Andolana originals

ಕುಶಾಲನಗರ ಪುರಸಭೆ ನೂತನ ಕಚೇರಿಗೆ ಉದ್ಘಾಟನೆ ಭಾಗ್ಯ

ಹಲವು ವರ್ಷಗಳ ಕನಸು ಶಾಸಕರಿಂದ ನನಸು: ೭ ಕೋಟಿ ರೂ.ವೆಚ್ಚದ ಕಟ್ಟಡ ಇಂದು ಲೋಕಾರ್ಪಣೆ

ಕೆ.ಬಿ. ಶಂಶುದ್ದೀನ್

ಕುಶಾಲನಗರ: ಪುರಸಭೆಯ ನೂತನ ಕಚೇರಿ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯ ದೊರೆತಿದ್ದು, ಕುಶಾಲನಗರ ಜನತೆಯ ಹಲವು ವರ್ಷಗಳ ಕನಸನ್ನು ಡಾ. ಮಂಥರ್ಗೌಡ ನನಸು ಮಾಡಿದ್ದಾರೆ. ಹಲವು ವರ್ಷ ಗಳಿಂದ ನನೆಗುದಿಗೆ ಬಿದ್ದಿದ್ದ ಕುಶಾಲನಗರ ಪುರಸಭೆ ಕಚೇರಿ ಕಟ್ಟಡ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು, ಬುಧವಾರ ಲೋಕಾರ್ಪಣೆ ಗೊಳ್ಳಲಿದೆ.

ಕುಶಾಲನಗರ ಪುರಸಭೆ ಕಟ್ಟಡದಲ್ಲಿ ವಾಣಿಜ್ಯ ಸಂಕೀರ್ಣ ವ್ಯವಸ್ಥೆಯ ಕನಸು ಹಲವು ವರ್ಷಗಳದ್ದು. ಇದೀಗ ಅದು ಸಾಕಾರಗೊಂಡಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪುರಸಭೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಕೆಲಸ, ಕಾರ್ಯಕ್ಕೆ ಮುನ್ನುಡಿ ಬರೆಯಲು ಆಡಳಿತ ಮಂಡಳಿ ಸಜ್ಜಾಗಿದೆ. ನಗರದ ಹೃದಯ ಭಾಗದಲ್ಲಿರುವ ನೂತನ ಪುರಸಭೆ ಕಚೇರಿ ಕಟ್ಟಡ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಉದ್ಘಾಟನೆಗೆ ಕಾಲ ಕೂಡಿ ಬಂದಿರುವುದು ಕುಶಾಲನಗರದ ಜನತೆಯಲ್ಲಿ ಸಂತಸ ಮನೆ ಮಾಡಿದೆ.

ಹಳೆಯ ಕಟ್ಟಡವನ್ನು ೨೦೧೮ರಲ್ಲಿ ಕೆಡವಿ ೨೦೨೦ರಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಯಾಗ ಬೇಕಿತ್ತು. ಅನುದಾನ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು. ಕೆಲವರ ನಿರಾಸಕ್ತಿಯಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಶಾಸಕ ಡಾ.ಮಂಥರ್ ಗೌಡ ಅವರ ಪ್ರಯತ್ನದಿಂದ ಹೆಚ್ಚುವರಿಯಾಗಿ ೨ ಕೋಟಿ ರೂ. ಅನುದಾನವನ್ನು ಕಲ್ಪಿಸಿ ೧.೧೦ ಎಕರೆ ಪ್ರದೇಶದಲ್ಲಿ ಕಟ್ಟಡ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ ಒಟ್ಟಾರೆ ೭ ಕೋಟಿ ರೂ. ವೆಚ್ಚವಾಗಿದೆ. ವಾಣಿಜ್ಯ ಸಂಕೀರ್ಣ ಅತ್ಯಾಧುನಿಕ ಸಭಾಂಗಣ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಸಿಬ್ಬಂದಿಗೆ ಬೇಕಾದ ಕೊಠಡಿಗಳನ್ನು ಒಳಗೊಂಡಿದೆ. ಮಾಜಿ ಮುಖ್ಯಮಂತ್ರಿ ದಿ. ಆರ್.ಗುಂಡೂರಾವ್ ಅವರು ಮೊದಲು ಈ ಪುರಸಭೆಯ ಅಧ್ಯಕ್ಷರಾಗಿದ್ದರು ಎಂಬುದು ಗಮ ನಾರ್ಹ ಸಂಗತಿ. ಪುರಸಭೆಯ ಕಟ್ಟಡದ ತಳ ಅಂತಸ್ತಿನಲ್ಲಿ ಎಲೆಕ್ಟ್ರಿಕ್ ಪೈಪ್ ಲೈನ್ ಮಾಡದಿರುವುದರಿಂದ ಸಮಸ್ಯೆ ಉಂಟಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ತಪ್ಪುಗಳು ಉಂಟಾಗಿದ್ದು, ಸಂಬಂಧಪಟ್ಟವರು ಗಮನಹರಿಸ ಬೇಕು. ಕಾಮಗಾರಿ ಹೆಸರಿನಲ್ಲಿ ಸಾರ್ವ ಜನಿಕರ ಹಣವನ್ನು ಪೋಲು ಮಾಡಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಂದು ಉದ್ಘಾಟನಾ ಕಾರ್ಯಕ್ರಮ

ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಯಿಂದ ಕುಶಾಲನಗರದಲ್ಲಿ ಪುರಸಭೆಯ ನೂತನ ಕಚೇರಿ ಉದ್ಘಾಟನಾ ಸಮಾರಂಭವು ಜೂ.೧೧ ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ  ಎನ್.ಎಸ್.ಭೋಸರಾಜು, ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷಿ ಚಂದ್ರು, ಶಾಸಕರಾದ ಡಾ.ಮಂಥರ್‌ಗೌಡ, ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಎಸ್. ಎಲ್.ಭೋಜೇಗೌಡ, ಡಾ.ಧನಂಜಯ್ ಸರ್ಜಿ ಇತರರು
ಪಾಲ್ಗೊಳ್ಳಲಿದ್ದಾರೆ.

” ಕುಶಾಲನಗರ ಪುರಸಭೆ ಕಟ್ಟಡ ಅನುದಾನದ ಕೊರತೆಯಿಂದ ಅಪೂರ್ಣವಾಗಿತ್ತು. ಹೆಚ್ಚುವರಿ ಅನುದಾನವನ್ನು ಒದಗಿಸಿಕೊಡಲಾಗಿದೆ. ನೂತನ ಕಟ್ಟಡವು ಸಾರ್ವಜನಿಕರ ಸೇವೆಗೆ ಸಿದ್ಧವಾಗಿದೆ.”

-ಡಾ.ಮಂಥರ್ ಗೌಡ, ಶಾಸಕರು

” ಕುಶಾಲನಗರ ಪುರಸಭೆಯ ಕಟ್ಟಡ ಉದ್ಘಾಟನೆಗೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿ.ಈ ಕಾರ್ಯದಲ್ಲಿ ಶಾಸಕರ ಪ್ರಯತ್ನ ಬಹಳಷ್ಟಿದೆ. ಆಡಳಿತ ಮಂಡಳಿ, ಅಧಿಕಾರಿ ವರ್ಗದವರ ಶ್ರಮವೂ ಇದೆ. ಬುಧವಾರ ಶಾಸಕರು ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.”
-ಜಯಲಕ್ಷ್ಮಿ ಚಂದ್ರು, ಪುರಸಭೆ ಅಧ್ಯಕ್ಷರು

” ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ಕುಶಾಲನಗರ ಪುರಸಭೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಸಾರ್ವಜನಿಕರು,ಪುರಸಭೆ ಸಿಬ್ಬಂದಿಗೆ ಅಗತ್ಯ ವ್ಯವಸ್ಥೆಗಳನ್ನು ಒಳಗೊಂಡಿದೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುರಸಭೆಯು ಸ್ವಂತ ಕಟ್ಟಡದಲ್ಲಿ ಸಾರ್ವಜನಿಕರ ಸೇವೆಗೆ ಸಿದ್ಧಗೊಂಡಿದೆ.”
-ಗಿರೀಶ್, ಪುರಸಭೆ ಮುಖ್ಯಾಧಿಕಾರಿ

” ಕುಶಾಲನಗರಕ್ಕೆ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ಕೀರ್ತಿಯಿದೆ. ಕುಶಾಲನಗರದಲ್ಲಿ ಪುರಸಭೆ ಕಚೇರಿ ಉದ್ಘಾಟನೆಗೆ ಸಜ್ಜಾಗಿದೆ. ಶಾಸಕರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಪುರಸಭೆಗೆ ಆದಾಯ ಬರುವ ದೃಷ್ಟಿಯಿಂದ ಮುಂದುವರಿದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು.”

– ವಿ.ಪಿ.ಶಶಿಧರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ

ಆಂದೋಲನ ಡೆಸ್ಕ್

Recent Posts

ಚಿತ್ರದುರ್ಗ ಮುರುಘಾ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ನ್ಯಾಯಾಲಯದ ಆದೇಶವನ್ನು ಮೀರಿ…

20 mins ago

ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಲಗ್ಗೆ: ಪ್ರಕೃತಿ ಸೌಂದರ್ಯಕ್ಕೆ ಮನಸೋತ ಜನತೆ

ಹನೂರು: ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಬರುತ್ತಿದ್ದು, ಇಂದು…

37 mins ago

ಕಾಡುಹಂದಿ ಬೇಟೆಗಾಗಿ ಮನೆಯಲ್ಲಿ ಸಂಗ್ರಹಿಸಿದ್ದ ಸಿಡಿಮದ್ದು ಸಿಡಿದು ವ್ಯಕ್ತಿಗೆ ಗಂಭೀರ ಗಾಯ

ಚಾಮರಾಜನಗರ: ತಾಲ್ಲೂಕಿನ ಅಮಚವಾಡಿ ಗ್ರಾಮದಲ್ಲಿ ಸಿಡಿಮದ್ದು ಸಿಡಿದು ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸಿಡಿಮದ್ದು ಸಿಡಿದು ಪೆದ್ದಿ ಅಲಿಯಾಸ್‌…

1 hour ago

ಓದುಗರ ಪತ್ರ:  ತಡೆಗೋಡೆ ನಿರ್ಮಿಸಿ

ಎಚ್.ಡಿ.ಕೋಟೆ -ಗದ್ದಿಗೆ ಮುಖ್ಯ ರಸ್ತೆಯಲ್ಲಿರುವ ಪೈಲ್ವಾನ್ ಕಾಲೋನಿ ಗ್ರಾಮದಲ್ಲಿರುವ ನೀರು ಕಾಲುವೆಗೆ ತಡೆಗೋಡೆ ಇಲ್ಲಿದೇ ತೀವ್ರ ತೊಂದರೆಯಾಗಿದೆ. ಎಚ್.ಡಿ.ಕೋಟೆ ಮತ್ತು…

1 hour ago

ಓದುಗರ ಪತ್ರ:  ಗಂಗೋತ್ರಿ ವಿದ್ಯಾರ್ಥಿನಿಲಯಗಳಿಗೆ ಮೂಲ ಸೌಕರ್ಯ ಬೇಕಿದೆ

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಂಶೋಧಕರ ಪುರುಷ ಮತ್ತು ಮಹಿಳಾ ವಿದ್ಯಾರ್ಥಿ ನಿಲಯಗಳಲ್ಲಿ, ಶುದ್ಧ ಕುಡಿಯುವ ನೀರಿನ ಫಿಲ್ಟರ್, ಬಿಸಿನೀರಿನ…

1 hour ago

ಓದುಗರ ಪತ್ರ: ಪ್ರೇಕ್ಷಣೀಯ ಸ್ಥಳಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇರಲಿ

ಮೈಸೂರಿನ ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮೂವರು ಸಾವನ್ನಪ್ಪಿದ್ದಾರೆ. ಅರಮನೆ ವೀಕ್ಷಣೆಗೆ ಹೆಚ್ಚಿನ ಜನರು ಸೇರುತ್ತಾರೆ. ಕ್ರಿಸ್‌ಮಸ್…

1 hour ago