ಓದುಗರ ಪತ್ರ
ಇತ್ತೀಚೆಗೆ ನಡೆದ ಕರ್ನಾಟಕ ಸಿ.ಇ.ಟಿ. ಪರೀಕ್ಷೆಯಲ್ಲಿ ಬೀದರ್ ಮತ್ತು ಶಿವಮೊಗ್ಗದ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ಧರಿಸಿ ಬಂದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯದ ಕಾರಣಕ್ಕಾಗಿ ಪರೀಕ್ಷೆ ಬರೆಯಲು ಅನುಮತಿಸಿಲ್ಲದ ಮತ್ತು ಜನಿವಾರವನ್ನು ಹಾಗೂ ಕೈಗೆ ಕಟ್ಟಿಕೊಂಡಿರುವ ಕಾಶಿ ದಾರವನ್ನು ಕತ್ತರಿಸಿರುವುದು, ನಿಜಕ್ಕೂ ಹೇಯ, ಅವಮಾನಕರ ಮತ್ತು ಅಕ್ಷಮ್ಯ ಅಪರಾಧವೇ ಸರಿ.
ಬಹುಶಃ ಜನಿವಾರಕ್ಕೆ ಬ್ಲೂ ಟೂತ್ ಸಿಕ್ಕಿಸಿ ಪರೀಕ್ಷೆಗಳಲ್ಲಿ ನಕಲು ಮಾಡುತ್ತಾರೆ ಎಂದುಕೊಂಡರೆ, ಆಧುನಿಕ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳು ಅಂತಹ ಪರೀಕ್ಷೆ ನಕಲು ಮಾಡುವ ವಿದ್ಯುನ್ಮಾನ ವಸ್ತುಗಳನ್ನು ಒಳಗೆ ತರುತ್ತಾರೆಯೇ ಎಂದು ಕಂಡುಕೊಳ್ಳಬಹುದಲ್ಲವೇ? ಅಲ್ಲದೆ ವಿದ್ಯಾರ್ಥಿಗಳನ್ನು ಒಳಬಿಡುವ ಮುನ್ನ ಲೋಹ ಪರೀಕ್ಷಕ ಯಂತ್ರದಲ್ಲಿ ಸ್ಕ್ಯಾನಿಂಗ್ ಮಾಡಿ, ವಿದ್ಯಾರ್ಥಿಗಳನ್ನು ಕೂಲಂಕಷವಾಗಿ ತಪಾಸಣೆ ಮಾಡುವ ಇವರು ಜನಿವಾರದಲ್ಲಿ ಅಂತಹ ವಸ್ತುಗಳಿದ್ದಲ್ಲಿ ತೆಗೆಸಬಹುದಿತ್ತಲ್ಲವೇ? ಅಷ್ಟಕ್ಕೂ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಸುವ ಯೋಚನೆ ಕೂಡ ಮಾಡಬಹುದಿತ್ತು. ಇಷ್ಟು ನಿರ್ವಹಿಸಿದ ಸಿಬ್ಬಂದಿ ಮುಂದಿನ ದಿನಗಳಲ್ಲಿ ಹಣೆಗೆ ತಿಲಕವೋ, ನಾಮವೋ, ವಿಭೂತಿಯೋ, ಕುಂಕುಮವೋ ಹಚ್ಚಿಕೊಂಡು ಹೋದರೆ ಅದನ್ನು ಅಳಿಸಿರಿ ಎನ್ನಬಹುದು. ಜುಟ್ಟು ಬಿಟ್ಟುಕೊಂಡು ಹೋದರೆ ಅದನ್ನು ಕತ್ತರಿಸಿ ಎಂದು ವಿಕೃತಿ ಮೆರೆಯುವುದರಲ್ಲಿ ಸಂದೇಹವೇ ಇಲ್ಲ.
ಅನ್ಯ ಸಮುದಾಯದ ವಸ್ತ್ರ ವೇಷಭೂಷಗಳನ್ನು ತೆಗೆಸಿದ್ದರೆ ಇಷ್ಟು ಹೊತ್ತಿಗೆ ರಾದ್ಧಾಂತವಾಗುತ್ತಿತ್ತು. ಇಷ್ಟು ದಿನವೂ ಬರೀ ಟೀಕೆ, ಟಿಪ್ಪಣಿಗಳಿಗೆ ಆಹಾರವಾಗುತ್ತಿದ್ದ ವಿಪ್ರ ಸಮುದಾಯ ಇದೀಗ ವಿಕೃತ ಮನಸ್ಸಿನ ಇಂಥವರ ಕೃತ್ಯಗಳಿಗೆ ಒಳಗಾಗುತ್ತಿರುವುದು ಖೇದಕರ ಮತ್ತು ಅವಮಾನಕರ ಸಂಗತಿಯಾಗಿದೆ.
-ವಿಜಯ್ ಹೆಮ್ಮಿಗೆ, ಮೈಸೂರು
ಬೆಂಗಳೂರು: ಮುಂದಿನ ಸಲ ಮಹಿಳಾ ಮೀಸಲಾತಿ ಬಂದರೆ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಈ…
ಬೆಂಗಳೂರು: ನಾನು ರಾಜ್ಯ ರಾಜಕಾರಣಕ್ಕೆ ಬರುವ ಯೋಚನೆ ಇಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು…
ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ರಾಜ್ಯ ಮುಖ್ಯ…
ಹನೂರು: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ ನೀರಿನಲ್ಲಿ ಬೃಹತ್ ಗಾತ್ರದ ಹುಲಿಯೊಂದು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ…
ಟೆಲ್ ಅವಿವ್: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ.25 ರಿಂದ 26ರವರೆಗೆ ಎರಡು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಪ್ರಯಾಣಿಸಲಿದ್ದಾರೆ ಎಂದು…
ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ. ಸದ್ಯ ರಾಜ್ಯ ರಾಜಕೀಯದಲ್ಲಿ ಬಹಳ ಚರ್ಚೆಯ ವಿಚಾರ. ಶಾಸಕರು ಸರ್ಕಾರಿ ಖರ್ಚಿನಲ್ಲಿ…