Andolana originals

ಓದುಗರ ಪತ್ರ: ೪೦ಕ್ಕೂ ಹೆಚ್ಚು ಮರಗಳ ‘ಹತ್ಯೆ’ ಶಂಕಾಸ್ಪದ

ಮೈಸೂರಿನಲ್ಲಿ ೪೦ಕ್ಕೂ ಹೆಚ್ಚು ಮರಗಳ ಹನನ ನಡೆದಿದೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಧರೆಗೆ ಉರುಳಿಸುವ ಮೂಲಕ ಜಗತಿಕ ತಾಪಮಾನಕ್ಕೆ ಮೈಸೂರು ಪಾಲಿಕೆ ಕೊಡುಗೆ ನೀಡಿದೆ. ಸಾರ್ವಜನಿಕರು ರಸ್ತೆಬದಿಯಲ್ಲಿ ಒಣಗಿ ನಿಂತ ಮರಗಳ ಬಗ್ಗೆ ದೂರು ನೀಡಿದರೆ, ಅದಕ್ಕೆ ನೂರೆಂಟು ನಿಯಮಗಳನ್ನು ಹೇಳುವ ನಗರಪಾಲಿಕೆ ಮತ್ತು ಅರಣ್ಯ ಇಲಾಖೆ ಒಟ್ಟಾಗಿಯೇ ೪೦ಕ್ಕೂ ಹೆಚ್ಚು ಬೃಹತ್ ಮರಗಳ ಬುಡಕ್ಕೆ ಕೊಡಲಿ ಹಾಕಿರುವುದು ವಿಪರ್ಯಾಸ.

ರಸ್ತೆ ಅಗಲೀಕರಣಕ್ಕೆ ಪೂರಕವಾಗಿ ಮರಗಳನ್ನು ಕಡಿದಿರುವುದು ನಿಜವಾದರೆ, ಏಕೆ ಸಾರ್ವಜನಿಕರ ಗಮನಕ್ಕೆ ತರಲಿಲ್ಲ. ಪರಿಸರವಾದಿಗಳು, ತಜ್ಞರಿಗೆ ಯಾರಿಗೂ ವಿಷಯ ತಿಳಿಸದೆ ದಿಢೀರ್ ಇಂತಹ ಕ್ರಮ ಕೈಗೊಂಡಿರುವುದು ಹಲವಾರು ಅನುಮಾನಗಳಿಗೆ ಆಸ್ಪದೆ ನೀಡಿದೆ. ಒಂದು ಮರ ಕಡಿದರೆ, ಅದಕ್ಕೆ ಪರ್ಯಾಯವಾಗಿ ೧೦ ಸಸಿಗಳನ್ನು ನೆಡಬೇಕು ಎಂಬ ನಿಯಮ ಇದೆ ಎನ್ನಲಾಗಿದೆ. ಹಾಗಿದ್ದರೆ ನಗರ ಪಾಲಿಕೆ ಮತ್ತು ಅರಣ್ಯಾಧಿಕಾರಿಗಳು ಅಂದಾಜು ೪೦೦ ಸಸಿಗಳನ್ನು ನೆಟ್ಟು ಪೋಷಣೆ ಮಾಡಿರಬೇಕು. ಅವು ಎಲ್ಲಿವೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇಲ್ಲವಾದರೆ, ಈ ಮರಗಳ ಹನನ ಪ್ರಕರಣ ‘ಬೆಕ್ಕು ಕಣ್ಣುಮುಚ್ಚಿ ಕೊಂಡು ಹಾಲು ಕುಡಿದಂತೆ’ ಎಂಬ ಮಾತನ್ನು ಸಾಬೀತುಪಡಿಸುತ್ತದೆ.

-ಎಸ್.ವಿಶ್ವಜಿತ್, ಕುವೆಂಪುನಗರ, ಮೈಸೂರು.

 

ಆಂದೋಲನ ಡೆಸ್ಕ್

Recent Posts

ಬಡಮಕ್ಕಳಿಗೆ ಬೆಚ್ಚಗಿನ ಬದುಕು ನೀಡುವ ಕುಶಾಲ್ ರಾಜ್

ಪಂಜು ಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ  ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…

3 seconds ago

ಬಸವನಹುಳು ಸಾಕಣೆಯೂ ಲಾಭದಾಯಕ

ಕೇಶವ್ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಅಚ್ಚರಿಯ ಸಂಶೋಧನೆ! ಮೈಸೂರು: ಬಸವನಹುಳುಗಳನ್ನು ಜಮೀನುಗಳಲ್ಲಿ ರೈತರು ನೋಡಿದರೆ, ನಮ್ಮ…

4 mins ago

ಎಸ್‌ಐಆರ್: ಎನ್.ಆರ್.ಕ್ಷೇತ್ರದಲ್ಲೇ ೧ ಲಕ್ಷ ಮತದಾರರು ಔಟ್

ಕೆ.ಬಿ.ರಮೇಶನಾಯಕ ನಮೂನೆ-೬ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ  ಮೈಸೂರು: ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಗೂ…

9 mins ago

ಕೆಸರುಗದ್ದೆ ಕ್ರೀಡಾಕೂಟಕೂಟ: ಕಾಡುತ್ತಿರುವ ಮಳೆ ಕೊರತೆ!

ನವೀನ್ ಡಿಸೋಜ ಮುಂಗಾರು ಆರಂಭದಲ್ಲಿ ವಾಡಿಕೆ ಮಳೆಯಾಗದೆ ಆಯೋಜನೆಗೆ ಹಿಂದೇಟು; ಹಲವೆಡೆ ಕ್ರೀಡಾಕೂಟ ಮುಂದೂಡಿಕೆ ಮಡಿಕೇರಿ: ಪ್ರತಿವರ್ಷ ಮಳೆಗಾಲದಲ್ಲಿ ಕೊಡಗು…

14 mins ago

ಟಿಎಪಿಸಿಎಂಎಸ್ ಅಧಿಕಾರ ಹಿಡಿಯಲು ತಂತ್ರ-ಪ್ರತಿತಂತ್ರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಗುರುವಾರ (ಆ.೨೦) ನಡೆಯಲಿದ್ದು, ಅಧಿಕಾರ…

18 mins ago