ಕೊಡುತ್ತಿದೆ. ಶಾಂತ ಸ್ವಭಾವದ ಭೀಮನನ್ನು ನೋಡಲು ಜನರು…
ಬೆಂಗಳೂರು: ಇಲ್ಲಿನ ಯಲಹಂಕ, ಫಕೀರ್ ಕಾಲೋನಿ ಹಾಗೂ ವಸೀಮ್ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳ ತೆರವು ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಬುಲ್ಡೋಜರ್…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಮಾರ್ಕ್ ಚಿತ್ರಕ್ಕೂ ಪೈರಸಿ…
ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಕಷ್ಟ ಎಂದು ಮಾಜಿ ಎಚ್‌ಡಿಡಿ ಹೇಳಿಕೆ ಕುರಿತು ಬಿಜೆಪಿ…
ಬೆಂಗಳೂರು: ಸರ್ಕಾರ ಕೆಲವು ತಿಂಗಳ ಹಿಂದೆ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಸೇರಿದಂತೆ 5678 ಎಕರೆ ಹುಲ್ಲುಗಾವಲು…
ಕಾಸರಗೋಡು: ಹಳಿ ದಾಟುವಾಗ ಯುವಕ ಸಾವನ್ನಪ್ಪಿರುವ ಘಟನೆ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ. ಕೊಡಗು ಜಿಲ್ಲೆ ಗೋಣಿಮಾಗೂರಿನ ಸೋಮವಾರಪುರದ ಚೆನ್ನಯ್ಯ ಅವರ…