ತುಂಬಾ ಜನರಿಗೆ ಮೆಸೇಜ್ಗಳನ್ನು ಕಳುಹಿಸಿದ್ದ ರೇಣುಕಾಸ್ವಾಮಿ Sex-mania ವ್ಯಕ್ತಿಯಂತೆ ಕಾಣುತ್ತಿದ್ದ.
ಆನಂತರ ದರ್ಶನ್ ಅವರು ಪವನ್ ಹತ್ತಿರ ಇದ್ದ ರೇಣುಕಾಸ್ವಾಮಿಯ ಮೊಬೈಲ್ ತೆಗೆದುಕೊಂಡು, ಈ …ಮಗ ಯಾರು ಯಾರಿಗೆ ಮೆಸೇಜ್ ಮಾಡಿದ್ದಾನೆ ನೋಡಿ ಹೇಳಿ ಪ್ರದೋಷ ಎಂದು ನನಗೆ ಫೋನ್ ಕೊಟ್ಟರು. ಆ ಸಮಯದಲ್ಲಿ ರೇಣುಕಾಸ್ವಾಮಿಯ ಒಳಉಡುಪು ಅಲ್ಲಿಯೇ ಕೆಳಗೆ ಬಿದ್ದಿದ್ದು, ಅದನ್ನು ಎತ್ತಿ ನಾನು ಆತನಿಗೆ ಕೊಟ್ಟೆ. ಆಗ ಆತ ಅದನ್ನು ತರಾತುರಿಯಾಗಿ ಹಾಕಿಕೊಂಡು, ಅಲ್ಲಿಯೇ ಬಿದ್ದಿದ್ದ ಕಪ್ಪು ಬಣ್ಣದ ತುಂಬು ತೋಳಿನ ಟೀ-ಶರ್ಟನ್ನು ಎತ್ತಿ ತರಾತುರಿಯಿಂದ ಹಾಕಿಕೊಂಡನು.
ಹೆಸರು ರೇಣುಕಾಸ್ವಾಮಿ, ರೇಣುಕಾಸ್ವಾಮಿ, ಇನ್ಸ್ಟಾಗ್ರಾಂನಲ್ಲಿ ಗೌತಮ್:
ಈ ವೇಳೆ ದೀಪಕ್ ಅಲ್ಲಿಂದ ಆಚೆ ಹೋದರು. ನಾನು ರೇಣುಕಾಸ್ವಾಮಿಯ ಮೊಬೈಲ್ನ್ನು ತೆಗೆದುಕೊಂಡು ಅದರಲ್ಲಿ ಇರುವ ಫೇಸ್ಬುಕ್ ಮೆಸೆಂಜರ್, ಇನ್ ಸ್ಟಾಗ್ರಾಂ ಐಡಿ ನೋಡಿದಾಗ, ಆತನ ಇನ್ಸ್ಟಾಗ್ರಾಂ ಐಡಿಯಲ್ಲಿ ಆತನ ಹೆಸರು ಗೌತಮ್ ಎಂದಿತ್ತು. ಆಗ ನನ್ನ ಪಕ್ಕದಲ್ಲಿ ನಿಂತಿದ್ದ ರಾಘವೇಂದ್ರರವರಿಗೆ ಈತನ ಹೆಸರು ಗೌತಮ್ಮಾ ಎಂದು ಕೇಳಿದಾಗ, ರಾಘವೇಂದ್ರ ಅಲ್ಲ ಆತನ ಹೆಸರು ರೇಣುಕಾಸ್ವಾಮಿ ಎಂದು ಹೇಳಿದರು.
ಬೇರೆ ಬೇರೆ ಅಕೌಂಟ್ಗಳಿಗೆ ಮರ್ಮಾಂಗದ ಫೋಟೋ ಕಳುಹಿಸಿ, ರೇಟು ಎಷ್ಟು ಕೇಳಿದ್ದ:
ರೇಣುಕಾಸ್ವಾಮಿಯ ಟೆಲಿಗ್ರಾಂ ಐಡಿ ಮತ್ತು ವಾಟ್ಸ್ ಆ್ಯಪ್ ಅನ್ನು ಚೆಕ್ ಮಾಡಿದಾಗ ಆತನ ಫೇಸ್ಬುಕ್ಮೆ ಸೆಂಜರ್ನಲ್ಲಿ ಸುಮಾರು 8-10 ಅಕೌಂಟ್ಗಳಿಗೆ ಅಪೋಲೊ ನರ್ಸ್, ಕ್ಲಿನಿಕ್ ನರ್ಸ್ etc ಹೆಸರು ಗಳನ್ನು ಇಟ್ಟಿದ್ದ. ಆ ಎಲ್ಲ ಅಕೌಂಟ್ ಗಳಿಗೂ ಆತ ತನ್ನ ಮರ್ಮಾಂಗದ ಫೋಟೋಗಳನ್ನು ಕಳುಹಿಸಿ, ನಿನ್ನ ರೇಟು ಎಷ್ಟು ಎಂದು ಮೆಸೇಜ್ ಮಾಡಿದ್ದ. ಚಲನಚಿತ್ರ ನಟಿಯರಿಗೂ ಮೆಸೇಜ್ ಆತನ ಇನ್ಸ್ಟಾಗ್ರಾಂ ಐಡಿಯನ್ನು ಚೆಕ್ ಮಾಡಿದಾಗ, ಕೆಲವೊಂದು ಚಲನಚಿತ್ರ ನಟಿಯರಿಗೂ ಕೂಡ ಅದೇ ರೀತಿಯ ಮೆಸೇಜ್ಗಳನ್ನು ಕಳುಹಿಸಿದ್ದು ಕಂಡಿತ್ತು. ಆ ರೀತಿಯ ಮೆಸೇಜ್ ಮತ್ತು ಫೊಟೋಗಳನ್ನು ಪವಿತ್ರಾ ಗೌಡರಿಗೂ ಕಳುಹಿಸಿರುವುದು ಕಂಡಿತ್ತು. ಬೇರೆ ಅಕೌಂಟ್ ಗಳಿಗೆ ಹೋಲಿಸಿ ನೋಡಿದಾಗ, ಪವಿತ್ರಾ ಗೌಡರಿಗೆ ಆತ ಹೆಚ್ಚು harrass ಆಗುವ ರೀತಿಯಲ್ಲಿ ತನ್ನ ಮರ್ಮಾಂಗದ ಫೋಟೋಗಳನ್ನು, ಅಶ್ಲೀಲ ವಿಡಿಯೋ ಗಳನ್ನು ಮತ್ತು ಮೆಸೇಜ್ಗಳನ್ನು ಕಳುಹಿಸಿರುವುದು ಕಂಡಿತ್ತು. ಆತನ ವಾಟ್ಸ್ಆ್ಯಪ್ ಚೆಕ್ ಮಾಡಿದಾಗ ಇದೇ ರೀತಿಯ ಮೆಸೇಜ್ಗಳು ಕಂಡುಬಂದವು. ಆತನ ವಾಟ್ಸಾಪ್ನಲ್ಲಿ ಒಂದು ಮೊಬೈಲ್ ನಂಬರ್ ಅನ್ನು ಪಿನ್ ಮಾಡಿ ಪವಿ ಎಂದು ಸೇವ್ ಮಾಡಿ ಹಾರ್ಟ್ ಸಿಂಬಲ್ ಹಾಕಿರುವುದು ಕಂಡಿತ್ತು.
Sex–mania ವ್ಯಕ್ತಿ ಇದ್ದ ರೀತಿಯಲ್ಲಿ ಕಾಣುತ್ತಿದ್ದಾನೆ. : ಆ ಪಿನ್ ಮಾಡಿದ ನಂಬರನ್ನು ನಾನು ಟ್ಯಾಪ್ ಮಾಡಿದಾಗ, ಅದರಲ್ಲಿ 9535289797 ಎಂಬ ನಂಬರ್ ಇತ್ತು. ನಾನು ಸದರಿ ನಂಬರ್ ಅನ್ನು ಕ್ಲೋಸ್ ಮಾಡಿ, ದರ್ಶನ್ ಅವರಿಗೆ ಈ ವ್ಯಕ್ತಿ ಇದೇ ರೀತಿ ಮೆಸೇಜ್ ಗಳನ್ನು ತುಂಬಾ ಜನರಿಗೆ ಕಳುಹಿಸಿದ್ದು, ಇವನು Sex-mania ವ್ಯಕ್ತಿ ಇದ್ದ ರೀತಿಯಲ್ಲಿ ಕಾಣುತ್ತಿದ್ದಾನೆ ಎಂದೆ. ಇದನ್ನು ಕೇಳಿಸಿಕೊಂಡ ದರ್ಶನ್ ಮುಂದೆ ಬಂದು ಕಾಲಿನಿಂದ ರೇಣುಕಾಸ್ವಾಮಿಗೆ ಒದ್ದರು.
ಮೆಸೇಜ್ಗಳು ಎಕ್ಸ್ಚೇಂಜ್ ಆಗಿದ್ದ ಫೋನ್ ನಂ. ಯಾರದು?: ನಂತರ ನಾನು ರೇಣುಕಾಸ್ವಾಮಿಯ ಪಕ್ಕದಲ್ಲಿ ಕುಳಿತುಕೊಂಡು ಮೇಲೆ ಹೇಳಿದ ಮೊಬೈಲ್ ನಂಬರ್ ಯಾರದ್ದು ಎಂದು ಕೇಳಿದೆ. ಅದಕ್ಕೆ ಆತ ಅದು ಪವಿತ್ರಾ ಗೌಡ ಅವರ ಮೊಬೈಲ್ ನಂಬರ್ ಎಂದು, ಅದರಿಂದಲೇ ತನಗೆ ಹಲವಾರು ಮೆಸೇಜ್ ಬರುತ್ತಿತ್ತು ಎಂದು ಹೇಳಿದ. ಆಗ ನನಗೆ ಶಾಕ್ ಆಯಿತು. ನಂತರ ಆ ನಂಬರ್ನಲ್ಲಿ ಬಂದ ಮೆಸೇಜ್ಗಳನ್ನು ನಾನು ಸ್ಟಾಲ್ ಮಾಡಿ ನೋಡಿದಾಗ, 2-3 ದಿನಗಳಿಂದಲೂ ಮೆಸೇಜ್ಗಳು ಎಕ್ಸ್ಚೇಂಜ್ ಆಗಿರುವುದು ಕಂಡುಬಂತು. ಆಗ ಅಲ್ಲಿಯೇ ಪಕ್ಕದಲ್ಲಿ ಇದ್ದ ಪವನ್ಗೆ ಏನು ಇದು, ಇದು ಯಾರ ನಂಬರ್ ಎಂದು ಕೇಳಿದೆ. ಅದಕೆ ಪವನ್ ಅದು ತನ್ನ ಮೊಬೈಲ್ ನಂಬರ್ ಎಂದು ಹೇಳಿದ.
ದರ್ಶನ್ ಕಾರು ಚಾಲಕ ಲಕ್ಷಣ್ ಎಂಟ್ರಿ: ಅಷ್ಟರಲ್ಲಿ ನಾನು ಮತ್ತು ಬೇರೆಯವರು ವಿನಯ್ ಗೆ ಟೀ-ಕಾಫಿ ವ್ಯವಸ್ಥೆ ಮಾಡಲು ಕೇಳಿದೆವು. ಆಸಮಯದಲ್ಲಿ ನಾನು ರೇಣುಕಾಸ್ವಾಮಿಯ ಪಕ್ಕದಲ್ಲಿ ಕುಳಿತುಕೊಂಡು ನೀನು ಊಟ ಮಾಡಿದೆಯಾ ಎಂದು ಕೇಳಿದೆ. ಅದಕ್ಕೆ ರೇಣುಕಾಸ್ವಾಮಿ ಇಲ್ಲ ಎಂದನು. ಆಗ ನಾನು ವಿನಯ್ಗೆ ಈತನಿಗೆ ಊಟ ತರಿಸಿಕೊಂಡಿ ಎಂದು ಹೇಳಿದೆ. ಅದಕ್ಕೆ ಒಪ್ಪಿದ ವಿನಯ್, ಪುನೀತ್ ಪವಿತ್ರಾ ಗೌಡರನ್ನು ಮನೆಗೆ ಬಿಡಲು ಹೋಗಿದ್ದು, ಆತ ಬಂದ ನಂತರ ಊಟ ತರಿಸಿಕೊಡುತ್ತೇನೆ ಎಂದರು. ಅಷ್ಟರಲ್ಲಿ ದರ್ಶನ್ ಕಾರು ಚಾಲಕ ಲಕ್ಷ್ಮಣ್ ಅಲ್ಲಿಗೆ ಬಂದರು.
(ಮುಂದುವರಿಯುವುದು)
ಮೈಸೂರು: ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ದಸರಾ ಗಜಪಡೆಯ ಮುಂದಿನ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಭಾರೀ ಕುತೂಹಲ…
ರೇಣುಕಾಸ್ವಾಮಿ ಕತ್ತಿನ ಮೇಲೆ ಕಾಲಿಟ್ಟು ಅದುಮುತ್ತಿದ್ದ ದರ್ಶನ್ ತನ್ನ ಕೈಯಲ್ಲಿದ್ದ ಸಿಗರೇಟ್ನಿಂದ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ಸುಟ್ಟರು " ನಾನು…
ಕಾಫಿ ಜೊತೆ ಸಿಗರೇಟ್ ಸೇದುತ್ತಾ ದಿಢೀರನೆ ಬಂದು ಒದ್ದ ದರ್ಶನ್, ನಂತರ ಮರ್ಮಾಂಗಕ್ಕೆ ಎರಡು ಬಾರಿ ಒದೆತ ರೇಣುಕಾಸ್ವಾಮಿಗೆ ಬೀಳುತ್ತಿದ್ದ…
ರೇಣುಕಾಸ್ವಾಮಿಗೆ ಬೈಗುಳದೊಂದಿಗೆ ಏಟು ಕೊಡುತ್ತಿದ್ದ ದರ್ಶನ್ ಕಾರಿನಿಂದ ಇಳಿಯುತ್ತಲೇ ನರಪೇತಲನಿಗೆ ಒದ್ದ ವಿನಯ್ ನಂತರ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್…
ನೆತ್ತಿ,ಕೈ ಬೆರಳುಗಳಿಂದ ಸೋರುತ್ತಿದ್ದ ರಕ್ತ, ಬೆಳಿಗ್ಗೆಯಿಂದ ಸಂಜೆಯವರೆಗೂ ಬಿದ್ದಿತ್ತು ಹೊಡೆತ ದರ್ಶನ್ಗಿದ್ದ ಸಿಟ್ಟನ್ನು ಸಾರಿ ಹೇಳುತ್ತಿದ್ದವು ರೇಣುಕಾಸ್ವಾಮಿಯ ಮೈಮೇಲಿನ ಬಾಸುಂಡೆ…
ಸಿನಿಮೀಯ ಮಾದರಿಯಲ್ಲೇ ದರ್ಶನ್ ಹೊಡೆತ; ರೇಣುಕಾಸ್ವಾಮಿಗೆ ಬಿದ್ದ ಪ್ರತಿ ಏಟಿನಲ್ಲೂ ಇತ್ತು ದರ್ಶನ್ ಸಿಟ್ಟು ಮಾಫಿ ಸಾಕ್ಷಿಯಾದ 14ನೇ ಆರೋಪಿ:…