Andolana originals

ಓದುಗರ ಪತ್ರ: ಜಾತಿ ಗಣತಿ ವರದಿ: ಬಿಡುಗಡೆಯ ನಂತರ ಚರ್ಚೆಯಾಗಲಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಮಾತನ್ನು ನಾನು ಒಪ್ಪುತ್ತೇನೆ. ನಾನು ಕರ್ನಾಟಕ ವಿಧಾನಪರಿಷತ್ ಸದಸ್ಯನಾಗಿದ್ದಾಗ ಬಿಜೆಪಿ ಸರ್ಕಾರಕ್ಕೆ ಒಂದು ಸ್ಪಷ್ಟನೆ ನೀಡಿದ್ದೆ. ಆ ಸಂದರ್ಭದಲ್ಲಿ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿಯವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, “ಕಾಂತರಾಜು ಅಥವಾ ಸದಾಸಿದ ಕಮಿಟಿ ವರದಿ’ ಎಂಬ ಯಾವುದೇ ದಾಖಲೆಗಳು ಸರ್ಕಾರದಲ್ಲಿ ಇಲ್ಲ ಎಂದು ಹೇಳಿದ್ದರು. ಈ ಮಾತನ್ನು ಕೇಳಿದ ನನಗೆ ಸರ್ಕಾರಗಳು ಯಾವ ರೀತಿಯಾಗಿ ಆಡಳಿತ ನಡೆಸುತ್ತಿವೆ ಎಂಬ ಬಗ್ಗೆ ತಿಳಿದು ಆಘಾತವಾಯಿತು.

1931ರಲ್ಲಿ ಭಾರತದ ಜಾತಿಗಣತಿಯನ್ನು ಬ್ರಿಟಿಷ್ ಸರ್ಕಾರ ಮಾಡಿತ್ತು, ನಂತರ ಯಾವುದೇ ಸರ್ಕಾರಗಳು ಅದನ್ನು ಮಾಡಲಿಲ್ಲ. ಸಮಾಜವಾದಿ ಧುರೀಣ ದಿವಂಗತ ರಾಮ ಮನೋಹರ ಲೋಹಿಯಾ ಈ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಅವರ ಒತ್ತಾಯಕ್ಕೆ ಯಾರೂ ಓಗೊಡಲಿಲ್ಲ.

ಇದೀಗ ರಾಹುಲ್‌ ಗಾಂಧಿ ಮತ್ತು ಆರ್.ಎಸ್‌.ಎಸ್‌ನವರು ಕೂಡ ಜಾತಿಗಣತಿ ಆಗಬೇಕೆಂದು ಹೇಳಿದ್ದಾರೆ. ಕಾಂತರಾಜು ವರದಿ ಎಂದು ಬಿಂಬಿಸುತ್ತಿರುವ ಮತ್ತು 180 ಕೋಟಿ ರೂ. ವ್ಯಯ ಮಾಡಿ ಮಾಡಿರುವ ವರದಿಯನ್ನು ಬಿಡುಗಡೆ ಮಾಡಬೇಕಿದೆ. ಸರ್ಕಾರ ಮತ್ತು ಪ್ರತಿ ಪಕ್ಷಗಳು ವರದಿ ಬಿಡುಗಡೆಯಾದ ನಂತರ ಚರ್ಚೆಯಲ್ಲಿ ತೊಡಗಲಿ, ಬೇಕಿದ್ದರೆ ಆ ನಂತರ ಅದನ್ನು ತಿರಸ್ಕರಿಸಲಿ, ಇದಾಗದಿದ್ದಲ್ಲಿ ಎಲ್ಲ ವರದಿಗಳಿಗೆ ಅಂದರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸರ್ವೆಯ ವರದಿಗಳನ್ನು ಅಪಾರ್ಥ ಮಾಡಿದಂತಾಗುತ್ತದೆ. ಆ ವರದಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಜಾತಿ ಗಣತಿಯ ವರದಿ ಬಿಡುಗಡೆಯಾದರೆ ರವಿವರ್ಮ ಕುಮಾರ್, ದ್ವಾರಕನಾಥ್, ಜಯಪ್ರಕಾಶ್ ಇತರರ ಕಾಳಜಿಯಂತ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಅನುಕೂಲವಾಗುತ್ತದೆ.

-ಮೋಹನ್ ಕುಮಾರ್ ಕೊಂಡಜ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯ.

ಆಂದೋಲನ ಡೆಸ್ಕ್

Recent Posts

ಮೈಸೂರು | ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ!

ಮೈಸೂರು : ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆಯೇ ಮಚ್ಚು ಲಾಂಗುಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ…

2 hours ago

ಕೊಲ್ಕತ್ತಾದಲ್ಲಿ ಮೆಸ್ಸಿ ಮೇನಿಯಾ : ಫುಟ್‌ಬಾಲ್‌ ದಂತಕಥೆಗೆ ಭರ್ಜರಿ ಸ್ವಾಗತ

ಕೋಲ್ಕತ್ತಾ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.…

4 hours ago

ಟ್ರಂಪ್‌ ಸುಂಕ ಹೇರಿದ್ದ ರದ್ದಿಗೆ ಅಮೆರಿಕ ಸಂಸತ್ತು ನಿಲುವಳಿ

ನ್ಯೂಯಾರ್ಕ್‌ : ಭಾರತದ ಮೇಲೆ ಡೊನಾಲ್ಡ್‌ ಟ್ರಂಪ್‌ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…

4 hours ago

ಘೋರ ದುರಂತ | ಕರ್ತವ್ಯ ನಿರತ KSRTC ಮೇಲೆ ಹರಿದ ಲಾರಿ ; ಸ್ಥಳದಲ್ಲೇ ಸಾವು

ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…

5 hours ago

ಹವಾಮಾನ ಏರುಪೇರಿನಿಂದಾಗಿ ಕಾಳುಮೆಣಸಿಗೂ ಕಂಟಕ

ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್‌ ಡಿಸೋಜ ಮಡಿಕೇರಿ: ಈ ಬಾರಿಯ…

7 hours ago

ಅವಳಿ ತಾಲ್ಲೂಕುಗಳಲ್ಲಿ ಭತ್ತದ ಕಟಾವು ಜೋರು

ಭೇರ್ಯ ಮಹೇಶ್‌ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…

7 hours ago