ಮಂಡ್ಯದಿಂದ ಚೆನ್ನೈಗೆ ಪ್ರಯಾಣಿಸಬೇಕಿತ್ತು. ‘ವಂದೇ ಭಾರತ್’ ರೈಲೇರಿ ನನ್ನ ಮೇಜಿನ ಬಳಿ ಬಂದಾಗ ಬರೀ ಇಂಗ್ಲಿಷ್ ಮತ್ತು ತಮಿಳು ದಿನಪತ್ರಿಕೆಗಳು ಕಣ್ಣಿಗೆ ಬಿದ್ದವು.
ಕಾಫಿ, ಟೀ, ದಿನಪತ್ರಿಕೆ, ನೀರಿನ ಬಾಟಲಿ, ಬೆಳಗಿನ ತಿಂಡಿ, ಪ್ರಯಾಣ ದರ ಎಲ್ಲಾ ಸೇರಿ ೧,೧೫೯ ರೂ. ತೆಗೆದುಕೊಳ್ಳುತ್ತಾರೆ (ಪ್ಯಾಸೆಂಜರ್ ರೈಲಿನಲ್ಲಿ ೧೬೫ ರೂ. ಮಾತ್ರ, ೨ ಗಂಟೆ ಹೆಚ್ಚುವರಿ ಪಯಣಿಸಬೇಕಷ್ಟೆ) ಆದರೆ ಕನ್ನಡ ದಿನಪತ್ರಿಕೆ ಕೊಟ್ಟಿರಲಿಲ್ಲ. ನಾನು ಅಲ್ಲಿದ್ದ ರೈಲ್ವೆ ಸಿಬ್ಬಂದಿ ಯನ್ನು ಕೇಳಿದೆ. ಅದಕ್ಕೆ ಅವರು ಇಲ್ಲಿಯವ ರೆಗೆ ಯಾರೂ ಕನ್ನಡ ದಿನಪತ್ರಿಕೆ ಕೇಳಿಲ್ಲ. ನೀವೇ ಮೊದಲು ಕೇಳಿದ್ದು ಅಂದರು. ಆದ್ದರಿಂದ ಕನ್ನಡದ ದಿನಪತ್ರಿಕೆ ಅದರಲ್ಲೂ ಸಮಾಜದಲ್ಲಿ ಸಮಾನತೆ ಮತ್ತು ವೈಚಾರಿಕತೆ ಬೆಳೆಸಲು ಕೈ ಜೋಡಿಸಿರುವ ಮೈಸೂರು ಭಾಗದ ‘ಆಂದೋಲನ’ ದಿನಪತ್ರಿಕೆಯನ್ನು ಒದಗಿಸಬೇಕು ಎಂದು ಮಂಡ್ಯ ರೈಲು ನಿಲ್ದಾಣದಲ್ಲಿ ಮನವಿ ಮಾಡುವುದಕ್ಕೆ ಒಡನಾಡಿಗಳ ಜೊತೆ ವಾಟ್ಸಾಪ್‌ನಲ್ಲಿ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಂಡಿದ್ದೇವೆ.
-ಅಭಿ ಒಕ್ಕಲಿಗ, ನಾವು ದ್ರಾವಿಡ ಕನ್ನಡಿಗರು ಚಳವಳಿ, ಮಂಡ್ಯ.
ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…
ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ…
ಚಾಮರಾಜನಗರ ಜಿಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ರೂ.೫೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಮಕ್ಕಳು ದೊಡ್ಡ ಹುದ್ದೆಗಳಿಗೆ ಹೋದರೂ ತನ್ನ ಕಾಯಕ ಮುಂದುವರಿಸಿರುವ ‘ಮಹಾತಾಯಿ’ ತೆಲಂಗಾಣದ ಸಂಗಾರೆಡ್ಡಿಯ ರಾಕೇಶ್…
ಪುನೀತ್ ಮಡಿಕೇರಿ ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ…
ಮಹೇಂದ್ರ ಹಸಗೂಲಿ ದೇಪಾಪುರದಲ್ಲಿ ಗುಡಿಸಲಿನಲ್ಲಿ ಆರಂಭವಾದ ಅನ್ನ ದಾಸೋಹಕ್ಕೆ ಈಗ ದಾಸೋಹ ಭವನದ ರೂಪ ಗುಂಡ್ಲುಪೇಟೆ: ಸಣ್ಣ ಗುಡಿಸಲಿನಲ್ಲಿ ಆರಂಭಗೊಂಡ…