Andolana originals

ರೇಣುಕಾಸ್ವಾಮಿ ಎದೆಯ ಮೇಲೆ ನಿಂತು ಅದುಮುತ್ತಿದ್ದ ದರ್ಶನ್

ಕಾಫಿ ಜೊತೆ ಸಿಗರೇಟ್ ಸೇದುತ್ತಾ ದಿಢೀರನೆ ಬಂದು ಒದ್ದ ದರ್ಶನ್, ನಂತರ ಮರ್ಮಾಂಗಕ್ಕೆ ಎರಡು ಬಾರಿ ಒದೆತ

ರೇಣುಕಾಸ್ವಾಮಿಗೆ ಬೀಳುತ್ತಿದ್ದ ಏಟುಗಳ ಚಿತ್ರಣ ನೀಡಿದ ಮಾಫಿ ಸಾಕ್ಷಿ ಪ್ರದೋಷ್‌

ಸಾಹುಕಾರ್ ದರ್ಶನ: ಈ ವೇಳೆಗೆ ದರ್ಶನ್ ಕಾರು ಚಾಲಕ ಲಕ್ಷ್ಮಣ್ ಅಲ್ಲಿಗೆ ಬಂದರು. ಆಗ ದರ್ಶನ್ ಲಕ್ಷ್ಮಣ್ ಅವರನ್ನು ಕುರಿತು ಇಲ್ಲಿಗೆ ಏಕೆ ಬಂದಿರಿ ಸಾಹುಕಾರ್ ಎಂದು ಕೇಳಿದರು. (ಲಕ್ಷ್ಮಣ್‌ನನ್ನು ದರ್ಶನ್ ಸಾಹುಕಾರ್ ಎಂದು ಕರೆಯುತ್ತಿದ್ದರು). ಆಗ ಲಕ್ಷ್ಮಣ್ ಅವರು ನಾಳೆ ಯಾವ ಕಾರನ್ನು ತೆಗೆಯಬೇಕು ಎಂದು ಕೇಳಲು ಮನೆಯ ಹತ್ತಿರ ಹೋಗಿದ್ದೆ. ಆದರೆ ನೀವು ಅಲ್ಲಿ ಇರಲಿಲ್ಲ. ನಂತರ ಪವನ್‌ಗೆ ಕರೆ ಮಾಡಿದಾಗ, ಅವರು ನೀವು ಇಲ್ಲಿ ಇದ್ದೀರಿ ಹಾಗೂ ಕರೆಯುತ್ತೀದ್ದೀರಿ ಎಂದು ಹೇಳಿದ್ದಕ್ಕೆ ಇಲ್ಲಿಗೆ ಬಂದೆ ಎಂದರು. ಅದಕ್ಕೆ ದರ್ಶನ್ ಇಲ್ಲ ಸಾಹುಕಾರ್, ನಿಮ್ಮನ್ನು ನಾನು ಕರೆದಿಲ್ಲ ಎಂದರು.

ಆತನನ್ನು ಮುಟ್ಟಬೇಡಿ ಸಾಹುಕಾರ್ ಅವನಿಗೆ ಏಡ್ಸ್: ಇದು ನಂತರ ದರ್ಶನ್ ಅವರು ರೇಣುಕಾಸ್ವಾಮಿಯನ್ನು ಲಕ್ಷ್ಮಣ್‌ಗೆ ತೋರಿಸಿ, ಈ … ಮಗ, ಪವಿತ್ರಾ ಗೌಡಗೆ ಮೆಸೇಜ್ ಮಾಡುತ್ತಿದ್ದಾನೆ ಎಂದರು. ಆಗ ಲಕ್ಷ್ಮಣ್ ನನ್ನ ಪಕ್ಕದಲ್ಲಿ ಕುಳಿತಿದ್ದ ರೇಣುಕಾಸ್ವಾಮಿಯ ಹತ್ತಿರ ಬಂದು ಮಂಡಿಯೂರಿ ಕುಳಿತು, ರೇಣುಕಾಸ್ವಾಮಿಯ ಮುಖಕ್ಕೆ ಕೈಯಿಂದ ತಿವಿದರು. ಆಗ ದರ್ಶನ್, ಸಾಹುಕಾರ್
ಆತನನ್ನು ಮುಟ್ಟಬೇಡಿ, ಅವನಿಗೆ ಏಡ್ಸ್ ಇದೆ ಎಂದು ಹೇಳಿದರು. ಆಗ ಲಕ್ಷ್ಮಣ್ ಗಾಬರಿಯಿಂದ ಎದ್ದು ಹೋಗಿ ಅಲ್ಲೇ ಇದ್ದ ಹುಡುಗನಿಗೆ ನೀರು ಹಾಕು ಎಂದು ಹೇಳಿ ಕೈಯನ್ನು ತೊಳೆದುಕೊಂಡರು. ವಿಡಿಯೋ ಮಾಡಿ ರೇಣುಕಾಸ್ವಾಮಿಯನ್ನು ಪೊಲೀಸರ ವಶಕ್ಕೆ ನೀಡೋಣ: ದರ್ಶನ್ ಅವರುರೇಣುಕಾಸ್ವಾಮಿಯ ಒಂದು ವಿಡಿಯೋವನ್ನು ಮಾಡಿ, ನಂತರ ಈತನನ್ನು ಪೊಲೀಸರ ವಶಕ್ಕೆ ನೀಡೋಣ ಎಂದರು. ನಂತರ ರೇಣುಕಾಸ್ವಾಮಿಯನ್ನು ಅಲ್ಲಿಯೇ ಒಂದು ಕಡೆ ಕೂರಿಸಿ, ನಾನು, ವಿನಯ್ ಮತ್ತು ನಾಗರಾಜ್ ವಿಡಿಯೋ ಮಾಡಲು ಫೋನ್ ತೆಗೆದೆವು. ದರ್ಶನ್ ಅಲ್ಲಿಯೇ ಮಾತನಾಡುತ್ತಿದ್ದರು. ಅವರ ಹಿಂದೆ ಲಕ್ಷ್ಮಣ್ ಇದ್ದರು. ಆದ ಕಾರಣ ಈಗ ವಿಡಿಯೋ ಮಾಡುವುದು ಬೇಡ ಎಂದು ತೀರ್ಮಾನಿಸಿ, ನಾಳೆ ಮಾಡೋಣ ಎಂದುಕೊಂಡೆವು.

ಊಟ ಮಾಡಲಾಗದೆ ಒದ್ದಾಡಿದ ರೇಣುಕಾಸ್ವಾಮಿ: ಅಷ್ಟರಲ್ಲಿ ವಿನಯ್ ಒಂದು ಊಟದ ಪ್ಯಾಕೆಟ್‌ನ್ನು ತಂದು ನನ್ನ ಕೈಗೆ ಕೊಟ್ಟರು. ಅದನ್ನು ಪುನೀತ್ ಅವರಿಂದ ತರಿಸಿದ್ದರು. ರೇಣುಕಾಸ್ವಾಮಿಗೆ ಊಟ ತರಿಸುವ ಮುನ್ನ ಆತ ಸಸ್ಯಾಹಾರಿ ಎಂದು ಹೇಳಿದ್ದರಿಂದ ಅನ್ನವನ್ನು ತರಿಸಲು ಹೇಳಿದ್ದೆ. ನಾನು ಊಟದ ಪ್ಯಾಕೆಟ್ ತೆಗೆದು ನೋಡಿದಾಗ ಅದರಲ್ಲಿ ಮಸಾಲ ಅನ್ನ ಇದ್ದು, ಅದನ್ನು ರೇಣುಕಾಸ್ವಾಮಿಗೆ ಕೊಟ್ಟೆ. ಆತ ಅದರಲ್ಲಿ ಎರಡು ತುತ್ತುಗಳನ್ನು ತಿಂದು, ಇನ್ನು ತಿನ್ನಲು ಆಗದೇ ಅದನ್ನು ಬಾಯಿಯಿಂದ ಆಚೆ ಹಾಕುತ್ತಿದ್ದ.
ಆ ವೇಳೆ ರೇಣುಕಾಸ್ವಾಮಿಯ ಮೊಬೈಲ್ ನನ್ನ ಬಳಿ ಇತ್ತು. ಸಂಜೆ ಸುಮಾರು 6 ಗಂಟೆಗೆ ರಘು ಎಂಬವರು ರೇಣುಕಾಸ್ವಾಮಿಯ ಮೊಬೈಲ್‌ ಗೆ ಕರೆ ಮಾಡಿದರು. ಆಗ ನಾನು ರೇಣುಕಾಸ್ವಾಮಿಗೆ ಮಾತನಾಡುತ್ತೀರಾ ಎಂದು ಕೇಳಿ ಮೊಬೈಲ್ ತೋರಿಸಿದಾಗ, ಆತ ಕುತ್ತಿಗೆಯನ್ನು ಅಲ್ಲಾಡಿಸಿ ಇಲ್ಲ ಎಂದನು. ನಾನು ಮತ್ತೊಮ್ಮೆ ಮೊಬೈಲ್‌ನ್ನು ಆತನ ಹತ್ತಿರ ತೆಗೆದುಕೊಂಡು ಹೋಗಿ ಮಾತನಾಡಿ ಎಂದು ಹೇಳಿದಾಗ, ಆತ ನಿರಾಕರಿಸಿದ. ಅಷ್ಟರಲ್ಲಿ ಆ ಕಾಲ್ ಕಟ್ಟಾಯಿತು.

ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದೆಯುತ್ತಿದ್ದ ದರ್ಶನ್: ಅಷ್ಟರಲ್ಲಿ ವಿನಯ್ ಎಲ್ಲರಿಗೂ ಕಾಫಿ ತರಿಸಿದ್ದರು. ನಾವೆಲ್ಲರೂ ಕಾಫಿ ಕುಡಿಯುತ್ತಿದ್ದೆವು. ಕಾಫಿಯ ಜೊತೆಗೆ ಸಿಗರೇಟ್ ಸೇದುತ್ತಿದ್ದ ದರ್ಶನ್ ದಿಢೀರನೆ ಬಂದು ಊಟ ಮಾಡುತ್ತಿದ್ದರೇಣುಕಾಸ್ವಾಮಿಗೆ ಒದ್ದರು. ಆಗ ಆತ ಕೆಳಗೆ ಬಿದ್ದನು. ಬಿದ್ದ ತಕ್ಷಣ ದರ್ಶನ್ ಆತನ ಮರ್ಮಾಂಗಕ್ಕೆ ಎರಡು ಬಾರಿ ಒದ್ದರು. ಬಿದ್ದ ರೇಣುಕಾಸ್ವಾಮಿಯ ಎದೆಯ ಮೇಲೆ ದರ್ಶನ್ ನಿಂತುಕೊಂಡು ತನ್ನ ಎರಡೂ ಕಾಲುಗಳಿಂದ ಅದುಮುತ್ತಿದ್ದರು. (ಮುಂದುವರಿಯುವುದು)

ಆಂದೋಲನ ಡೆಸ್ಕ್

Recent Posts

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿ ಹೊರಲಿದ್ದಾನೆ ಪ್ರಶಾಂತ

ಮೈಸೂರು: ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ದಸರಾ ಗಜಪಡೆಯ ಮುಂದಿನ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಭಾರೀ ಕುತೂಹಲ…

5 mins ago

ರೇಣುಕಾಸ್ವಾಮಿಗೆ ಕುಟುಕು ಜೀವ; ದರ್ಶನ್ ರೋಷ ಭಾವ

ರೇಣುಕಾಸ್ವಾಮಿ ಕತ್ತಿನ ಮೇಲೆ ಕಾಲಿಟ್ಟು ಅದುಮುತ್ತಿದ್ದ ದರ್ಶನ್ ತನ್ನ ಕೈಯಲ್ಲಿದ್ದ ಸಿಗರೇಟ್‌ನಿಂದ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ಸುಟ್ಟರು  " ನಾನು…

13 mins ago

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಅಶ್ಲೀಲ ಪೋಟೋ ಕಳಿಸಿದ್ದ ರೇಣುಕಾಸ್ವಾಮಿ

ತುಂಬಾ ಜನರಿಗೆ ಮೆಸೇಜ್‌ಗಳನ್ನು ಕಳುಹಿಸಿದ್ದ ರೇಣುಕಾಸ್ವಾಮಿ Sex-mania ವ್ಯಕ್ತಿಯಂತೆ ಕಾಣುತ್ತಿದ್ದ. ಆನಂತರ ದರ್ಶನ್ ಅವರು ಪವನ್ ಹತ್ತಿರ ಇದ್ದ ರೇಣುಕಾಸ್ವಾಮಿಯ…

34 mins ago

ಮಗನೆ, ನಾನು ಯಾರು ಎಂದು ಗೊತ್ತಾ?

ರೇಣುಕಾಸ್ವಾಮಿಗೆ ಬೈಗುಳದೊಂದಿಗೆ ಏಟು ಕೊಡುತ್ತಿದ್ದ ದರ್ಶನ್ ಕಾರಿನಿಂದ ಇಳಿಯುತ್ತಲೇ ನರಪೇತಲನಿಗೆ ಒದ್ದ ವಿನಯ್ ನಂತರ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್…

46 mins ago

ನರಪೇತಲ ರೇಣುಕಾಸ್ವಾಮಿಗೆ ಮಾತಿಗೊಂದು ಏಟು

ನೆತ್ತಿ,ಕೈ ಬೆರಳುಗಳಿಂದ ಸೋರುತ್ತಿದ್ದ ರಕ್ತ, ಬೆಳಿಗ್ಗೆಯಿಂದ ಸಂಜೆಯವರೆಗೂ ಬಿದ್ದಿತ್ತು ಹೊಡೆತ ದರ್ಶನ್‌ಗಿದ್ದ ಸಿಟ್ಟನ್ನು ಸಾರಿ ಹೇಳುತ್ತಿದ್ದವು ರೇಣುಕಾಸ್ವಾಮಿಯ ಮೈಮೇಲಿನ ಬಾಸುಂಡೆ…

1 hour ago

ರೇಣುಕಾಸ್ವಾಮಿ ಕೊಲೆಯಾದ ದಿನ ನಡೆದಿದ್ದೇನು?

ಸಿನಿಮೀಯ ಮಾದರಿಯಲ್ಲೇ ದರ್ಶನ್ ಹೊಡೆತ; ರೇಣುಕಾಸ್ವಾಮಿಗೆ ಬಿದ್ದ ಪ್ರತಿ ಏಟಿನಲ್ಲೂ ಇತ್ತು ದರ್ಶನ್ ಸಿಟ್ಟು  ಮಾಫಿ ಸಾಕ್ಷಿಯಾದ 14ನೇ ಆರೋಪಿ:…

1 hour ago