Andolana originals

ಪಿರಿಯಾಪಟ್ಟಣ | ವಿಶೇಷಚೇತನರಿಗೆ ವಿತರಣೆಯಾಗದ ಸಾಧನಗಳು

ಫಲಾನುಭವಿಗಳಿಗೆ ವಿತರಿಸಲು ಶಾಸಕರ ದಿನಾಂಕ ಸಿಗದೆ ಕೊಠಡಿಯಲ್ಲಿ ತುಂಬಿ ಬೀಗ ಹಾಕಿದ ಅಧಿಕಾರಿಗಳು

ಪಿರಿಯಾಪಟ್ಟಣ : ಕೇಂದ್ರ ಸರ್ಕಾರದ ಅಲಿಂಕೋ ಸಂಸ್ಥೆ ಭಾರತೀಯ ಕೃತಕ ಅಂಗಾಂಗಗಳ ಉತ್ಪಾದನಾ ನಿಗಮದ ವತಿಯಿಂದ ಈ ಹಿಂದೆ ಪಿರಿಯಾಪಟ್ಟಣದಲ್ಲಿ ವಿಕಲಚೇತನರ ತಪಾಸಣಾ ಶಿಬಿರ ನಡೆಸಿ ಅದರಲ್ಲಿ ಆಯ್ಕೆಯಾದ ತಾಲ್ಲೂಕಿನ ೧೫೦ ಮಂದಿ ವಿಕಲಚೇತನರಿಗೆ ನೀಡಲು ತರಿಸಿದ್ದ ವ್ಹೀಲ್ ಚೇರ್, ಟ್ರೈಸೈಕಲ್, ಬ್ಯಾಟರಿ ಚಾಲಿತ ವಾಹನ, ವಾಕರ್, ಸ್ಟಿಕ್‌ಗಳು, ಶ್ರವಣ ಸಾಧನಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಉಪಕರಣಗಳು ೬ ತಿಂಗಳಿಂದ ತುಕ್ಕು ಹಿಡಿಯು ತ್ತಿರುವ ಅಂಶ ಬೆಳಕಿಗೆ ಬಂದಿದೆ.

ಆಯ್ಕೆಯಾದ ವಿಕಲಚೇತನರಿಗೆ ನವೆಂಬರ್ ತಿಂಗಳಿನಲ್ಲಿ ಸಾಧನ ಸಲಕರಣೆಗಳನ್ನು ವಿತರಿಸ ಬೇಕಿತ್ತು. ಈ ಸಾಧನ-ಸಲಕರಣೆಗಳನ್ನು ಪಿರಿಯಾ ಪಟ್ಟಣದ ಎಸ್‌ಕೆಎಸ್‌ಟಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಗಳಲ್ಲಿ ತುಂಬಲಾಗಿತ್ತು. ಹೀಗೆ ತುಂಬಿಟ್ಟ ಉಪಕರಣಗಳು ಆರು ತಿಂಗಳಾದರೂ ವಿತರಣೆಯಾಗದೆ ತುಕ್ಕು ಹಿಡಿಯುವ ಹಂತ ತಲುಪಿವೆ.

ಸಾಧನ ಸಲಕರಣೆಗಳಿಗೆ ಕೊಠಡಿಯ ಸ್ಥಳಾವಕಾಶ ಮಾಡಿಕೊಟ್ಟ ಶಾಲೆಯ ಮುಖ್ಯಸ್ಥರು ಈಗ ತೊಂದರೆಗೆ ಒಳಗಾಗಿದ್ದಾರೆ. ಆರು ತಿಂಗಳಿಂದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಬೋಽಸಲು ಕೊಠಡಿಯಿಲ್ಲದೆ ಅಡ್ಡಿಯಾಗಿದೆ. ಶೀಘ್ರದಲ್ಲೇ ಇದನ್ನು ಖಾಲಿ ಮಾಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಗಮನಕ್ಕೆ ತರಲಾಗಿದೆ. ಆದರೂ ಸಲಕರಣೆಗಳ ವಿತರಣೆಯಾಗಿಲ್ಲ.

ವಿಕಲಚೇತನರಿಗೆ ಸೂಕ್ತ ಸಂದರ್ಭದಲ್ಲಿ ಸಾಧನ ಉಪಕರಣಗಳನ್ನು ವಿತರಿಸದೇ ಇರುವುದರಿಂದ ಇವು ತುಕ್ಕು ಹಿಡಿಯುತ್ತಿವೆ. ಬ್ಯಾಟರಿಗಳು ಹಾಳಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಲಕರಣೆಗಳ ವಿತರಣೆ ಮಾಡಲು ಶಾಸಕ ಕೆ. ವೆಂಕಟೇಶ್ ಅವರ ದಿನಾಂಕ ಸಿಗುತ್ತಿಲ್ಲ. ಆದ್ದರಿಂದ ವಿತರಣೆ ಸಾಧ್ಯವಾಗಿಲ್ಲ ಎನ್ನುತ್ತಾರೆ. ಪ್ರತಿವಾರ ತಾಲ್ಲೂಕಿಗೆ ಬಂದು ಹೋಗುವ ಶಾಸಕ ಕೆ.ವೆಂಕಟೇಶ್ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಲು ದಿನಾಂಕ ನೀಡದಿರುವುದು ವಿಪರ್ಯಾಸವೇ ಸರಿ.

ಈ ನಡುವೆ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ, ಡಿಸಿಎಂ ಆಗಿದ್ದ ಡಿ. ಕೆ. ಶಿವಕುಮಾರ್ ಮತ್ತಿತರರು ತಾಲ್ಲೂಕಿಗೆ ಕುವೆಂಪು ಭವನ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಈ ಸಾಧನ ಸಲಕರಣೆಗಳನ್ನು ವಿತರಣೆ ಮಾಡಬಹುದಿತ್ತು. ಆದರೆ ವಿಕಲಚೇತನರಿಗೆ ಬಂದಿ ರುವ ಸಾಧನ ಸಲಕರಣೆಗಳನ್ನು ವಿತರಣೆ ಮಾಡದೆ ಹೀಗೆ ನಿರ್ಲಕ್ಷ್ಯ ಮಾಡಿ ವಿಕಲಚೇತನ ರಿಗೆ ಸಿಗಬೇಕಾದ ಸೌಲಭ್ಯವನ್ನು ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈಗಾ ಗಲೇ ಪಟ್ಟಿ ಸಿದ್ಧವಿದ್ದು ವಿಕಲ ಚೇತನ ಫಲಾನುಭವಿಗಳ ಸಂಪೂರ್ಣ ವಿವರ ಇದ್ದರೂ ಅಧಿಕಾರಿಗಳು, ರಾಜಕಾರಣಿಗಳು ವಿತರಣೆ ಮಾಡದೆ ಇರುವುದು ವಿಕಲಚೇತನರು ಮಾತ್ರವಲ್ಲ, ಸಾರ್ವಜನಿಕರಲ್ಲಿಯೂ ಅಸಮಾಧಾನ ಮೂಡಿಸಿದೆ. ತಲಾ ೧೮ ಲಕ್ಷ ರೂ. ಮೌಲ್ಯದ ಸಾಧನೆ ಸಲಕರಣೆಗಳು ಇದಾಗಿದ್ದು, ಶಾಸಕರು ವಿತರಣೆ ಮಾಡಲು ದಿನಾಂಕ ಕೊಡುತ್ತಿಲ್ಲ. ಸಂಸದರು ೪ ಬಾರಿ ದಿನಾಂಕ ನೀಡಿದ್ದರೂ ಶಾಸಕ ಕೆ. ವೆಂಕಟೇಶ್ ದಿನಾಂಕ ನೀಡಿಲ್ಲ. ನಾವೇ ವಿತರಣೆ ಮಾಡುತ್ತೇವೆ ಎಂದರೆ ಅಧಿಕಾರಿಗಳಿಗೆ ಹಕ್ಕುಚ್ಯುತಿ ಮಂಡಿಸುವ ಬೆದರಿಕೆ ಹಾಕುತ್ತಿದ್ದಾರೆ. ಇದಲ್ಲದೆ ಇಲಾಖೆಯ ಅಂದು ಸಚಿವರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಮಹಿಳಾ ದಿನಾಚರಣೆಗೆ ಕರೆಸಿದ್ದ ಸಂದರ್ಭದಲ್ಲೂ ವಿತರಿಸಬಹುದಿತ್ತು. ಅದೂ ಮಾಡಲಿಲ್ಲ. ಒಟ್ಟಿನಲ್ಲಿ ವಿಕಲಚೇತನರ ದಿನನಿತ್ಯದ ಬದುಕಿಗೆ ಆಸರೆ ಯಾಗಬೇಕಿದ್ದ ಉಪಕರಣಗಳು ವಿತರಣೆಯಾಗದೆ ತುಕ್ಕುಹಿಡಿಯುತ್ತಿವೆ ಎನ್ನುತ್ತಾರೆ ಕೆಲ ಅಧಿಕಾರಿಗಳು.

ಆಂದೋಲನ ಡೆಸ್ಕ್

Recent Posts

ಬಯಲುಸೀಮೆಗೆ ಭದ್ರಾ ಜೀವಜಲ : ನವೆಂಬರ್ ಅಂತ್ಯಕ್ಕೆ ಎಲ್ಲ ಕೆರೆಗಳಿಗೂ ನೀರು ; ಸಚಿವ ಚಲುವರಾಯಸ್ವಾಮಿ ಭರವಸೆ*

ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…

15 hours ago

ಓದುಗರ ಪತ್ರ: ಕರುನಾಡ ಹೆಮ್ಮೆ…

ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…

23 hours ago

ಓದುಗರ ಪತ್ರ: ಪಾಲಿಕೆ ಯೋಜನೆ ಸ್ವಾಗತಾರ್ಹ

ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…

23 hours ago

ಓದುಗರ ಪತ್ರ: ಯುಪಿಐ ಶುಲ್ಕ: ಚರ್ಚೆಯ ನಂತರ ಕ್ರಮ ಕೈಗೊಳ್ಳಿ

ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…

23 hours ago

ಬದಲಾದ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಪಾತ್ರ

ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…

23 hours ago

ಬಿಹಾರದಲ್ಲಿ ಯುಸಿಸಿಗೆ ನಿತೀಶ್, ಚಿರಾಗ್ ಪಕ್ಷಗಳ ಭಿನ್ನರಾಗ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…

23 hours ago