Andolana originals

ಸರ್ಕಾರ ಮತ್ತು ಕಾಂಗ್ರೆಸ್‌ಗೆ ಮೇಜರ್‌ ಸರ್ಜರಿ

ರಾಜ್ಯದ ಎಲ್ಲಾ ಗೊಂದಲಗಳಿಗೂ ಪರಿಹಾರಕ್ಕೆ ಮುಂದಾದ ಹೈಕಮಾಂಡ್

ಆರ್.ಟಿ.ವಿಠ್ಠಲಮೂರ್ತಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ನ ಎಲ್ಲ ಗೊಂದಲಗಳಿಗೂ ಪರಿಹಾರ ನೀಡಲು ಮುಂದಾಗಿರುವ ಕಾಂಗ್ರೆಸ್ ವರಿಷ್ಠರು,
ಸರ್ಕಾರ ಮತ್ತು ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಲು ಬಯಸಿದ್ದಾರೆ. ದಿಲ್ಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿದ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ಅವರು ಈ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದೇ ರೀತಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಒಗ್ಗಟ್ಟಿನ ಮಂತ್ರವನ್ನು ಬೋಧಿಸಿದ ವರಿಷ್ಠರು, ಹೆಚ್ಚೂ ಕಡಿಮೆಯಾದರೆ ಸರ್ಕಾರಕ್ಕೆ ಅಪಾಯ ವಾಗಲಿದೆ ಎಂದು ಎಚ್ಚರಿಸಿದ್ದಾರೆ. ಇನ್ನು ಸಂಪುಟ ಪುನಾರಚನೆ, ವಿಧಾನ ಪರಿಷತ್ಗೆ ನಾಮಕರಣ, ಜಾತಿಗಣತಿ, ಕಾಲ್ತುಳಿತ ಪ್ರಕರಣ ಸೇರಿದಂತೆ ಹಲವು ವಿಷಯಗಳಲ್ಲಿ ಸಿಎಂ-ಡಿಸಿಎಂ ನಡುವೆ ಭುಗಿಲೆದ್ದಿರುವ ಭಿನ್ನಾಭಿಪ್ರಾಯ ವರಿಷ್ಠರ ಮುಂದೆ ಬಹಿರಂಗವಾಗಿಯೇ ವ್ಯಕ್ತವಾಗಿದ್ದು, ಉಭಯ ನಾಯಕರ ನಡುವಣ ಭಿನ್ನಾಭಿಪ್ರಾಯಗಳಿಗೆ ಬ್ರೇಕ್ ಹಾಕಲು ವರಿಷ್ಠರು ಹರಸಾಹಸ ನಡೆಸಿದರು ಎಂದು ಮೂಲಗಳು ಹೇಳಿವೆ.

ನಾಲ್ವರನ್ನು ವಿಧಾನಪರಿಷತ್ಗೆ ನಾಮಕರಣ ಮಾಡುವಾಗ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗಿದೆ. ಹೀಗಾಗಿ ಈ ಹೆಸರುಗಳನ್ನು ಬದಲಿಸಬೇಕು ಎಂದು ಸಭೆಯಲ್ಲಿ ಡಿಕೆಶಿ ಪಟ್ಟು ಹಿಡಿದರು. ಇದೇ ರೀತಿ ಸಂಪುಟ ಪುನಾರಚನೆಯ ಅಗತ್ಯವಿಲ್ಲ, ಜಾತಿ ಗಣತಿಯನ್ನು ಜಾರಿ ಮಾಡಲು ಹೊರಟರೆ ಸರ್ಕಾರಕ್ಕೆ
ಅಪಾಯವಿದೆ ಎಂದು ಡಿಕೆಶಿ ಎಚ್ಚರಿಸಿದರು. ಆದರೆ ವಿಧಾನಪರಿಷತ್ ನಾಮಕರಣ ಪಟ್ಟಿಯಲ್ಲಿ ಅಗತ್ಯ ಕಂಡರೆ ಅಲ್ಪ ಬದಲಾವಣೆ ಮಾಡುವುದಾಗಿ ಹೇಳಿದ ವರಿಷ್ಠರು, ಬೆಂಗಳೂರಿನ ಕಾಲ್ತುಳಿತ ಪ್ರಕರಣದಿಂದ ಪಕ್ಷದ ಇಮೇಜ್ಗಾದ ಹಾನಿಯ ಬಗ್ಗೆ ಪ್ರಸ್ತಾಪಿಸಿ ಆಕ್ಷೇಪ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ ಡಿಕೆಶಿ ಹೆಜ್ಜೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವರಿಷ್ಠರು, ಆರ್ಸಿಬಿ ವಿಜಯೋತ್ಸವದ ಬಗ್ಗೆ ರಾಜ್ಯ ಸರ್ಕಾರ ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ ಎಂದು ಹರಿಹಾಯ್ದರು ಎನ್ನಲಾಗಿದೆ. ಇವತ್ತಿನ ಸ್ಥಿತಿಯಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಸರ್ಜರಿಯ ಅಗತ್ಯವಿದ್ದು, ಈ ಕುರಿತು ಕೆಲವೇ ದಿನಗಳಲ್ಲಿ ಸಂದೇಶ ರವಾನಿಸುವುದಾಗಿ ವರಿಷ್ಠರು ವಿವರಿಸಿದರು. ಜಾತಿ ಗಣತಿಯನ್ನು ಜಾರಿಗೊಳಿಸುವುದು ಪಕ್ಷದ ಅಜೆಂಡಾ. ಆದರೆ ಕರ್ನಾಟಕದಲ್ಲಿ ಹಿಂದೆ ನಡೆದಿರುವ ಜಾತಿಗಣತಿ ಬಗ್ಗೆ ಅಲ್ಲಲ್ಲಿ ಆಕ್ಷೇಪಗಳು ಎದ್ದಿವೆ. ಹೀಗಾಗಿ ಮರುಗಣತಿ ನಡೆಸಿ ಎಂದು ವರಿಷ್ಠರು ವಿವರಿಸಿದರು.
ಹಲವು ವರ್ಷಗಳ ಹಿಂದೆ ನಡೆದ ಗಣತಿಯಾದ್ದರಿಂದ ಜನ ಸಂಖ್ಯೆಯ ವಿಷಯದಲ್ಲಿ ಹಲವರು ಆಕ್ಷೇಪಗಳನ್ನು ಎತ್ತುತ್ತಿದ್ದಾರೆ. ಹೀಗಾಗಿ ಇಂತಹ ಆಕ್ಷೇಪಗಳನ್ನು ಪರಿಗಣಿಸಿ ಎರಡರಿಂದ ಮೂರು ತಿಂಗಳ ಒಳಗಾಗಿ ಮರುಗಣತಿ ನಡೆಸಿ ಎಂದು ಇದೇ ಸಂದರ್ಭದಲ್ಲಿ ವರಿಷ್ಠರು ವಿವರಿಸಿದರು.

ಇನ್ನಷ್ಟು ತೀವ್ರಗೊಳ್ಳಲಿದೆ ಸಂಘರ್ಷ
ಬೆಂಗಳೂರು: ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರ ದಿಲ್ಲಿ ಭೇಟಿ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳಿಗೆ ಮುನ್ಸೂಚನೆಯಂತಿದ್ದು, ಮಂತ್ರಿ ಪದವಿ ಆಕಾಂಕ್ಷಿಗಳ ಸರ್ಕಸ್ಸಿಗೆ ದಾರಿಯಾಗಿದೆ. ಇವೇ ಮೂಲಗಳ ಪ್ರಕಾರ, ಇಂದಿನ ದಿಲ್ಲಿ ಭೇಟಿಯ ಸಂದರ್ಭದಲ್ಲಿ ವರಿಷ್ಠರು ಸಿಎಂ-ಡಿಸಿಎಂ ಅವರಿಗೆ ಒಗ್ಗಟ್ಟಿನ ಮಂತ್ರ ಬೋಧಿಸಿದರೂ ಉಭಯ ನಾಯಕರ ನಡುವಣ ಸಂಘರ್ಷ ತೀವ್ರವಾಗಲಿದೆ.

ಆಂದೋಲನ ಡೆಸ್ಕ್

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

14 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

15 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

16 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

16 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

22 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

22 hours ago