ನಂಜನಗೂಡು: ಸರ್ಕಾರದ ಅಧಿಕಾರಿಗಳು ಖಾಸಗಿ ಬಡಾವಣೆಯವರ ಆಮಿಷಕ್ಕೆ ಒಳಗಾಗಿ ಜಮೀನಿನ ಹಿತ ಮರೆತು ನಾಲೆಯ ಪಥವನ್ನೇ ಬದಲಾಯಿಸಲು ಹೊರಟಿರುವ ಸುದ್ದಿ ಸೋಮವಾರ ‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಗಮನಿಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ದೇಬೂರು ಬಳಿಯ ಆ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ನಾಲೆಯ ಪಥದ ಬದಲಾವಣೆ ಕುರಿತಂತೆ ಪರಿಶೀಲನೆಗೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಕಬಿನಿ ನಾಲೆ ವಿಭಾಗದ ಅಧಿಕಾರಿ (ಇಇ) ಮಧುಸೂದನ ಅವರಿಗೆ ಗ್ರಾಮಸ್ಥರು ಈ ಕುರಿತು ಸಮಗ್ರ ಮಾಹಿತಿ ನೀಡಿ, ಈ ಜಮೀನಿನಲ್ಲಿ ನಾಲೆ ನಿರ್ಮಿಸಲು ಸರ್ಕಾರ ೧೯೭೩ರಲ್ಲೇ ೫ ಗುಂಟೆ ಜಮೀನು ವಶಪಡಿಸಿಕೊಂಡು ಜಮೀನಿನ ಮಾಲೀಕರಿಗೆ ಪರಿಹಾರವನ್ನೂ ನೀಡಿತ್ತು ಎಂಬ ಅಂಶವನ್ನು ಗಮನಕ್ಕೆ ತಂದರು. ಪರಿಹಾರ ನೀಡಿದ ಮೇಲೆ ಜಾಗ ಸರ್ಕಾರದ್ದಲ್ಲವೇ? ಪರಿಹಾರ ಪಡೆದುಕೊಂಡ ಮಾಲೀಕರಿಗೆ ಆ ಜಾಗದ ಹಕ್ಕು ಎಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರು ಹರಿಯುವ ಹಳ್ಳದ ಪಥ ಬದಲಾವಣೆ ಮಾಡಲಾಗುತ್ತಿದೆಯೇ ಹೊರತು ನಾಲೆಯನ್ನು ಅಲ್ಲ ಎಂದು ನೂತನ ಬಡಾವಣೆಯ ಮಾಲೀಕರು ಅಧಿಕಾರಿಗಳ ಮುಂದೆ ಪ್ರತಿಪಾದಿಸಿದಾಗ, ತಕ್ಷಣ ಕಾಮಗಾರಿ ನಿಲ್ಲಿಸಿ, ಸೂಕ್ತವಾದ ದಾಖಲೆ ತನ್ನಿ ಎಂದು ಮಧುಸೂದನ ಸೂಚಿಸಿದರು. ಅಲ್ಲದೆ, ಈ ಜಾಗದ ಕುರಿತಂತೆ ದಾಖಲೆಗಳಿಗಾಗಿ ಕಂದಾಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಕೆಲವು ತಿಂಗಳ ಹಿಂದೆ ಕಬಿನಿ ನಾಲಾ ವ್ಯಾಪ್ತಿಯ ೬ ಕೋಟಿ ರೂ. ಮೊತ್ತದ ನಾಲೆಯ ಮಣ್ಣು ರೆಸಾರ್ಟ್‌ಗೆ ಅಕ್ರಮವಾಗಿ ಸಾಗಾಣಿಕೆಯಾದ ಪ್ರಕರಣ ಏನಾಯಿತು? ಎಂದು ಮಧುಸೂದನ್ ಅವರನ್ನು ಪ್ರಶ್ನಿಸಿದಾಗ, ಆಗ ನಾನಿರಲಿಲ್ಲ, ನಾನು ಹೊಸದಾಗಿ ಬಂದಿದ್ದು, ನಾಳೆಯೇ ಆ ಕುರಿತು ಪರಿಶೀಲಿಸುತ್ತೇನೆ ಎಂದು ತಿಳಿಸಿದರು.
ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…
ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…
ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…
ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…
ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…
ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…