Andolana originals

ಓದುಗರ ಪತ್ರ: ಕಸಾಪ ಗೌರವಕ್ಕೆ ಚ್ಯುತಿ ತಂದ ಜೋಶಿ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕಳೆದ ಮೂರು ವರ್ಷಗಳಿಂದ ನಡೆದಿರುವ ಅಧಿಕಾರ ಮತ್ತು ಹಣ ದುರುಪಯೋಗದ ಆರೋಪಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಚಾರಣೆ ನಡೆಸುತ್ತಿದೆ. ಈ ಕಾರಣಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್‌ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ ಗಾಯತ್ರಿ ಅವರನ್ನುಮೂರು ತಿಂಗಳ ಅವಧಿಗೆ ಸರ್ಕಾರ ಆಡಳಿತಾಧಿಕಾರಿಯಾಗಿ ನೇಮಕ ಮಾಡಿತ್ತು, ಕಳೆದ ಶುಕ್ರವಾರ ಇವರ ಆಡಳಿತಾವಧಿ ಮುಗಿಯುತ್ತದೆ ಎಂದು ತಿಳಿದು ಮಹೇಶ್ ಜೋಶಿ ಕನ್ನಡ ಸಾಹಿತ್ಯ ಪರಿಷತ್‌ನ ಬಾಗಿಲು ಬಡಿದು ಅಲ್ಲಿನ ಸಿಬ್ಬಂದಿಗೆ ಬಾಗಿಲು ತೆರೆಯುವಂತೆ ಜೋರು ಮಾಡಿದ್ದಾರೆ, ಆದರೆ ಅಲ್ಲಿನ ಸಿಬ್ಬಂದಿ ಬಾಗಿಲು ತೆರೆಯದೇ ಪೊಲೀಸರ ನೆರವಿನಿಂದಜೋಶಿಯವರನ್ನು ವಾಪಸ್ ಕಳುಹಿಸಿದ್ದಾರೆ. ಈಗ ಮತ್ತೆ ಸರ್ಕಾರ ಮೂರು ತಿಂಗಳ ಅವಧಿಗೆ ಆಡಳಿತಾಧಿಕಾರಿಯವರ ಅಧಿಕಾರವನ್ನು ವಿಸ್ತರಿಸಿದೆ. ಒಬ್ಬ ಪರಿಷತ್‌ನ ಅಧ್ಯಕ್ಷನಾಗಿ ತನ್ನ ವಿರುದ್ಧ ತನಿಖೆ ನಡೆಯುತ್ತಿದ್ದರೂ, ಪರಿಷತ್‌ಗೆ ಹೋಗಿ ಕುರ್ಚಿ ಮೇಲೆ ಕುಳಿತುಕೊಳ್ಳಲು ಇವರಿಗೆ ಯಾವ ನೈತಿಕತೆ ಇದೆ? ಈತನಿಗೆ ಕನಿಷ್ಠ ತಿಳಿವಳಿಕೆಯಾದರೂ ಬೇಡವೇ? ಕನ್ನಡಕ್ಕಾಗಿ ತ್ಯಾಗ ಮಾಡಿದ ಅನೇಕ ಮಹನೀಯರು ಕುಳಿತ ಕುರ್ಚಿಗೆ ಅವಮಾನ ಮಾಡಿದ ಕೀರ್ತಿ ಈ ತನಿಗೆ ಸಲ್ಲುತ್ತದೆ. ಈತ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಬಂದ ನಂತರ ನಡೆಸಿದ ಹುಚ್ಚಾಟಗಳಿಂದಾಗಿ ಪರಿಷತ್‌ನ ಗೌರವವೇ ಬೀದಿ ಪಾಲಾಗಿದೆ.

– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿ…ರಾಮ ..!

ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…

3 hours ago

ಓದುಗರ ಪತ್ರ: ಗಿಡಗಳನ್ನು ನೆಟ್ಟು ಪರಿಸರ ಉಳಿಸಿ

ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…

3 hours ago

ಓದುಗರ ಪತ್ರ: ಹಗಲು ದರೋಡೆ ನಿಲ್ಲಿಸಿ

ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್…

3 hours ago

‘ಕೆಡಿ’ ಹಾಡು, ‘ಲವ್ ಮಾಕ್‌ಟೈಲ್ ೩’, ಕಥೆಯ ಆತ್ಮ, ನಿರೂಪಣೆ, ಕೃತಿಸ್ವಾಮ್ಯಗಳ ಸುತ್ತ

ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮುಖಗಳ ಪರಿಚಯವೂ ಈಗ ಆಗತೊಡಗಿದೆ. ನಿರ್ಮಾಪಕ ಕನಕಪುರ…

3 hours ago

ಸಮರ್ಪಕ ನಿರ್ವಹಣೆಯಿಲ್ಲದೇ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕಗಳು

ಮಹಾದೇಶ್ ಎಂ.ಗೌಡ ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ…

3 hours ago

ಭೇರ್ಯ ಗ್ರಾಪಂಗೆ ೨ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ಭೇರ್ಯ ಮಹೇಶ್ ಡಿಜಿಟಲ್ ಗ್ರಂಥಾಲಯ, ಸ್ವಚ್ಛತೆ, ನೈರ್ಮಲ್ಯ, ನೀರು ಸರಬರಾಜು, ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಭೇರ್ಯ: ಭಾರತದ ನಿಜವಾದ…

3 hours ago