Andolana originals

ಓದುಗರ ಪತ್ರ: ಸುಗ್ರೀವಾಜ್ಞೆ ಜಾರಿ ಸ್ವಾಗತಾರ್ಹ

ಮೈಕ್ರೋ ಫೈನಾನ್ಸ್ ಕಂಪೆನಿಗಳು ಅಧಿಕ ಬಡ್ಡಿ ದರದಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಸಾಲ ನೀಡಿ, ವಸೂಲಾತಿಯ ನೆಪದಲ್ಲಿ ಅವರ ಮೇಲೆ ದೌರ್ಜನ್ಯವೆಸಗುತ್ತಿದ್ದುದ್ದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ.

ರಾಜ್ಯ ಸರ್ಕಾರ ರೂಪಿಸಿದ ಈ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರವರು ಅಂಕಿತ ಹಾಕಿದ್ದು, ಆ ಮೂಲಕ ಸಾಲ ವಸೂಲಾತಿ ನೆಪದಲ್ಲಿ ಸಾಲಗಾರರಿಗೆ ದೈಹಿಕ ಹಿಂಸೆ ಮಾಡುವುದು, ಮನೆಯ ಬಳಿ ಹೋಗಿ ಗಲಾಟೆ ಮಾಡಿಅವಾಚ್ಯ ಶಬ್ದಗಳಿಂದ ನಿಂದಿಸುವುದು, ಮನೆಗಳಿಗೆ ಬೀಗ ಜಡಿಯುವುದನ್ನು ತಪ್ಪಿಸಿದೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ಹಾವಳಿಯಿಂದ ಬೇಸತ್ತ ಅನೇಕ ಮಂದಿ ಗ್ರಾಮಗಳನ್ನೇ ತೊರೆದಿದ್ದು, ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳೂ ದಾಖಲಾಗಿವೆ. ಇಂತಹ ಪ್ರಕರಣಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿದೆ.

ಈ ಸುಗ್ರೀವಾಜ್ಞೆಗೆ ಹಲವು ಷರತ್ತುಗಳೊಂದಿಗೆ ರಾಜ್ಯಪಾಲರು ಅಂಕಿತ ಹಾಕಿರುವುದು ಮೈಕ್ರೋ ಫೈನಾನ್ಸ್ ಕಂಪೆನಿಗಳಿಗೆ ಅಂಕುಶ ಹಾಕಲಿದಿಯೇ ಕಾದುನೋಡಬೇಕು.

-ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು

ಆಂದೋಲನ ಡೆಸ್ಕ್

Recent Posts

ಪ್ರವಾಸಿತಾಣ ಉತ್ತೇಜಿಸಲು ಪ್ರವಾಸಿ ಗೈಡ್‌, ಮ್ಯಾಪ್‌ ಸಿದ್ದ : ಮಂಡ್ಯದಲ್ಲಿ 106 ಪ್ರವಾಸಿ ತಾಣಗಳ ಪರಿಗಣನೆ

ಮಂಡ್ಯ : ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಗುರುತಿಸಿರುವ ಹೆಗ್ಗಳಿಕೆ ಮಂಡ್ಯ ಜಿಲ್ಲೆಗೆ ಬಂದಿದ್ದು, ಪ್ರವಾಸಿ ತಾಣಗಳನ್ನು ಉತ್ತೇಜಿಸಲು…

31 seconds ago

ಕೆ.ಆರ್‌.ಪೇಟೆ | ರೈತನ ಮೇಲೆ ಚಿರತೆ ದಾಳಿ ; ಪ್ರಾಣಾಪಾಯದಿಂದ ಪಾರು

ಕೆ.ಆರ.ಪೇಟೆ : ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಸೋಮವಾರ…

6 mins ago

ಒಂದೇ ಒಂದು ರೂಪಾಯಿ ಕೂಡ ಮಧ್ಯವರ್ತಿ ಪಾಲಾಗದಂತೆ ಗೃಹಲಕ್ಷ್ಮಿ ಜಾರಿ : ಸಚಿವೆ ಹೆಬ್ಬಾಳಕರ್‌

ಬೆಳಗಾವಿ : ದೇಶದಲ್ಲಿ ಮಾದರಿಯಾದ, ಮಹಿಳೆಯರ ಸಬಲೀಕರಣ ಉದ್ದೇಶ ಹೊಂದಿರುವ ಗೃಹಲಕ್ಷ್ಮಿ ಯೋಜನೆಯನ್ನು ಒಂದೇ ಒಂದು ರೂಪಾಯಿ ಕೂಡ ಮಧ್ಯವರ್ತಿಗಳ…

9 mins ago

ಬಿದ್ದಾಟಂಡ ವಾಡೆಯಲ್ಲಿ ಸಂಭ್ರಮದ ಪುತ್ತರಿ ಕೋಲಾಟ

ನಾಪೋಕ್ಲು : ಬಿದ್ದಾಟಂಡ ವಾಡೆಯ ಐತಿಹಾಸಿಕ ನೂರಂಬಡ ನಾಡ್ ಮಂದ್‌ನಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಕೋಲಾಟ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.…

11 mins ago

ರೈಲು ನಿಲ್ದಾಣಗಳಿಗೆ ಭೇಟಿ,ಪರಿಶೀಲನೆ ನಡೆಸಿದ ಡಿಆರ್‌ಎಂ ಮುದಿತ್‌ ಮಿತ್ತಲ್‌

ಮೈಸೂರು : ನೈಋತ್ಯರೈಲ್ವೆ ಮೈಸೂರು ವಿಭಾಗದ ಡಿಆರ್‌ಎಂ ಮುದಿತ್ ಮಿತ್ತಲ್ ಅವರು ಅಧಿಕಾರಿಗಳೊಂದಿಗೆ ನಗರದ ವಿವಿಧ ರೈಲು ನಿಲ್ದಾಣಗಳಿಗೆ ಭೇಟಿ…

29 mins ago

ಪೊಲೀಸರು ಯಾರನ್ನು ಓಲೈಕೆ ಮಾಡದಿರಿ : ಡಿಜಿಪಿ ಚಂದ್ರಶೇಖರ್‌ ಸಲಹೆ

ಮೈಸೂರು : ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ್ ಅವರು ಮಂಗಳವಾರ ಬೆಳಿಗ್ಗೆ ಮೈಸೂರಿಗೆ ಭೇಟಿ ನೀಡಿ…

38 mins ago