ಓದುಗರ ಪತ್ರ
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಹಿಂದೆ ವಿಶೇಷ ದಿನಗಳಲ್ಲಿ ಮಾತ್ರ ಹೆಚ್ಚಿನ ಜನಜಂಗುಳಿ ಕಂಡುಬರುತ್ತಿತ್ತು. ಆದರೆ ಈಗ ಪ್ರತಿದಿನವೂ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ಸಾಮಾನ್ಯವಾಗಿ ಎಲ್ಲ ದೇವಸ್ಥಾನಗಳಲ್ಲೂ ದೇವರ ಹೆಸರಿನಲ್ಲಿ ಮುಡಿ ಕೊಟ್ಟು ಹರಕೆ ತೀರಿಸುವ ಸಂಪ್ರದಾಯವಿದೆ. ಹರಕೆ ತೀರಿಸುವ ಸಂದರ್ಭದಲ್ಲಿ ಜನರು ತಾವು ಧರಿಸಿದ್ದ ಬಟ್ಟೆಗಳನ್ನು ನದಿಯಲ್ಲಿ ಹಾಕುವುದು, ಸೋಪು ಹಾಗೂ ಶ್ಯಾಂಪು ಪೌಚ್‌ಗಳು, ಗಂಧದ ಕಡ್ಡಿ ಪ್ಯಾಕೆಟ್‌ಗಳನ್ನು ನದಿಯಲ್ಲಿ ಎಸೆಯುವುದು, ತಮ್ಮ ಮನೆಗಳಲ್ಲಿ ಇರಿಸಿದ್ದ ಪೂಜಾ ಸಾಮಗ್ರಿಗಳು, ದೇವರಿಗೆ ಧರಿಸಿದ್ದ ಹೂವನ್ನು ಪ್ಲಾಸ್ಟಿಕ್ ಚೀಲದಲ್ಲಿ ತಂದು ನದಿಗೆ ಹಾಕಿ ದೇವರ ಹರಕೆ ತೀರಿತೆಂದು ಕೈಮುಗಿದು ಮನೆಗೆ ಹೋಗುವುದರಿಂದ ಯಾವ ಪ್ರಯೋಜನವೂ ಆಗದು. ಅಂತಹ ಡಾಂಬಿಕ ಭಕ್ತಿ ಬಹುಶಃ ದೇವರಿಗೂ ಪ್ರೀತಿ ಎನಿಸಿದು. ಜನರ ಇಂತಹ ನಡೆ ಪರಿಸರಕ್ಕೂ ಪೂರಕವಾಗಿ ರುವುದಿಲ್ಲ. ನದಿಯಲ್ಲಿ ಭಕ್ತಿಯ ಹೆಸರಿನಲ್ಲಿ ಜನರು ಬಿಸಾಡಿ ಹೋಗುವ ತ್ಯಾಜ್ಯಗಳನ್ನು ಸಂಘ ಸಂಸ್ಥೆಗಳು ತೆರವು ಗೊಳಿಸಿ, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರೂ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸವೇ ಸರಿ. ಪುಣ್ಯ ಕ್ಷೇತ್ರಗಳಿಗೆ ತೆರಳುವವರು ದೇವಸ್ಥಾನದ ಸುತ್ತ ಮುತ್ತಲ ಪರಿಸರದ ಸ್ವಚ್ಛತೆಗೂ ಆದ್ಯತೆ ನೀಡಬೇಕು. ಪವಿತ್ರ ಸ್ಥಳಗಳಲ್ಲಿ ಅನೈರ್ಮಲ್ಯ ಸೃಷ್ಟಿಸುವ ಕೆಲಸವನ್ನು ಕೈಬಿಡಬೇಕಿದೆ.ದೇವಸ್ಥಾನ ಆಡಳಿತ ಮಂಡಳಿಯವರು ಕಸದ ಬುಟ್ಟಿಗಳನ್ನು ಅಲ್ಲಲ್ಲಿ ಇರಿಸಿ ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡಲಿ.
– ಪ್ರಸನ್ನಕುಮಾರ್ ಎಂ.ಬದನಗುಪ್ಪೆ.
ಮೈಸೂರು: ದೇಶ-ವಿದೇಶಗಳಲ್ಲಿ ಜನ ಸಮೂಹವನ್ನು ಹೊಂದಿರುವ ಅವಧೂತ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನೂತನ ಶಾಖೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ…
ಕುಲಪತಿ ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ೧೦೬ನೇ ಘಟಿಕೋತ್ಸವವನ್ನು ಜ.೫ರಂದುನಡೆಸಲು ತೀರ್ಮಾನಿಸಲಾಗಿದ್ದು, ಘಟಿಕೋತ್ಸವ…
ಲಕ್ಷ್ಮೀಕಾಂತ್ ಕೊಮಾರಪ್ಪ ಶೀತಗಾಳಿಯಿಂದ ಪಾರಾಗಲು ಬೆಚ್ಚನೆಯ ಬಟ್ಟೆ, ಹೊದಿಕೆ, ಬೆಂಕಿಯ ಮೊರೆ ಸೋಮವಾರಪೇಟೆ: ಶೀತಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಕಳೆದೆರಡು…
ಕೊಳ್ಳೇಗಾಲ: ಶಾಸಕರು ಮೊದಲಿದ್ದ ಡಾಂಬರು ರಸ್ತೆಯನ್ನು ಕಿತ್ತು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮುಂದಾದರೆ ಗುತ್ತಿಗೆದಾರ ನಡೆಸಿದ ಕಳಪೆಕಾಮಗಾರಿಯಿಂದ ಜಲ್ಲಿಕಲ್ಲುಗಳು ಮೇಲೆದ್ದು…
ಹನಗೋಡು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಆತಂಕ; ಜಮೀನಿಗೆ ತೆರಳಲು ಹಿಂದೇಟು ವೀರನಹೊಸಹಳ್ಳಿ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ಬಫರ್…