Andolana originals

ಹೊಸ ವರ್ಷಾಚರಣೆಗೆ ದಾಖಲೆಯ ಮದ್ಯ ಮಾರಾಟ

ಗಿರೀಶ್‌ ಹುಣಸೂರು 

ಮೈಸೂರು: ಜೀವನದಲ್ಲಿ ಹಲವು ಏಳು-ಬೀಳುಗಳನ್ನು ನೀಡಿದ ೨೦೨೫ನೇ ವರ್ಷವನ್ನು ಬೀಳ್ಕೊಟ್ಟು, ಹಲವು ನಿರೀಕ್ಷೆಗಳೊಂದಿಗೆ ೨೦೨೬ನೇ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಕರ್ನಾಟಕದ ಮದ್ಯ ಪ್ರಿಯರು ಡಿ.೩೧ ರಂದು ಭಾರೀ ಕಿಕ್ ಏರಿಸಿಕೊಂಡಿದ್ದಾರೆ.

ಮಾಗಿಯ ಚಳಿಯಿಂದಾಗಿ ಬದಲಾದ ವಾತಾವರಣ, ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಉಳಿಕೆ ರಜೆಗಳನ್ನು ಹಾಕಿ ಕೊಂಡು ವರ್ಷಾಂತ್ಯ ಮತ್ತು ಹೊಸ ವರ್ಷಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಯೋಜನೆ ರೂಪಿ ಸಿದ್ದ ಜನರು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಕುಟುಂಬ ಸಮೇತ ಕೆಲವರು ದೇವಸ್ಥಾನಗಳು, ಯಾತ್ರಾ ಸ್ಥಳಗಳು, ಪ್ರವಾಸಿ ತಾಣಗಳಿಗೆ ತೆರಳಿದ್ದರೆ, ಯುವ ಜನರು ಅದರಲ್ಲೂ ಮದ್ಯಪ್ರಿಯ ಗೆಳೆಯ-ಗೆಳತಿಯರು ಕೂಡಿ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡುತ್ತಾ ಸಂಭ್ರಮಾಚರಣೆಯಲ್ಲಿ ಮುಳುಗೆದ್ದ ಪರಿಣಾಮ ಡಿ.೩೧ರಂದು ಒಂದೇ ದಿನ ಕರ್ನಾಟಕ ರಾಜ್ಯ ಪಾನೀಯ ನಿಗಮದ ಮಾರಾಟ ಮಳಿಗೆಗಳಿಂದ ೩೦,೫೦,೮೦೯ ಲೀಟರ್ ಭಾರತೀಯ ತಯಾರಿಕಾ ಮದ್ಯ (ಐಎಂಎಲ್) ಎತ್ತುವಳಿ ಮಾಡಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ೨೦,೯೯೮.೬೦ ರೂ. ಆದಾಯ ಬಂದಿದ್ದರೆ, ೧೭,೫೯,೫೯ ಲೀಟರ್ ಬಿಯರ್ ಭರ್ಜರಿ ಎತ್ತುವಳಿ ಮಾಡಿದ್ದು, ಇದರಿಂದ ೨೫,೭೬೭.೪೭ ರೂ. ಆದಾಯ ಬಂದಿದೆ.

ರಾಜ್ಯಾದ್ಯಂತ ಇರುವ ನಿಗಮದ ದಾಸ್ತಾನು ಮಳಿಗೆಗಳಿಂದ ಅಬಕಾರಿ ಇಲಾಖೆಯವರು ಆರ್‌ಟಿಜಿಎಸ್ ಮೂಲಕವೇ ಮದ್ಯವನ್ನು ಎತ್ತುವಳಿ ಮಾಡುತ್ತಾರೆ. ಹೀಗಾಗಿ ರಾಜಸ್ವದ ಮೂಲಕ ಒಂದೇ ದಿನ ರಾಜ್ಯದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಹರಿದುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಈ ವರ್ಷ ಬಿಯರ್ ಮಾರಾಟದಲ್ಲಿ ಏರಿಕೆಯಾಗಿದೆ ಎಂದು ಅಬ ಕಾರಿ ಇಲಾಖೆ ಅಽಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಚಿಲ್ಲರೆ ಮದ್ಯ ಮಾರಾಟದ (ಸಿಎಲ್-೨) ೩೯೮೮, ಕ್ಲಬ್‌ಗಳಲ್ಲಿನ  (ಸಿಎಲ್-೪) ೨೭೯, ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್‌ನ (ಸಿಎಲ್-೭) ೨೩೮೨, ಬಾರ್ ಮತ್ತು ರೆಸ್ಟೋರೆಂಟ್ (ಸಿಎಲ್-೯) ೩೬೩೪ ಹಾಗೂ ಎಂಎಸ್ ಐಲ್‌ನ ೧೦೪೧ ಎಂಆರ್‌ಪಿ ಔಟ್‌ಲೆಟ್‌ಗಳಲ್ಲಿ ಬುಧವಾರ ಬೆಳಗ್ಗಿನಿಂದಲೇ ಭರ್ಜರಿ ಮದ್ಯ ಮಾರಾಟವಾಗಿದೆ.

ರಾಜಧಾನಿ ಬೆಂಗಳೂರು ನಗರ ಮತ್ತು ಇತರೆ ಮೆಟ್ರೊ ಪಾಲಿಟನ್ ನಗರಗಳಲ್ಲಿ ಮಧ್ಯರಾತ್ರಿ ೧ ಗಂಟೆವರೆಗೆ ಪಾರ್ಟಿ ನಡೆಸಲು ಸರ್ಕಾರವೇ ಅನುಮತಿ ನೀಡಿದ್ದರಿಂದ ಹೊಸ ವರ್ಷಾಚರಣೆಯ ಪಾರ್ಟಿಗೆ ಬೆಂಗಳೂರಿನಲ್ಲಿ ಯುವ ಜನರ ಹೇಳಿ ಮಾಡಿಸಿದ ತಾಣ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ಗಳಲ್ಲಿ ಸೇರಿದ್ದ ಲಕ್ಷ ಲಕ್ಷ ಯುವಕ- ಯುವತಿಯರು ಮತ್ತೇರಿಸಿಕೊಂಡು ಕುಣಿದು ಕುಪ್ಪಳಿಸಿದರೆ, ಇನ್ನು ಹಲವರು ನಗರದ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಹೊಸ ವಲಯದ ರೆಸಾರ್ಟ್‌ಗಳಲ್ಲಿ ಸೇರಿ ಪಾರ್ಟಿ ಮಾಡುತ್ತಾ ಹೊಸ ವರ್ಷವನ್ನು ಬರಮಾಡಿಕೊಂಡರು.

ಗ್ರಾಮೀಣ ಜನರೂ ಇದರಿಂದ ಹೊರತಾಗಿರಲಿಲ್ಲ. ಗುಂಪು ಗುಂಪಾಗಿ ಬಾರ್‌ಗಳು, ಎಂಎಸ್‌ಐಎಲ್‌ನ ಎಂಆರ್‌ಪಿ ಔಟ್‌ಲೆಟ್‌ಗಳಿಗೆ ತೆರಳಿ ತಮ್ಮಿಷ್ಟದ ಬ್ರಾಂಡ್‌ನ ಮದ್ಯ ಖರೀದಿಸಿ, ಜತೆಗೆ ಚಿಕನ್ ಕಬಾಬ್, ತಂದೂರಿ ಮತ್ತಿತರೆ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಕಟ್ಟಸಿಕೊಂಡು ಹೊಲ-ಗದ್ದೆಗಳು, ಮೈದಾನಗಳಲ್ಲಿ ಸೇರಿ ಮೊಬೈಲ್‌ನ ಟಾರ್ಚ್ ಬೆಳಕಿನಲ್ಲೇ ಪಾರ್ಟಿ ಆಚರಿಸಿ, ಕುಣಿದು ಕುಪ್ಪಳಿಸಿದರೆ, ಇನ್ನೂ ಕೆಲವರು ರಾತ್ರಿ ೧೨ ಗಂಟೆಯಾಗುತ್ತಲೇ ಬೈಕ್‌ಗಳಲ್ಲಿ ಜೋರು ಹಾರ್ನ್ ಮಾಡುತ್ತಾ, ಹ್ಯಾಪಿ ನ್ಯೂ ಇಯರ್ ಎಂದು ಕೂಗುತ್ತಾ ಸಾಗುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಕರ್ನಾಟಕದಲ್ಲಿ ಬಿಯರ್‌ಗಿಂತ ಭಾರತೀಯ ತಯಾರಿಕಾ ಮದ್ಯ ಮಾರಾಟ ಭರ್ಜರಿ ಹೆಚ್ಚಳ: ಚಳಿ ಹೆಚ್ಚಳದಿಂದ ಈ ವರ್ಷ ಬಿಯರ್‌ಗೆ ಬೇಡಿಕೆ ಕುಸಿದಿದ್ದು, ಭಾರತೀಯ ತಯಾರಿಕಾ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಇದ್ದುದರಿಂದ ಮದ್ಯ ಮಾರಾಟಗಾರರು ಐಎಂಎಲ್ ಮದ್ಯವನ್ನೇ ಹೆಚ್ಚು ಎತ್ತುವಳಿ ಮಾಡಿದ್ದಾರೆ. (ಒಂದು ರಟ್ಟಿನ ಪೆಟ್ಟಿಗೆಯಲ್ಲಿ ೮.೬೪ ಲೀ ಐಎಂಎಲ್ ಮತ್ತು ಒಂದು ರಟ್ಟಿನ ಪೆಟ್ಟಿಗೆಯಲ್ಲಿ ೭.೮ ಲೀ ಬಿಯರ್ ಇರುತ್ತದೆ.)

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕೆರೆ, ಕಟ್ಟೆಗಳ ಹೂಳೆತ್ತಿಸಿ

ಮಳೆಗಾಲದಲ್ಲಿ ಕೆರೆ ಕಟ್ಟೆಗಳು ತುಂಬಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತಗಳೇ ಸೃಷ್ಟಿಯಾಗುತ್ತವೆ. ನಗರ ಪ್ರದೇಶಗಳಲ್ಲಿ ಇರುವ ಕೆರೆಗಳ ಹೂಳೆತ್ತಿ…

2 hours ago

ಓದುಗರ ಪತ್ರ: ಪ್ರಜಾಪ್ರಭುತ್ವ ಎಂಬ ಮೃಷ್ಟಾನ್ನ ಭೋಜನ ಶಾಲೆ!

ಭ್ರಷ್ಟಾಚಾರವೇ ಇಲ್ಲದ ವ್ಯವಸ್ಥೆ ನಿರ್ಮಾಣ ಮಾಡುವುದು ಇನ್ನು ತುಂಬಾ ಕಷ್ಟಕರವಾದ ಕೆಲಸ ಎಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಎನ್.ಸಂತೋಷ್…

2 hours ago

ಓದುಗರ ಪತ್ರ: ಡಿಜಿಟಲ್ ತಂತ್ರಜ್ಞಾನ ಸದ್ಬಳಕೆಯಾಗಲಿ

ಇಂದು ಡಿಜಿಟಲ್ ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಇದರಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಆನ್ಲೈನ್ ತರಗತಿಗಳು, ಯೂಟ್ಯೂಬ್ ಶಿಕ್ಷಣ…

2 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಪೈರೆಸಿ ವಿರುದ್ಧ ಚಿತ್ರೋದ್ಯಮ ಯುದ್ಧ ಸನ್ನದ್ಧ!?

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ೨೦೨೬ರ ಆರಂಭದ ವೇಳೆ ಹಲವು ಬೆಳವಣಿಗೆಗಳು. ೨೦೨೫ರ ಕೊನೆಯ ಶುಕ್ರವಾರ ತೆರೆ ಕಂಡ ೨ ಚಿತ್ರಗಳ…

2 hours ago

ಸಿದ್ದಾಪುರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ

ಕೃಷ್ಣ ಸಿದ್ದಾಪುರ ಸಿಬ್ಬಂದಿ ಕೊರತೆ, ಜನಸಂಖ್ಯೆ ಆಧಾರದಲ್ಲಿ ಹೊಸ ಠಾಣೆ ಸ್ಥಾಪನೆ, ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಆಗ್ರಹ  ಸಿದ್ದಾಪುರ:ಸಿದ್ದಾಪುರ ಪೊಲೀಸ್…

2 hours ago

ಮೈಮುಲ್ ಆಡಳಿತ ಮಂಡಳಿ ಚುನಾವಣೆಯತ್ತ ಎಲ್ಲರ ಚಿತ್ತ

ಕೆ.ಬಿ.ರಮೇಶನಾಯಕ ಮೈಸೂರು: ಮೈಸೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಮೈಮುಲ್) ಆಡಳಿತ ಮಂಡಳಿಯ ಐದು ವರ್ಷಗಳ ಆಡಳಿತ ಮುಂದಿನ…

2 hours ago