Andolana originals

ನಿರುದ್ಯೋಗಿಗಳೂ ಉದ್ಯೋಗದಾತರಾಗುವ ಅವಕಾಶ

ಕೆ.ಪಿ.ಮದನ್

ಒತ್ತಾಸೆಯಾಗಿರುವ ಕೇಂದ್ರ, ರಾಜ್ಯ ಸರ್ಕಾರದ ಸ್ವಯಂ ಉದ್ಯೋಗ ಯೋಜನೆಗಳು

 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಸಾಲ ಮಂಜೂರಾತಿ

ಕೈಗಾರಿಕಾ ನೀತಿಯಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ

ಮಹಿಳೆಯರು ಸ್ವಯಂ ಉದ್ದಿಮೆದಾರರಾಗಲು ಸಹಾಯಧನ

ಕೇಂದ್ರ ಮುದ್ರಾ ಯೋಜನೆಯಿಂದ ಮಹಿಳೆಯರಿಗೆ ಸಾಲ ಸೌಲಭ್ಯ

ಮೈಸೂರು: ನಿರುದ್ಯೋಗಿಗಳನ್ನೇ ಉದ್ಯೋಗದಾತರನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ಅದರಲ್ಲಿಯೂ ಸ್ವಯಂ ಉದ್ಯೋಗಕ್ಕೆ ಪೂರಕವಾಗಿ ಆರ್ಥಿಕ ನೆರವು ಒದಗಿಸುವುದಕ್ಕೆ ಹೆಚ್ಚು ಒತ್ತು ನೀಡಿವೆ. ಕೇಂದ್ರ ಸರ್ಕಾರವು ಮುದ್ರಾ ಯೋಜನೆ, ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ, ಕೈಗಾರಿಕಾ ನೀತಿ, ಸ್ಟ್ಯಾಂಡ್ ಅಪ್ ಇಂಡಿಯಾ, ಪಿಎಂಎ-ಎಂಇ (ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ)ಗಳು ಪ್ರಸ್ತುತ ಅಸ್ತಿತ್ವದಲ್ಲಿವೆ.

ಕೈಗಾರಿಕಾ ನೀತಿ ೨೦೨೦-೨೫: ಕರ್ನಾಟಕ ಸರ್ಕಾರದ ಕೈಗಾರಿಕಾ ನೀತಿ ಆಗಸ್ಟ್ ೧೩, ೨೦೨೦ರಿಂದ ಜಾರಿಗೆ ಬಂತು. ಉದ್ಯಮಿಗಳು ಸ್ವಂತ ಬಂಡವಾಳ ಹೂಡಿಕೆ ಮಾಡಿ ತದನಂತರ ಸಹಾಯಧನಕ್ಕೆ ಕೈಗಾರಿಕಾ ನೀತಿ ಅನ್ವಯ ಅರ್ಜಿ ಸಲ್ಲಿಸಿ ಸವಲತ್ತು ಪಡೆಯಬಹುದು. ಎಲ್ಲಾ ರೀತಿಯ ಉತ್ಪಾದನಾ ಚಟುವಟಿಕೆಗಳಿಗೆ ಹಾಗೂ ಕೆಲವು ಆಯ್ದ ಸೇವಾ ಚಟುವಟಿಕೆಗಳಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆಯಬಹುದು.

ಕೈಗಾರಿಕಾ ನೀತಿಯ ಪ್ರಮುಖ ಅಂಶಗಳು: ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿ, ಬೆಳವಣಿಗೆ ದರ, ಸಮತೋಲಿತ ಅಭಿವೃದ್ಧಿ, ತಂತ್ರಜ್ಞಾನ ಮತ್ತು ನಾವೀನ್ಯತೆ ಯಾಗಿದೆ.

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ: ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP) ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೃಷಿಯೇತರ ವಲಯದಲ್ಲಿ ಹೊಸ ಸೂಕ್ಷ್ಮ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗವನ್ನು ಸೃಷ್ಟಿಸುವ ಒಂದು ಸಾಲ-ಆಧಾರಿತ ಸಹಾಯಧನ ಯೋಜನೆಯಾಗಿದೆ. ಈ ಯೋಜನೆಯನ್ನು ೨೦೦೮ರಲ್ಲಿ ಆರಂಭಿಸಲಾಯಿತು. ಈ ಯೋಜನೆಯಡಿ, ಉತ್ಪಾದನಾ ವಲಯಕ್ಕೆ ೫೦ ಲಕ್ಷ ರೂ. ಮತ್ತು ಸೇವಾ ವಲಯಕ್ಕೆ ೨೦ ಲಕ್ಷ ರೂ.ಗಳವರೆಗೆ ಸಾಲ ಸಿಗುತ್ತದೆ ಮತ್ತು ಸರ್ಕಾರದ ಸಹಾಯಧನವು ಯೋಜನೆಯ ಪ್ರಕಾರ ಶೇ.೧೫ರಿಂದ ಶೇ.೩೫ ರವರೆಗೆ ಇರುತ್ತದೆ.

ಸ್ವ ಸಹಾಯಧನ: ಸಾಮಾನ್ಯ ವರ್ಗ-ಉತ್ಪಾದನಾ ವಲಯಕ್ಕೆ ಶೇ.೨೫, ಸೇವಾ ವಲಯಕ್ಕೆ ಶೇ. ೨೫, ವಿಶೇಷ ವರ್ಗ (ಎಸ್‌ಸಿ/ ಎಸ್‌ಟಿ ಮಹಿಳೆಯರು, ಅಲ್ಪಸಂಖ್ಯಾತರು, ಮಾಜಿ ಸೈನಿಕರು, ವಿಕಲಚೇತನರು)ಕ್ಕೆ ಗ್ರಾಮೀಣ ಪ್ರದೇಶದಲ್ಲಿ ಶೇ.೩೫ ಮತ್ತು ನಗರ ಪ್ರದೇಶದಲ್ಲಿ ಶೇ.೨೫ ರಷ್ಟು ಸಹಾಯಧನ ಸಿಗುತ್ತದೆ.

ಮುದ್ರಾ ಯೋಜನೆ: ಇದು ಕೇಂದ್ರ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದ್ದು, ಸಣ್ಣ ಉದ್ಯಮಿ ಗಳಿಗೆ ೧೦ ಲಕ್ಷ ರೂ.ಗಳವರೆಗೆ ಸಾಲ ನೀಡಲಾಗುತ್ತದೆ. ಈ ಯೋಜನೆಯು ಕೃಷಿಯೇತರ ಆದಾಯವನ್ನು ಉತ್ತೇಜಿಸುವ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ ಸಾಲ ನೀಡುವ ಮೂಲಕ ಬೆಂಬಲಿಸುತ್ತದೆ. ಈ ಯೋಜನೆಯಲ್ಲಿ ಸಾಲ ನೀಡುವುದನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಶಿಶು’ (೫೦,೦೦೦ ರೂ.ಗಳವರೆಗೆ), ‘ಕಿಶೋರ್’ (೫೦,೦೦೦ ರಿಂದ ೫ ಲಕ್ಷ ರೂ.ಗಳವರೆಗೆ) ಮತ್ತು ‘ತರುಣ್’ (೫ ಲಕ್ಷದಿಂದ ೧೦ ಲಕ್ಷ ರೂ.ಗಳವರೆಗೆ) ಸಾಲವನ್ನು ನೀಡಲಾಗುತ್ತದೆ. ಸಾಲಸೌಲಭ್ಯವನ್ನು ಎನ್‌ಬಿಎಫ್‌ಸಿಗಳು ಮತ್ತು ಎಂಎಫ್‌ಐಗಳ ಮೂಲಕ ನೀಡಲಾಗುತ್ತದೆ.

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ: ಈ ಯೋಜನೆಯನ್ನು ಕೇಂದ್ರ ಸರ್ಕಾರವು ಏಪ್ರಿಲ್ ೫, ೨೦೧೬ ರಂದು ಪರಿಚಯಿಸಿತು. ಇದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಮಹಿಳಾ ಉದ್ಯಮಿಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶವು ಉತ್ಪಾದನೆ, ಸೇವೆ ಗಳು, ವ್ಯಾಪಾರ ಅಥವಾ ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಹೊಸದಾಗಿ ಒಂದು ಉದ್ಯಮವನ್ನು ಸ್ಥಾಪಿಸಲು ೧೦ ಲಕ್ಷ ರೂ.ಗಳಿಂದ ೧ ಕೋಟಿ ರೂ.ವರೆಗೆ ಬ್ಯಾಂಕ್ ಸಾಲವನ್ನು ಒದಗಿಸುತ್ತದೆ.

ಪ್ರತಿ ಬ್ಯಾಂಕ್ ಶಾಖೆಯು ಕನಿಷ್ಠ ಒಬ್ಬ ಎಸ್‌ಸಿ/ ಎಸ್‌ಟಿ ಮತ್ತು ಒಬ್ಬ ಮಹಿಳಾ ಉದ್ಯಮಿಗೆ ಈ ಸಾಲವನ್ನು ನೀಡುವ ಗುರಿಯನ್ನು ಹೊಂದಿದೆ. ಎಸ್‌ಸಿ/ ಎಸ್‌ಟಿ ಮತ್ತು ಮಹಿಳಾ ಉದ್ಯಮಿಗಳಿಗೆ ೧೦ ಲಕ್ಷ ರೂ.ಗಳಿಂದ ೧ ಕೋಟಿ ರೂ.ವರೆಗೆ ಬ್ಯಾಂಕ್ ಸಾಲಗಳನ್ನು ನೀಡಲಾಗುತ್ತದೆ. ಯೋಜನೆಯ ಉದ್ದೇಶವೆಂದರೆ ಹಿಂದುಳಿದ ವರ್ಗಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಅಥವಾ ಮಹಿಳಾ ಉದ್ಯಮಿಗಳು ಮಾತ್ರ ಈ ಯೋಜನೆಗೆಅರ್ಹರಾಗಿದ್ದು, ೧೮ ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯೋಮಾನದವರು ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ಸಾಲವು ಉತ್ಪಾದನೆ, ಸೇವೆಗಳು ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಮೊದಲ ಬಾರಿಯ ಉದ್ಯಮ (ಗ್ರೀನ್‌ಫೀಲ್ಡ್ ಯೋಜನೆಗೆ) ಮಾತ್ರ.

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ : ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ದೇಶದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಮೇಲ್ದರ್ಜೆಗೇರಿಸುವಿಕೆಗೆ ಹಣಕಾಸು, ತಾಂತ್ರಿಕ ಮತ್ತು ವ್ಯವಹಾರ ಬೆಂಬಲವನ್ನು ಒದಗಿಸಲು ಕೇಂದ್ರ ಸರ್ಕಾರವು PMFME ಯೋಜನೆಯನ್ನು ಜಾರಿಗೆ ತಂದಿದೆ.

ವೈಯಕ್ತಿಕ ಉದ್ಯಮಿಗಳಿಗೆ ಮತ್ತು ಗುಂಪುಗಳಿಗೆ ಯೋಜನೆಯ ಅಡಿಯಲ್ಲಿ ಸಿರಿಧಾನ್ಯಗಳು, ಬೆಲ್ಲ, ಬೇಕರಿ ಉತ್ಪನ್ನಗಳು ಸೇರಿದಂತೆ ವಿವಿಧ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ.೫೦ ರಷ್ಟು ಅಥವಾ ಗರಿಷ್ಟ ೧೫ ಲಕ್ಷ ರೂ.ಗಳವರೆಗೆ ಸಹಾಯಧನ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ ೬ ಲಕ್ಷ ರೂ. ಮತ್ತು ರಾಜ್ಯ ಸರ್ಕಾರ ೯ ಲಕ್ಷ ರೂ. ವಿತರಣೆ ಮಾಡುತ್ತವೆ. ಈ ಸಹಾಯಧನವು ವೈಯಕ್ತಿಕ ಉದ್ದಿಮೆದಾರರಿಗೆ ಶೇ.೩೫ ಸಬ್ಸಿಡಿಯೊಂದಿಗೆ ಕರ್ನಾಟಕ ಸರ್ಕಾರದಿಂದ ಶೇ.೧೫ ಹೆಚ್ಚುವರಿ ಟಾಪ್-ಅಪ್ ಸಬ್ಸಿಡಿ ರೂಪದಲ್ಲಿ ದೊರೆಯುತ್ತದೆ.

ಸ್ವಸಹಾಯ ಸಂಘಗಳ ಸದಸ್ಯರಿಗೆ ಪ್ರಾಥಮಿಕ ಬಂಡವಾಳವಾಗಿ ೪೦,೦೦೦ ರೂ.ಗಳವರೆಗೆ ಹಾಗೂ ಸಂಘಗಳಿಗೆ ೪ ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಈ ಯೋಜನೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ.

” ಸ್ವಸಹಾಯ ಸಂಘಗಳ ಸದಸ್ಯರಿಗೆ ಪ್ರಾಥಮಿಕ ಬಂಡವಾಳವಾಗಿ ೪೦,೦೦೦ ರೂ.ಗಳವರೆಗೆ ಹಾಗೂ ಸಂಘಗಳಿಗೆ ೪ ಲಕ್ಷ ರೂ. ಗಳವರೆಗೆ ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. PMFME ಯೋಜನೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ.

” ಕೈಗಾರಿಕೋದ್ಯಮದಲ್ಲಿ ಆಸಕ್ತಿ ಹೊಂದಿರುವವರಿಗೆ ಸರ್ಕಾರದ ಹಲವು ಯೋಜನೆಗಳು ಇದ್ದು, ಇವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡರೆ ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದಾಗಿದೆ.”

-ಡಾ.ರಚನಾ ಮಹೇಶ್, ಉದ್ಯಮಿ, ಮೈಸೂರು

” ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳಿಂದ ಕೈಗಾರಿಕೋದ್ಯಮದಲ್ಲಿ ಆಸಕ್ತಿ ಹೊಂದಿರುವವರಿಗೆ ಹೆಚ್ಚಿನ ಉಪಯುಕ್ತವಾಗಿದೆ. ೧ ಕೋಟಿ ರೂ. ವರೆಗೂ ಸಾಲ ದೊರೆಯುತ್ತಿದ್ದು, ಯಾರಾದರೂ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಳ್ಳಬಹುದಾಗಿದೆ. ಉತ್ತಮ ಯೋಜನೆಗಳಿದ್ದು, ಉಪಯೋಗಿಸಿಕೊಂಡು ಆಸಕ್ತರು ಕೈಗಾರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬಹುದು.”

-ಕೆ.ಎಸ್.ಸುಧಿರ್, ಮೈಸೂರಿನ ಮುಖ್ಯಸ್ಥರು, ಕರ್ನಾಟಕ ಡಿಜಿಟಲ್ ಆರ್ಥಿಕ ಮಿಷನ್

ಅರ್ಜಿ ಸಲ್ಲಿಕೆ ಹೇಗೆ?:  ಅರ್ಜಿಯನ್ನು ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೇರವಾಗಿ ಅಥವಾ Udyamimitra
portal (www.udyamimitra.in) ಮೂಲಕ ಆನ್ ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ

ಆಂದೋಲನ ಡೆಸ್ಕ್

Recent Posts

ಭಾರತ-ರಷ್ಯಾ ನಡುವೆ ಹಲವು ಒಪ್ಪಂದಗಳಿಗೆ ಸಹಿ

ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನವದೆಹಲಿಯ…

23 mins ago

ವಾಚ್‌ ವಿಚಾರವಾಗಿ ಸುಳ್ಳು ಹೇಳಿದ್ದರೆ ಇಂದೇ ರಾಜೀನಾಮೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ನಾನು ನನ್ನ ವಾಚ್ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಎಲ್ಲಾ ನೀಡಿದ್ದೇನೆ. ನಾನು ಈ ವಿಚಾರದಲ್ಲಿ…

28 mins ago

ನನಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ: ಸಚಿವ ದಿನೇಶ್‌ ಗುಂಡೂರಾವ್‌

ಮೈಸೂರು: ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.…

1 hour ago

ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ

ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಆರೋಪಿಯಾಗಿ ಜೈಲಿನಲ್ಲಿರುವ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಜಾಮೀನು ಸಿಕ್ಕಿ…

1 hour ago

ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ, ಶ್ರೀ ನಂಜುಂಡಸ್ವಾಮಿಗಳ 16ನೇ ಸಂಸ್ಮರಣೋತ್ಸವ

ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…

2 hours ago

ರೆಪೋ ದರ ಕಡಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್‍ಗಳಷ್ಟು…

2 hours ago