ಓದುಗರ ಪತ್ರ
ಮೈಸೂರು ನಗರದ ರಿಂಗ್ ರಸ್ತೆಯಲ್ಲಿರುವ ಹಂಚ್ಯಾ-ಸಾತಗಳ್ಳಿ ‘ಬಿ’ ವಲಯದಲ್ಲಿ (ವಿಟಿಯು ಕಾಲೇಜು ಬಳಿ) ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸ್ಥಳೀಯ ನಿವಾಸಿಗಳಿಗೆ ಮತ್ತು ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ರಾತ್ರಿ ವೇಳೆಯಲ್ಲಿ ಒಂದೇ ಸಮನೇ ಎಲ್ಲಾ ಬೀದಿ ನಾಯಿಗಳು ಬೊಗಳುವುದರಿಂದ ಸಾರ್ವಜನಿಕರು ನೆಮ್ಮದಿಯಾಗಿ ನಿದ್ದೆ ಮಾಡಲಾಗುತ್ತಿಲ್ಲ.
ವಾಹನ ಸವಾರರನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಬರುವುದರಿಂದ ವಾಹನ ಸವಾರರು ವಾಹನದಿಂದ ಬಿದ್ದು ಗಾಯಗೊಂಡಿದ್ದಾರೆ. ಬೀದಿ ನಾಯಿಗಳು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿರುವುದರಿಂದ ಪೋಷಕರು ಹೆದರಿ ತಮ್ಮ ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಸಂಬಂಧಪಟ್ಟವರು ಕೂಡಲೇ ಬೀದಿ ನಾಯಿಗಳನ್ನು ನಗರದಿಂದ ಹೊರಗೆ ಸಾಗಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.
–ಪಿ.ಎಲ್. ನಾರಾಯಣ, ಹಂಚ್ಯಾ ಸಾತಗಳ್ಳಿ ‘ಬಿ’ ವಲಯ, ಮೈಸೂರು
ಮಂಡ್ಯ: ಪಕ್ಕದ ಊರಿಗೆ ಪೂಜೆಗೆಂದು ಹೋದ ಅರ್ಚಕ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದಲ್ಲಿ…
ತಾಣ..ಬಾಣ ! ಬೇಕಿದ್ದರೆ ಬಿಟ್ಟೇವು ಒಂದಲ್ಲ, ಎರಡು ದಿನ.. ಶಾಲಾ ತಾಣ! ಬಿಟ್ಟಿರುವುದು ಹೇಗೆ ? ಸಾಮಾಜಿಕ ಜಾಲತಾಣ ಎಂಬುದು…
ಮೈಸೂರಿನ ಬೋಗಾದಿ -ಗದ್ದಿಗೆ ಜೋಡಿ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ದಾಸನಕೊಪ್ಪಲು ಬಸ್ ನಿಲ್ದಾಣದ ಬಳಿ ಎರಡು ಕಡೆಯೂ ಒಂದು…
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸನಿಹದಲ್ಲಿ ಹರಿಯುವ ಕಪಿಲಾ ನದಿ ತೀರದಲ್ಲಿ ಪುಣ್ಯ ಸ್ನಾನ ಮಾಡುವವರು ಬಟ್ಟೆಗಳನ್ನು ಅಲ್ಲಿಯೇ ಬಿಟ್ಟು ಹೋಗುವುದರಿಂದ…
ಬಿಹಾರ ವಿಧಾನಸಭೆಗೆ ಚುನಾವಣೆ ನಡೆದು ಮೂರೂವರೆ ತಿಂಗಳಾಗುವಷ್ಟರಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಗೆ ಏಕಿಷ್ಟು ಆತುರ? ಏನು ಕಾರಣ ಎನ್ನುವುದಕ್ಕೆಲ್ಲ ಉತ್ತರ…
ಕೃಷ್ಣ ಸಿದ್ದಾಪುರ ತೋಟದ ಮಾಲೀಕನ ದೌರ್ಜನ್ಯಕ್ಕೆ ತುತ್ತಾದ ೮ ಕುಟುಂಬಗಳ ೨೬ ಮಂದಿ ರಕ್ಷಣೆ; ಸಾಬೀತಾಗದ ಆರೋಪ ಸಿದ್ದಾಪುರ: ವ್ಯವಸ್ಥೆಯಲ್ಲಿ ಶತಮಾನಗಳಿಂದ…