Andolana originals

ಓದುಗರ ಪತ್ರ: ಜನರಿಗೆ ಮಾರಕವಾದ ಮಾಹಿತಿ ಫಲಕಗಳು

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರದ ವಿವಿಧ ಬಡಾವಣೆಗಳು ಹಾಗೂ ರಸ್ತೆಗಳ ಎಲ್ಲ ಕ್ರಾಸ್‌ಗಳಲ್ಲಿ ವಾರ್ಡ್ ಸಂಖ್ಯೆ, ಆ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಹಾಗೂ ಪಾಲಿಕೆ ಸದಸ್ಯರ ಮಾಹಿತಿಯ ಜೊತೆಗೆ ಪ್ರಮುಖ ರಸ್ತೆಯ ಹೆಸರು ಮತ್ತು ಕ್ರಾಸ್‌ಗಳ ಬಗ್ಗೆ ಮಾಹಿತಿಯುಳ್ಳ ಫಲಕಗಳನ್ನು ಅಳವಡಿಸಲಾಗಿದೆ. ಇದು ನಾಗರಿಕರಿಗೆ ಆಯಾ ಪ್ರದೇಶಗಳ ಬಗ್ಗೆ ಮಾಹಿತಿ ಒದಗಿಸುವ ಉತ್ತಮ ಕೆಲಸವಾಗಿದೆ. ಆದರೆ ಈ ಮಾಹಿತಿ ಫಲಕಗಳು ಜನರಿಗೆ ಮಾರಕವಾಗಿ ಪರಿಣಮಿಸಿವೆ. ಈ ರೀತಿಯ ಮಾಹಿತಿ ಫಲಕಗಳನ್ನು ಅಳವಡಿಸಿರುವ ಸ್ಥಳಗಳಲ್ಲಿ ಸಂಚರಿಸುವ ಜನರ ತಲೆಗೆ ತಗುಲಿ ಪೆಟ್ಟಾಗಿರುವ ಸಾಕಷ್ಟು ಉದಾಹರಣೆಗಳು ವರದಿಯಾಗಿವೆ.

ಕೆಲವರಿಗೆ ತಲೆಗೆ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ನಿದರ್ಶನಗಳು ಸಾಕಷ್ಟಿವೆ. ಇಂತಹ ಅಪಾಯದಿಂದ ಪಾರಾಗಲು ಆಯಾ ಕ್ರಾಸ್‌ಗಳ ನಿವಾಸಿಗಳು, ಅಂಗಡಿ ಮಾಲೀಕರು ಈ ಫಲಕಗಳ ಕೆಳಭಾಗಕ್ಕೆ ನೀರಿನ ಬಾಟಲಿ ಹಾಕಿ, ಮತ್ತೆ ಕೆಲವೆಡೆ ಬಟ್ಟೆಗಳನ್ನು ಸುತ್ತಿ ಅಥವಾ ಮೃದುವಾದ ವಸ್ತುಗಳಿಂದ ಮುಚ್ಚಿದ್ದಾರೆ. ಈ ನಾಮ ಫಲಕಗಳು ಸಾಕಷ್ಟು ಎತ್ತರವಾಗಿರದೇ ಕುಳ್ಳಾಗಿರುವುದು ಇಂತಹ ಅವಘಡಗಳು ಸಂಭವಿಸಲು ಪ್ರಮುಖ ಕಾರಣವಾಗಿದೆ. ಇದು ಅವೈಜ್ಞಾನಿಕ ಕ್ರಮವಾಗಿದೆ. ನಗರ ಪಾಲಿಕೆ ಮತ್ತಷ್ಟು ಅವಘಡಗಳು ಸಂಭವಿಸುವ ಮೊದಲು ಈಗ ಅಳವಡಿಸಿರುವ ಮಾಹಿತಿ ಫಲಕಗಳನ್ನು ಎತ್ತರಿಸುವುದರ ಜೊತೆಗೆ ಮುಂದೆ ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಮಾಹಿತಿ ಫಲಕಗಳು ಸಾಕಷ್ಟು ಎತ್ತರವಾಗಿರುವಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಅನುಷಾ ಎಂ., ಜೆ.ಪಿ.ನಗರ, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ:  ತಡೆಗೋಡೆ ನಿರ್ಮಿಸಿ

ಎಚ್.ಡಿ.ಕೋಟೆ -ಗದ್ದಿಗೆ ಮುಖ್ಯ ರಸ್ತೆಯಲ್ಲಿರುವ ಪೈಲ್ವಾನ್ ಕಾಲೋನಿ ಗ್ರಾಮದಲ್ಲಿರುವ ನೀರು ಕಾಲುವೆಗೆ ತಡೆಗೋಡೆ ಇಲ್ಲಿದೇ ತೀವ್ರ ತೊಂದರೆಯಾಗಿದೆ. ಎಚ್.ಡಿ.ಕೋಟೆ ಮತ್ತು…

5 mins ago

ಓದುಗರ ಪತ್ರ:  ಗಂಗೋತ್ರಿ ವಿದ್ಯಾರ್ಥಿನಿಲಯಗಳಿಗೆ ಮೂಲ ಸೌಕರ್ಯ ಬೇಕಿದೆ

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಂಶೋಧಕರ ಪುರುಷ ಮತ್ತು ಮಹಿಳಾ ವಿದ್ಯಾರ್ಥಿ ನಿಲಯಗಳಲ್ಲಿ, ಶುದ್ಧ ಕುಡಿಯುವ ನೀರಿನ ಫಿಲ್ಟರ್, ಬಿಸಿನೀರಿನ…

7 mins ago

ಓದುಗರ ಪತ್ರ: ಪ್ರೇಕ್ಷಣೀಯ ಸ್ಥಳಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇರಲಿ

ಮೈಸೂರಿನ ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮೂವರು ಸಾವನ್ನಪ್ಪಿದ್ದಾರೆ. ಅರಮನೆ ವೀಕ್ಷಣೆಗೆ ಹೆಚ್ಚಿನ ಜನರು ಸೇರುತ್ತಾರೆ. ಕ್ರಿಸ್‌ಮಸ್…

8 mins ago

ಓದುಗರ ಪತ್ರ: ಕುವೆಂಪುನಗರ ಮಾರ್ಗಕ್ಕೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ಕುವೆಂಪುನಗರ ‘ಎಂ ಬ್ಲಾಕ್’ನಿಂದ ಹೆಚ್ಚಿನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ನಗರ ಸಾರಿಗೆ ಬಸ್ಸುಗಳು ಬೆಳಗಿನ ಸಮಯ ಸರಿಯಾಗಿ…

10 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ:  ನಿತಿನ್ ನೇಮಕ: ಬಿಜೆಪಿ ಹಿಡಿತ ಮೋದಿ, ಶಾ ಕೈಯಲ್ಲೇ

ಯಶಸ್ವಿ ರಾಜಕೀಯ ನಾಯಕತ್ವಕ್ಕೆ ಈಗ ಬೇಕಾಗಿರುವುದು ವರ್ಚಸ್ಸು ಮತ್ತು ಜನಪ್ರಿಯತೆ. ಈ ಗುಣಗಳಿದ್ದರೆ ಸರ್ಕಾರ ಮತ್ತು ಪಕ್ಷದಲ್ಲಿ ಏನು ಬೇಕಾದರೂ…

25 mins ago

‘ಶುಚಿ’ ಕಾರ್ಯಕ್ರಮ ಮರು ಜಾರಿಗೆ ಹಣ ಬಲ

-ಗಿರೀಶ್ ಹುಣಸೂರು ೫ ವರ್ಷಗಳ ಬಳಿಕ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆಗೆ ಮುಂದಾದ ಸರ್ಕಾರ ಮೈಸೂರು: ಹದಿಹರೆಯದ ಹೆಣ್ಣು ಮಕ್ಕಳಲ್ಲಿ…

48 mins ago