Andolana originals

ಮಾಂದಲಪಟ್ಟಿಯಲ್ಲಿ ಮುಂದುವರಿದ ರಸ್ತೆ ದುರಸ್ತಿ ಕಾರ್ಯ

ಬೃಹತ್ ಯಂತ್ರ ಬಳಸದೆ ಕೆಲಸ; ಇನ್ನೂ 10-15 ದಿನ ಪ್ರವಾಸಿಗರ ಪ್ರವೇಶಕ್ಕಿಲ್ಲ ಅವಕಾಶ

ನವೀನ್ ಡಿಸೋಜ

ಮಡಿಕೇರಿ : ಕೊಡಗಿನ ಪ್ರಸಿದ್ಧ ಪ್ರವಾಸಿತಾಣ ಮಾಂದಲಪಟ್ಟಿಯಲ್ಲಿ ರಸ್ತೆ ದುರಸ್ತಿ ಕೆಲಸ ಮುಂದುವರಿದಿದ್ದು, ಪ್ರವಾಸಿಗರಿಗೆ ಪ್ರವೇಶ ಸಿಗುವುದು ಇನ್ನಷ್ಟು ತಡವಾಗಲಿದೆ.

ಮಡಿಕೇರಿಯ ಮಾಂದಲಪಟ್ಟಿ ಪ್ರವಾಸಿ ತಾಣಕ್ಕೆ ಒಂದು ತಿಂಗಳಿನಿಂದ ತಾತ್ಕಾಲಿಕವಾಗಿ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾ ಗಿದ್ದು, ರಸ್ತೆ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ಮುಗಿಯಲು ಇನ್ನೂ 10 ರಿಂದ 15 ದಿನಗಳ ಕಾಲಾವಕಾಶ ಬೇಕಾಗಲಿದ್ದು, ಅಲ್ಲಿಯವರೆಗೆ ಮುಗಿಲುಪೇಟೆ ಬಂದ್ ಆಗಿರಲಿದೆ.

ಫೆ.16ರಿಂದ ಮಾಂದಲಪಟ್ಟಿ ಒಳಗಿನ ರಸ್ತೆ ದುರಸ್ತಿ ಮತ್ತು ಕಲ್ಲು ಹಾಸು ಅಳವಡಿಕೆಗಾಗಿ ಪ್ರವಾಸಿಗರಿಗೆ ಪ್ರವೇಶವನು ನಿರ್ಬಂಧಿಸಲಾಗಿದೆ. ಫೆ.28ಕ್ಕೆ ಕೆಲಸ ಮುಗಿಸಬೇಕೆಂದು ಅಂದಾಜಿಸಿ ಅಲ್ಲಿಯವರೆಗೆ ಪ್ರವೇಶವನ್ನು ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಕಾಮಗಾರಿ ಆರಂಭವಾಗಿ ಒಂದು ತಿಂಗಳಾಗಿದ್ದು, ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಮುಂದುವರಿಸಲಾಗಿದೆ. ಕೆಲಸ ಮುಗಿ ಯುವುದು ಇನ್ನೂ ತಡವಾಗಲಿದ್ದು ಏಪ್ರಿಲ್ ಮೊದಲ ವಾರವೂ ಮುಗಿಲುಪೇಟೆ ಪ್ರವೇಶ ದುರ್ಲಭವಾಗಲಿದೆ.

ಮಾಂದಲಪಟ್ಟಿ ಪ್ರವಾಸಿತಾಣಕ್ಕೆ ಕೊಡಗಿಗೆ ಬರುವ ಬಹುತೇಕ ಪ್ರಕೃತಿ ಪ್ರಿಯರು ಭೇಟಿ ನೀಡಲು ಬಯಸುತ್ತಾರೆ. ಆದರೆ ಈಗ ಈ ತಾಣ ಬಂದ್ ಆಗಿರುವುದು ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದೀಗ ಮಕ್ಕಳಿಗೆ ಪರೀಕ್ಷೆಯ ಸಮಯವಾಗಿದ್ದು, ಟೂರಿಸಂಗೆ ಇದು ಅನ್ ಸೀಜನ್, ಈ ತಿಂಗಳ ಅಂತ್ಯಕ್ಕೆ ಪರೀಕ್ಷೆಗಳು ಬಹುತೇಕ ಮುಕ್ತಾಯವಾಗಲಿದ್ದು, ಬೇಸಿಗೆ ಪ್ರವಾಸೋದ್ಯಮ ಮತ್ತೆ ತೆರೆದು ಕೊಳ್ಳಲಿದೆ. ಈ ಸಮಯಕ್ಕೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣದ ಆಕರ್ಷಣೆಯೇ ಜನರು ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರವಾಸಿಗರು ಕೊಡಗಿಗೆ ಬರಲು ಹಿಂದೇಟು ಹಾಕುವ ಸಾಧ್ಯತೆ ಇದೆ.

ಇತ್ತೀಚೆಗೆ ಮಾಂದಲಪಟ್ಟಿಗೆ ಆಗಮಿಸಿದ್ದ ಪ್ರವಾಸಿಗರಿಂದ ಜೀಪು ಚಾಲಕನೋರ್ವ ಹೆಚ್ಚಿನ ಹಣ ಪಡೆದ ಘಟನೆ ಬೆಳಕಿಗೆ ಬಂದ ನಂತರ ನಡೆದ ಬೆಳವಣಿಗೆಗಳಲ್ಲಿ ಅಲ್ಲಿನ ರಸ್ತೆ ದುರಸ್ತಿ ಪಡಿಸುವುದೂ ಒಂದಾಗಿದೆ. ಸದ್ಯ ಪ್ರಗತಿ ಯಲ್ಲಿರುವ ಕಾಮಗಾರಿ ಮುಕ್ತಾಯವಾದರೂ, ಮಾಂದಲಪಟ್ಟಿಗೆ ಪ್ರವೇಶ ಸಮಯ ಬದಲಾಗುವ ಸಾಧ್ಯತೆ ಇದೆ. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಇಂತಹ ಬದಲಾವಣೆಗಳ ಅಗತ್ಯವೂ ಇದೆ. ಆದರೆ ಮಾಂದಲಪಟ್ಟಿ ಬಂದ್ ಆಗಿರುವುದರಿಂದ ನ್ಯಾಯಯುತವಾಗಿ ಜೀಪ್ ಬಾಡಿಗೆ ಕೆಲಸ ಮಾಡುತ್ತಿದ್ದ ನೂರಾರು ಜೀಪ್ ಚಾಲಕರಿಗೆ ತೊಂದರೆಯಾಗಿದೆ.

ನಂದಿ ಮೊಟ್ಟೆ, ಮಾಂದಲಪಟ್ಟಿ ಮುಂಭಾಗದಲ್ಲಿ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ. ಇನ್ನೇನು ಪ್ರವಾಸಿಗರು ಬಂದು ಪ್ರವಾಸೋದ್ಯಮ ಮತ್ತೆ ಲಯಕ್ಕೆ ಮರಳ ಬೇಕೆನ್ನುವಷ್ಟರಲ್ಲಿ ಮಾಂದಲಪಟ್ಟಿಗೆ ಪ್ರವೇಶ ನಿರ್ಬಂಧ ಮುಂದುವರಿದಿರುವುದು ಜೀಪು ಚಾಲಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ.

ದುರಸ್ತಿ ಕಾರ್ಯ ತಡವಾಗುತ್ತಿರುವುದೇಕೆ?
ಮಾಂದಲಪಟ್ಟಿಯಲ್ಲಿ ಈಗಿರುವ ಕಚ್ಚಾ ರಸ್ತೆಯಲ್ಲಿನ ಬೃಹತ್ ಕಲ್ಲುಗಳನ್ನು ತೆಗೆದು ಕಲ್ಲುಹಾಸು ಅಳವಡಿಸಬೇಕಿದೆ. ಅರಣ್ಯ ಮತ್ತು ಸೂಕ್ಷ್ಮ ಪ್ರದೇಶವಾಗಿರುವುದರಿಂದ ದೊಡ್ಡ ಯಂತ್ರಗಳನ್ನು ಬಳಸಿ ಕೆಲಸ ಮಾಡುವುದು ಅಸಾಧ್ಯ. ಬಹುತೇಕ ಕೆಲಸ ಕಾರ್ಮಿಕರಿಂದಲೇ ಆಗಬೇಕಿದೆ. ಈಗಿನ್ನೂ ರಸ್ತೆಯ ನಡುವಿನ ಕಾಡು ಕಲ್ಲುಗಳ ತೆರವು ಕೆಲಸ ನಡೆಯುತ್ತಿದ್ದು, ಇನ್ನಷ್ಟೇ ಕಲ್ಲು ಹಾಸು ಹಾಕಬೇಕಿದೆ. ಮ್ಯಾನುವಲ್ ಆಗಿಯೇ ಕೆಲಸ ಮಾಡುತ್ತಿರುವುದರಿಂದ ಕಾಮಗಾರಿ ತಡವಾಗುತ್ತಿದೆ. ಕೆಲಸ ಪೂರ್ಣಗೊಳ್ಳಲು ಇನೂ 10-15 ದಿನಗಳಾದರೂ ಬೇಕಾಗಲಿದೆ.

ಇದು ಮಕ್ಕಳಿಗೆ ಪರೀಕ್ಷೆ ಸಮಯ, ಪ್ರವಾಸಿಗರ ಆಗಮನ ಕಡಿಮೆ ಇರುವ ಹಿನ್ನೆಲೆಯಲ್ಲಿ ಈಗ ಕಾಮಗಾರಿ ನಡೆಸಲು ಯೋಜಿಸಲಾಯಿತು. ಅದರಂತೆ ಕೆಲಸ ನಡೆಯುತ್ತಿದೆ. ಬಹುತೇಕ ಮ್ಯಾನುವಲ್ ಕೆಲಸ ಆಗಬೇಕಿರುವುದರಿಂದ ತಡವಾಗುತ್ತಿದೆ. ಇನೂ 10 ರಿಂದ 15 ದಿನಗಳಲ್ಲಿ ಕಾಮಗಾರಿ ಮುಗಿಯುವ ನಿರೀಕ್ಷೆಯಿದ್ದು, ಕಾಮಗಾರಿ ಮುಗಿದ ಕೂಡಲೇ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಲಾಗುವುದು.
-ಅಭಿಷೇಕ್, ಡಿಸಿಎಫ್, ಮಡಿಕೇರಿ ಅರಣ್ಯ ವಲಯ

ಆಂದೋಲನ ಡೆಸ್ಕ್

Recent Posts

ಇರಾನ್‌ ಯುದ್ಧ: 5 ದಿನಗಳ ಕದನ ವಿರಾಮ ಘೋಷಣೆ ಮಾಡಿದ ಟ್ರಂಪ್‌

ವಾಷಿಂಗ್ಟನ್:‌ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಐದು ದಿನಗಳ ಕಾಲ ಕದನ ವಿರಾಮ ಘೋಷಣೆ ಮಾಡಿದ್ದಾರೆ. ಅಮೇರಿಕಾ ಅಧ್ಯಕ್ಷ ಟ್ರಂಪ್‌…

9 mins ago

ಇರಾನ್-ಇಸ್ರೇಲ್‌ ಸಂಘರ್ಷದ ಎಫೆಕ್ಟ್:‌ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಕುಸಿತ

ಬೆಂಗಳೂರು: ಇಸ್ರೇಲ್-ಇರಾನ್ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ಚಿನ್ನ ಮತ್ತು ಬೆಳ್ಳಿ ದರಗಳ ಸತತ ಕುಸಿತ ಮುಂದುವರೆದಿದೆ. ಇಂದೂ ಕೂಡ ಚಿನ್ನ,…

29 mins ago

ಮುಂದುವರಿದ ಇರಾನ್-ಇಸ್ರೇಲ್‌ ಸಂಘರ್ಷ: ಸಿಲಿಂಡರ್‌ ಪೂರೈಕೆ ವ್ಯತ್ಯಯ ಆಗದಂತೆ ಕ್ರಮ ಎಂದ ಪ್ರಧಾನಿ ಮೋದಿ

ನವದೆಹಲಿ: ಇರಾನ್‌-ಇಸ್ರೇಲ್‌ ಸಂಘರ್ಷದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ರಾಷ್ಟ್ರಗಳ ಸ್ಥಿತಿ ಚಿಂತಾಜನಕವಾಗಿದೆ. ಯುದ್ಧದಿಂದ ಭಾರತದ ಮೇಲೆ ಪರಿಣಾಮ ಬೀರಿದೆ ಎಂದು ಪ್ರಧಾನಿ…

1 hour ago

ಯುದ್ಧದ ಖರ್ಚು ನಿಭಾಯಿಸಲು ಹೊಸ ದಾರಿ ಹುಡುಕಿದ ಇರಾನ್: ವ್ಯಾಪಾರಿ ಹಡಗುಗಳಿಗೆ ಶುಲ್ಕ

ಟೆಹರಾನ್:‌ ಯುದ್ಧದ ಖರ್ಚು ನಿಭಾಯಿಸಲು ಸಂಚಾರ ಮಾಡುವ ವ್ಯಾಪಾರಿ ಹಡಗುಗಳಿಗೆ ಶುಲ್ಕ ವಿಧಿಸಲು ಇರಾನ್ ನಿರ್ಧರಿಸಿದೆ. ಹಾರ್ಮುಜ್ ಜಲಸಂಧಿ ಮೂಲಕ…

1 hour ago

ಅಕಾಲಿಕ ಮಳೆಯಿಂದ ಬೆಳೆನಷ್ಟ: ಪರಿಹಾರ ನೀಡಲು ರೈತ ಸಂಘಟನೆಗಳ ಒತ್ತಾಯ

ಚಾಮರಾಜನಗರ: ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ…

1 hour ago

ಮಧ್ಯಪ್ರಾಚ್ಯ ಸಂಘರ್ಷ: ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಪ್ರಧಾನಿ ಮೋದಿ ಸಲಹೆ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ದೇಶದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಸತತ ನಿಗಾ ವಹಿಸುತ್ತಿದ್ದು,…

2 hours ago