Andolana originals

ಇಂದು ಕಂದೇಗಾಲದಲ್ಲಿ ಪಾರ್ವತಾಂಬೆ ಜಾತ್ರೆ

ಮಹೇಂದ್ರ ಹಸಗೂಲಿ

ರಥೋತ್ಸವ ಕಣ್ತುಂಬಿಕೊಳ್ಳಲು ಉತ್ಸುಕರಾಗಿರುವ ಜನರು; ಭಾರೀ ನೂಕು ನುಗ್ಗಲು, ಎಚ್ಚರಿಕೆ ವಹಿಸಲು ಸೂಚನೆ 

ಗುಂಡ್ಲುಪೇಟೆ: ತಾಲ್ಲೂಕಿನ ಕಂದೇಗಾಲದ ಬಳಿ ಇರುವ ಸ್ಕಂದಗಿರಿ ಪಾರ್ವತಾಂಬೆ ಜಾತ್ರಾ ಮಹೋತ್ಸವ ಶುಕ್ರವಾರ ಅದ್ಧೂರಿಯಾಗಿ ನಡೆಯಲಿದೆ.

ಮಧ್ಯಾಹ್ನ ೧೨.೨೦ರಿಂದ ೧.೨೦ರ ಶುಭ ಲಗ್ನದಲ್ಲಿ ರಥದಲ್ಲಿ ಪಾರ್ವತಾಂಬೆ ಮೂರ್ತಿಯನ್ನು ಕೂರಿಸಿ ವಿವಿಧ ಫಲಪುಷ್ಪಗಳಿಂದ ಅಲಂಕರಿಸಲಾಗುವುದು. ನಂತರ ಪಾರ್ವತಿ ಮತ್ತು ಸೋಮೇಶ್ವರ ಸ್ವಾಮಿಯ ಕಲ್ಯಾಣ ಮಹೋತ್ಸವ ನಡೆಸಲಾಗುವುದು. ಬಳಿಕ ಅರ್ಚಕರಿಂದ ವಿವಿಧ ಪೂಜೆಗಳನ್ನು ಸಲ್ಲಿಸಿ ರಥದ ಸುತ್ತಲೂ ಪ್ರದಕ್ಷಿಣೆ ಹಾಕಿ ರಥವನ್ನು ಎಳೆಯಲಾಗುವುದು. ತಹಸಿಲ್ದಾರ್ ತನ್ಮಯ್ ಅವರು ಕಲ್ಯಾಣೋತ್ಸವದಲ್ಲಿ ಭಾಗಿಯಾಗಿ ಪೂಜೆಯನ್ನು ನೆರವೇರಿಸುವರು.

ಸ್ಕಂದಗಿರಿ ಪಾರ್ವತಿ ಬೆಟ್ಟದ ಹಿನ್ನೆಲೆ: ಸ್ಕಂದಗಿರಿ ಕಂದೇಗಾಲ ಬೆಟ್ಟದಲ್ಲಿ ಬೊಮ್ಮರಸ ಮತ್ತು ತಿಮ್ಮರಸ ಕಾಲದಲ್ಲಿ ದೇವಾಲಯ ನಿರ್ಮಾಣವಾಗಿರಬಹುದು ಎಂದು ಉಲ್ಲೇಖ ಇದೆ. ಈ ಕ್ಷೇತ್ರ ಪರಮೇಶ್ವರನು ನೆಲೆನಿಂತ ಸ್ಥಳವಾಗಿದು, ಅಗಸ್ತ್ಯ ಮುನಿಗಳು ಪಾರ್ವತಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ ಎಂಬ ಪ್ರತೀತಿ ಇದೆ.

ಅಗಸ್ತ್ಯರು ಪಾರ್ವತಿ ಪರಮೇಶ್ವರರನ್ನು ಕುರಿತು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದರು. ಅವರ ತಪಸ್ಸಿಗೆ ಮೆಚ್ಚಿ ಪರಮೇಶ್ವರನು ಪಾರ್ವತಿಯ ಸಮೇತ ಪ್ರತ್ಯಕ್ಷನಾಗಿದ್ದ ಎನ್ನಲಾಗಿದೆ. ಪಾರ್ವತಿ ದೇವಿ ಯಾವ ರೂಪದಲ್ಲಿ ಪ್ರತ್ಯಕ್ಷಳಾದಳೋ ಅದೇ ರೂಪದಲ್ಲಿಯೇ ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಗಸ್ತ್ಯರ ಒತ್ತಾಯದ ಮೇರೆಗೆ ಪಾರ್ವತಿ ಪರಮೇಶ್ವರರು ಮತ್ತೊಮ್ಮೆ ವಿವಾಹವಾದರು ಎಂಬ ಪ್ರತೀತಿ ಇದೆ. ಹಾಗಾಗಿ ಕಲ್ಯಾಣೋತ್ಸವ ರಥೋತ್ಸವಕ್ಕೂ ಮುನ್ನ ನಡೆಯುತ್ತದೆ. ಈ ಕ್ಷೇತ್ರದಲ್ಲಿ ಮದುವೆಯಾಗದವರು ಹರಕೆ ಹೊತ್ತರೆ ಕಲ್ಯಾಣವಾಗುತ್ತದೆ ಎಂಬ ನಂಬಿಕೆ ಇದೆ.

ಈ ಕ್ಷೇತ್ರದಲ್ಲಿ ಸೋಮೇಶ್ವರ ಲಿಂಗ ಹಾಗೂ ಬಸವನ ಮೂರ್ತಿ ಮೂರು ವರ್ಷಕ್ಕೊಮ್ಮೆ ಭತ್ತದ ಕಾಳಿನಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಇಲ್ಲಿ ನಡೆಯುವ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಕಂದೇಗಾಲ, ಮೊಳ್ಳಯ್ಯನಹುಂಡಿ, ಶಿಂಡನಪುರ, ಕೊಡಸೋಗೆ, ಚಿಕ್ಕತುಪ್ಪೂರು, ಕೆಲಸಿಪುರ, ತೆರಕಣಾಂಬಿ, ಚಾಮರಾಜನಗರ, ಮೈಸೂರು ಭಾಗಗಗಳಿಂದ ಜನರು ಆಗಮಿಸುತ್ತಾರೆ. ನವ ದಂಪತಿಗಳು ಚಲಿಸುವ ರಥಕ್ಕೆ ಹಣ್ಣು-ಜವನ ಸಮರ್ಪಿಸುತ್ತಾರೆ. ಬೆಟ್ಟದ ಮೇಲೆ ನಿಂತು ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಜನರು ಉತ್ಸುಕರಾಗಿದ್ದಾರೆ.

ಸಹಸ್ರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ: ಪಾರ್ವತಾಂಬೆ ರಥೋತ್ಸವ ಕಣ್ತುಂಬಿಕೊಳ್ಳಲು ಬರುವ ಸಾವಿರಾರು ಸಂಖ್ಯೆಯ ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿದೆ.

ಮುಜಾಗ್ರತಾ ಕ್ರಮ…. ಜಾತ್ರೆಯಲ್ಲಿ ಯಾವುದೇ ಅವಘಡ ನಡೆಯದಂತೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲಿದೆ. ಭಕ್ತಾದಿಗಳು ದೇವರ ದರ್ಶನ ಮಾಡಿ, ರಥೋತ್ಸವದ ಸಂದರ್ಭದಲ್ಲಿ ರಥದಿಂದ ದೂರ ನಿಂತು ಕೈ ಮುಗಿಯಬೇಕು. ರಥ ಬರುವ ಸಂದರ್ಭದಲ್ಲಿ ಭಾರೀ ನೂಕುನುಗ್ಗಲು ಇರುವುದರಿಂದ ಮಕ್ಕಳ ಕಡೆ ಪೋಷಕರು ಗಮನಕೊಡಬೇಕು. ೩-೪ ವರ್ಷಗಳ ಹಿಂದೆ ರಥೋತ್ಸವದಲ್ಲಿ ಚಕ್ರಕ್ಕೆ ಸಿಲುಕಿ ದುರ್ಘಟನೆ ನಡೆದು, ಸಾವು ನೋವು ಸಂಭವಿಸಿತ್ತು. ಹಾಗಾಗಿ ಮುಂಜಾಗ್ರತಾ ಕ್ರಮವಹಿಸುವುದು ಸೂಕ್ತ.

 

 

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

3 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

3 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

5 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

7 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

10 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

10 hours ago