Andolana originals

ಓದುಗರ ಪತ್ರ: ರಾಮಕೃಷ್ಣ ಹೆಗಡೆ ಮತ್ತು ಎಸ್.ಎಂ.ಕೃಷ್ಣ ರಾಜಕಾರಣಿಗಳಿಗೆ ಮಾದರಿ

ಮಾಧ್ಯಮವೊಂದರ ವರದಿ ಪ್ರಕಾರ ಮೌಲ್ಯಾಧಾರಿತ ರಾಜಕಾರಣಿ ಎಂದೇ ಹೆಸರಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ತಮ್ಮ ಕೊನೆಗಾಲದಲ್ಲಿ ತಮ್ಮ ವೈದ್ಯಕೀಯ ಆರೈಕೆಗಾಗಿ ೪೦ ಲಕ್ಷ ರೂ.ಗಳನ್ನು ಹೊಂದಿಸಲಾಗದೆ ತಮಗೆ ಪಿತ್ರಾರ್ಜಿತವಾಗಿ ಬಂದಿದ್ದ ತೋಟವನ್ನು ಮಾರಲು ಸಿದ್ಧರಾಗಿದ್ದರಂತೆ. ಇದನ್ನು ತಿಳಿದ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರು ರಾಮಕೃಷ್ಣ ಹೆಗಡೆಯವರ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರದಿಂದ ಹಣ ಮಂಜೂರು ಮಾಡಿ ಲಂಡನ್‌ನಲ್ಲಿ ಚಿಕಿತ್ಸೆ ಕೊಡಿಸಿದರಂತೆ. ಇದರಲ್ಲಿ ಎಸ್.ಎಂ.ಕೃಷ್ಣರವರ ಹೃದಯವಂತಿಕೆಯ ಜತೆಗೆ ಐದು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿದ್ದು, ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರೂ ಹೆಗಡೆಯವರು ತಮ್ಮ ಕೊನೆಗಾಲದಲ್ಲಿ ವೈದ್ಯಕೀಯ ವೆಚ್ಚ ಭರಿಸಲು ಹೆಣಗಾಡಬೇಕಾಗಿ ಬಂದಿದ್ದು, ಅವರಲ್ಲಿನ ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯಾಗಿದೆ. ಅಂದಿನ ರಾಜಕಾರಣಿಗಳ ಮೌಲ್ಯಯುತ ಬದುಕು ಇಂದಿನ ರಾಜಕಾರಣಿಗಳ ಕಣ್ಣು ತೆರೆಸಬೇಕು. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಜನಪ್ರತಿನಿಧಿಯಾದವರೆಲ್ಲರೂ ಐಶಾರಾಮಿ ಜೀವನ ಮಾಡುತ್ತಿರುವಾಗ ರಾಜಕಾರಣಿಯಾದವರ ಬದುಕು ಹೇಗೆ ಮಾದರಿಯಾಗಿರಬೇಕು ಎಂದು ತೋರಿಸಿದವರು ಹೆಗಡೆಯವರು. ಇಂತಹ ಅಪರೂಪದ ರಾಜಕಾರಣಿಯ ವಿರುದ್ಧ ಕೇಳಿಬಂದ ದೂರವಾಣಿ ಕದ್ದಾಲಿಕೆ ಆರೋಪವನ್ನೇ ಮುಂದಿಟ್ಟುಕೊಂಡು ಅದನ್ನೇ ಮಹಾಪರಾಧವೆಂದು ಬಿಂಬಿಸಿ ರಾಜಕೀಯದಿಂದ ಅವರನ್ನು ಬದಿಗೆ ಸರಿಸಲು ಪ್ರಯತ್ನಿಸಿದವರು, ಅವರ ಪ್ರಾಮಾಣಿಕ ಬದುಕನ್ನು ನೋಡದಿದ್ದದ್ದು ಬೇಸರದ ಸಂಗತಿ. ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ಗುಲ್ಜಾರಿಲಾಲ್ ನಂದಾ ಅವರೂ ಕೂಡ ಇದೇ ಪರಿಸ್ಥಿತಿ ಅನುಭವಿಸಿದ್ದರು.

ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಕಲಿ ರಹದಾರಿ: ಕಠಿಣ ಶಿಕ್ಷೆ ವಿಧಿಸಿ

ರಾಜ್ಯದಲ್ಲಿ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಂತಹ ದೂರದ ರಾಜ್ಯಗಳ ದಾಖಲೆಗಳನ್ನು ಬಳಸಿ ಬಸ್‌ಗಳ ನಕಲಿ ರಹ ದಾರಿ(ಪರ್ಮಿಟ್) ಪಡೆದು ಸರ್ಕಾರಕ್ಕೆ…

2 hours ago

ಓದುಗರ ಪತ್ರ: ಬ್ಯಾಂಕ್‌ಗಳ ವಿಶ್ವಾಸಾರ್ಹತೆಗೆ ಧಕ್ಕೆ

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್‌ಗಳಲ್ಲಿ ಗ್ರಾಹಕರು ಅಡಮಾನ ಇಟ್ಟಿರುವ ಚಿನ್ನವನ್ನು ಬ್ಯಾಂಕ್ ಸಿಬ್ಬಂದಿಯೇ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಮಾಧ್ಯಮಗಳಲ್ಲಿ…

2 hours ago

ಓದುಗರ ಪತ್ರ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ನಿಯೋಜಿಸಿ

ಮೈಸೂರಿನ ಕುವೆಂಪುನಗರ ವಿಶ್ವ ಮಾನವ ಜೋಡಿ ರಸ್ತೆಯ ಸಿ ಆಂಡ್ ಡಿ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಕಷ್ಟು ಸಿಬ್ಬಂದಿ…

3 hours ago

ಓದುಗರ ಪತ್ರ: ಬ್ಯಾಂಕ್ ಕನಿಷ್ಠ ಮೊತ್ತ ರದ್ದಾಗಲಿ

ಖಾಸಗಿ ಹಾಗೂ ಸರ್ಕಾರಿ ಬ್ಯಾಂಕುಗಳು ಈಗಲೂ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲ ಎಂಬ ಕಾರಣಕ್ಕೆ ದಂಡ ವಿದಿಸುತ್ತಿದ್ದು, ೨೦೨೪-೨೫ನೇ…

3 hours ago

ಇಂದು ಕೆ.ಆರ್.ನಗರದಲ್ಲಿ ಆದಿಶಕ್ತಿ ತೋಪಮ್ಮ ಜಾತ್ರಾ ಮಹೋತ್ಸವ

ಭೇರ್ಯ ಮಹೇಶ್ ಆದಿಶಕ್ತಿ ತೋಪಮ್ಮ ಟ್ರಸ್ಟ್ ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ; ಸಾವಿರಾರು ಮಂದಿ ಭೇಟಿ ನಿರೀಕ್ಷೆ ಕೆ.ಆರ್.ನಗರ: ಫೆಬ್ರವರಿ…

3 hours ago

ಕೋಟೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಆಯ್ಕೆ ಖಚಿತ?

ಮಂಜು ಕೋಟೆ ಎಚ್.ಡಿ.ಕೋಟೆ: ಬಿಜೆಪಿ ಘಟಕದ ತಾಲ್ಲೂಕು ಅಧ್ಯಕ್ಷ ಹಿರೇಹಳ್ಳಿ ಶಂಭುಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ…

3 hours ago