Andolana originals

ಓದುಗರ ಪತ್ರ: ಹೊಸ ವರ್ಷ ಆಚರಣೆ: ಇರಲಿ ಸಂಯಮ, ಗುರಿ

ಹೊಸ ವರ್ಷದ ಆಚರಣೆ ಡಿ.೩೧ರ ರಾತ್ರಿ ಮತ್ತು ಜನವರಿ ೧ ರಂದು ನಡೆಯುತ್ತದೆ. ಯುವ ಜನತೆಗೆ ಹೊಸ ವರ್ಷದ ಆಚರಣೆ ಎಂದರೆ ಅದೊಂದು ಮೋಜಿನಾಟ ಎಂಬಂತಾಗಿದೆ. ಕೆಲವರು ಪಟಾಕಿಗಳನ್ನು ಸಿಡಿಸುತ್ತಾ, ಸಂಗೀತ ಗೋಷ್ಠಿಗಳಿಗೆ ಭೇಟಿ ನೀಡುತ್ತಾ ದಿನವನ್ನು ಸಂತೋಷದಿಂದ ಕಳೆದರೆ, ಇನ್ನೂ ಹಲವರದು ಕೇವಲ ಮೋಜು, ಮಸ್ತಿ, ಕುಡಿತ, ಕುಣಿತ… ಇಷ್ಟಕ್ಕೇ ಹೊಸ ವರ್ಷಾಚರಣೆ ಸೀಮಿತವಾಗಿರುತ್ತದೆ.

ಹೊಸ ವರ್ಷದ ಸಂಭ್ರಮಾಚರಣೆಯನ್ನು ಕೇವಲ ಒಂದೆರಡು ದಿನಗಳಿಗೆ ಸೀಮಿತಗೊಳಿಸದೆ, ವರ್ಷಪೂರ್ತಿ ಆರೋಗ್ಯಕರ ಜೀವನ, ಹಣ ಉಳಿತಾಯ, ಪ್ರಯಾಣದಂತಹ ಹೊಸ ಹೊಸ ಗುರಿಗಳನ್ನು ಹಾಕಿಕೊಳ್ಳುವುದು ಹೆಚ್ಚು ಸೂಕ್ತ ಅನಿಸುತ್ತದೆ. ಹೊಸ ವರ್ಷ ೨೦೨೬ ಎಂದರೆ ಕೇವಲ ದಿನಾಂಕ ಬದಲಾವಣೆ ಅಲ್ಲ, ಅದು ಜೀವನವನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಿಗುವ ಮತ್ತೊಂದು ಅವಕಾಶ. ಹಳೆಯ ವರ್ಷದಲ್ಲಿ ಸಾಧಿಸಿದವುಗಳು, ತಪ್ಪಿದ ಗುರಿಗಳು ಮತ್ತು ಕಲಿತ ಪಾಠಗಳನ್ನು ಮನದಲ್ಲಿಟ್ಟುಕೊಂಡು ಮುಂದಿನ ವರ್ಷಕ್ಕೆ ಹೊಸ ನಿರ್ಣಯಗಳನ್ನು ಮಾಡಬೇಕಿದೆ. ಈ ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ, ದಯೆಯಿಂದ ಇರುತ್ತೇವೆ, ಕಷ್ಟಪಟ್ಟು ಕೆಲಸ ಮಾಡುತ್ತೇವೆ ಮತ್ತು ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡೋಣ. ನವ ವರ್ಷದ ಆಗಮನ ಪರಸ್ಪರ ಶುಭಕಾಮನೆಗಳ ವಿನಿಮಯಕ್ಕೆ ಮೋಜು-ಮಸ್ತಿಗೆ ಮಾತ್ರ ಅಂತ ಸೀಮಿತಗೊಳಿಸದೆ, ಬರುವ ಹೊಸ ವರ್ಷದಲ್ಲಿ ದೊಡ್ಡ ಸಂಕಲ್ಪಗಳ ಸಾಕಾರಕ್ಕೆ ಮುಂದಾಗೋಣ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಆಂದೋಲನ ಡೆಸ್ಕ್

Recent Posts

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಬಿಹಾರದಲ್ಲಿ ನಿತೀಶ್ ಕುಮಾರ್ ಆಡಳಿತಕ್ಕೆ ಎಳ್ಳುನೀರು

ಬಿಹಾರ ವಿಧಾನಸಭೆಗೆ ಚುನಾವಣೆ ನಡೆದು ಮೂರೂವರೆ ತಿಂಗಳಾಗುವಷ್ಟರಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಗೆ ಏಕಿಷ್ಟು ಆತುರ? ಏನು ಕಾರಣ ಎನ್ನುವುದಕ್ಕೆಲ್ಲ ಉತ್ತರ…

20 mins ago

ಕೊಡಗಿನಲ್ಲಿ ಜೀತ ಪದ್ಧತಿ ಇನ್ನೂ ಜೀವಂತ

ಕೃಷ್ಣ ಸಿದ್ದಾಪುರ ತೋಟದ ಮಾಲೀಕನ ದೌರ್ಜನ್ಯಕ್ಕೆ ತುತ್ತಾದ ೮ ಕುಟುಂಬಗಳ ೨೬ ಮಂದಿ ರಕ್ಷಣೆ; ಸಾಬೀತಾಗದ ಆರೋಪ  ಸಿದ್ದಾಪುರ: ವ್ಯವಸ್ಥೆಯಲ್ಲಿ ಶತಮಾನಗಳಿಂದ…

26 mins ago

ಹನೂರು: ಗ್ರಾಮದೇವತೆ ಬೆಟ್ಟಳ್ಳಿ ಮಾರಮ್ಮ ಜಾತ್ರೆಗೆ ಸಿದ್ಧತೆ

ಮಹಾದೇಶ್‌ ಎಂ ಗೌಡ  ಮಾ.೯ರಿಂದ ೫ ದಿನಗಳ ಕಾಲ ನಡೆಯಲಿರುವ ಹಬ್ಬ; ಸಾವಿರಾರು ಜನರು ಸೇರುವ ನಿರೀಕ್ಷೆ ಹನೂರು: ಪಟ್ಟಣದ…

31 mins ago

ಮಹಿಳಾ ದಿನದಂದು ಮಹಾರಾಣಿ ವಾಣಿವಿಲಾಸ ಸ್ಮರಣೆ

ಸಿರಿ ಮೈಸೂರು ಮೈಸೂರಿನ ನ್ಯಾಯಾಲಯದ ಮುಂಭಾಗದಿಂದ ಮಾಧವ ರಾವ್ ವೃತ್ತದವರೆಗೂ (ಅಗ್ರಹಾರ ವೃತ್ತ) ಇರುವ ರಸ್ತೆಯನ್ನು ವಾಣಿವಿಲಾಸ ರಸ್ತೆ ಎಂದು…

36 mins ago

ಊರ ಕಾಯುವ ಹೆಣ್ಣು ದೇವಿಯರು ನಮ್ಮನ್ನು ಪೊರೆಯುವ ಸ್ತ್ರೀ ಚೈತನ್ಯದ ಕಥೆ ಹೇಳುವರು

ರಾಧಾ ಆದಿಕಾಲದಿಂದ ಮಾನವರನ್ನು ಮೂಕವಿಸ್ಮಿತನನ್ನಾಗಿ ಮಾಡುತ್ತಾ ಬಂದ ವಿಚಿತ್ರಮಯ ಜಗತ್ ಸೃಷ್ಟಿ ಅವರ ಪಾಲಿಗೆ ಬಿಡಿಸಲಾರದ ಒಗಟು. ಆದಿಮಾನವರಿಗಂತೂ, ಭೂಮ್ಯಾಕಾಶಗಳಲ್ಲಿ…

41 mins ago

ಯಾಕೆ ಇವತ್ತಿನ ಈ ಮಹಿಳಾ ದಿನ?

ಸುಕನ್ಯಾ ಕನಾರಳ್ಳಿ ಹೆಣ್ಣು ನಿಮ್ಮ ಆಸ್ತಿಗೆ ವಾರಸುದಾರರನ್ನ ಹುಟ್ಟಿಸುವ ಕೇವಲ ಗರ್ಭ ಅಲ್ಲ, ಅವಳೊಬ್ಬ ಪ್ರಜೆ, ಅಂತ ಸಾರಿ ಸಾರಿ…

46 mins ago