Andolana originals

ರಸ್ತೆಗಳ ಗಂಡಾಗುಂಡಿ: ಎಚ್ಚೆತ್ತ ನಗರಪಾಲಿಕೆ

ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ರಸ್ತೆ ತೇಪೆ ಕಾಮಗಾರಿ ಆರಂಭ

 

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಶುರು ಮಾಡಿದ್ದರೆ, ಮತ್ತೊಂದೆಡೆ ಮೈಸೂರು ಮಹಾನಗರ ಪಾಲಿಕೆಯು ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಆರಂಭ ಮಾಡಿದ್ದು, ದಸರೆ ಆರಂಭಕ್ಕೂ ಮುನ್ನ ಕಾಮಗಾರಿ ಮುಗಿಸಬೇಕೆನ್ನುವ ಗುರಿ ಹೊಂದಿದೆ.

ಮಹಾನಗರ ಪಾಲಿಕೆಯ ೯ ವಲಯ ಕಚೇರಿಗಳಿಗೂ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಕ ಮಾಡಿ ಕಾಮಗಾರಿ ಆರಂಭಿಸಿರುವುದು ಈ ಬಾರಿಯ ವಿಶೇಷವಾಗಿದೆ. ೧,೫೦೦ಕ್ಕೂ ಹೆಚ್ಚು ಗುಂಡಿಗಳು: ಮಹಾನಗರಪಾಲಿಕೆ ಅಽಕಾರಿಗಳು, ವಲಯವಾರು ರಸ್ತೆಗಳ ಸಮೀಕ್ಷೆ ನಡೆಸಿ ಅಂದಾಜು ೧,೫೦೦ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಿದರೆ. ಪಾಲಿಕೆಯ ೯ ವಲಯಗಳಿಂದ ಒಟ್ಟು ೬೦ರಿಂದ ೭೦ ಗುಂಡಿಗಳಿವೆ ಎಂಬುದಾಗಿ ಸಮೀಕ್ಷೆಯ ವರದಿಯನ್ನು ಇಂಜಿನಿಯರ್‌ಗಳು ಆಯುಕ್ತರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ೧೩೫ ಲಕ್ಷ ರೂ. ಅನುದಾನ: ದಸರಾ ವೇಳೆ ನಗರದನರಸ್ತೆಗಳಲ್ಲಿ ಗುಂಡಿ ಮುಚ್ಚುವುದೂ ಸೇರಿದಂತೆ ರಸ್ತೆ ಡಾಂಬರೀಕರಣಕ್ಕೆ ವಲಯ೧ಕ್ಕೆ ೩೫ ಹಾಗೂ ವಲಯ ೬ಕ್ಕೆ ೨೫ ಲಕ್ಷ ರೂ. ಹಾಗೂ ಉಳಿದ ವಲಯಗಳಿಗೆ ತಲಾ ೧೦ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಈ ಬಾರಿ ರಸ್ತೆ ದುರಸ್ತಿಗಾಗಿ ೧೩೫ ಲಕ್ಷ ರೂ. ಅನುದಾನ ನೀಡಲಾಗಿದೆ. ಭಾರೀ ಮಳೆ ಬಿದ್ದ ಕಾರಣ ಮೈಸೂರು ನಗರದಾದ್ಯಂತ ಎಲ್ಲಾ ರಸ್ತೆಗಳಲ್ಲಿ ಗುಂಡಿ ಬಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿದ್ದ ಪಾಲಿಕೆ ಅಽಕಾರಿಗಳು ಗುಂಡಿ ಮುಚ್ಚಲು ಅಂದಾಜು ಪಟ್ಟಿ ತಯಾರಿಸಿದ್ದರು.

ಮಳೆ ನಿಂತಿರುವುದರಿಂದ ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭವಾಗಿದ್ದು, ಎ ೯ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಗುತ್ತಿಗೆ ನೀಡಲಾಗಿದೆ. ಇ-ಟೆಂಡರ್ ಮೂಲಕ ಗುತ್ತಿಗೆ: ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀ- ಅವರ ನಿರ್ದೇಶನದಂತೆ ಅಽಕ್ಷಕ ಇಂಜಿನಿಯರ್ ಕೆ. ಜೆ. ಸಿಂಧು ನೇತೃತ್ವದಲ್ಲಿ ಇ-ಟೆಂಡರ್ ಕರೆದು ಅರ್ಹ ಗುತ್ತಿಗೆದಾರರಿಗೆ ವಲಯಕ್ಕೆ ಒಬ್ಬರಂತೆ ಗುಂಡಿ ಮುಚ್ಚುವ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ.

ಒಂದು ವಾರದ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ಬಿರುಸಿನಿಂದ ಕೆಲಸ ನಡೆಯುತ್ತಿದೆ. ದಸರೆಗೂ ಮುನ್ನವೇ ನಗರದಲ್ಲಿ ಗುಂಡಿಬಿದ್ದ ರಸ್ತೆಗಳನ್ನು ಗುರುತಿಸಲಾಗಿದೆ. ೯೦ ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಶೀಘ್ರವೇ ನಗರದ ಗುಂಡಿ ಬಿದ್ದ ರಸ್ತೆಗಳಿಗೆ ಮುಕ್ತಿ ಸಿಗಲಿದೆ ಎಂದು ಸಿಂಧು ತಿಳಿಸಿದ್ದಾರೆ.

ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಕಾಂಕ್ರೀಟ್ ರಸ್ತೆ
ಮಹಾನಗರ ಪಾಲಿಕೆಯ ಎಲ್ಲ ೯ ವಲಯ ಕಚೇರಿಗಳ ವ್ಯಾಪ್ತಿಯ ರಸ್ತೆಗಳ ದುರಸ್ತಿ ಕಾರ್ಯ ನಡೆಯುತ್ತಿದ್ದರೆ, ಬೆಂಗಳೂರು- ನೀಲಗಿರಿ ರಸ್ತೆಯಲ್ಲಿರುವ ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದ್ದು, ಬಸ್ ಸ್ಟ್ಯಾಂಡ್ ಮುಂಭಾಗದ ಜೋಡಿ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲಾಗುತ್ತಿದೆ. ಮಧ್ಯಭಾಗದಲ್ಲಿರುವ ಮಳೆ ನೀರು ಚರಂಡಿಯನ್ನೂ ಕಾಂಕ್ರೀಟ್ ಮಾಡಿ ಸ್ಲ್ಯಾಬ್ ಹಾಕಿ ಅದರ ಮೇಲ್ಭಾಗವನ್ನು ಮುಚ್ಚಿ ರಸ್ತೆಯನ್ನು ವಿಶಾಲವಾಗಿ ಮಾಡಲಾಗುತ್ತಿದೆ.

ಮಳೆ ಸ್ವಲ್ಪ ಬಿಡುವು ಕೊಟ್ಟಿದ್ದರಿಂದ ರಸ್ತೆ ದುರಸ್ತಿ ಕಾಮಗಾರಿಗಳನ್ನು ಬಿರುಸಿನಿಂದ ಮುಗಿಸುತ್ತಿದ್ದೇವೆ. ವಲಯ ಕಚೇರಿ ೭ರಲ್ಲಿ ಕಾಮಗಾರಿಯನ್ನು ಇನ್ನು ಒಂದು ವಾರದಲ್ಲಿ ಶುರು ಮಾಡಲಾಗುವುದು. ಸೆ. ೧೫ರೊಳಗೆ ರಸ್ತೆ ಕೆಲಸಮುಗಿಸಿ ನಂತರ ಫುಟ್‌ಪಾತ್‌ಗಳಿಗೆ ಬಣ್ಣ ಹಚ್ಚುವ ಕೆಲಸ ಆರಂಭಿಸುತ್ತೇವೆ. -ಕೆ. ಜೆ. ಸಿಂಧು, ಎಸ್‌ಇ, ಮಹಾನಗರಪಾಲಿಕೆ, ಮೈಸೂರು

 

ಆಲ್‌ಫ್ರೆಡ್‌ ಸಾಲೋಮನ್

ಮೂಲತಃ ಮೈಸೂರಿನವನಾದ ನಾನು ಮಹಾರಾಜ ಕಾಲೇಜಿನಲ್ಲಿ ಪದವಿ ಮುಗಿಸಿ, ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಮತ್ತು ಸಾಮೂಹಿಕ ಸಂವಹನ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಬೆಂಗಳೂರಿನ ಅಭಿಮಾನ ಪ್ರಕಾಶನದ ಅಭಿಮಾನಿ, ಅರಗಿಣಿ, ಪತ್ರಿಕೆ ಮೂಲಕ 1988ರಲ್ಲಿ ಪತ್ರಕರ್ತನಾಗಿ ವೃತ್ತಿ ಆರಂಭಿಸಿ, ರೂಪತಾರ, ಉದಯವಾಣಿ, ಗೃಹಶೋಭ, ಉಷಾಕಿರಣ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುತ್ತೇನೆ. ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ.

Recent Posts

ಹನೂರಿನ ಮೊರಾರ್ಜಿ ದೇಸಾಯಿ ಮಾದರಿ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ಹನೂರು : ನನ್ನ ವೈಯಕ್ತಿಕ ಜೀವನದಲ್ಲಿ ಇದೊಂದು ಅಮೋಘ ದಿನವಾಗಲಿದೆ ಇಂತಹ ವಿದ್ಯಾರ್ಥಿಗಳನ್ನು ಪಡೆದ ನಾವೇ ಧನ್ಯರು ಎಂದು ನಂಜನಗೂಡು…

2 hours ago

ಅಕ್ರಮ ನಾಡ ಬಂದೂಕು ಶೇಖರಿಸಿದ್ದ ವ್ಯಕ್ತಿಯ ಬಂಧನ

ಹನೂರು: ಅಕ್ರಮ ನಾಡ ಬಂದೂಕು ಶೇಖರಣೆ ಮಾಡಿಟ್ಟುಕೊಂಡಿದ್ದ ವ್ಯಕ್ತಿಯನ್ನು ರಾಮಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ…

2 hours ago

ಅಕ್ಕ ಮಾರಮ್ಮ ದೇವಸ್ಥಾನ ನಿರ್ಮಾಣಕ್ಕೆ ಮಾಜಿ ಶಾಸಕ ಆರ್.ನರೇಂದ್ರ ಭೂಮಿ ಪೂಜೆ

ಹನೂರು: ತಾಲ್ಲೂಕಿನ ಕೌದಳ್ಳಿ ಗ್ರಾಮದ ನಾಯಕ ಸಮುದಾಯದ ಬಡಾವಣೆಯಲ್ಲಿ ನೂತನವಾಗಿ ಅಕ್ಕ ಮಾರಮ್ಮ ದೇವಸ್ಥಾನ ನಿರ್ಮಾಣ ಮಾಡಲು ಮಾಜಿ ಶಾಸಕ…

2 hours ago

ಹಸೆಮಣೆ ಏರಿದ ತಮಿಳು ನಟ ಸಿದ್ದಾರ್ಥ ಹಾಗೂ ಅದಿತಿ ರಾವ್‌ ಹೈದರಿ

ತಮಿಳುನಾಡು: ತಮಿಳು ಸ್ಟಾರ್‌ ನಟ ಸಿದ್ಧಾರ್ಥ್‌ ಹಾಗೂ ಅದಿತಿ ರಾವ್‌ ಹೈದರಿ ಅವರಿಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದಿತಿ ಹಾಗೂ…

2 hours ago

ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

ಕಲಬುರ್ಗಿ: ನಾಳೆ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಕಲಬುರ್ಗಿಗೆ ಆಗಮಿಸಲಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ…

3 hours ago

ಮಂಕಿಪಾಕ್ಸ್‌ ಭೀತಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್‌

ಬೆಂಗಳೂರು: ದೇಶದಲ್ಲಿ ಪ್ರಥಮ ಬಾರಿಗೆ ಮಂಕಿಪಾಕ್ಸ್‌ ಪ್ರಕರಣ ಖಚಿತಗೊಂಡ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ…

3 hours ago