ಓದುಗರ ಪತ್ರ
ಮೈಸೂರು ವಿಭಾಗದಲ್ಲಿ ಹುಲಿ ಚಿರತೆಗಳ ದಾಳಿಯಿಂದಾಗಿ ಹಲವಾರು ಮಂದಿ ಸಾವನ್ನಪ್ಪಿದ್ದರು. ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸುವಂತೆ ರೈತ ಸಂಘ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇದೀಗ ಮುಖ್ಯಮಂತ್ರಿಗಳು ಸಫಾರಿಯನ್ನು ಪುನರಾರಂಭಿಸುವ ಕುರಿತು ತಜ್ಞರಿಂದ ವರದಿ ಪಡೆಯುವಂತೆ ಅರಣ್ಯ ಸಚಿವರಿಗೆ ಸೂಚನೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಸಫಾರಿ ನಿಲ್ಲಿಸಿರುವುದರಿಂದ ಪ್ರಾಣಿಗಳ ಉಪಟಳ ಕಡಿಮೆಯಾಗಿದೆಯೇ, ಇಲ್ಲವೇ ಎನ್ನುವುದನ್ನು ತಿಳಿಯಲು ಒಂದೆರಡು ವರ್ಷಗಳಾದರೂ ಬೇಕು. ಸಫಾರಿ ನಿಲ್ಲಿಸಿರುವುದು ಸರ್ಕಾರ, ಹೋಟೆಲ್, ರೆಸಾರ್ಟ್‌ಗಳಿಗೆ ನಷ್ಟ ವಾಗಿದೆ. ಸಫಾರಿ ಗುತ್ತಿಗೆ ನೌಕರರಿಗೆ ವೇತನ ಕಡಿತಗೊಂಡಿದೆ ಎನ್ನುವುದು ಸಮಂಜಸ ಕಾರಣವಲ್ಲ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿ ನಡೆಸಿ ವನ್ಯ ಜೀವಿಗಳಿಗೆ ಉಪಟಳ ನೀಡುವುದು ಸರಿಯಲ್ಲ.
ಸಫಾರಿ ನಿಲ್ಲಿಸಿರುವುದರಿಂದ ಕೆಲಸ ಕಳೆದುಕೊಂಡಿರುವವರಿಗೆ ಅವರ ಅರ್ಹತೆಗನುಗುಣವಾಗಿ ಬೇರೆ ಕೆಲಸಕ್ಕೆ ನಿಯೋಜಿಸಬೇಕು. ಕಾಡಂಚಿನಲ್ಲಿರುವ ರೆಸಾರ್ಟ್‌ಗಳನ್ನು ಬಂದ್ ಮಾಡಬೇಕು. ಪ್ರಾಣಿಗಳನ್ನು ನೋಡಲೇ ಬೇಕು ಎನ್ನುವವರು ನಗರಗಳಲ್ಲಿರುವ ಪ್ರಾಣಿ ಸಂಗ್ರಹಾಲಯಗಳಿಗೆ ಹೋಗಲಿ. ಸರ್ಕಾರ ಸಫಾರಿಗೆ ಮತ್ತೆ ಅನುಮತಿ ನೀಡುವುದು ಬೇಡ.
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು
ಸಾಲಿಗ್ರಾಮ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಚಂದ್ರು ಆರೋಪ ಸಾಲಿಗ್ರಾಮ: ದಲಿತ ಮತ್ತು ಹಿಂದುಳಿದ…
ಕೃಷ್ಣ ಸಿದ್ದಾಪುರ ಸಂತೆಮಾಳದಲ್ಲಿ ತರಕಾರಿ ಜೊತೆ ಸಾಂಕ್ರಾಮಿಕ ರೋಗವೂ ಉಚಿತ ಕ್ರಮಕೈಗೊಳ್ಳದ ಗ್ರಾ.ಪಂ. ವಿರುದ್ಧ ಸಾರ್ವಜನಿಕರ ಅಸಮಾಧಾನ ಸಿದ್ದಾಪುರ: ಸಾರ್ವಜನಿಕ…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಘನತೆಯ ಬದುಕು ಬಯಸುವ ಮನುಷ್ಯನ ಹಕ್ಕನ್ನು ಎತ್ತಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಬ್ರಿಟಿಷರ ಗುಲಾಮಗಿರಿಯಲ್ಲಿದ್ದ ಭಾರತಕ್ಕೆ…
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಘರ್ಷಣೆ ಸಂದರ್ಭದಲ್ಲಿ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತ…
ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿವಿ ಅಶೋಕಪುರಂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ೨,೦೦೦ ಇದ್ದ…