Andolana originals

ಶ್ರೀ ತ್ರಿನೇಶ್ವರ ಸ್ವಾಮಿಗೆ ಚಿನ್ನದ ಕೊಳಗ ಧಾರಣೆ

ಗಿರೀಶ್ ಹುಣಸೂರು

ಮಹಾಶಿವರಾತ್ರಿಯಂದು ವಿಶೇಷವಾಗಿ ಕಂಗೊಳಿಸಲಿರುವ ಮೂರ್ತಿ

ಮೈಸೂರು ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇಶ್ವರಸ್ವಾಮಿ ದೇಗುಲ

೧೧ ಕೆಜಿ ತೂಕದ ಚಿನ್ನದ ಕೊಳಗ (ಮುಖವಾಡ)

ಪಶ್ವಿಮಾಭಿಮುಖವಾಗಿರುವುದು ಈ ದೇವಾಲಯದ ವಿಶೇಷ

೧೯ನೇ ಶತಮಾನದ ಮೈಸೂರು ಚಿತ್ರಕಲಾ ವೈಭವಕ್ಕೆ ಅತ್ಯುತ್ತಮ ನಿದರ್ಶನವಾದ ದೇವಸ್ಥಾನ 

ಮೈಸೂರು: ಶತಮಾನಗಳಿಂದಲೂ ಮೈಸೂರಿನ ಚಿತ್ರಕಲಾ ವೈಭವಕ್ಕೆ ಉತ್ತಮ ನಿದರ್ಶನವಾಗಿ ಉಳಿದು ಬಂದಿರುವ ದೇವಾಲಯವೊಂದಕ್ಕೆ ಪ್ರತಿ ವರ್ಷ ಮಹಾಶಿವರಾತ್ರಿಯ ಸಂದರ್ಭದಲ್ಲಿ ವಿಶೇಷ ಸಡಗರ. ಅರಮನೆ ಆವರಣದಲ್ಲಿರುವ ಆ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವನ ಪ್ರತಿಮೆಗೆ ಸ್ವರ್ಣದಿಂದ ತಯಾರಿಸಿದ ಕೊಳಗ (ಮುಖವಾಡ) ಧಾರಣೆ ಮಾಡಲಾಗುತ್ತದೆ.

ಮಹಾ ಶಿವರಾತ್ರಿಯಂದು ಮೈಸೂರು ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇಶ್ವರಸ್ವಾಮಿ (ಮುಕ್ಕಣ್ಣ)ಗೆ ಚಿನ್ನದ ಕೊಳಗ ಧಾರಣೆ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಮೈಸೂರಿನ ದೊಡ್ಡ ಕೆರೆ ಏರಿಯ ಮೇಲೆ ಈ ಪ್ರದೇಶದಲ್ಲಿ ಅರಮನೆ ನಿರ್ಮಿಸುವ ಮುಂಚೆಯೇ ತ್ರಿನೇಶ್ವರಸ್ವಾಮಿ ಮತ್ತು ಕೋಡಿ ಸೋಮೇಶ್ವರಸ್ವಾಮಿ ದೇವಸ್ಥಾನಗಳನ್ನು ೧೬ನೇ ಶತಮಾನದಲ್ಲಿ ರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ದ್ರಾವಿಡ ಶೈಲಿ ಯಲ್ಲಿ ನಿರ್ಮಿಸಲಾಗಿದೆ ಎಂಬ ಮಾಹಿತಿ ಇದೆ. ಹಳೆಯ ದೇವಾಲಯವು ೧೫೭೮-೧೬೧೭ರ ಅವಧಿಯಲ್ಲಿ ಮೈಸೂರು ಸಂಸ್ಥಾನವನ್ನಾಳಿದ ರಾಜ ಒಡೆಯರ್ ಆಳ್ವಿಕೆಗೂ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂದೂ ಹೇಳಲಾಗುತ್ತದೆ.

ಸಾಮಾನ್ಯವಾಗಿ ದೇವಾಲಯಗಳು ಪೂರ್ವಾಭಿಮುಖವಾಗಿರುತ್ತವೆ. ಆದರೆ, ತ್ರಿನೇಶ್ವರಸ್ವಾಮಿ ದೇವಳ ಪಶ್ಚಿಮಾಭಿಮುಖವಾಗಿ ಅರಮನೆ ಕೋಟೆಯ ಈಶಾನ್ಯ ದಿಕ್ಕಿನಲ್ಲಿದೆ. ರಾಜ ಒಡೆಯರ್ ನಂತರ ಅಧಿಕಾರ ವಹಿಸಿಕೊಂಡ ಕಂಠೀರವ ನರಸರಾಜ ಒಡೆಯರ್ ಮತ್ತು ದೊಡ್ಡ ದೇವರಾಜ ಒಡೆಯರ್ರ ಆಳ್ವಿಕೆಯಲ್ಲಿ ಮೈಸೂರು ಕೋಟೆಯನ್ನು ವಿಸ್ತರಿಸಲಾಯಿತು. ಅದರ ಪರಿಣಾಮ ಈ ದೇವಾಲಯ ಕೋಟೆಯ ಒಳಾವರಣಕ್ಕೆ ಸೇರಿತು. ಕಂಠೀರವ ನರಸರಾಜ ಒಡೆಯರ್ ಆಳ್ವಿಕೆಯಲ್ಲಿ ದೇವಾಲಯದ ವರಾಂಡವನ್ನು ನಿರ್ಮಿಸಿ, ಪಂಚ ಲಿಂಗಗಳು, ದಕ್ಷಿಣಾಮೂರ್ತಿ, ಕ್ಷೇತ್ರಪಾಲ, ಕುಮಾರ ಮತ್ತು ಸೂರ್ಯ ಸೇರಿದಂತೆ ಹಲವಾರು ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಅಂಗಳದಲ್ಲಿರುವ ಮರದ ಕೆಳಗೆ ನಾಗರ ಕಲ್ಲುಗಳಿವೆ. ದೇವಸ್ಥಾನ ಪ್ರಕಾರದ ಸುತ್ತಲೂ ಪಾರ್ವತಿ, ಚಾಮುಂಡೇಶ್ವರಿ, ಸೂರ್ಯ ನಾರಾಯಣ ಮತ್ತು ಶಂಕರಾಚಾರ್ಯರ ಮೂರ್ತಿಗಳು ಮತ್ತು ಲಿಂಗಗಳಿವೆ.

ದೇವಾಲಯದ ಮಹಾದ್ವಾರದ ಒಳಗಿನ ಗೂಡುಗಳಲ್ಲಿ ಗಣಪತಿ ಮತ್ತು ಭೈರವ ಮೂರ್ತಿಗಳಿವೆ. ನವರಂಗದಲ್ಲಿ ಎರಡು ಪ್ರವೇಶದ್ವಾರಗಳಿದ್ದು, ಒಂದು ಪಶ್ಚಿಮ ದಿಕ್ಕಿಗೆ ಮತ್ತು ಇನ್ನೊಂದು ದಕ್ಷಿಣ ಕಡೆಗಿದೆ. ಸುಖನಾಸಿ ಪ್ರವೇಶದ್ವಾರದ ಎಡಭಾಗದಲ್ಲಿ ಸುಮಾರು ಅರ್ಧ ಮೀಟರ್ ಎತ್ತರವಿರುವ ತೃಣಬಿಂದು ಮಹರ್ಷಿ ಪ್ರತಿಮೆ ಇದೆ. ತೃಣಬಿಂದು ಮಹರ್ಷಿಗಳು ಈ ಸ್ಥಳದಲ್ಲಿ ಶಿವನಿಗಾಗಿ ತಪಸ್ಸು ಮಾಡಿದ್ದರು ಎನ್ನಲಾಗಿದೆ. ಅವರಿಗೆ ಈ ಜಾಗದಲ್ಲಿಯೇ ದೇವರು ಕಾಣಿಸಿಕೊಂಡ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ತ್ರಿನೇಶ್ವರಸ್ವಾಮಿ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು ಎಂಬುದಾಗಿ ಸ್ಥಳ ಪುರಾಣ ಇದೆ ಎನ್ನುತ್ತಾರೆ ತ್ರಿನೇಶ್ವರ ಸ್ವಾಮಿ ದೇವಾಲಯದ ಅಂಗಳದಲ್ಲಿರುವ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಅರ್ಚಕರು.

ಮೂರು ಕಣ್ಣುಗಳುಳ್ಳ ಶಿವನ ಪ್ರತಿಮೆಯನ್ನು ಪ್ರತಿಷ್ಠಾಪಿಸಿರುವುದರಿಂದ ತ್ರಿನೇಶ್ವರ ಅಥವಾ ತ್ರಿನಯನೇಶ್ವರ ಎಂದು ಕರೆಯಲಾಗುತ್ತದೆ. ದೇವಾಲಯದ ದಕ್ಷಿಣ ದ್ವಾರಕ್ಕೆ ಎದುರಾಗಿರುವ ಕೋಶದಲ್ಲಿ ದೇವರ ಪ್ರತಿಮೆ ಇದೆ. ಎರಡು ಗೂಡುಗಳಲ್ಲಿ ಎರಡೂ ಬದಿಯಲ್ಲಿ ಗಣಪತಿಯ ಮೂರ್ತಿಗಳಿವೆ. ನವರಂಗದ ದಕ್ಷಿಣ ಹೊರಗೋಡೆಯ ಮೇಲೆ ವೀರಭದ್ರ ಮತ್ತು ದಕ್ಷಿಣಾಮೂರ್ತಿಯ ಆಕೃತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮಹಾಶಿವರಾತ್ರಿ ಹಬ್ಬದ ದಿನ ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ.

ಚಿನ್ನದ ಕೊಳಗದ ವಿಶೇಷ: 

ಮೈಸೂರು ಸಂಸ್ಥಾನದ ಕೊನೆಯ ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು, ತಮಗೆ ಪುತ್ರ ಸಂತಾನವಾದ ಸವಿನೆನಪಿಗಾಗಿ (ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದಾಗ) ೧೯೫೩ರಲ್ಲಿ ಅರಮನೆ ಕೋಟೆಯಲ್ಲಿರುವ ಶ್ರೀ ತ್ರಿನೇಶ್ವರಸ್ವಾಮಿ, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ಹಾಗೂ ಮಲೆ ಮಹದೇಶ್ವರಸ್ವಾಮಿಗೆ ಅಪರಂಜಿ ಚಿನ್ನದಲ್ಲಿ ಸುಂದರವಾದ ಕೊಳಗ (ಮುಖವಾಡ ) ಮಾಡಿಸಿಕೊಟ್ಟಿದ್ದಾರೆ.

ಆಂದೋಲನ ಡೆಸ್ಕ್

Recent Posts

ಬಹೂರೂಪಿ | ಜಾನಪದ ಉತ್ಸವಕ್ಕೆ ಚಾಲನೆ

ಮೈಸೂರು : ಸಂಕ್ರಾಂತಿ ಹೊಸ್ತಿಲಲ್ಲಿ ಮೈಸೂರಿನಲ್ಲಿ ನಡೆಯುವ ಕಲಾ ಹಬ್ಬವಾದ ಬಹುರೂಪಿ ನಾಟಕೋತ್ಸವವಕ್ಕೆ ಮುನ್ನುಡಿ ಬರೆದು ‘ಜಾನಪದ ಉತ್ಸವ’ ರಂಗಾಯಣದಲ್ಲಿ…

2 hours ago

ಸಂಗ್ರಹಾಲಯವಾಗಿ ಕುವೆಂಪು ಅವರ ಉದಯರವಿ ಮನೆ

ರಸಪ್ರಶ್ನೆ ಕಾರ್ಯಕ್ರಮದ ಸಮಾರಂಭದಲ್ಲಿ ಡಾ.ಚಿದಾನಂದ ಗೌಡ ಮಾಹಿತಿ ಕುಶಾಲನಗರ : ಕುವೆಂಪುರವರ ಉದಯರವಿ ಮನೆಯನ್ನು ಸಂಗ್ರಹಾಲಯ ಮಾಡುವ ಬಗ್ಗೆ ಚಿಂತನೆ…

2 hours ago

ಮ.ಬೆಟ್ಟ ಮಾರ್ಗದಲ್ಲಿ ಚಿರತೆ ಪ್ರತ್ಯಕ್ಷ : ಎಚ್ಚರಿಕೆಯ ಸಂಚಾರಕ್ಕೆ ಕೋರಿಕೆ

ಹನೂರು : ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಾರ್ಗಮಧ್ಯ ರಂಗಸ್ವಾಮಿ ಒಡ್ಡಿನ ಬಳಿ ತಡೆಗೋಡೆಯ ಮೇಲೆ ಚಿರತೆ ಮತ್ತು ಅದರ ಎರಡು…

2 hours ago

ದ್ವೇಷ ಮರೆಯಿರಿ, ಪ್ರೀತಿ ಗಳಿಸಿ : ಡಿ.ಆರ್.ಪಾಟೀಲ್ ಕರೆ

ನಂಜನಗೂಡು : ದ್ವೇಷ ಮರೆತು, ಪ್ರೀತಿ ಗಳಿಸುವಂತೆ ಕೆಲಸ ಮಾಡಿ ಜೀವನ ನಡೆಸಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ…

3 hours ago

ಡ್ಯಾಡ್ ಈಸ್‌ ಹೋಂ | ಎಚ್‌ಡಿಕೆ ಎಂಟ್ರಿಗೆ ಡಿಕೆಶಿ, ಸಿದ್ದು ಶಾಕ್‌ ; ಸಂಚಲನ ಮೂಡಿಸುತ್ತಿರುವ AI ವಿಡಿಯೋ

ಬೆಂಗಳೂರು : ನಟ ಯಶ್ ಅವರು ‘ಟ್ಯಾಕ್ಸಿಕ್’ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟೀಸರ್ ನಲ್ಲಿನ ಕಾರು…

3 hours ago

ಸೋಮನಾಥದಲ್ಲಿ ಶೌರ್ಯ ಯಾತ್ರೆ

ಸೋಮನಾಥ : ಗುಜರಾತ್‌ನ ಗಿರ್‌ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಆಯೋಜಿಸಲಾದ ವಿಧ್ಯುಕ್ತ…

3 hours ago