ಪುನೀತ್ ಮಡಿಕೇರಿ
೧೨ ವರ್ಷಗಳಿಂದ ಸ್ಥಗಿತಗೊಂಡಿದ ೪೯.೫೬ ಕೋಟಿ ರೂ. ವೆಚ್ಚದ ಕಾಮಗಾರಿ
ಮಡಿಕೇರಿ:೧೨ ವರ್ಷಗಳ ಹಿಂದೆ ಅನುಮೋದನೆಗೊಂಡ ೪೯.೫೬ ಕೋಟಿ ರೂ. ವೆಚ್ಚದ ಮಲಿನ ನೀರು ಶುದ್ಧೀಕರಣ ಯೋಜನೆಗೆ ಮರುಜೀವ ದೊರೆತಿದೆ.
ಕೊಡಗಿನಲ್ಲಿ ಜನ್ಮತಳೆದು ದಕ್ಷಿಣ ಭಾರತಕ್ಕೆ ನೀರುಣಿಸುವ ರೈತರ ಜೀವನಾಡಿ,ಜೀವನದಿ ಎಂದೇ ಕರೆಸಿಕೊಳ್ಳುವ ಕಾವೇರಿ ನದಿ ನೀರು ಇತ್ತೀಚಿನ ವರ್ಷಗಳಲ್ಲಿ ಮೂಲದಲ್ಲಿಯೇ ಕಲು ಷಿತಗೊಂಡು ಕುಡಿಯಲೂ ಯೋಗ್ಯವಿಲ್ಲದ ಹಂತಕ್ಕೆ ತಲುಪಿರುವುದು ಕಳವಳಕಾರಿ ಸಂಗತಿಯಾಗಿದೆ. ಅಧುನಿಕತೆಯ ಪ್ರಭಾವ, ಜನಸಂಖ್ಯೆ ಹೆಚ್ಚಳ, ಪ್ರವಾಸಿಗರು ಹಾಗೂ ಸ್ಥಳೀಯರ ಬೇಜವಾಬ್ದಾರಿ.. ಹೀಗೆ ಹತ್ತು ಹಲವು ಕಾರಣಗಳಿಂದ ಕಾವೇರಿಯ ಒಡಲಿಗೆ ತ್ಯಾಜ್ಯ ಸೇರಿ ಕಲುಷಿತಗೊಳ್ಳುತ್ತಿದೆ. ನದಿಗೆ ತ್ಯಾಜ್ಯ ಸೇರುವುದನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ೪೯.೫೬ ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಶುದ್ಧೀಕರಣ ಯೋಜನೆಗೆ ೧೨ ವರ್ಷಗಳ ಬಳಿಕ ಮರುಜೀವ ದೊರೆತಂತೆ ಕಾಣುತ್ತಿದೆ.
ಏನಿದು ಯೋಜನೆ?: ಮಡಿಕೇರಿ ನಗರದಲ್ಲಿರುವ ಮನೆಗಳಿಂದ ಹಾಗೂ ವಾಣಿಜ್ಯ ಸಂಕೀರ್ಣಗಳಿಂದ ಉತ್ಪತ್ತಿಯಾಗುವ ಮಲಿನ ನೀರು ನಗರದ ಮುಖ್ಯ ನಾಲೆಯಲ್ಲಿ ಹರಿದು ಕೂಟುಹೊಳೆ ಕೆಳಭಾಗಕ್ಕೆ ಸೇರಿ ಅಬ್ಬಿ ಜಲಪಾತದ ಮೂಲಕ ಹರಿದು ಹಾರಂಗಿ ಜಲಾಶಯದಿಂದ ಕಾವೇರಿ ನದಿಯನ್ನು ಸೇರುತ್ತಿದೆ ಎಂದು ಯೋಜನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಮಲಿನವಾಗುವುದನ್ನು ತಡೆಗಟ್ಟಲು ಹಾಗೂ ನಗರದ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ನಗರದಲ್ಲಿ ಉತ್ಪತ್ತಿಯಾಗುವ ಮಲಿನ ನೀರನ್ನು ಶುದ್ಧೀಕರಿಸಲು ೪೯.೫೬ ಕೋಟಿ ರೂ.ಗಳ ಒಳಚರಂಡಿ ಯೋಜನೆಯ ಅಂದಾಜು ಪಟ್ಟಿಗೆ ರಾಜ್ಯ ಸರ್ಕಾರ ೨೫.೦೮.೨೦೧೨ರಲ್ಲಿ ಅನುಮೋದನೆ ನೀಡಿತ್ತು.
ಘಟಕ ನಿರ್ಮಾಣಕ್ಕೆ ಅಡಿಪಾಯ: ಮಲಿನ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲು ಮಡಿಕೇರಿ ಹೊರವಲಯದ ಕೆ.ಬಾಡಗ ಗ್ರಾಮದ ಸ.ನಂ.೮೩/೧ ಹಾಗೂ ೮೦/೬ರಲ್ಲಿ ಒಟ್ಟು ೧.೭೦ ಎಕರೆ ಭೂಮಿಯನ್ನು ಮೀಸಲಿರಿಸಿದ್ದ ಜಾಗದಲ್ಲಿ ಘಟಕ ನಿರ್ಮಾಣ ಹಲವು ವರ್ಷಗಳ ಬಳಿಕ ಪ್ರಾರಂಭಗೊಂಡಿದ್ದು, ಜನವರಿಯಿಂದ ಅಡಿಪಾಯ ಹಾಕುವ ಕಾಮಗಾರಿ ಪ್ರಾರಂಭವಾಗಿದೆ. ೧.೩.೨೦೧೭ರಲ್ಲಿ ಮಡಿಕೇರಿ ನಗರಸಭೆ ಜಾಗವನ್ನು ಖರೀದಿಸಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಸ್ತಾಂತರಿಸಿದೆ. ೩.೦/೪.೫೦ ಎಂ.ಎಲ್.ಡಿ ಸಾಮರ್ಥ್ಯದ ಮಲಿನ ನೀರು ಶುದ್ಧೀಕರಣ ಘಟಕ, ಡಿ.ಜಿ.ರೂಮ್, ಅಡ್ಮಿನ್ ರೂಮ್ ನಿರ್ಮಾಣ ಹಾಗೂ ೫ ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ೭.೧೭ ಕೋಟಿ ರೂ.ಗಳ ಪ್ಯಾಕೇಜ್-೨ರ ಗುತ್ತಿಗೆಯನ್ನು ೨.೬.೨೦೧೯ರಂದು ಬೆಂಗಳೂರು ಮೂಲದ ಸಂಸ್ಥೆಗೆ ವಹಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ೧೨ ತಿಂಗಳ ಅವಧಿ ನಿಗದಿಪಡಿಸಲಾಗಿತ್ತು.
ಆ ನಂತರ ಯೋಜನೆಗೆ ಮರುಜೀವ ದೊರೆತು ಈವರೆಗೆ ಒಟ್ಟು ೬೯.೧ಕಿ.ಮೀ ಉದ್ದದ ಸೀವರ್ ಕೊಳವೆ ಸಾಲು, ೨೪೬೦ ಸಂಖ್ಯೆ ಮೆಷಿನ್ ಹೋಲ್ ಮತ್ತು ೩೪೦೦ ಸಂಖ್ಯೆಯ ಗೃಹ ಸಂಪರ್ಕ ಒದಗಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಮಲಿನ ನೀರು ಶುದ್ಧೀಕರಣ ಘಟಕದ ವಲಯಗಳಲ್ಲಿ ಬರುವ ಬಾಕಿ ಇರುವ ಸುಮಾರು ೧೬ ಕಿ.ಮೀ ಉದ್ದದ ಒಳಚರಂಡಿ ಪೈಪ್ ಲೈನ್ ಪೈಕಿ ೧೦ಕಿ.ಮೀ ಉದ್ದದಷ್ಟು ಡಾಂಬರು ರಸ್ತೆ ಹಾಗೂ ೫ ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆಗಳನ್ನು ಕತ್ತರಿಸಿ ನಿರ್ಮಿಸಬೇಕಾಗಿದೆ.
” ಎಲ್ಲಾ ಕಾಮಗಾರಿಗಳನ್ನುಪೂರ್ಣಗೊಳಿಸಿದ ನಂತರ ಗೃಹಸಂಪರ್ಕ ನೀಡಲಾಗುವುದು. ಇದರಿಂದ ನಗರದಲ್ಲಿ ಉತ್ಪತ್ತಿಯಾಗುವ ಮಲಿನ ನೀರು ಕಾವೇರಿ ನದಿಗೆ ಸೇರಿ ಕಲುಷಿತ ವಾಗುವುದನ್ನು ತಡೆಗಟ್ಟಬಹುದು.ಒಟ್ಟು ೮೫ ಕಿ.ಮೀ. ಒಳಚರಂಡಿ ಕೆಲಸದ ಪೈಕಿ ೭೦ ಕಿ.ಮೀ.ನಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕೆಲವು ರಸ್ತೆಯನ್ನು ಅಗೆಯಲು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಆಗಿಲ್ಲ.”
– ಪ್ರಸನ್ನ ಕುಮಾರ್,ಎಇಇ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ನಗರಸಭೆಯಿಂದ ಜಾಗ ಹಸ್ತಾಂತರ: ಘಟಕದ ಸುತ್ತ ಗ್ರೀನ್ ಬೆಲ್ಟ್ ನಿರ್ಮಾಣಕ್ಕಾಗಿ ೩ ಎಕರೆ ಜಾಗವನ್ನು ಖರೀದಿಸಿರುವ ನಗರಸಭೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಸ್ತಾಂತರಿಸಿದೆ. ಮಲಿನ ನೀರು ಶುದ್ಧೀಕರಣ ಘಟಕದ ಸುತ್ತ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಷರತ್ತಿನಂತೆ ಸ.ನಂ. ೮೩/೧ ರ ೪.೩೨ ಎಕರೆ ಜಮೀನಿನಲ್ಲಿ ಹಸ್ತಾಂತರಿಸಲು ಬಾಕಿ ಉಳಿದ ೩ ಎಕರೆ ಜಮೀನನ್ನು ಹಾಗೂ ೮೦/೭ರಲ್ಲಿ ೦.೯೪ ಎಕರೆ ಜಮೀನನ್ನು ೯.೮.೨೦೨೪ರಂದು ಹಸ್ತಾಂತರಿಸಿದೆ. ಅದರಂತೆ ಮಲಿನ ನೀರು ಶುದ್ಧೀಕರಣ ಘಟಕದ ಅಡಿಪಾಯದ ಕಾಮಗಾರಿಯನ್ನು ಜನವರಿಯಿಂದ ಪ್ರಾರಂಭಿಸಿದ್ದು, ಟೆಂಡರ್ ಅವಧಿಯಾದ ಒಂದು ವರ್ಷದ ಒಳಗೆ ಪೂರ್ಣಗೊಳ್ಳುವ ವಿಶ್ವಾಸ ಅಽಕಾರಿಗಳಿಂದ ವ್ಯಕ್ತವಾಗಿದೆ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…