Andolana originals

ಓದುಗರ ಪತ್ರ: ಸರಿಯಾದ ಕ್ರಮದಲ್ಲಿ ಜಾತಿ ಗಣತಿ ನಡೆಯಲಿ

ಒಂಬತ್ತು ವರ್ಷಗಳ ಹಿಂದೆ ನಡೆಸಲಾಗಿದೆ ಎನ್ನಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿಯ ವರದಿಯನ್ನು ಈಗ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಜಾತಿ ಗಣತಿ ಸರಿಯಾದ ಕ್ರಮದಲ್ಲಿ ನಡೆದಿದ್ದರೆ ಆ ವರದಿಯನ್ನು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡುವುದು ಸರಿ. ಆದರೆ ಈ ಸಮೀಕ್ಷೆಯು ಹೇಗೆ ನಡೆಯಿತು? ಯಾವಾಗ ನಡೆಯಿತು? ಎಂಬುದೇ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅಲ್ಲದೆ ಇದು ಸರಿಯಾದ ಕ್ರಮದಲ್ಲಿ ನಡೆದಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ನನ್ನ ಅನುಭವಕ್ಕೆ ಬಂದಂತೆ ನಮ್ಮ ಮನೆಯಲ್ಲಾಗಲಿ ಅಥವಾ ನಮ್ಮ ಬಡಾವಣೆಯಲ್ಲಾಗಲಿ ಈವರೆಗೂ ಯಾವುದೇ ಅಧಿಕಾರಿ ಬಂದು ಜಾತಿ ಗಣತಿಯನ್ನು ಮಾಡಿಲ್ಲ.

ಇದು ನಮ್ಮ ಬಡಾವಣೆಯಲ್ಲಿ ಮಾತ್ರವಲ್ಲ ಅನೇಕ ನಗರಗಳು, ತಾಲ್ಲೂಕುಗಳು, ಗ್ರಾಮೀಣ ಭಾಗಗಳಲ್ಲಿಯೂ ಜಾತಿ ಸಮೀಕ್ಷೆ ಸರಿಯಾದ ಕ್ರಮದಲ್ಲಿ ನಡೆದಿಲ್ಲ ಎಂಬುದಿದೆ. ಹಾಗಿದ್ದರೆ ಜಾತಿ ಗಣತಿಯನ್ನು ಮಾಡಿರುವುದಾದರೂ ಎಲ್ಲಿ? ಅಧಿಕಾರಿಗಳು ಎಲ್ಲೋ ಕುಳಿತು ತಮ್ಮಿಚ್ಛೆಗೆ ಅನುಸಾರ ಜಾತಿ ಗಣತಿಯ ವರದಿಯನ್ನು ಸಿದ್ಧಪಡಿಸಿದರೆ ಅದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಮೊದಲು ಸರಿಯಾದ ಕ್ರಮದಲ್ಲಿ ಜಾತಿ ಗಣತಿಯನ್ನು ನಡೆಸಿ ನಂತರ ವರದಿಯನ್ನು ಬಿಡುಗಡೆ ಮಾಡಲಿ.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

 

andolana

Recent Posts

ಓದುಗರ ಪತ್ರ: ಕಾನೂನು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೆ?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಡಿ.೧೮ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ…

15 mins ago

ಓದುಗರ ಪತ್ರ:  ಸಾಮಾಜಿಕ ಬಹಿಷ್ಕಾರ ನಿಷೇಧ ಕಾನೂನು ಸ್ವಾಗತಾರ್ಹ

ರಾಜ್ಯದಲ್ಲಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ’ ಕಾನೂನನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರದ ಕ್ರಮ ಶ್ಲಾಘನೀಯ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾರ್ವಭೌಮತೆ,…

18 mins ago

ಓದುಗರ ಪತ್ರ:  ‘ರಾಮ ಜಪ’ ಮಸೂದೆ ತಿರಸ್ಕರಿಸಿ

ಬುದ್ಧನ ಚಿಂತನೆಗಳನ್ನು ಭಾರತದಿಂದ ಓಡಿಸಿದಂತೆ, ಮಹಾತ್ಮ ಗಾಂಧೀಜಿಯವರನ್ನು ಭಾರತೀಯರ ಮನಸ್ಸಿನಿಂದಿಂದಲೇ ತೆಗೆದುಹಾಕುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಕುತಂತ್ರ ಬಯಲಾಗಿದೆ.…

21 mins ago

‘ಮಾದಾರಿ ಮಾದಯ್ಯ’ ವರ್ತಮಾನದ ಅವಶ್ಯ ರಂಗ ಪ್ರಯೋಗ

ಮಹದೇವ ಶಂಕನಪುರ ಎಚ್.ಎಸ್.ಶಿವಪ್ರಕಾಶ್ ಅವರ ನಾಟಕ ‘ಮಾದಾರಿ ಮಾದಯ್ಯ’ ಕಳೆದ ೩೫ ವರ್ಷಗಳಿಂದಲೂ ಕನ್ನಡ ನೆಲದಲ್ಲಿ ಅಭಿನಯಿಸಲ್ಪಡುತ್ತಿದೆ. ಮೊದಲಿಗೆ ೧೯೯೦ರಲ್ಲಿ…

1 hour ago

ಅಯೋಧ್ಯೆಯಲ್ಲಿ ಗಣಪತಿ ಆಶ್ರಮ ಶಾಖೆ ಉದ್ಘಾಟನಾ ಕಾರ್ಯಕ್ರಮ

ಮೈಸೂರು: ದೇಶ-ವಿದೇಶಗಳಲ್ಲಿ ಜನ ಸಮೂಹವನ್ನು ಹೊಂದಿರುವ ಅವಧೂತ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನೂತನ ಶಾಖೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ…

4 hours ago

ಜನವರಿ.5ಕ್ಕೆ ಮೈಸೂರು ವಿವಿ 106ನೇ ಘಟಿಕೋತ್ಸವ

ಕುಲಪತಿ ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ೧೦೬ನೇ ಘಟಿಕೋತ್ಸವವನ್ನು ಜ.೫ರಂದುನಡೆಸಲು ತೀರ್ಮಾನಿಸಲಾಗಿದ್ದು, ಘಟಿಕೋತ್ಸವ…

4 hours ago