Andolana originals

ಓದುಗರ ಪತ್ರ: ಡೇಟಾ ತೆರಿಗೆ ಎಂಬ ಹೊರೆ

ಮೊಬೈಲ್ ಡೇಟಾ ಬಳಕೆಯ ಮೇಲೆ ಪ್ರತಿ ಜಿಬಿಗೆ  ತೆರಿಗೆ ವಿಧಿಸುವ ಸರ್ಕಾರದ ಪ್ರಸ್ತಾವನೆ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವ ನಿರ್ಧಾರವಾಗಿದೆ. ಈಗಾಗಲೇ ಟೆಲಿಕಾಂ ಸೇವೆಗಳ ಮೇಲೆ ಶೇ. ೧೮ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

ಭಾರತದಲ್ಲಿ ತಿಂಗಳಿಗೆ ಒಬ್ಬ ಸರಾಸರಿ ಬಳಕೆದಾರ ಸುಮಾರು ೨೦ ಜಿಬಿ ಡೇಟಾ ಬಳಸುತ್ತಾನೆ. ಈ ಹೊಸ ತೆರಿಗೆ ಜರಿಯಾದರೆ ಪ್ರತಿ ಕುಟುಂಬದ ಮಾಸಿಕ ವೆಚ್ಚ ಗಣನೀಯವಾಗಿ ಏರಲಿದೆ. ಸರ್ಕಾರಕ್ಕೆ ವಾರ್ಷಿಕ ೨೨,೯೦೦ ಕೋಟಿ ರೂ. ಆದಾಯ ಬರಬಹುದು, ಆದರೆ ಇದು ಡಿಜಿಟಲ್ ಶಿಕ್ಷಣ ಪಡೆಯುವ ವಿದಾರ್ಥಿಗಳು ಮತ್ತು ಸಣ್ಣ ವಾಪಾರಿಗಳ ಮೇಲೆ ಬೀರಲಿರುವ ದುಷರಿಣ್ಪಾಮ  ಅಗಾಧವಾದುದು. ಜಗತ್ತಿನ ಅತಿ ಕಡಿಮೆ ದರದ ಡೇಟಾ ಹೊಂದಿರುವ ನಮ್ಮ ದೇಶದಲ್ಲಿ ಇಂತಹ ನಿರ್ಧಾರಗಳು ಡಿಜಿಟಲ್ ಒಳಗೊಳ್ಳುವಿಕೆಗೆ ಅಡ್ಡಿಯಾಗಬಹುದು. ಸರ್ಕಾರವು ಕೇವಲ ಆದಾಯದ ಕಡೆಗೆ ಗಮನ ಹರಿಸದೆ ಬಡ ಮತ್ತು ಮಧಮ ವರ್ಗದ ಜನರ ಹಿತದೃಷ್ಟಿಯಿಂದ ಈ ಪ್ರಸ್ತಾವನೆಯನ್ನು ಕೈಬಿಡಬೇಕು.

ಡಾ.ಎಚ್.ಕೆ. ವಿಜಯಕುಮಾರ  ಮೈಸೂರು

ಆಂದೋಲನ ಡೆಸ್ಕ್

Recent Posts

ಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರ್ಕಾರ : ಪುನರ್‌ ಪರಿಶೀಲನೆಗೆ ಒತ್ತಾಯ

ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…

3 mins ago

ಚಾ.ನಗರ | ಮಳೆಯಿಂದ ಹಾನಿ, ಶಾಸಕರಿಂದ ಪರಿಶೀಲನೆ

ಚಾಮರಾಜನಗರ : ಇತ್ತೀಚೆಗೆ ಸುರಿದ ಗಾಳಿ ಸಹಿತ ಮಳೆಯಿಂದಾಗಿ ತಾಲ್ಲೂಕು ವ್ಯಾಪ್ತಿಯ ದೊಡ್ಡಮೋಳೆ, ಕಟ್ನವಾಡಿ, ಗ್ರಾಮಗಳಲ್ಲಿ ಮನೆ ಗೋಡೆ ಕುಸಿದಿದ್ದ…

15 mins ago

ಮೈಸೂರು | ನೆಲಕಪ್ಪಳಿಸಿದ ಭಾರಿ ಗಾತ್ರದ ಮರ; ಕಾರು,ಆಟೋ ಜಖಂ

ಮೈಸೂರು : ಬೇರುಗಳಲ್ಲಿ ಸತ್ವ ಕಳೆದುಕೊಂಡು ಭಾರಿಗಾತ್ರದ ಬೇವಿನ ಮರ ಶನಿವಾರ ಧರೆಗುಳಿರದ ಪರಿಣಾಮ, ಒಂದು ಕಾರು, ಆಟೋ, ಬೈಕ್…

26 mins ago

ಇರಾನ್‌ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಮಾತುಕತೆ

ಹೊಸದಿಲ್ಲಿ : ಇರಾನ್‌ ಮತ್ತು ಇಸ್ರೇಲ್‌ ನಡುವಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಈ ನಡುವೆ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯನ್‌…

38 mins ago

IPL | ಈ ಬಾರಿಯೂ ಕಪ್‌ ಗೆಲ್ಲಲು ಪರಿಶ್ರಮ ಅಗತ್ಯ ; ಆಟಗಾರರಿಗೆ ಕಿಂಗ್‌ ಕೊಹ್ಲಿ ಸಲಹೆ

ಬೆಂಗಳೂರು : ಇದೇ ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್-2026 ಆರಂಭವಾಗಲಿದ್ದು, ಆರ್‌ಸಿಬಿ ಮೊದಲ ಪಂದ್ಯವನ್ನು ಸನ್​ರೈಸರ್ಸ್…

45 mins ago

ಅಮೆರಿಕ-ಯುಕೆ ಸೇನಾನೆಲೆ ಮೇಲೆ ಇರಾನ್ ದಾಳಿ‌ ; ವರದಿ

ಟೆಹ್ರಾನ್  : ಇಷ್ಟು ದಿನ ತನ್ನ ನೆರೆಹೊರೆಯ ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದ ಇರಾನ್ ಇದೀಗ…

2 hours ago