Andolana originals

ಸಹಕಾರ ಸಪ್ತಾಹಕ್ಕೆ ಕೇಂದ್ರ ಸರ್ಕಾರದ ಅಸಹಕಾರ

ಕೆ.ಬಿ.ರಮೇಶನಾಯಕ

ಜುಲೈನಲ್ಲಿ ಅಂತಾರಾಷ್ಟ್ರೀಯ ಸಹಕಾರ ದಿನ ಆಚರಣೆಗೆ ಸೂಚನೆ 

ಸಪ್ತಾಹದ ಶೀರ್ಷಿಕೆಯೇ ಬದಲು; ನ.೧೪ರಂದು ನೆಹರು ಜನ್ಮದಿನ ಮರೆಸಲು ಯತ್ನ?

ಮೈಸೂರು: ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಇಡಲಾಗಿದ್ದ ಗಾಂಧಿ ಕುಟುಂಬದ ಹೆಸರುಗಳನ್ನು ಒಂದೊಂದಾಗಿ ಬದಲಾವಣೆ ಮಾಡುತ್ತಾ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇದೀಗ ಪಂಡಿತ್ ಜವಾಹರಲಾಲ್ ನೆಹರು ಜನ್ಮದಿನದ ಪ್ರಯುಕ್ತ ನವೆಂಬರ್ ತಿಂಗಳಲ್ಲಿ ಆಚರಿಸಿಕೊಂಡು ಬರುತ್ತಿದ್ದ ಸಹಕಾರ ಸಪ್ತಾಹಕ್ಕೆ ಬ್ರೇಕ್ ಹಾಕಿದ್ದು, ಜುಲೈ ತಿಂಗಳಲ್ಲಿ ಅಂತಾರಾಷ್ಟ್ರೀಯ ಸಹಕಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಪ್ರತಿ ವರ್ಷ ನ.೧೪ರಿಂದ ಒಂದು ವಾರ ಕಾಲ ಆಚರಿಸುತ್ತಿದ್ದ ಅಖಿಲ ಭಾರತ ಸಹಕಾರ ಸಪ್ತಾಹದ ಶೀರ್ಷಿಕೆಯನ್ನೇ ಬದಲಿಸಿರುವ ರಾಜ್ಯ ಸರ್ಕಾರವು ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಉದ್ಘಾಟನೆ ಮತ್ತು ಮಂಗಳೂರಿನಲ್ಲಿ ಸಮಾರೋಪ ನಡೆಯಲಿದೆ. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸರಳವಾಗಿ ಸಹಕಾರ ಸಪ್ತಾಹ ಆಚರಿಸಲಾಗುತ್ತದೆ.

ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ಸಹಕಾರ ಸಪ್ತಾಹದ ದಿನದಂದು ಜವಾಹರಲಾಲ್ ನೆಹರು ಅವರನ್ನು ಗುಣಗಾನ ಮಾಡುವುದಕ್ಕೆ ಪರೋಕ್ಷವಾಗಿ ಕಡಿವಾಣ ಹಾಕಿದಂತಾಗಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಜನ್ಮದಿನದ ಅಂಗವಾಗಿ ನ.೧೪ರಿಂದ ಒಂದು ವಾರ ಕಾಲ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿತ್ತು.

ಕರ್ನಾಟಕದಲ್ಲೂ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಬಹುತೇಕ ರಾಜಕಾರಣಿಗಳು ಸಹಕಾರ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಹೊಂದಿರುವ ಕಾರಣ ಆಯಾಯ ಜಿಲ್ಲೆಗಳಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಕೇಂದ್ರದಲ್ಲಿ ಮೂರನೇ ಅವಧಿಯಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೊಸದಾಗಿ ಸಹಕಾರ ಇಲಾಖೆಯನ್ನು ಆರಂಭಿಸಿ ಅಮಿತ್ ಶಾ ಅವರಿಗೆ ಜವಾಬ್ದಾರಿ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಗಾಂಧಿ ಕುಟುಂಬದ ಹೆಸರಲ್ಲಿದ್ದ ಅನೇಕ ಯೋಜನೆಗಳ ಹೆಸರನ್ನು ಬದಲಿಸಿ ಬೇರೆ ಬೇರೆ ಹೆಸರನ್ನು ಇಡಲಾಗಿದೆ. ಕಳೆದ ಮಾರ್ಚ್‌ನಲ್ಲಿ ಮನ್ರೇಗಾ ಹೆಸರನ್ನು ಬದಲಿಸಿದ್ದರಿಂದ ದೊಡ್ಡ ಹೋರಾಟವೇ ನಡೆದಿತ್ತು.

ಇದೀಗ ನ.೧೪ ರಂದು ಆಯೋಜನೆಗೊಳ್ಳಬೇಕಿದ್ದ ಅಖಿಲ ಭಾರತ ಸಹಕಾರ ಸಪ್ತಾಹದ ಬದಲಿಗೆ ಜುಲೈ ತಿಂಗಳಲ್ಲಿ ಅಂತಾರಾಷ್ಟ್ರೀಯ ಸಹಕಾರ ದಿನವನ್ನಾಗಿ ಆಚರಿಸುವಂತೆ ಸಂದೇಶ ಕಳುಹಿಸಿದೆ ಎನ್ನಲಾಗಿದೆ. ಕರ್ನಾಟಕ ದಲ್ಲಿ ನವೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಆಚರಿಸಬೇಕಿದ್ದ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹದ ಶೀರ್ಷಿಕೆ ಬದಲಿಸಿ ೭೩ನೇ ಸಹಕಾರ ಸಪ್ತಾಹ ಆಚರಿಸಲಾಗುತ್ತದೆ. ಜುಲೈ ತಿಂಗಳಲ್ಲಿ ದೇಶಾದ್ಯಂತ ಏಕಕಾಲಕ್ಕೆ ಅದ್ಧೂರಿಯಾಗಿ ಆಚರಿಸಬೇಕಾದ ಕಾರಣ ಈಗ ಸರಳವಾಗಿ ನಡೆಸಲಾಗುತ್ತಿದೆ ಎನ್ನಲಾಗಿದೆ.

ಅಮಿತ್ ಶಾ ಕಾರ್ಯತಂತ್ರ: ಕೇಂದ್ರ ಗೃಹ ಸಚಿವರೂ ಆದ ಸಹಕಾರ ಸಚಿವ ಅಮಿತ್ ಶಾ ಕಾರ್ಯತಂತ್ರದಿಂದ ಸಹಕಾರ ಸಪ್ತಾಹದ ದಿಕ್ಕು ಬದಲಾಗಿದೆ. ಜವಾಹರಲಾಲ್ ನೆಹರು ಜನ್ಮದಿನವನ್ನು ಸಹಕಾರ ಸಪ್ತಾಹದ ಜತೆಗೆ ಮಕ್ಕಳ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗಿದೆ. ಅಂದು ಎಲ್ಲೆಡೆ ನೆಹರು ಅವರ ಕಾರ್ಯ, ಸಾಧನೆಗಳನ್ನು ಸ್ಮರಿಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಜುಲೈ ತಿಂಗಳಲ್ಲಿ ಆಚರಿಸಬೇಕಾಗಿರುವ ಕಾರಣ ಅದರ ಸ್ವರೂಪ ಬದಲಾಗಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಕಾರಣ ನವೆಂಬರ್ ತಿಂಗಳಲ್ಲಿ ಸಹಕಾರ ಸಪ್ತಾಹ ನಡೆದರೂ ಸರಳವಾಗಿ ಆಚರಿಸಬೇಕಿದೆ. ಏಕೆಂದರೆ ಈ ಕಾರ್ಯಕ್ರಮದ ವೆಚ್ಚವನ್ನು ರಾಜ್ಯಸರ್ಕಾರ ಭರಿಸಬೇಕು. ಒಂದು ವೇಳೆ ಯೂನಿಯನ್‌ನಿಂದ ಖರ್ಚು ಮಾಡಿ ಅದ್ಧೂರಿಯಾಗಿ ಮಾಡಿದರೆ ಜುಲೈನಲ್ಲಿ ಕಷ್ಟವಾಗಲಿದೆ. ಹಾಗಾಗಿ, ಕೇಂದ್ರ ಸರ್ಕಾರದ ಸೂಚನೆಯಂತೆ ಸರಳವಾಗಿಯೇ ಮುಗಿಸಲಾಗುವುದು ಎಂದು ಸಹಕಾರ ಯೂನಿಯನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

* ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ

* ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯಪಿಂಚಣಿ ಯೋಜನೆ

* ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ

* ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವೈಕಲ್ಯ ಪಿಂಚಣಿ ಯೋಜನೆ

* ಇಂದಿರಾ ಆವಾಸ್ ಯೋಜನೆ

* ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ

* ರಾಜೀವ್ ಆವಾಸ್ ಯೋಜನೆ

* ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆ

* ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

* ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್

* ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ

* ಪ್ರಧಾನ ಮಂತ್ರಿ ಸಾಮಾಜಿಕ ಸಹಾಯತಾ ಯೋಜನೆ

* ಪ್ರಧಾನ ಮಂತ್ರಿ ವೃದ್ಧಾವಸ್ಥಾ ಪಿಂಚಣಿ ಯೋಜನೆ

* ಪ್ರಧಾನ ಮಂತ್ರಿ ವಿಧವಾ ಪಿಂಚಣಿ ಯೋಜನೆ

* ಪ್ರಧಾನ ಮಂತ್ರಿ ದಿವ್ಯಾಂಗಜನ ಪಿಂಚಣಿ ಯೋಜನೆ

* ಪ್ರಧಾನ ಮಂತ್ರಿ ಆವಾಸ್ ಯೋಜನೆ

* ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ

* ಪ್ರಧಾನ ಮಂತ್ರಿ ಆವಾಸ್ ಯೋಜನೆ

* ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ

* ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ

* ಅಟಲ್ ನವೀಕರಣ ಮತ್ತು ನಗರ ಪರಿವರ್ತನಾ ಮಿಷನ್

* ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ 

” ೧೯೯೩ರಿಂದ ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟದ ವತಿಯಿಂದ ಜುಲೈ ತಿಂಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದ್ದು, ೧೯೯೫ರಲ್ಲಿ ವಿಶ್ವಸಂಸ್ಥೆಯು ಮಾನ್ಯತೆ ನೀಡಿದೆ. ಹಾಗಾಗಿ, ಜುಲೈ ತಿಂಗಳಲ್ಲಿಯೇ ಆಚರಿಸುವಂತೆ ಹೇಳಿರುವುದಲ್ಲದೆ, ಜುಲೈ ತಿಂಗಳಲ್ಲಿ ನಡೆಯುವ ವೆಚ್ಚವನ್ನು ಆಯಾಯ ಸಂದರ್ಭದಲ್ಲೇ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಹೇಳಿದೆ.”

 

 

ಆಂದೋಲನ ಡೆಸ್ಕ್

Recent Posts

ಮಹದೇಶ್ವರ ಬೆಟ್ಟದ ದೀಪಾವಳಿ ಜಾತ್ರೆಯಲ್ಲಿ 2.19 ಕೋಟಿ ರೂ. ಸಂಗ್ರಹ!

ಮಹಾದೇಶ್ ಎಂ.ಗೌಡ ೫ ದಿನಗಳ ಮಹೋತ್ಸವದಲ್ಲಿ ಲಾಡು ಮಾರಾಟದಲ್ಲೇ ದಾಖಲೆ; ಕಳೆದ ವರ್ಷಕ್ಕಿಂತ ಆದಾಯ ಹೆಚ್ಚಳ  ಹನೂರು: ಮಲೆ ಮಹದೇಶ್ವರ…

9 mins ago

ಮಹಿಳಾ ಸಬಲೀಕರಣಕ್ಕೆ ಹಲವು ಸೌಲಭ್ಯಗಳ ಆಸರೆ

ನವೀನ್ ಡಿಸೋಜ ಮಿಷನ್ ಶಕ್ತಿ ಯೋಜನೆಯಡಿ ಕೊಡಗಿನಲ್ಲಿ ೭೨ ಅರಿವು ಕಾರ್ಯಾಗಾರ; ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾಗೃತಿ ಮಡಿಕೇರಿ: ಮಹಿಳೆಯರ…

21 mins ago

ಬಿಳಿಗಿರಿರಂಗನ ಬೆಟ್ಟದಲ್ಲಿ ಹುಂಡಿ ಎಣಿಕೆ: 18 ಲಕ್ಷದ 69 ಸಾವಿರ ರೂ. ಸಂಗ್ರಹ

ಯಳಂದೂರು: ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಗುರುವಾರ…

15 hours ago

ಎಥೆನಾಲ್‌ ಮಿಶ್ರಣ: 63 ಸ್ಯಾಂಪಲ್‌ ಪರೀಕ್ಷೆಗೆ ಕಳಿಸಿದರೂ ಫಲಿತಾಂಶ ಕೊಟ್ಟಿಲ್ಲ ಎಂದ ರಿಜ್ವಾನ್‌ ಅರ್ಷದ್‌!

ಬೆಂಗಳೂರು: ಪೆಟ್ರೋಲ್‌ನಲ್ಲಿ ಮಿತಿ ಮೀರಿದ ಎಥೆನಾಲ್‌ ಮಿಶ್ರಣದ ಆರೋಪಕ್ಕೆ ಸಂಬಂಧಿಸಿದಂತೆ ಪರೀಕ್ಷೆಗೆ ಕಳುಹಿಸಿದ್ದ 63 ಸ್ಯಾಂಪಲ್‌ಗಳ ಫಲಿತಾಂಶ ನೀಡಿಲ್ಲ ಎಂದು…

16 hours ago

ಬಿಳಿಗಿರಿರಂಗನ ಬೆಟ್ಟದ ವರದತ್ತಿ ಮಂಟಪೋತ್ಸವ: ವರದೇ ನಾಯಕರ ಕುಲಪರಂಪರೆಯ ಜೀವಂತ ಸಾಕ್ಷಿ

ಯಳಂದೂರು: ಚಾಮರಾಜನಗರ ಜಿಲ್ಲೆಯ ಪವಿತ್ರ ಯಾತ್ರಾ ಕ್ಷೇತ್ರ ಬಿಳಿಗಿರಿರಂಗನ ಬೆಟ್ಟದ ಶ್ರೀ ತಿರುವೆಂಗಳನಾಥ ಸ್ವಾಮಿ ದೇವಾಲಯಕ್ಕೂ ಯಳಂದೂರು ಮೂಲದ ವರದೇ…

16 hours ago

ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ: ಮೂರು ತಿಂಗಳಲ್ಲಿ ಹೊಸ ಆ್ಯಪ್‌ ಎಂದ ಸಚಿವ ಯು.ಟಿ. ಖಾದರ್‌!

ಬೆಂಗಳೂರು: ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಬಳಸುವುದಕ್ಕೆ ಕಡಿವಾಣ ಹಾಕಲು ಹೊಸ ಮೊಬೈಲ್‌ ಆ್ಯಪ್‌ ತರಲು ಯೋಜಿಸಲಾಗಿದೆ.…

16 hours ago