ಓದುಗರ ಪತ್ರ
ಇತ್ತೀಚಿನ ದಿನಗಳಲ್ಲಿ ದೇವ್ ಪಾರ್ಟಿಯಂತಹ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸ್ಟಾರ್ ಹೋಟೆಲ್‌ಗಳು, ಪ್ರಭಾವಿಗಳ ಫಾರ್ಮ್ ಹೌಸ್‌ಗಳಲ್ಲಿ ನಡೆಯುತ್ತಿದ್ದ ಇಂತಹ ಪಾರ್ಟಿಗಳು ಈಗ ಮೈಸೂರಿನ ಕೆಆರ್ಎಸ್ ಹಿನೀರಿನ ಪ್ರದೇಶ ದಲ್ಲಿಯೂ ನಡೆದಿರುವುದು ಅಘಾತಕಾರಿ ಸಂಗತಿ. ಕ್ಷಣಿಕ ಸುಖ ಹಾಗೂ ಮತ್ತಿನ ಅಮಲಿಗೆ ಜೋಶು ಬಿದ್ದು, ಯುವಸಮೂಹ ಇಂತಹ ಪಾರ್ಟಿಗಳತ್ತ ವಾಲುತ್ತಿದ್ದು, ಮಾದಕ ವಸ್ತುಗಳ ಸೇವನೆಯಿಂದಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೆಆರ್ಎಸ್ ಹಿನ್ನೀರಿನ ಪ್ರದೇಶ ನಿರ್ಬಂಧಿತ ಪ್ರದೇಶವಾಗಿದ್ದರೂ ಇಲ್ಲಿ ಬಹಿರಂಗವಾಗಿಯೇ ಇಂತಹ ಮೋಜು-ಮಸ್ತಿಯ ಕೂಟಗಳು ಆಯೋಜನೆಯಾಗುತ್ತವೆ ಎಂದರೆ ಅದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಈ ಹಿನ್ನೀರಿನ ಪ್ರದೇಶದಲ್ಲಿ ಇತ್ತೀಚೆಗೆ ಮದ್ಯವ್ಯಸನಿಗಳ ಹಾವಳಿಯೂ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಮದ್ಯಪಾನ ಮಾಡಿ ಬಾಟಲಿಗಳನ್ನು ಬೀಸಾಡುವುದು, ಕುಡಿದ ಅಮಲಿನಲ್ಲಿ ಈಜಲು ಹೋಗಿ ನೀರುಪಾಲಾಗಿರುವ ಸಾಕಷ್ಟು ಉದಾಹರಣೆಗಳಿವೆ. ಆದಾಗ್ಯೂ ಕೆಆರ್‌ಎಸ್‌ನಲ್ಲಿ ಸೆಕ್ಯುರಿಟಿಗಳನ್ನು ನಿಯೋಜಿಸುವುದಾಗಲಿ, ಪೊಲೀಸ್ ಇಲಾಖೆಯೇ ಆಗಾಗ್ಗೆ ಗಸ್ತು ತಿರುಗಿ ಇಂತಹ ಕೂಟಗಳಿಗೆ ಕಡಿವಾಣ ಹಾಕುವ ಕೆಲಸವನ್ನಾಗಲಿ ಮಾಡಿಲ್ಲ. ಇದರ ಪರಿಣಾಮ ಈಗ ರೇವ್ ಪಾರ್ಟಿಯಂತಹ ಕಾನೂನುಬಾಹಿರ ಚಟುವಟಿಕೆಗಳೂ ಇಲ್ಲಿ ನಡೆಯಲು ಆರಂಭಿಸಿವೆ. ಮುಂದಿನ ದಿನಗಳಲ್ಲಾದರೂ ಪೊಲೀಸ್ ಇಲಾಖೆ ಎಚ್ಚತ್ತುಕೊಂಡು ಕಆರ್‌ನ್ ಹಿನ್ನೀರಿನ ಪ್ರದೇಶದಲ್ಲಿ ಆಗಾಗ್ಗೆ ಮತ್ತು ಕಿರುಗುವ ಮೂಲಕ ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಿ.
-ಪರಳಹಳ್ಳಿ ವುಟ್ಟರಾಜು, ತಾಂಡವವುರ
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಯೋಗ್ಯ ಸೂಕ್ತ ಬಟ್ಟೆ ಧರಿಸಿಕೊಂಡು ಬರದಿದ್ದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ…
ಮೈಸೂರು : ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಿಕೆ ಹಾಗೂ ವಿ.ವಿ ಕ್ಯಾಂಪಸ್‌ಗೆ ಅನಧಿಕೃತ…
ಬೆಂಗಳೂರು : ವಿಶೇಷ ಚೇತನರ ಬಗ್ಗೆ ಯಾರೂ ಕನಿಷ್ಠ ಭಾವನೆ ಹೊಂದಬೇಕಾಗಿಲ್ಲ. ಅವರಿಗೆ ದೇವರು ವಿಶೇಷವಾದ ಶಕ್ತಿಯನ್ನು ಕೊಟ್ಟಿರುತ್ತಾನೆ. ಹೀಗಾಗಿ…
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಾಗಲಿ ಅಥವಾ ಸರ್ಕಾರದಲ್ಲಾಗಲಿ ಯಾವುದೇ ಗೊಂದಲಗಳಿಲ್ಲ. ಸರ್ಕಾರ ಸುಭದ್ರವಾಗಿದೆ. ಸಮರ್ಥ ಆಡಳಿತ ನಡೆಸುತ್ತಿದೆ ಎಂದು ವೈದ್ಯಕೀಯ…
ಬೆಂಗಳೂರು: ಕೇಂದ್ರ ಸರ್ಕಾರ ಬಹುದಿನಗಳ ಬೇಡಿಕೆಯಂತೆ ರಾಷ್ಟ್ರಮಟ್ಟದಲ್ಲಿ ನದಿಗಳ ಜೋಡಣೆಗೆ ಪ್ರಕ್ರಿಯೆ ಆರಂಭಿಸಿದ್ದು, ಅದರ ಕುರಿತಂತೆ ಚರ್ಚಿಸಲು ವಿವಿಧ ರಾಜ್ಯಗಳ…
ಬೆಂಗಳೂರು: ಸಚಿವ ಎಚ್.ಕೆ.ಪಾಟೀಲ್‌ಗೆ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ…