ಯುಗಾದಿ ಮುನ್ನವೇ ಮಳೆಯ ಸಿಂಚನಕ್ಕೆ ಅಧಿಕಾರಿಗಳ ಮನದಲ್ಲಿ ಸಂತಸ; ಒಂದೂವರೆ ತಿಂಗಳಿನಿಂದ ಒಣಗಿದ್ದ ಕುರುಚಲು ಗಿಡಗಳಿಗೆ ನೀರಿನ ಆಸರೆ
ಕೆ. ಬಿ. ರಮೇಶನಾಯಕ
ಮೈಸೂರು: ತೀವ್ರ ಬಿಸಿಲಿನಿಂದ ಒಣಗಿದ್ದ ಅಭಯಾರಣ್ಯ ಪ್ರದೇಶಗಳಲ್ಲಿ ಭಾನುವಾರದಿಂದ ಸತತವಾಗಿ ೩ ದಿನಗಳು ಉತ್ತಮವಾದ ಮಳೆಯಾಗಿದ್ದು, ವನ್ಯಜೀವಿಗಳಿಗೆ ಕಾಡಿದ್ದ ಕುಡಿಯುವ ನೀರಿನ ಆತಂಕ ಸ್ವಲ್ಪ ದಿನಗಳ ಮಟ್ಟಿಗೆ ದೂರವಾಗಿದೆ.
ಕಾಡಿನಲ್ಲಿ ಇರುವ ಕೆರೆಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕೆಲಸ ಮಾಡಲಾಗಿತ್ತಾದರೂ ಮೂರು ದಿನಗಳು ಬಿದ್ದ ಮಳೆಯಿಂದಾಗಿ ಕೆರೆಗಳಿಗೆ ನೀರು ಸೇರುವ ಜತೆಗೆ ಒಣಗಿದ್ದ ಕುರುಚಲು ಗಿಡಗಳಿಗೆ ನೀರಿನ ಆಸರೆಯಾಗಿದೆ. ಅದರಲ್ಲೂ ಮಲೆಮಹದೇಶ್ವರ ಬೆಟ್ಟ, ಬಿಆರ್‌ಟಿ ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶಗಳಲ್ಲಿ ಮಳೆಯಾಗಿರುವುದು ಅಽಕಾರಿಗಳಲ್ಲಿದ್ದ ಆತಂಕವನ್ನು ಕಡಿಮೆ ಮಾಡಿದೆ.
ಬೇಸಿಗೆ ಕಾಲ ಆಗಮನವಾಗುತ್ತಿದ್ದಂತೆ ಕಾಡಿನಲ್ಲಿ ಮರಗಿಡಗಳು ಒಣಗಿ, ಕೆರೆಕಟ್ಟೆಗಳು ಬರಿದಾಗಿ ವನ್ಯಜೀವಿಗಳು ಆಹಾರ, ನೀರು ಹುಡುಕಿಕೊಂಡು ನಾಡಿನತ್ತ ಬರುತ್ತಿದ್ದವು. ಅದರಲ್ಲೂ ಆನೆ, ಜಿಂಕೆ, ಹುಲಿ, ಚಿರತೆ ಮೊದಲಾದ ಪ್ರಾಣಿಗಳಿಗೆ ನೀರು ಸಿಗುವಂತೆ ಮಾಡಲು ಕೆರೆಗಳಿಗೆ ನೀರು ತುಂಬಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿತ್ತು. ಆದರೆ, ಯುಗಾದಿ ಹಬ್ಬಕ್ಕೆ ೧೦ ದಿನಗಳು ಇರುವಂತೆಯೇ ಮಳೆಯ ಆಗಮನವಾಗಿರುವುದು ಗಮನಾರ್ಹವಾಗಿದೆ.
ನಾಗರಹೊಳೆ ಪ್ರದೇಶದಲ್ಲಿ ಉತ್ತಮ ಮಳೆ: ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯ ವೀರನಹೊಸಹಳ್ಳಿ, ಮತ್ತಿಗೋಡು, ಅಂತರಸಂತೆ, ಕಲ್ಲಹಳ್ಳ ಬಳಿ ಉತ್ತಮ ಮಳೆಯಾಗಿದ್ದರೆ, ಬಂಡೀಪುರ ಭಾಗದಲ್ಲಿ ಒಂದು ಸೆಂ. ಮೀಟರ್, ಮಲೆಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಎರಡು ಸೆಂ. ಮೀಟರ್ ಮಳೆಯಾಗಿದೆ ಎಂದು ಹೇಳಲಾಗಿದೆ. ಸೋಮವಾರ ಸಂಜೆ ಸುರಿದ ಮಳೆಯು ಕಟ್ಟೆಗಳಿಗೆ ನೀರು ಹರಿದು ಬಂದಿದ್ದು, ಮರಗಿಡಗಳು, ಕುರುಚಲುಗಿಡಗಳಿಗೆ ನೀರು ಸಿಕ್ಕಿರುವುದರಿಂದ ಹಸಿರುಕಾಣಿಸಿಕೊಳ್ಳಲು ದಾರಿಯಾಗಿದೆ. ಒಂದೇ ಮಳೆಗೆ ಕನಿಷ್ಠ ಹತ್ತು ದಿನಗಳ ಕಾಲ ಹಸಿರಿನಿಂದ ಕೂಡಿರುವ ಜತೆಗೆ ಜಿಂಕೆ, ಆನೆಗಳು, ಕಡವೆ, ಹುಲಿಗಳಿಗೆ ನೀರು ಅಲ್ಲಲ್ಲಿ ದೊರೆಯಲಿದೆ ಎಂದು ಎಸಿಎಫ್ ಲಕ್ಷ್ಮೀಕಾಂತ್ ಹೇಳುತ್ತಾರೆ.
ಕಾಡ್ಗಿಚ್ಚಿನ ಪ್ರಕರಣ ಇಲ್ಲ
ಕಳೆದ ಒಂದೂವರೆ ತಿಂಗಳಿಂದ ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಒಂದೇ ಒಂದು ಕಾಡ್ಗಿಚ್ಚಿನ ಪ್ರಕರಣ ಸಂಭವಿಸಿಲ್ಲ. ಬೇಸಿಗೆ ಕಾಲದಲ್ಲಿ ಉಂಟಾಗುವ ಕಾಡ್ಗಿಚ್ಚು ಅಥವಾ ದುಷ್ಕರ್ಮಿಗಳ ಕೃತ್ಯದಿಂದ ಕಾಡಂಚಿನ ಪ್ರದೇಶಗಳಿಗೆ ಬೆಂಕಿ ಬೀಳದಂತೆ ತಂಡಗಳನ್ನು ರಚನೆ ಮಾಡಿ ವಿಶೇಷ ನಿಗಾ ಇಡಲಾಗಿತ್ತು. ಅಲ್ಲಲ್ಲಿ ಫೈರ್‌ಲೈನ್ ಮಾಡಿಕೊಂಡು ನೀರನ್ನು ಸಿಂಪಡಿಸುವ ಕೆಲಸ ಮಾಡಿದ್ದರಿಂದ ಅರಣ್ಯ ಇಲಾಖೆ ಅಽಕಾರಿಗಳ ಯೋಜನೆ ಸಫಲವಾಗಿದೆ. ಇದಕ್ಕಾಗಿ ಅಗ್ನಿಶಾಮಕ ವಾಹನ ಮಾದರಿಯಲ್ಲಿಯೇ ಲಘು ವಾಹನ ತಯಾರಿಸಿ, ಇದರ ಬಳಕೆ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗಿತ್ತು ಎಂದು ಎಸಿಎ- ಲಕ್ಷ್ಮೀಕಾಂತ್ ಹೇಳಿದ್ದಾರೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಗ್ನಿಶಾಮಕ ವಾಹನ ಬರುವುದು ತಡವಾಗುತ್ತದೆ. ಅಲ್ಲದೆ, ಕಿರಿದಾದ ಮತ್ತು ತಗ್ಗು ಪ್ರದೇಶಗಳಲ್ಲಿ ಸಂಚಾರ ಅಸಾಧ್ಯ. ಹೀಗಾಗಿ, ಇಲಾಖೆ ಈ ಬಾರಿ ಹೊಸ ಪ್ರಯೋಗಕ್ಕೆ ಮುಂದಾಗಿ, ರಾಷ್ಟ್ರೀಯ ಉದ್ಯಾನಗಳ ಉಪ ವಿಭಾಗಗಳಿಗೆ ತಲಾ ಒಂದೊಂದು ವಾಹನ ಸಿದ್ಧಪಡಿಸಿಕೊಂಡು ಇದರಲ್ಲಿ ೨ ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲಾಗಿತ್ತು. ಇದಕ್ಕೆ ಪಂಪ್ ಜೋಡಿಸಲಾ ಗಿದ್ದು, ಇದು ಸುಮಾರು ೫೦ ಮೀಟರ್ ದೂರಕ್ಕೆ ನೀರು ಚಿಮ್ಮಿಸುವ ಸಾಮರ್ಥ್ಯ ಹೊಂದಿದೆ.
ಸೋಮವಾರ, ಮಂಗಳವಾರ ಮಳೆ ಬಿದ್ದಿರುವುದರಿಂದ ಒಂದಿಷ್ಟು ನೀರು ಕೆರೆಗಳಿಗೆ ಬಂದು ಸೇರಿದೆ. ಇದರಿಂದಾಗಿ ಕನಿಷ್ಠ ಹತ್ತು ದಿನಗಳ ಮಟ್ಟಿಗೆ ಅನುಕೂಲವಾಗುವ ಜತೆಗೆ ಹಸಿರು ಕಾಣಿಸಿಕೊಳ್ಳಲು ನೆರವಾಗಿದೆ. ಮುಂದಿನ ದಿನಗಳಲ್ಲಿ ಸ್ವಲ್ಪ ಸ್ವಲ್ಪ ಬಿದ್ದರೂ ಹಸಿರುಪ್ರದೇಶಗಳಿಗೆ ಅನುಕೂಲವಾಗಲಿದೆ. -ಲಕ್ಷ್ಮೀಕಾಂತ್,ಎಸಿಎಫ್
ನವೀನ್ ಡಿಸೋಜ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಉತ್ತಮವಾಗಿರಲಿದೆ ಎಂಬ ಮಾಹಿತಿ…
ನಂಜನಗೂಡು : ನಂಜುಡಪ್ಪ ಗೂಳಿ ಅಂತಲೇ ಪ್ರಸಿದ್ದಿಯಾಗಿದ್ದ ಹರಕೆಯ ಗೂಳಿಯೊಂದು ಸಾವನ್ನಪ್ಪಿದೆ. ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸುತ್ತಮುತ್ತ…
ಪಾನ್ ಇಂಡಿಯಾ ಚಿತ್ರಗಳ ನಿರ್ಮಾಣ, ಪ್ರಚಾರ, ಪ್ರಯೋಗದಲ್ಲಿ ನಮ್ಮವರು, ಅವರು ಸೋಲು-ಗೆಲುವುಗಳೇನೇ ಇರಲಿ, ಅಲ್ಲೊಂದು ಇಲ್ಲೊಂದು ವರ್ತಮಾನ ಕನ್ನಡ ಚಿತ್ರೋದ್ಯಮದ…
ಶಿವಮೊಗ್ಗದಿಂದ ಮೈಸೂರಿಗೆ ಪ್ರತಿನಿತ್ಯ ಸಂಚರಿಸುವ ಮೈಸೂರು ಇಂಟರ್ ಸಿಟಿ ಎಕ್ಸ್‌ಪ್ರೆಸ್ (೧೬೨೦೫)ರೈಲು ಪ್ರತಿನಿತ್ಯ ಸಂಜೆ ೪. ೫೦ಕ್ಕೆ ಶಿವಮೊಗ್ಗದಿಂದ ಹೊರಟು…
ಜಾತಿ ಗಣತಿ ವರದಿ ನೋಡಿದಾಗ ಇದು ಧರ್ಮ ಗಣತಿಯೋ, ಜಾತಿ ಗಣತಿಯೋ ಎನ್ನುವುದು ತಿಳಿಯುತ್ತಿಲ್ಲ. ಹಾಗಾಗಿ ಸ್ವ ಇಚ್ಛೆಯಿಂದ ಹೇಗೆ…
ಮಂಜು ಕೋಟೆ ಎಚ್. ಡಿ. ಕೋಟೆ: ಮುಜರಾಯಿ ಇಲಾಖೆಯ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನದ ಲಕ್ಷಾಂತರ ರೂ. ಬೆಲೆಬಾಳುವ ರಥ…