ಸಾಲೋಮನ್
ಸೊಳ್ಳೆ, ದುರ್ವಾಸನೆ, ರೋಗದ ಭೀತಿ
ದೂರು ಕೊಟ್ಟರೂ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ
೫ ವರ್ಷದಿಂದ ಚರಂಡಿಯಲ್ಲಿ ಹರಿಯುತ್ತಿದೆ ಬೋರ್‌ವೆಲ್ ನೀರು
ಮೈಸೂರು: ಈ ಸಾಲಿನ ಸ್ವಚ್ಛ ಸರ್ವೇಕ್ಷಣ್‌ಗೆ ಸಿದ್ಧಗೊಳ್ಳುತ್ತಿದ್ದೇವೆ ಎನ್ನುವ ಪಾಲಿಕೆ ಅಧಿಕಾರಿಗಳು ನಗರದ ಹೃದಯ ಭಾಗದ ಪ್ರಮುಖ ರಸ್ತೆಗಳ ಕಡೆ ಮಾತ್ರ ಗಮನಹರಿಸುತ್ತಿzರೆ. ಆದರೆ, ಬಡಾವಣೆಗಳಲ್ಲಿ ಅನೈರ್ಮಲ್ಯ ಇದ್ದೇ ಇದೆ ಎಂದು ಸಾರ್ವಜನಿಕರು ಆಕೋಶ ವ್ಯಕ್ತಪಡಿಸಿದ್ದಾರೆ.
ಮಳೆ ನೀರು ಚರಂಡಿಗೆ ಒಳಚರಂಡಿ ನೀರು ಸೇರಿ ಕೊಳೆತು ನಾರುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಮೈಸೂರಿನ ರಾಮಕೃಷ್ಣನಗರ ಬಡಾವಣೆಯ ಜೆ ಬ್ಲಾಕ್‌ನಲ್ಲಿ ಹಾದು ಹೋಗಿರುವ ಮಳೆ ನೀರು ಚರಂಡಿಗೆ ಮಳೆ ನೀರಿಗಿಂತಲೂ ಕಳೆದ ೫ ವರ್ಷಗಳಿಗೂ ಹೆಚ್ಚು ಕಾಲದಿಂದ ಬೋರ್‌ವೆಲ್ ನೀರು ಹರಿಯುತ್ತಿದೆ. ಇದರ ಜೊತೆಗೆ ಈ ಬಡಾವಣೆಯ ಒಳಚರಂಡಿ ನೀರಿನ ಪೈಪ್ ಒಡೆದು ಅನೇಕ ತಿಂಗಳಿಂದ ಇದೇ ಚರಂಡಿಗೆ ಸೇರುತ್ತಿದೆ.
ಈ ನೀರು ಕೂಡ ಸರಿಯಾಗಿ ಹರಿಯದ ಕಾರಣ ಇಡೀ ಚರಂಡಿ ಕೊಳೆತು ನಾರುತ್ತಿದೆ. ಚರಂಡಿಯಲ್ಲಿ ಕೇವಲ ಒಳಚರಂಡಿ ನೀರು ಮಾತ್ರ ಸೇರುತ್ತಿಲ್ಲ, ಸಾರ್ವಜನಿಕರು ಮನೆ ಕಸವನ್ನೂ ನಿತ್ಯ ಚರಂಡಿಗೆ ಬಿಸಾಡುತ್ತಿರುವುದರಿಂದ ಚರಂಡಿಯಲ್ಲಿ ನೀರು ನಿಂತು, ಸೊಳ್ಳೆ, ನೊಣಗಳ ಹಾವಳಿ ಮಿತಿ ಮೀರಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ.
ಸ್ಥಳೀಯರ ಪಾಡು ಹೇಳ ತೀರದು:
ರಾಮಕೃಷ್ಣ ನಗರ ಜೆ ಬ್ಲಾಕ್‌ನಲ್ಲಿ ನಿರ್ಮಿಸಿರುವ ಮಳೆ ನೀರು ಚರಂಡಿಗೆ ಸೇರಿದಂತೆ ವಾಸ ಮಾಡುತ್ತಿರುವವರ ಹಾಗೂ ಹತ್ತಿರದ ಇರುವ ಮನೆಗಳಲ್ಲಿ ವಾಸಿಸುವವರ ಪಾಡು ಹೇಳ ತೀರದು. ಅದರಲ್ಲೂ ಬೇಸಿಗೆಯಲ್ಲಿ ನರಕಯಾತನೆ. ಯಾವಾ ಗಲೂ ಬಾಗಿಲು, ಕಿಟಕಿ ಮುಚ್ಚಿಕೊಂಡೇ ಇರಬೇಕು. ಸೆಖೆ ಎಂದು ಬಾಗಿಲು ತೆರೆದರೆ ಸೊಳ್ಳೆಗಳು ಹಿಂಡು ಹಿಂಡಾಗಿ ಮನೆಗೆ ದಾಳಿ ಮಾಡುತ್ತವೆ. ಯಾವಾಗಲೂ ದುರ್ವಾಸನೆ ಬರುತ್ತದೆ.
ಸೊಳ್ಳೆಕಾಟ, ಈ ಕೆಟ್ಟ ವಾಸನೆಯಿಂದ ಯಾವ ರೋಗ ಬರುತ್ತೋ ಎಂಬ ಆತಂಕದ ಜೀವಿಸುತ್ತಿದ್ದೇವೆ. ಪಾಲಿಕೆಯವರಿಗೆ ಫೋನ್ ಮಾಡಿದರೆ ಸ್ಪಂದಿಸುತ್ತಿಲ್ಲ. ಇದೆಲ್ಲ ನಮ್ಮ ಕರ್ಮ ಎಂದುಕೊಂಡು ಅಸಹಾಯಕರಾಗಿದ್ದೇವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
” ಈ ವಿಚಾರ ನನಗೆ ಈಗಷ್ಟೇ ಗೊತ್ತಾಗಿರುವುದು. ಕೆಲವು ದಿನಗಳ ಹಿಂದಷ್ಟೇ ಅಧಿಕಾರವಹಿಸಿಕೊಂಡಿದ್ದೇನೆ. ಸಾರ್ವಜನಿಕರ ಸಮಸ್ಯೆ ಬಗ್ಗೆ ಖಂಡಿತ ಗಮನ ಕೊಡುತ್ತೇನೆ. ಆದಷ್ಟು ಬೇಗ ಪರಿಹರಿಸುತ್ತೇನೆ.”
ಶಿಲ್ಪ ಶರತ್, ಇಇ, ಒಳಚರಂಡಿ ವಿಭಾಗ, ಮಹಾನಗರ ಪಾಲಿಕೆ
” ಕಳೆದ ಐದಾರು ತಿಂಗಳಿಂದ ಇಲ್ಲಿ ಚರಂಡಿ ನೀರಿನ ಪೈಪ್ ಒಡೆದು ಕೊಳಚೆ ನೀರು ಚರಂಡಿಗೆ ಸೇರುತ್ತಿದೆ. ವಿಪರೀತ ಸೊಳ್ಳೆ ಹಾಗೂ ದುರ್ನಾತ, ಮನೆಯಲ್ಲಿ ಇರುವುದಕ್ಕೇ ಕಷ್ಟವಾಗಿದೆ. ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಸಮಸ್ಯೆಯನ್ನು ನಿವಾರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.”
ಹರ್ಷಿತ, ಸ್ಥಳೀಯರು
” ಕಳೆದ ಹದಿನೈದು ವರ್ಷಗಳಿಂದಲೂ ಇದ್ದೇವೆ, ಈ ರೀತಿಯ ಸಮಸ್ಯೆ ಇರಲಿಲ್ಲ. ಕೊಳಚೆ ನೀರು ಚರಂಡಿಯಲ್ಲಿ ಹರಿಯಲು ಆರಂಭವಾದಾಗಿನಿಂದ ಅನೇಕ ಸಮಸ್ಯೆಗಳು, ಈ ಭಾಗದಲ್ಲಿರುವ ಹಿರಿಯರಿಗೆ ಆರೋಗ್ಯ ಕೆಡುತ್ತಿದೆ. ಪಾಲಿಕೆ ಸದಸ್ಯರಾಗಿದ್ದವರು ನಮ್ಮ ಫೋನ್ ತೆಗೆಯುತ್ತಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ.”
ವಿಜಯ ರಾಧಾಕೃಷ್ಣ, ಸ್ಥಳೀಯರು
ಬೆಳಗಾವಿ: ರಾಜ್ಯದಲ್ಲಿ ಶೀಘ್ರದಲ್ಲೇ ಅರ್ಹರಿಗೆ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಘೋಷಣೆ…
ಬೆಂಗಳೂರು: ನಾಳೆ ನಟ ದರ್ಶನ್ ಅಭಿನಯದ ಡೆವಿಲ್ ಚಿತ್ರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜೈಲಿನಿಂದಲೇ ಅಭಿಮಾನಿಗಳಿಗೆ ನಟ ದರ್ಶನ್…
ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನ ಗೌಡನಕಟ್ಟೆಯಲ್ಲಿ ತಾಯಿಯೊಂದಿಗೆ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಹುಣಸೂರು…
ಓದುಗರ ಪತ್ರ: ಅದಲು-ಬದಲು...! ಬೆಂಗಳೂರಿನಿಂದ ಬೆಳಗಾವಿಗೆ ಬಲುದೂರ ದೂರ ಬಂತು ಚಳಿಗಾಲದ ಅಧಿವೇಶನ ! ವಿಧಾನ ಸೌಧದಿಂದ ಸುವರ್ಣ ಸೌಧಕ್ಕೆ…
ಮೈಸೂರಿನ ಶ್ರೀರಾಂಪುರ ಬಡಾವಣೆ ಎರಡನೇ ಹಂತದಲ್ಲಿ ಎಸ್‌ಬಿಎಂ ಕಾಲೋನಿಯಲ್ಲಿರುವ ನಂದಿನಿ ಹಾಲಿನ ಕೇಂದ್ರದ ಎದುರಿನ ಚರಂಡಿಯಲ್ಲಿ ಕಸ ಕಡ್ಡಿಗಳು ತುಂಬಿದ್ದು,…
ಮೈಸೂರಿನ ಮೆಟ್ರೋ ಪೋಲ್ ವೃತ್ತದ ಹತ್ತಿರ (ಮಹಾರಾಣಿ ಕಾಲೇಜು) ಮತ್ತು ಗಂಡಭೇರುಂಡ ಉದ್ಯಾನವನದ ಮುಂಭಾಗದಲ್ಲಿ ಹಾಗೂ ಕುವೆಂಪುನಗರದ ಉದಯರವಿ ರಸ್ತೆಯಲ್ಲಿ…