Andolana originals

ರಸ್ತೆ ಬದಿ ಮಾಂಸ ಮಾರುಕಟ್ಟೆಯಲ್ಲಿ ಶುಚಿತ್ವ ಇಲ್ಲದೆ ಕಿರಿಕಿರಿ

ತಿ.ನರಸೀಪುರ: ಪುರಸಭೆಯಿಂದ ನಿರ್ಮಿಸಿರುವ ಮಳಿಗೆಗಳಿಗೆ ಸ್ಥಳಾಂತರಿಸಲು ಒತ್ತಾಯ

ಎಂ.ನಾರಾಯಣ

ತಿ.ನರಸೀಪುರ: ಸ್ವಚ್ಛತೆ ಮರೀಚಿಕೆಯಾಗಿರುವ ಪಟ್ಟಣದ ಮಾಂಸ ಮಾರುಕಟ್ಟೆಯಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದು ಮಾರುಕಟ್ಟೆಯನ್ನು ಸ್ಥಳಾಂತರ ಮಾಡಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಪಟ್ಟಣದ ಹೃದಯಭಾಗದಲ್ಲಿರುವ ಲಿಂಕ್ ರಸ್ತೆಗೆ ಹೊಂದಿಕೊಂಡಂತೆ ಇರುವ ಮಾಂಸದ ಮಾರುಕಟ್ಟೆಯಲ್ಲಿ ಶುಚಿತ್ವ ಇಲ್ಲದೇ ಗದ್ದು ನಾರುತ್ತಿದೆ. ವಿನಾಯಕ ಕಾಲೋನಿಗೆ ರಸ್ತೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಪಕ್ಕದಲ್ಲೇ ಪೆಟ್ಟಿಗೆ ಅಂಗಡಿಗಳಲ್ಲಿ ಮಾಂಸ ಮಾರಾಟ ಮಾಡುತ್ತಿದ್ದು ಸಾರ್ವಜನಿಕರು, ಶಾಲಾ ಮಕ್ಕಳು, ಕಾಲೋನಿಯ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.

ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಮಾಂಸ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದರಿಂದ ದ್ವಿಚಕ್ರ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸುವುದರಿಂದ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ.

ಅಲ್ಲದೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿನಾಯಕ ಕಾಲೋನಿಯಲ್ಲಿದ್ದು, ಸಂಚರಿಸುವಾಗ ಕಿರಿಕಿರಿ ಅನುಭವಿಸಬೇಕಾಗಿದೆ.

ಮಾಂಸ ಮಾರುಕಟ್ಟೆಯಲ್ಲಿ ಶುಚಿತ್ವದ ಕೊರತೆ ಉಂಟಾಗಿದ್ದು ಮೇಕೆ ಮರಿಗಳನ್ನು ಅಲ್ಲೇ ಕತ್ತರಿಸಿ ಅದರ ತ್ಯಾಜ್ಯಗಳನ್ನು ಹಾಗೂ ಶುಚಿಗೊಳಿಸಿದ ನೀರನ್ನು ರಸ್ತೆಗೆ ಸುರಿಯುತ್ತಿರುವುದರಿಂದ ಸಾರ್ವಜನಿಕರಿಗೆ ಓಡಾಡಲು ಕಿರಿಕಿರಿಯಾಗಿದೆ. ಅಲ್ಲದೆ, ಮೇಕೆಗಳನ್ನು ಕತ್ತರಿಸಿ ಕಂಡ ಕಂಡಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಮಳಿಗೆಗಳಿಗೆ ಹೋಗಲು ನಿರಾಕರಣೆ: ಪುರಸಭೆ ವತಿಯಿಂದ ಅನೇಕ ವರ್ಷಗಳ ಹಿಂದೆಯೇ ತರಕಾರಿ ಮಾರುಕಟ್ಟೆಗಾಗಿ 70 ಲಕ್ಷ ರೂ.ವೆಚ್ಚದಲ್ಲಿ 32 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ತರಕಾರಿ ಮಾರಾಟಗಾರರು ಮೂಲ ಸೌಕರ್ಯ ಇಲ್ಲದ ನೆಪ ಹೇಳಿ ಮಳಿಗೆಗಳಿಗೆ ಹೋಗಲು ನಿರಾಕರಿಸು ತಿರುವುದರಿಂದ ಮಳಿಗೆಗಳು ನಿರುಪಯುಕ್ತ ವಾಗಿವೆ. ಈಗ ಪುರಸಭೆಯವರು ಮಾಂಸ ಮಾರಾಟಗಾರರನ್ನು ಹೋಗುವಂತೆ ಹೇಳುತ್ತಿದ್ದರೂ ಅವರೂ ಕೂಡ ಮೂಲಸೌಕರ್ಯದ ನೆಪ ಹೇಳುತ್ತಿದ್ದಾರೆ. ತರಕಾರಿ ಮಾರಾಟಗಾರರು ಹಾಗೂ ಮಾರಾಟಗಾರರು ಮಳಿಗೆಗಳಿಗೆ ಹೋಗಲು ನಿರಾಕರಿಸುತ್ತಿರುವುದರಿಂದ 10 ವರ್ಷಗಳ ಹಿಂದೆ 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಳಿಗೆ ನಿರುಪಯುಕ್ತವಾಗಿದೆ.

10 ವರ್ಷಗಳ ಹಿಂದೆ 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ತರಕಾರಿ ಮಾರುಕಟ್ಟೆ ಮಳಿಗೆ ನಿರುಪಯುಕ್ತವಾಗಿದ್ದು, ಪುರಸಭೆಗೆ ಲಕ್ಷಾಂತರ ರೂ.ಗಳ ಆದಾಯ ನಷ್ಟವಾಗಿದೆ. ಅಲ್ಲದೆ, ಮಳಿಗೆಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಿರುವ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಿ ಪುರಸಭೆಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು
ಮುಂದಾಗಬೇಕಿದೆ.
-ರಾಜೇಶ್ವರಿ ರಾಘವೇಂದ್ರ, ಪುರಸಭೆ ಸದಸ್ಯೆ

ಸೌಲಭ್ಯ ಕಲ್ಪಿಸಿದ ನಂತರ ಸ್ಥಳಾಂತರ
ತರಕಾರಿ ಮಾರುಕಟ್ಟೆಗಾಗಿ ನಿರ್ಮಿಸಲಾದ ಮಳಿಗೆಗಳು ಸಮರ್ಪಕವಾಗಿ ನಿರ್ಮಾಣವಾಗಿಲ್ಲ. ಈಗ ಮಟನ್ ಮಾರ್ಕೆಟ್‌ಗೆ ಟೆಂಡರ್ ಕರೆಯಲಾಗಿದೆ. ತರಕಾರಿ ಮಾರುಕಟ್ಟೆ ಮಾಡುವ ಉದ್ದೇಶದಿಂದ ನಿರ್ಮಿಸಲಾದ ಮಳಿಗೆಗಳಿಗೆ ಮಾಂಸ ಮಾರಾಟಗಾರರನ್ನು ಸ್ಥಳಾಂತರಿಸಲು ಅವರಿಗೆ ಸಮರ್ಪಕವಾದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗುತ್ತದೆ. ಇದಕ್ಕಾಗಿ 10 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ. ಈಗಲೇ ಮಾಂಸ ಮಾರಾಟಗಾರರನ್ನು ಸ್ಥಳಾಂತರಿಸಿದರೆ ಮತ್ತೆ ಸಮಸ್ಯೆ ಎದುರಾಗುವುದರಿಂದ ಮಾಂಸ ಮಾರಾಟಕ್ಕೆ ಬೇಕಾದ ಅನುಕೂಲತೆಗಳಾದ ಗೋಡೆಗೆ ಟೈಲ್ಸ್, ಸಮರ್ಪಕ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ಸೌಲಭ್ಯ ಕಲ್ಪಿಸಿ, ಆಧುನಿಕವಾಗಿ ಮಾರ್ಪಡಿಸಿ ನಂತರ ಅವರನ್ನು ಸ್ಥಳಾಂತರಿಸಲಾಗುತ್ತದೆ.
ಬಿ.ಕೆ.ವಸಂತ ಕುಮಾರಿ, ಪುರಸಭೆ ಮುಖ್ಯಾಧಿಕಾರಿ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕರುನಾಡ ಹೆಮ್ಮೆ…

ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…

31 mins ago

ಓದುಗರ ಪತ್ರ: ಪಾಲಿಕೆ ಯೋಜನೆ ಸ್ವಾಗತಾರ್ಹ

ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…

32 mins ago

ಓದುಗರ ಪತ್ರ: ಯುಪಿಐ ಶುಲ್ಕ: ಚರ್ಚೆಯ ನಂತರ ಕ್ರಮ ಕೈಗೊಳ್ಳಿ

ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…

35 mins ago

ಬದಲಾದ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಪಾತ್ರ

ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…

37 mins ago

ಬಿಹಾರದಲ್ಲಿ ಯುಸಿಸಿಗೆ ನಿತೀಶ್, ಚಿರಾಗ್ ಪಕ್ಷಗಳ ಭಿನ್ನರಾಗ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…

43 mins ago

ಕೆಡ್ಲಿ ಬಾಳ್ಲಿ ನಮ್‌ ಬದ್ಕ್‌ ನಾಮ್‌ ನೋಡ್ಬೇಕು ಕಣ ಕುಸೋ

ಚಂದ್ರಶೇಖರ್ ಮೂರ್ತಿ ಕೆ.ಎಸ್. ಊರಿಂದ ಊರಿಗೆ ಬಸ್ ಹತ್ತಿ ಇಳಿದು ದುಡಿಮೆ ಮಾಡೋದು ಇದೆಯಲ್ಲ ಅದು ಅನುಭವಿಸುವ ಊರು ಬಿಟ್ಟ…

49 mins ago