ಓದುಗರ ಪತ್ರ
ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ೮ ರೈಲು ಸೇವೆಗಳನ್ನು ವಿಸ್ತರಣೆ ಮಾಡಲಾಗುವುದು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಶೋಕಪುರಂ ರೈಲ್ವೆ ನಿಲ್ದಾಣದ ಟ್ರ್ಯಾಕ್ ೧ರಿಂದ ೫ ಸಂಪೂರ್ಣವಾಗಿ ವಿದ್ಯುದ್ದೀಕರಣಗೊಂಡಿದ್ದು, ನೈಋತ್ಯ ರೈಲ್ವೆ ಇಲಾಖೆಯ ಪರಿಶ್ರಮ ಹಾಗೂ ಕಾರ್ಯಕ್ಷಮತೆ ಪ್ರಶಂಸನೀಯವಾಗಿದೆ ಎಂದು ತಿಳಿಸಿದ್ದಾರೆ. ಈ ರೈಲು ಸೇವೆ ವಿಸ್ತರಣೆಯಿಂದ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವ ಜತೆಗೆ ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದ ಮೇಲಿನ ಒತ್ತಡವನ್ನೂ ಸ್ಪಲ್ಪಮಟ್ಟಿಗಾದರೂ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದಕ್ಕೆ ಕಾರಣರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರವರಿಗೆ ಧನ್ಯವಾದಗಳು.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು.
ಭಾರತಿ ಬಿ.ವಿ. ಕದ್ದುಮುಚ್ಚಿ ನಮ್ಮ ಮನೆಯ ಗರಾಜಿಗೆ ಅಂಟಿದಂತಿದ್ದ ಕೋಣೆಯಲ್ಲಿ ಮರಿ ಹಾಕಿ ಬೀಡುಬಿಟ್ಟ ಮೊದಲಲ್ಲಿ ನಮಗೆ ಹೆದರುತ್ತಿದ್ದ ಬೆಕ್ಕು…
ಅಜಯ್ ಕುಮಾರ್ ಎಂ.ಗುಂಬಳ್ಳಿ ಮಾರಿಹಬ್ಬವೆಂದರೆ ಎಲ್ಲಾ ಕೋಮಿನ ಜನ ಸೇರಿ ನಡೆಸುತ್ತಾರೆ. ಅವರವರೇ ದೇವರ ಕೈಂಕರ್ಯಗಳನ್ನು ವಿಭಾಗಿಸಿಕೊಂಡು ಹಬ್ಬ ಮಾಡುತ್ತಾರೆ…
ಅಕ್ಷತಾ ಏಕಲವ್ಯ ದ್ರೋಣರನ್ನು ಗುರುಗಳೆಂದು ಒಪ್ಪಿ, ಮರೆಯಲ್ಲೇ ನಿಂತು ಬಿಲ್ವಿದ್ಯೆ ಪ್ರವೀಣನಾದರೂ ದ್ರೋಣರು ಒಪ್ಪಿಕೊಂಡದ್ದು ಅರ್ಜುನನ ಮೇಲಿನ ಶಿಷ್ಯ ಪ್ರೀತಿಯನ್ನು!…
ಕೆ.ಎಸ್.ಚಂದ್ರಶೇಖರ್ ಮೂರ್ತಿ ಮೈಸೂರು: ಪ್ರತಿಯೊಂದು ಮಗುವಿಗೂ ಎಲ್ಲಾ ರೀತಿಯ ಅನುಭವ ಬೇಕು. ಆದರೆ ಎಲ್ಲ ಮಕ್ಕಳಿಗೂ ಅಂತಹ ಅವಕಾಶ ಒದಗಿ…
ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ…