ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ ಹಂತಕ್ಕೆ ಬಂದಿದ್ದು, ಇಷ್ಟರಲ್ಲೇ ಮೇಲ್ಸೇತುವೆ ಕಾಮಗಾರಿ ಪ್ರಾರಂಭ ಆಗುವ ಲಕ್ಷಣ ಕಾಣುತ್ತಿದೆ.
ಮೇಲ್ಸೇತುವೆಗೆ ಗ್ರಾಮದ ಹೆದ್ದಾರಿ ಬದಿಯಲ್ಲಿ ೧.೨೭ ಹೆಕ್ಟೇರ್ ಭೂಮಿಯನ್ನು ಮುಂಚೆ ಸ್ವಾಧಿನ ಮಾಡಲಾಗಿದ್ದು, ಮುಂದು ವರಿದು ಈ ಮಧ್ಯೆ ಇನ್ನೂ ೦.೬ ಹೆಕ್ಟೇರ್ ಸ್ವಾಧಿನ ಆಗಿದೆ. ಬದನಗುಪ್ಪೆ ಎಲ್ಲೆಯ ೩೧, ಮುತ್ತಿಗೆ ಎಲ್ಲೆಯ ೩೯ ಸೇರಿ ಒಟ್ಟು ೭೦ ಮಂದಿಗೆ ಸೇರಿದ ಜಾಗವನ್ನು ಸ್ವಾಧಿನ ಮಾಡಿಕೊಳ್ಳಲಾಗಿದೆ. ೧,೨, ೩ ಹೀಗೆ ಬೆರಳೆಣಿಕೆಯಷ್ಟು ಗುಂಟೆ ಲೆಕ್ಕದಲ್ಲಿ ಬಹುತೇಕ ರೈತರ ಜಮೀನು ಹಾಗೂ ಮನೆಗಳ ಅಲ್ಪಸ್ವಲ್ಪ ಜಾಗ ಮೇಲ್ಸೇತುವೆಗೆ ಸ್ವಾಧಿನ ಆಗಿದೆ.
ಬದನಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ ಸ್ವಾಧಿನ ಆಗಿರುವ ಭೂಮಿಗೆ ಪ್ರತಿ ಎಕರೆಗೆ ೭೮ ಲಕ್ಷ ರೂ.ನೀಡಲಾಗಿದ್ದು ಅದೇ ಮಾದರಿಯಲ್ಲಿ ದರ ನಿಗದಿ ಮಾಡಬೇಕು ಎಂಬುದು ಭೂಮಿ ಕಳೆದುಕೊಂಡವರ ಬೇಡಿಕೆ. ಅಷ್ಟು ದರ ನಿಗದಿ ಸಾಧ್ಯವಿಲ್ಲ. ಅದು ಕೈಗಾರಿಕಾ ಪ್ರದೇಶ. ಅಲ್ಲಿಗೂ ಇಲ್ಲಿಗೂ ತಾಳೆ ಮಾಡಲಾಗದು ಎಂಬುದು ಜಿಲ್ಲಾಡಳಿತದ ಅಭಿಪ್ರಾಯ. ಕೈಗಾರಿಕಾ ಪ್ರದೇಶಕ್ಕೂ ಮೇಲ್ಸೇತುವೆ ಸ್ಥಳಕ್ಕೂ ಎರಡ್ಮೂರು ಕಿ.ಮೀ. ಅಂತರವಷ್ಟೇ ಇದ್ದು, ಅಷ್ಟೇ ದರ ನೀಡುವಂತೆ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮೇಲೆ ಪ್ರತಿಭಟನೆ ನಡೆಯುತ್ತಲೇ ಇದೆ. ದರ ನಿಗದಿಯ ಕಗ್ಗಂಟಿನ ಕಾರಣಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಬಹಳ ದಿನಗಳಿಂದ ಮುಂದೂಡಿಕೆ ಆಗುತ್ತಲೇ ಇದ್ದು ಸದ್ಯದಲ್ಲೇ ಸೂಕ್ತ ದರ ನಿಗದಿ ಮಾಡಿ ಇದಕ್ಕೆ ಸುಖಾಂತ್ಯ ಹಾಡಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
” ಭೂಸ್ವಾಧಿನ ಮಾಡಲಾಗಿರುವ ಭೂಮಿಗೆ ಹೆಚ್ಚಿನ ದರ ನೀಡಬೇಕು, ಮೇಲ್ಸೇತುವೆ ಬಳಿ ಅಂಡರ್ ಪಾಸ್ ಮಾಡಿ ಅಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಒತ್ತಾಯ.”
-ಬಸವಣ್ಣ, ರೈತ ಸಂಘದ ಜಿಲ್ಲಾ ಅಧ್ಯಕ್ಷರು
” ಭೂಮಿಗೆ ನಿಗದಿತ ದರಕ್ಕಿಂತ ಹೆಚ್ಚು ಬೆಲೆ ಸೇರಿದಂತೆ ಅಂಡರ್ ಪಾಸ್ ಮತ್ತು ಬಸ್ ನಿಲ್ದಾಣ ನಿರ್ಮಾಣ ಸಂಬಂಧದ ಅವರ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದ್ದು, ಈ ವಾರದಲ್ಲಿ ಈ ಸಂಬಂಧ ಸಭೆ ಮಾಡಲಿದ್ದಾರೆ.
-ಜವರೇಗೌಡ, ಅಪರ ಜಿಲ್ಲಾಧಿಕಾರಿ
ಈ ಮಾರ್ಗದಲ್ಲಿ ೧೩ ಕಿ.ಮೀ. ಡಾಂಬರೀಕರಣ:
ಚಾ.ನಗರ-ನಂಜನಗೂಡು ಹೆದ್ದಾರಿಯ ಡಾಂಬರೀಕರಣ ಕಾಮಗಾರಿಯನ್ನು ಬೆಂಡರವಾಡಿಯಿಂದ ನಗರದ ಸಂತೇಮರಹಳ್ಳಿ ವೃತ್ತದ ತನಕ ಸುಮಾರು ೧೩ ಕಿ.ಮೀ.ವರೆಗೆ ಕೈಗೆತ್ತಿಕೊಳ್ಳಲಾಗಿದೆ. ಹೆದ್ದಾರಿ ಪ್ರಾಧಿಕಾರದಿಂದ ದುರಸ್ತಿ ಕಾರ್ಯ ಮಾಡಲಾಗುತ್ತಿದ್ದು, ಬಹುತೇಕ ಡಾಂಬರೀಕರಣ ಮುಗಿದಿದೆ. ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳವಾದ ಪಣ್ಯದಹುಂಡಿ ಹಾಗೂ ಆಸುಪಾಸಿನ ಸ್ಥಳದಲ್ಲಿ ಡಾಂಬರೀಕರಣ ಬಾಕಿ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಳವಳ್ಳಿ ಎಇಇ ರೇಣುಕಾ ಮಾಹಿತಿ ನೀಡಿದರು.
ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…
ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…
ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…
ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…
ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…
ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…