Andolana originals

ಮಹದೇಶ್ವರ ಬೆಟ್ಟದ ದೀಪಾವಳಿ ಜಾತ್ರೆಯಲ್ಲಿ 2.19 ಕೋಟಿ ರೂ. ಸಂಗ್ರಹ!

ಮಹಾದೇಶ್ ಎಂ.ಗೌಡ

೫ ದಿನಗಳ ಮಹೋತ್ಸವದಲ್ಲಿ ಲಾಡು ಮಾರಾಟದಲ್ಲೇ ದಾಖಲೆ; ಕಳೆದ ವರ್ಷಕ್ಕಿಂತ ಆದಾಯ ಹೆಚ್ಚಳ 

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ಸಂಭ್ರಮದಿಂದ ಜರುಗಿದ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಹರಕೆ, ಸೇವೆ ಹಾಗೂ ಪ್ರಸಾದ ಮಾರಾಟದಿಂದ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಟ್ಟು ೨,೧೯,೨೬,೭೧೫ ರೂ.ಆದಾಯ ಬಂದಿದೆ.

ನ.೬ರಿಂದ ೧೦ ರವರೆಗೆ ನಡೆದ ಜಾತ್ರೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ೫ ಲಕ್ಷಕ್ಕೂ ಹೆಚ್ಚು ಭಕ್ತರು ಮಾದಪ್ಪನ ದರ್ಶನ ಪಡೆದಿದ್ದಾರೆ. ಐದು ದಿನಗಳ ಅವಧಿಯಲ್ಲಿ ಹುಲಿವಾಹನ, ರುದ್ರಾಕ್ಷಿ ವಾಹನ, ಬಸವ ವಾಹನ, ಚಿನ್ನ ಹಾಗೂ ಬೆಳ್ಳಿ ತೇರಿನ ಉತ್ಸವಗಳು, ಪಂಚಕಳಶ ಸಮೇತ ನವರತ್ನ ಕಿರೀಟ ಧಾರಣೆ, ಏಕವಾರ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಪಂಚಾಮೃತ ಅಭಿಷೇಕ, ಇನ್ನಿತರ ವಿಶೇಷ ಸೇವೆಗಳು ವಿಜೃಂಭಣೆಯಿಂದ ಜರುಗಿದವು.

ಯಾವುದರಿಂದ ಎಷ್ಟು ಆದಾಯ?: ಲಾಡು ಮಾರಾಟದಿಂದ ೬೪,೦೬,೪೭೦ ರೂ., ವಿಶೇಷ ಪ್ರವೇಶ ಶುಲ್ಕದಿಂದ ೩೬,೬೦,೦೫೦ ರೂ., ಮಾಹಿತಿ ಕೇಂದ್ರದಿಂದ ೬,೨೭,೭೦೦ ರೂ., ಮಿಶ್ರ ಪ್ರಸಾದದಿಂದ ೫,೯೦,೬೨೫ ರೂ., ಇತರ ಸೇವಾ ಮೂಲದಿಂದ ೪,೭೮,೫೦೦ ರೂ., ಪುದುವಟ್ಟಿನಿಂದ ೨,೪೩,೪೨೨ ರೂ. ಸಂಗ್ರಹವಾಗಿದೆ.

ಲಾಡು ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ: ಮ.ಬೆಟ್ಟದಲ್ಲಿ ತಯಾರಿಸುವ ಲಾಡು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಬೆಟ್ಟಕ್ಕೆ ಬರುವ ಪ್ರತಿಯೊಬ್ಬರೂ ಲಾಡು ಪ್ರಸಾದವನ್ನು ತೆಗೆದುಕೊಂಡು ಹೋಗುವುದುವಾಡಿಕೆ. ೨೦೨೩ರ ದೀಪಾವಳಿ ಜಾತ್ರೆಯಲ್ಲಿ ಲಾಡು ಮಾರಾಟದಿಂದ ೫೪,೬೮,೫೦೦ ರೂ. ಬಂದಿದ್ದರೆ, ೨೦೨೪ರಲ್ಲಿ ೫೮,೩೩,೯೨೫ ರೂ. ಬಂದಿತ್ತು. ಕಳೆದ ಬಾರಿ ೨೦೨೫ರಲ್ಲಿ ೬೩,೭೦,೭೨೫ ರೂ. ಬಂದಿತ್ತು. ಈ ಬಾರಿ ೬೪,೦೬,೪೭೦ ರೂ. ಆದಾಯ ಬಂದಿದ್ದು, ವರ್ಷದಿಂದ ವರ್ಷಕ್ಕೆ ಲಾಡು ಮಾರಾಟ ಪ್ರಮಾಣ ಹೆಚ್ಚಳವಾಗುತ್ತಿರುವುದು ಗಮನಾರ್ಹ. ಕಳೆದ ವರ್ಷ ದೀಪಾವಳಿ ಜಾತ್ರಾ ದಿನಗಳಲ್ಲಿ ವಿಶೇಷ ಪ್ರವೇಶ, ಲಾಡು ಮಾರಾಟ ಸೇರಿದಂತೆ ಇತರೆ ಸೇವೆಗಳಿಂದ ಒಟ್ಟು ೨,೧೬,೪೫,೦೨೦ ರೂ. ಸಂಗ್ರಹವಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಆದಾಯ ಬಂದಿದೆ.

” ಭಕ್ತಾದಿಗಳಿಗೆ ಗುಣಮಟ್ಟದ ಲಾಡುಗಳನ್ನು ವಿತರಣೆ ಮಾಡಲಾಗುತ್ತಿದೆ. ದೀಪಾವಳಿ ಜಾತ್ರಾ ಮಹೋತ್ಸವ ಎಲ್ಲರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ೫ ಲಕ್ಷ ಜನ ಭಕ್ತಾದಿಗಳು ಭೇಟಿ ನೀಡಿದ್ದಾರೆ. ಕಾರ್ತಿಕ ಮಾಸ ಪ್ರಾರಂಭವಾಗಿರುವುದರಿಂದ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.”

? ಪುರುಷೋತ್ತಮ, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

 

 

ಆಂದೋಲನ ಡೆಸ್ಕ್

Recent Posts

ಸಹಕಾರ ಸಪ್ತಾಹಕ್ಕೆ ಕೇಂದ್ರ ಸರ್ಕಾರದ ಅಸಹಕಾರ

ಕೆ.ಬಿ.ರಮೇಶನಾಯಕ ಜುಲೈನಲ್ಲಿ ಅಂತಾರಾಷ್ಟ್ರೀಯ ಸಹಕಾರ ದಿನ ಆಚರಣೆಗೆ ಸೂಚನೆ  ಸಪ್ತಾಹದ ಶೀರ್ಷಿಕೆಯೇ ಬದಲು; ನ.೧೪ರಂದು ನೆಹರು ಜನ್ಮದಿನ ಮರೆಸಲು ಯತ್ನ?…

9 mins ago

ಮಹಿಳಾ ಸಬಲೀಕರಣಕ್ಕೆ ಹಲವು ಸೌಲಭ್ಯಗಳ ಆಸರೆ

ನವೀನ್ ಡಿಸೋಜ ಮಿಷನ್ ಶಕ್ತಿ ಯೋಜನೆಯಡಿ ಕೊಡಗಿನಲ್ಲಿ ೭೨ ಅರಿವು ಕಾರ್ಯಾಗಾರ; ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾಗೃತಿ ಮಡಿಕೇರಿ: ಮಹಿಳೆಯರ…

15 mins ago

ಬಿಳಿಗಿರಿರಂಗನ ಬೆಟ್ಟದಲ್ಲಿ ಹುಂಡಿ ಎಣಿಕೆ: 18 ಲಕ್ಷದ 69 ಸಾವಿರ ರೂ. ಸಂಗ್ರಹ

ಯಳಂದೂರು: ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಗುರುವಾರ…

15 hours ago

ಎಥೆನಾಲ್‌ ಮಿಶ್ರಣ: 63 ಸ್ಯಾಂಪಲ್‌ ಪರೀಕ್ಷೆಗೆ ಕಳಿಸಿದರೂ ಫಲಿತಾಂಶ ಕೊಟ್ಟಿಲ್ಲ ಎಂದ ರಿಜ್ವಾನ್‌ ಅರ್ಷದ್‌!

ಬೆಂಗಳೂರು: ಪೆಟ್ರೋಲ್‌ನಲ್ಲಿ ಮಿತಿ ಮೀರಿದ ಎಥೆನಾಲ್‌ ಮಿಶ್ರಣದ ಆರೋಪಕ್ಕೆ ಸಂಬಂಧಿಸಿದಂತೆ ಪರೀಕ್ಷೆಗೆ ಕಳುಹಿಸಿದ್ದ 63 ಸ್ಯಾಂಪಲ್‌ಗಳ ಫಲಿತಾಂಶ ನೀಡಿಲ್ಲ ಎಂದು…

16 hours ago

ಬಿಳಿಗಿರಿರಂಗನ ಬೆಟ್ಟದ ವರದತ್ತಿ ಮಂಟಪೋತ್ಸವ: ವರದೇ ನಾಯಕರ ಕುಲಪರಂಪರೆಯ ಜೀವಂತ ಸಾಕ್ಷಿ

ಯಳಂದೂರು: ಚಾಮರಾಜನಗರ ಜಿಲ್ಲೆಯ ಪವಿತ್ರ ಯಾತ್ರಾ ಕ್ಷೇತ್ರ ಬಿಳಿಗಿರಿರಂಗನ ಬೆಟ್ಟದ ಶ್ರೀ ತಿರುವೆಂಗಳನಾಥ ಸ್ವಾಮಿ ದೇವಾಲಯಕ್ಕೂ ಯಳಂದೂರು ಮೂಲದ ವರದೇ…

16 hours ago

ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ: ಮೂರು ತಿಂಗಳಲ್ಲಿ ಹೊಸ ಆ್ಯಪ್‌ ಎಂದ ಸಚಿವ ಯು.ಟಿ. ಖಾದರ್‌!

ಬೆಂಗಳೂರು: ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಬಳಸುವುದಕ್ಕೆ ಕಡಿವಾಣ ಹಾಕಲು ಹೊಸ ಮೊಬೈಲ್‌ ಆ್ಯಪ್‌ ತರಲು ಯೋಜಿಸಲಾಗಿದೆ.…

16 hours ago