ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿ ೭೯ ವರ್ಷಗಳು ಕಳೆದರೂ ಸ್ವಾತಂತ್ರ್ಯ ಮತ್ತು ಸ್ವತಂತ್ರ ಎಂಬ ಪದಗಳ ಅರ್ಥವೇ ಪ್ರಶ್ನೆಯಾಗಿವೆ. ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ಅಸ್ತಿತ್ವದಲ್ಲಿದೆಯಾ? ಯಾವ ದಿಕ್ಕಿನೆಡೆಗೆ ಸಾಗುತ್ತಿದೆ? ದೇಶದ ಪ್ರಜೆಗಳು ತಮಗೆ ಅನ್ಯಾಯವಾದರೆ ರಕ್ಷಣೆಗೆಂದು ಕಾನೂನಿನ ಮೊರೆ ಹೋಗುತ್ತಾರೆ. ಆದರೆ, ನ್ಯಾಯವನ್ನು ದೊರಕಿಸಿಕೊಡುವ ವಕೀಲರನ್ನೇ ಕೊಂದರೆ, ನ್ಯಾಯವನ್ನು ಎಲ್ಲಿಂದ ಪಡೆಯಲು ಸಾಧ್ಯ?
ಬೆಂಗಳೂರಿನ ವೈಟ್ ಫೀಲ್ಡ್‌ನ ವಕೀಲರಾದ ಮಂಜುನಾಥ್, ಅನ್ನಪೂರ್ಣೇಶ್ವರಿ ನಗರದ ವಕೀಲರಾದ ಶ್ರೀರಾಮ್ ಅವರ ಬರ್ಬರ ಹತ್ಯೆ ಮತ್ತು ಗೌರಿಬಿದನೂರಿನ ವಕೀಲರಾದ ವೆಂಕಟರಮಣ ಸನ್ನಕ್ಕಿ ಅವರ ಮೇಲೆ ನಡೆದ ಕೊಲೆ ಯತ್ನವನ್ನು ಖಂಡಿಸಿ ಮತ್ತು ವಕೀಲರು ತಮ್ಮ ವೃತ್ತಿಯನ್ನು ನಿರ್ಭೀತಿಯಿಂದ ಹಾಗೂ ಸುರಕ್ಷಿತವಾಗಿ ನಿರ್ವಹಿಸಲು ಅಗತ್ಯವಾದ ಭದ್ರತೆಯ ಕೊರತೆಯನ್ನು ಖಂಡಿಸಿ, ವಕೀಲರ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ, ಸಮಗ್ರವಾದ ‘ವಕೀಲರ ರಕ್ಷಣಾ ಕಾಯ್ದೆ’ಯನ್ನು ಜಾರಿಗೆ ತರಬೇಕೆಂದು ವಕೀಲರು ನ.೩ರಂದು ರಾಜ್ಯಾದ್ಯಂತ ‘ನ್ಯಾಯಾಲಯದ ಕಲಾಪ ಬಹಿಷ್ಕಾರ’ ಮಾಡುವುದರೊಂದಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಮೇಲೆ ನಡೆಯುತ್ತಿರುವ ಇಂತಹ ಪ್ರಕರಣಗಳನ್ನು ‘ಜಾಮೀನು ರಹಿತ ಅಪರಾಧ’ ಎಂದು ಪರಿಗಣಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಕೂಡಲೇ ಜಾರಿಗೆ ತರಬೇಕೆಂದು ವಕೀಲರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಮೇಲ್ನೋಟಕ್ಕೆ ವಕೀಲರ ಮೇಲೆ ಹಲ್ಲೆ ಆಗಿದೆ. ಕೊಲೆ ಪ್ರಯತ್ನ ನಡೆದಿದೆ. ದೌರ್ಜನ್ಯಗಳು ನಡೆಯುತ್ತಿವೆ. ವಕೀಲರ ಭದ್ರತೆ ಮತ್ತು ರಕ್ಷಣೆ ಮಾಡಬೇಕು ಎನ್ನುವಾಗ, ವಕೀಲರ ಮೇಲೆ ಏಕೆ ನಿರಂತರವಾಗಿ ಹಲ್ಲೆ, ಕೊಲೆಗಳ ಸರಣಿಗಳು ಹೆಚ್ಚುತ್ತಿವೆ ಎಂಬ ನೂರಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ. ನ್ಯಾಯವೆಂದರೆ ಒಬ್ಬ ವ್ಯಕ್ತಿಯ ಆಸ್ತಿಯಲ್ಲ.
-ಕೆ.ಅಭಿನಯ, ಮೈಸೂರು
ನವದೆಹಲಿ: 13 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೆಹಲಿ ಪೊಲೀಸರು ನೋಟಿಸ್…
ಬೆಂಗಳೂರು: ದೀಪಾವಳಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ, ಅಂದರೆ ಎಕ್ಯೂಐ, 186ಕ್ಕೆ ತಲುಪಿದೆ.…
ಬೆಂಗಳೂರು: ನಿಮ್ಮ ರೇಷನ್ ಕಾರ್ಡ್‌ಗೆ ಇನ್ನೂ ಇ-ಕೆವೈಸಿ ಮಾಡಿಸಿಲ್ವಾ? ಹಾಗಿದ್ದರೆ ಗಮನಿಸಿ. ಇ-ಕೆವೈಸಿ ಮಾಡಿಸಲು ಇಂದೇ ಕೊನೆಯ ದಿನ! ಈಗಾಗಲೇ…
ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು, ನವೆಂಬರ್ 10, ಕೊನೆಯ ದಿನ. ಕೊನೆಯ ದಿನವಾದ್ದರಿಂದ…
ಈ ದೀಪ ಪ್ರೀತಿಯ ರೂಪ ನಾನೊಂದು ದೀಪ ಹಚ್ಚುತ್ತೇನೆ ನಮ್ಮೊಳಗಿನ ಅಜ್ಞಾನ, ಅಹಂ ಅಂಧಕಾರವೆಲ್ಲಾ ಅಳಿದು, ಸುಜ್ಞಾನದ ಬೆಳಕು ಬೆಳಗಲಿಯೆಂದು…
೨೦೨೫-೨೬ ರ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೊಡಮಾಡುವ ಸ್ವಚ್ಛ ಸರ್ವೇಕ್ಷಣ್ ರಾಷ್ಟ್ರೀಯ ಪ್ರಶಸ್ತಿಗೆ ಮೈಸೂರು ಭಾಜನವಾಗಿರುವುದು…