ಓದುಗರ ಪತ್ರ
ಜಲಮಂಡಳಿಯ ಬಿಲ್ ಬಾಕಿ ಇರಿಸಿಕೊಂಡವರಿಗೆ ‘ಏಕಬಾರಿ ತೀರುವಳಿ ವ್ಯವಸ್ಥೆ’ ಅಡಿಯಲ್ಲಿ ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆಯಂತೆ. ಟ್ರಾಫಿಕ್ ಅಪರಾಧಗಳಿಗೆ ವಿಧಿಸಿದ ದಂಡವನ್ನು ಬಾಕಿ ಇರಿಸಿ ಕೊಂಡವರಿಗೆ ಅರ್ಧ ದಂಡವನ್ನು ಮನ್ನಾಮಾಡುವ ಯೋಜನೆ ಭಾರೀ ಯಶಸ್ಸು ಪಡೆದಿರುವುದನ್ನು ನೋಡಿ, ಇದೇ ಮಾದರಿ ಯಲ್ಲಿ ಜಲಮಂಡಳಿ ಕೂಡ ಬಾಕಿ ವಸೂಲಿಗೆ ಮುಂದಾಗಿದೆ.
ನಗರ ಪಾಲಿಕೆಯ ಮನೆ ತೆರಿಗೆ ವಸೂಲಿಯಲ್ಲೂ ಇದೇ ಮಾದರಿ ಜಾರಿಯಲ್ಲಿದೆ. ಅಕಸ್ಮಾತ್ ಇದು ನಿರೀಕ್ಷೆಯಷ್ಟು ಯಶಸ್ಸು ಪಡೆಯದಿದ್ದರೆ, ಜಲಮಂಡಳಿ ಬಾಕಿ ಇರುವ ಬಿಲ್‌ನಲ್ಲಿ ಸ್ವಲ್ಪ ಮೊತ್ತವನ್ನು ಮುಂದಿನ ದಿನಗಳಲ್ಲಿ ಮನ್ನಾ ಮಾಡಬಹುದೇನೋ? ಬ್ಯಾಂಕ್ ಸಾಲ ವಸೂಲಾತಿಯಲ್ಲೂ ಏಕಬಾರಿ ತೀರುವಳಿ ಮತ್ತು ದಿವಾಳಿ ಕಾನೂನಿನಡಿಯಲ್ಲಿ ಇಂತಹ ವಿನಾಯಿತಿಯನ್ನು ನೀಡಲಾಗುತ್ತದೆ. ಅಂತಿಮವಾಗಿ ಈ ವಿನಾಯಿತಿಯಿಂದ ‘ಬಾಕಿ’ ವಸೂಲಾಗಬಹುದು. ಆದರೆ ಮುಂದಿನ ದಿನಗಳಲ್ಲಿ ನಿಯತ್ತಾಗಿ ಶುಲ್ಕ ಪಾವತಿಸುವವರು ಕೂಡ ಬಾಕಿ ಪಾವತಿಸುವಲ್ಲಿ ವಿಳಂಬಮಾಡಿ ವಿನಾಯಿತಿ ನಿರೀಕ್ಷಿಸುವುದನ್ನು ಅಲ್ಲಗಳೆಯಲಾಗದು. ಪ್ರಾಮಾಣಿಕವಾಗಿ ನಿಗದಿತ ಸಮಯಕ್ಕೆ ಶುಲ್ಕ ಪಾವತಿಸುವವರಿಗೆ ಯಾವುದೇ ರೀತಿಯ ವಿನಾಯಿತಿಯನ್ನು ನಿರಾಕರಿಸಿ ಬಾಕಿ ಇರಿಸಿಕೊಳ್ಳುವವರಿಗೆ ಮಾತ್ರ ಈ ರೀತಿ ವಿನಾಯಿತಿ ಕೊಡುವುದು ಯಾವ ಸೀಮೆ ನ್ಯಾಯ? ಎಂದು ಪ್ರಜ್ಞಾವಂತರು ಪ್ರಶ್ನಿಸುವಂತಾಗಿದೆ.
-ರಮಾನಂದ ಶರ್ಮಾ,ಜೆ.ಪಿ.ನಗರ, ಬೆಂಗಳೂರು
ಕೇವಲ 3 ಗಂಟೆಗಳಲ್ಲಿ ಸತ್ಯಾಸತ್ಯತೆ ಪರಿಶೀಲನೆ ಸಾಧ್ಯವೇ? • ಶೇಷಾದ್ರಿ ಗಂಜೂರು, ಮಾಧ್ಯಮ ತಜ್ಞ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ, ಅದರಲ್ಲೂ…
ರಾತ್ರಿ ಪಾಳಿಯಲ್ಲಿ ನರ್ಸ್‌ಗಳು, ವೈದ್ಯರ ನಿಯೋಜನೆಗೆ ಜನತೆ ಒತ್ತಾಯ • ಸಿದ್ದೇಗೌಡ ಕೊಡಿಯಾಲ ಶ್ರೀರಂಗಪಟ್ಟಣ : ಕ್ಷೇತ್ರದ ಶಾಸಕ ರಮೇಶ್…
ಸ್ಥಳೀಯರಿಗೆ ಸಮಸ್ಯೆ; ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು • ಕಾಂಗೀರ ಬೋಪಣ್ಣ ವಿರಾಜಪೇಟೆ : ಸ್ಥಳೀಯರಿಗೆ ಎಲ್ಲ ರೀತಿಯಲ್ಲೂ ಸಮಸ್ಯೆಯನ್ನು…
ಮೋರಿ ವಾಸನೆಯಿಂದ ಕುರುಬಾರಹಳ್ಳಿ ವಾಸಿಗಳ ಪರಿತಾಪ ಕೆ.ಎಸ್.ಚಂದ್ರಶೇಖರ್ ಮೂರ್ತಿ ಮೈಸೂರು : ರಸ್ತೆಯಲ್ಲಿ ಕಿರಿದಾದ ಮೋರಿಗಳು, ಒಳಚರಂಡಿ ನೀರು ಮೋರಿಗಳಲ್ಲಿ…
ಬೆಂಗಳೂರು : ಐಪಿಎಲ್ 2025ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಬರೋಬ್ಬರಿ 16,706 ಕೋಟಿ ಮೊತ್ತಕ್ಕೆ ಮಾರಾಟವಾಗುವ…
ಹೊಸದಿಲ್ಲಿ : ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತೆ ಅಸ್ವಸ್ಥರಾಗಿದ್ದು, ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ…