Andolana originals

ಮೀಸಲಾತಿ ಪ್ರಕಟ: ಗರಿಗೆದರಿದ ರಾಜಕೀಯ

ಕೆ.ಬಿ.ರಮೇಶ ನಾಯಕ

ಮೈಸೂರು: ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದ ಜಿಪಂ, ತಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಕೊನೆಗೂ ಮನಸ್ಸು ಮಾಡಿದ್ದು, ಜಿಲ್ಲೆಯ ೪೬ ಜಿಪಂ ಕ್ಷೇತ್ರಗಳು ಹಾಗೂ ೧೬೩ ತಾಪಂ ಕ್ಷೇತ್ರಗಳ ಮೀಸಲಾತಿಯನ್ನು ಪ್ರಕಟಿಸಿದೆ.

ಮೀಸಲಾತಿಯನ್ನು ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ದಸರಾ ಸಂಭ್ರಮ ಹಾಗೂ ದೀಪಾವಳಿ ಹಬ್ಬಕ್ಕಿಂತಲೂ ಮತದಾರರ ಮನ ಗೆಲ್ಲಲು ಹಳ್ಳಿಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯಲು ದಾರಿಯಾಗಿದೆ.

ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಸೇರಿದಂತೆ ರಾಜ್ಯದ ೩೧ ಜಿಲ್ಲೆಗಳ ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳ ಸದಸ್ಯರ ಅವಧಿಯು ೨೦೨೧ರ ಏಪ್ರಿಲ್೨೦ರಂದು ಮುಗಿದ ಮೇಲೆ ಆಡಳಿತಾಧಿಕಾರಿಗಳ ಆಡಳಿತವು ಐದು ವರ್ಷಗಳನ್ನು ಪೂರೈಸಿದೆ.

ಸಕಾಲಕ್ಕೆ ಚುನಾವಣೆ ನಡೆಸಬೇಕೆಂಬ ಕಾಯ್ದೆ ಇದ್ದರೂ ನಾನಾ ಕಾರಣಗಳಿಂದ ಮುಂದೂಡುತ್ತಲೇ ಬಂದಿದ್ದ ರಾಜ್ಯ ಸರ್ಕಾರ ಕೊನೆಗೂ ಕಾರ್ಯಕರ್ತರು, ಮುಖಂಡರಿಗೆ ರಾಜಕೀಯ ಸ್ಥಾನಮಾನವನ್ನು ಒದಗಿಸುವ ಮಹಾದಾಸೆಯಿಂದ ವರ್ಗವಾರು ಮೀಸಲಾತಿಯನ್ನು ಪ್ರಕಟಿಸಿತ್ತು. ಆಯಾಯ ಜಿಲ್ಲೆಗಳಲ್ಲಿರುವ ಒಟ್ಟು ಸ್ಥಾನಗಳ ಸಂಖ್ಯೆಗೆ ತಕ್ಕಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ‘ಎ’ ವರ್ಗ, ಹಿಂದುಳಿದ ‘ಬಿ’ ವರ್ಗ, ಸಾಮಾನ್ಯ ವರ್ಗಕ್ಕೆ ಹಂಚಿಕೆ ಮಾಡಿ ಆದೇಶ ಹೊರಡಿಸಿತ್ತು. ಇದಾದ ಎರಡೇ ದಿನಗಳಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿಯ ಕ್ಷೇತ್ರವಾರು ಮೀಸಲಾತಿಯನ್ನು ಶುಕ್ರವಾರ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಕೆಗೆ ೧೦ ದಿನಗಳ ಕಾಲಾವಕಾಶ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಿಂದ ಈ ಕರಡು ಅಧಿ ಸೂಚನೆ ಹೊರಬಿದ್ದಿದೆ. ೪೬ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಗಳು ನಿಗದಿಯಾಗಿದ್ದು, ಈ ಪೈಕಿ ೨೩ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

೧೦(೫ ಮಹಿಳೆ) ಸ್ಥಾನಗಳು ಎಸ್‌ಸಿ,೭(೪-ಮಹಿಳೆ) ಸ್ಥಾನಗಳನ್ನು ಎಸ್‌ಟಿ, ೫(೩-ಮಹಿಳೆ) ಸ್ಥಾನಗಳು ಹಿಂದುಳಿದ ವರ್ಗ‘ಅ’ಗೆ , ೧ ಸ್ಥಾನವನ್ನು ಹಿಂದುಳಿದ ವರ್ಗ ‘ಬಿ’ಗೆ ಹಾಗೂ ೨೩(೧೧-ಮಹಿಳೆ) ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಟಿಕೆಟ್ ಗಿಟ್ಟಿಸಲು ಆಕಾಂಕ್ಷಿಗಳ ಚಿತ್ತ ಮೈಸೂರು ಜಿಪಂನಲ್ಲಿ ೪೬ ಸ್ಥಾನಗಳಿದ್ದು, ಇದರಲ್ಲಿ ೨೩ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ ೯ ತಾಲ್ಲೂಕುಗಳಿದ್ದರೂ ಹನ್ನೊಂದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

ಇದರಲ್ಲಿ ಗ್ರಾಮಾಂತರ ಪ್ರದೇಶಕ್ಕೆ ಸೇರಿದ ೮ ವಿಧಾನಸಭಾ ಕ್ಷೇತ್ರಗಳ ಶಾಸಕರಿಗೆ ಜಿಪಂ, ತಾಪಂ ಚುನಾವಣೆಯು ಅಗ್ನಿಪರೀಕ್ಷೆಯಾಗಲಿದೆ. ಚಾಮುಂಡೇಶ್ವರಿ, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ತಿ.ನರಸೀಪುರ, ವರುಣ, ನಂಜನಗೂಡು ಕ್ಷೇತ್ರಗಳಲ್ಲಿರುವ ಜಿಪಂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಕಾತರದಿಂದ ಕಾದಿದ್ದ ಆಕಾಂಕ್ಷಿಗಳು ಟಿಕೆಟ್ ಪಡೆಯಲು ತೀವ್ರ ಪೈಪೋಟಿ ನೀಡಬೇಕಾಗಿದೆ. ಕಳೆದ ಬಾರಿ ಬಿ.ಎನ್. ಸದಾನಂದ, ಗುರುಸ್ವಾಮಿ, ಮಂಗಳಾ ಸೋಮಶೇಖರ್, ಬೀರಿಹುಂಡಿ ಬಸವಣ್ಣ, ರಾಕೇಶ್ ಪಾಪಣ್ಣ, ಎಂ.ಪಿ.ನಾಗರಾಜು, ಸಾ.ರಾ.ನಂದೀಶ್, ಸಿ.ಜೆ.ದ್ವಾರಕೀಶ್, ಸುನೀತಾ ವೀರಪ್ಪಗೌಡ ಮೊದಲಾದವರು ಆಯ್ಕೆಯಾಗಿ ಬಂದಿದ್ದರು. ಹೊಸ ಮೀಸಲಾತಿಯ ಪ್ರಕಾರ ಹುಲ್ಲಹಳ್ಳಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಕಾರಣ ಮಂಗಳಾ ಸೋಮಶೇಖರ್ ಸ್ಪರ್ಧಿಬಹುದಾಗಿದೆ. ಹದಿನಾರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಗುರುಸ್ವಾಮಿಗೆ ಅವಕಾಶ ಕೈತಪ್ಪಿದೆ.

ಶಾಸಕರಿಗೆ ಅಗ್ನಿಪರೀಕ್ಷೆ: ಕಳೆದ ಮೂರೂವರೆ ವರ್ಷಗಳಿಂದ ಯಾವುದೇ ಚುನಾವಣೆ ಇಲ್ಲದೆ ನಿರುಮ್ಮಳವಾಗಿದ್ದ ಶಾಸಕರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಅಗ್ನಿಪರೀಕ್ಷೆ ಯಾಗಲಿದೆ.

” ಶೇ.೫೦ರಷ್ಟು ಮಹಿಳಾ ಮೀಸಲಾತಿ ಹಂಚಿಕೆಯಿಂದಾಗಿ ಎಸ್‌ಸಿ, ಎಸ್‌ಟಿ,ಹಿಂದುಳಿದ ವರ್ಗ, ಸಾಮಾನ್ಯ ವರ್ಗದಲ್ಲೂ ಅವಕಾಶ; ಸಾಮಾನ್ಯ ವರ್ಗದಲ್ಲೂ ಮಹಿಳೆಯರಿಗೆ ಸಿಂಹಪಾಲು”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

22 mins ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

24 mins ago

ಓದುಗರ ಪತ್ರ: ಕಾವೇರಿ: ರಾಜ್ಯಕ್ಕೆ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ, ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರ ಈಗಾಗಲೇ ಸುಮಾರು ೧೭೦…

27 mins ago

ಓದುಗರ ಪತ್ರ: ವಿಷಗಳಿಗೆ ಬರದಂತೆ ತಡೆಯೋಣ

ತಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಮಹಾತ್ಮಗಾಂಧಿಯವರನ್ನುಬ್ರಿಟಿಷರು ಬಂಧಿಸಲಿಲ್ಲ . ಏಕೆಂದರೆ ಗಾಂಧಿಜಿ ಯವರು ನ್ಯಾಯಯುತವಾಗಿ ಅಹಿಂಸಾ ತ್ಮಕವಾಗಿ ಸ್ವಾತಂತ್ರ್ಯ ಕೇಳುತ್ತಿದ್ದರು,…

30 mins ago

ಅಂಬಾರಿ ಹೊರುವ ಗಜರಾಜನ ಮೇಲೆ ದಯೆ ಇರಲಿ

ವಸಂತಕುಮಾರ್ ಮೈಸೂರಮಠ್, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ, ಮೈಸೂರು ಹೊರೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗವಿಲ್ಲವೇ? ಮೈಸೂರಿನ ಮಹಾನ್ ಯದುಕುಲ…

32 mins ago

ಮಳೆ ಕೊರತೆ: ಭತ್ತದ ಬೆಳೆ ಉಳಿಸಿಕೊಳ್ಳಲು ಹರಸಾಹಸ

ಕಾಂಗೀರ ಬೋಪಣ್ಣ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಆತಂಕ  ವಿರಾಜಪೇಟೆ: ತಾಲ್ಲೂಕಿನಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಭತ್ತದ ಬೆಳೆಗೆ…

49 mins ago