ಓದುಗರ ಪತ್ರ
ಸರಗೂರು ತಾಲ್ಲೂಕಿನ ಕಲ್ಲಂಬಾಳು ಗ್ರಾಮದಲ್ಲಿ ಕಪಿಲ ನದಿಯ ದಂಡೆಯ ಮೇಲೆ ಐತಿಹಾಸಿಕ ಕಾಮೇಶ್ವರ ದೇವರ ದೇವಾಲಯವಿದೆ. ಈ ದೇವಾಲಯ ಚೋಳರಿಂದ ನಿರ್ಮಾಣ ವಾಯಿತು ಎಂಬ ಇತಿಹಾಸವನ್ನು ಹೊಂದಿದ್ದು, ಶಿಥಿಲಗೊಂಡಿದ್ದ ಈ ದೇವಾಲಯದ ದುರಸ್ತಿಗೆ ಕಳೆದ ವರ್ಷ ಊರಿನ ಮುಖಂಡರು ಸೇರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಮರು ನಿರ್ಮಾಣ ಮಾಡಲು ಆದೇಶ ಪಡೆದು, ಅದರಂತೆ ನೂತನ ದೇವಾಲಯ ನಿರ್ಮಿಸಿ ಫೆಬ್ರವರಿ ೧೦ರಂದು ಉದ್ಘಾಟನೆ ಮಾಡಲಾಗಿದೆ.
ಈ ಹಿಂದೆ ದೇವಾಲಯದ ಒಳಗೆ ತಳ ಸಮುದಾಯದ ಜನರ ಪ್ರವೇಶ ವನ್ನು ನಿಷೇಧಿಸಲಾಗಿತ್ತು. ಜಾತಿ ವ್ಯವಸ್ಥೆ, ಜೀತ ಪದ್ಧತಿ, ಅನಾಗರಿಕತೆ, ಮೂಢನಂಬಿಕೆ, ಶಿಕ್ಷಣದ ಕೊರತೆ ಹೆಚ್ಚಾಗಿದ್ದು, ಈ ವ್ಯವಸ್ಥೆ ಪ್ರಸ್ತುತವೂ ಅನೇಕ ಹಳ್ಳಿಗಳಲ್ಲಿ ಜೀವಂತವಾಗಿರುವುದು ಬೇಸರದ ಸಂಗತಿ. ಆದರೆ, ಈ ದೇವಸ್ಥಾನ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದ ಬಳಿಕ ಸರ್ಕಾರ ಎಲ್ಲ ಜನಾಂಗದ ಜನರೂ ದೇವಾಲಯ ಪ್ರವೇಶಿಸಬಹುದು. ಇದನ್ನು ವಿರೋಧಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಫಲಕ ಅಳವಡಿಸಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದು ಮಾಯವಾಯಿತು.
ಇದನ್ನು ಅರಿತ ಗ್ರಾಮದ ತಳ ಸಮುದಾಯದ ವಿದ್ಯಾವಂತ ಯುವಕರು ಒಗ್ಗಟ್ಟಿನಿಂದ ಈ ಶೋಷಣೆಯ ವಿರುದ್ಧ ಧ್ವನಿ ಎತ್ತಿದರು. ಆ ಮೂಲಕ ನೂತನ ಕಾಮೇಶ್ವರ ದೇವಸ್ಥಾನದ ಒಳಗೆ ಪ್ರವೇಶಿಸಿ ದೇವರ ದರ್ಶನ ಪಡೆದರು. ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಾ ಸಮಾನತೆಯನ್ನು ಸಾರಿದರು. ಈ ಬದಲಾವಣೆ ಎಲ್ಲ ಗ್ರಾಮಗಳಲ್ಲಿಯೂ ಆಗಬೇಕು. ಇದು ಯುವಕರಿಂದ ಮಾತ್ರವಲ್ಲದೆ ಹಿರಿಯ ನಾಗರಿಕರೂ ಇಂತಹ ಬದಲಾವಣೆಗೆ ನಾಂದಿ ಹಾಡಬೇಕು ಆಗ ಮಾತ್ರ ಸಮಾಜದಲ್ಲಿ ಸಮಾನತೆ ಸ್ಥಾಪಿಸಲು ಸಾಧ್ಯ.
-ಕೆ.ಎಂ.ಅಭಿಷೇಕ್, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು, ಮೈಸೂರು.
ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…
ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…
ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…
ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…
ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…