ಮೂಲ ನೊಬೆಲ್ ಪ್ರಶಸ್ತಿಗಳಲ್ಲಿ ಅರ್ಥಶಾಸ್ತ್ರ ಇರಲಿಲ್ಲ. ೧೯೬೮ರಲ್ಲಿ ಸ್ವೀಡನ್ನಿನ ಕೇಂದ್ರೀಯ ಬ್ಯಾಂಕು ತನ್ನ ೩೦೦ ವರ್ಷಗಳ ಅಸ್ತಿತ್ವದ ನೆನಪಿನಲ್ಲಿ ಸ್ವೀಡಿಶ್ ಆಕ್ಯಾಡೆಮಿ ಆಫ್ ಸೈನ್ಸಸ್‌ನಲ್ಲಿ ಇಟ್ಟಿರುವ ದತ್ತಿಯಿಂದ ಆಲ್ಫ್ರೆಡ್ ನೊಬೆಲ್ ಹೆಸರಿನಲ್ಲಿ ೧೯೬೯ರಿಂದ ಅರ್ಥಶಾಸ ನೊಬೆಲ್ ಪ್ರಶಸ್ತಿ ಆರಂಭವಾಯಿತು. ಇದು ಆರನೆಯ ಪ್ರಶಸ್ತಿ. ಮೊದಲ ಕೆಲವು ದಶಕಗಳಲ್ಲಿ ಅರ್ಥಶಾಸದ ಮೂಲ ಸಿದ್ಧಾಂತಗಳಲ್ಲಿ ಆಳವಾದ ಅಧ್ಯಯನ ಮಾಡಿ ಹೊಸತನವನ್ನು ರೂಪಿಸಿದವರಿಗೆ ಕೊಡಲಾಗುತ್ತಿತ್ತು. ಇತ್ತೀಚೆಗೆ ಅನ್ವಯ ಅರ್ಥಶಾಸಕ್ಕೆ ಒತ್ತು ಕೊಡಲಾಗುತ್ತಿದೆ. ಈ ಐವತ್ತಾರು ವರ್ಷಗಳಲ್ಲಿ ಭಾರತದ ಅಭಿಜಿತ್ ಬ್ಯಾನರ್ಜಿಯವರ ಪತ್ನಿಯೂ ಸೇರಿದಂತೆ ಕೆಲವೇ ಬೆರಳೆಣಿಕೆಯಷ್ಟು ಮಹಿಳೆಯರು ಈ ಪ್ರಶಸ್ತಿ ಪಡೆದಿದ್ದಾರೆ. (ಅಭಿಜಿತ್ ಬ್ಯಾನರ್ಜಿ ಪತಿಪತ್ನಿ ಇಬ್ಬರಿಗೂ ಒಂದೇ ಸಲ ಪ್ರಶಸ್ತಿ ಬಂದಿತ್ತು, ಆ ಮಾತು ಬೇರೆ)
’’creative distruction’ (ಸೃಜನಶೀಲ ಹಾಳು ಮಾಡುವಿಕೆ ) ಎನ್ನುವ ಒಂದು ಮಾತಿದೆ. ಅಂದರೆ ಹಳೆಯ ವ್ಯವಸ್ಥೆಯನ್ನು ನಾಶ ಮಾಡುತ್ತೇವೆ ಎಂದರೆ ಹೊಸ ವ್ಯವಸ್ಥೆ ಸೃಷ್ಟಿಯಾಗುತ್ತದೆ ಎಂದರ್ಥ. ಅಥವಾ ಹೊಸದು ಬಂದಾಗಲೆಲ್ಲ ಹಳೆಯದು ನಾಶವಾಗುತ್ತದೆ ಎಂದೂ ಹೇಳಬಹುದು. ಪ್ರತಿಯೊಂದು ಬದಲಾವಣೆ ಅಥವಾ ಹೊಸತನ ಮಾನವನ ಜೀವನವನ್ನು ಮೊದಲಿಗಿಂತ ಉತ್ತಮಪಡಿಸುವಂತಿರಬೇಕು. ಇದು ಸಾಮಾಜಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಮತ್ತು ವಿಜ್ಞಾನ, ತಂತ್ರಜ್ಞಾನ ಹೀಗೆ ಎಲ್ಲದಕ್ಕೂ ಅನ್ವಯಿಸುತ್ತದೆ. ಅಭಿವೃದ್ಧಿ ಎಂದರೆ ಸರ್ವಾಂಗೀಣ ಬೆಳವಣಿಗೆ ಎಂದೂ ಹೇಳುತ್ತಾರೆ. ಆರ್ಥಿಕ ಬೆಳವಣಿಗೆ ಅದರ ಒಂದು ಭಾಗವೆನ್ನಬಹುದು.
ಈ ವರ್ಷದ ವಿಜೇತರು:
ಆಕ್ಯಾಡೆಮಿಯ ನೊಬೆಲ್ ಪ್ರಶಸ್ತಿ ಸಮಿತಿಯು ಅರ್ಥಶಾಸ ಪ್ರಶಸ್ತಿಗೆ ಈ ವರ್ಷ ಫ್ರಾನ್ಸ್ ದೇಶದ ಕಾಲೇಜ್ ಡಿ ಫ್ರಾನ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕ ರಾಗಿರುವ ಫಿಲಿಪ್ಪೆ ಆಯಾನ್, ಅಮೆರಿಕೆಯ ನಾರ್ಥ್ ವೆಸ್ಟರ್ನ್ ವಿಶ್ವವಿದ್ಯಾನಿಲಯದ ಪ್ರೊ. ಜೋಯೆಲ್ ಮೂಕಿರ್ ಮತ್ತು ಅದೇ ದೇಶದ ಬ್ರೌನ್ ವಿಶ್ವವಿದ್ಯಾನಿಲಯದ ಪ್ರೊ. ಪೀಟರ್ ಹೊವಿಟ್‌ರವರನ್ನು ಆಯ್ಕೆ ಮಾಡಿದೆ. ೧೧ ಮಿಲಿಯನ್ ಸ್ವೀಡಿಶ್ ಕ್ರೌನ್‌ಗಳ (೧.೨ ಮಿಲಿಯನ್ ಅಮೆರಿಕನ್ ಡಾಲರ್) ಮೌಲ್ಯದ ಪ್ರಶಸ್ತಿ ಮೊತ್ತದಲ್ಲಿ ಅರ್ಧ ಭಾಗವನ್ನು ಪ್ರೊ. ಜೋಯೆಲ್ ಮೂಕಿರ್‌ರವರು ಪಡೆಯುತ್ತಾರೆ. ಉಳಿದರ್ಧ ಭಾಗದಲ್ಲಿ ಪ್ರೊ. ಫಿಲಿಪ್ಪೆ ಆಯಾನ ಮತ್ತು ಪ್ರೊ. ಪೀಟರ್ ಹೊವಿಟ್‌ರವರು ಸಮಪಾಲು ಪಡೆಯುತ್ತಾರೆ ಎಂದು ಸಮಿತಿ ಪ್ರಕಟಿಸಿದೆ. ಇವರ ಸಂಶೋಧನೆಗಳು ಜಗತ್ತಿನಾದ್ಯಂತ ಹೇಗೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರ ಮತ್ತು ನಾವಿನ್ಯತೆಗಳು (innovations) ಸೃಜನಶೀಲ ಬದಲಾವಣೆಯ ಶಕ್ತಿಗಳೊಡನೆ ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸುತ್ತವೆ ಮತ್ತು ಮಾನವ ಜೀವನ ಮಟ್ಟವನ್ನು ಮೇಲೆತ್ತುತ್ತವೆ ಎಂಬುದನ್ನು ತೋರಿಸಿಕೊಟ್ಟಿವೆ ಎಂದು ಆಕ್ಯಾಡೆಮಿಯ ಪ್ರಶಸ್ತಿ ಪ್ರಕಟಣೆಯಲ್ಲಿ ಪ್ರಶಂಸಿಸಿದೆ. ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಕಲ್ಯಾಣಕ್ಕೆ ತಂತ್ರಜ್ಞಾನದ ಅನಿವಾರ್ಯತೆಯನ್ನು ಇದು ತೋರಿಸುತ್ತದೆ.
ಇದನ್ನು ಓದಿ: ಅವಸಾನದಂಚಿನಲ್ಲಿ ಸಂಬಾರ ಪದಾರ್ಥಗಳ ರಾಣಿ
ಇವರ ಅಧ್ಯಯನಗಳಂತೆ ತಂತ್ರಜ್ಞಾನದ ಫಲವಾಗಿ ಹೊಸ ಉತ್ಪಾದನಾ ವಿಧಾನಗಳು ಮತ್ತು ಹೊಸ ಉತ್ಪಾದನೆಗಳು(ಉತ್ಪನ್ನಗಳು ) ಲಭ್ಯವಾಗುತ್ತವೆ. ಇವುಗಳಿಂದ ಜನರಿಗೆ ಹೊಸ ಆರೋಗ್ಯ ಸೇವೆಗಳು , ಸುಧಾರಿತ ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳು ದೊರೆತು ಜೀವನಮಟ್ಟ ಹೆಚ್ಚಾಗುತ್ತದೆ ಎಂಬುದನ್ನು ಈ ಅರ್ಥಶಾಸಜ್ಞರು ತೋರಿಸಿಕೊಟ್ಟಿದ್ದಾರೆ. ಇದು ಆರ್ಥಿಕ ಅಭಿವೃದ್ಧಿಗಾಗಿ ನಿರಂತರವಾಗಿ ತಂತ್ರಜ್ಞಾನದ ಬೆಳವಣಿಗೆ ಮತ್ತು ಅದರ ಅಳವಡಿಕೆ ಅನಿವಾರ್ಯ ಎಂಬುದನ್ನು ಅವರು ಒತ್ತು ಕೊಟ್ಟು ಹೇಳುತ್ತಾರೆ.
ಆರ್ಥಿಕ ನಿಷ್ಕ್ರಿಯತೆ ಅಥವಾ ಸ್ತಬ್ದತೆ Stagnation ಮತ್ತು ಹಿಂಜರಿತ Recession ಅಭಿವೃದ್ಧಿಗೆ ದೊಡ್ಡ ತೊಡಕುಗಳಾಗಿದ್ದು, ಇತಿಹಾಸದುದ್ದಕ್ಕೂ ಆಗಾಗ ಕಾಡಿದ್ದನ್ನು ಕಂಡಿದ್ದೇವೆ. ತಂತ್ರಜ್ಞರು, ಅರ್ಥಶಾಸಜ್ಞರು ಮತ್ತು ನೀತಿ ನಿರೂಪಕರು ಸದಾ ಎಚ್ಚರವಾಗಿದ್ದು ತೊಡಕುಗಳು ಯಾವುದೇ ರೂಪದಲ್ಲಿ ಬಂದರೂ ಅವುಗಳನ್ನು ಹಿಮ್ಮೆಟ್ಟಿಸಿ ಅಭಿವೃದ್ಧಿ ಮುನ್ನಡೆಸುವ ಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾಗುತ್ತದೆ ಎಂಬುದನ್ನೂ ಈ ಮೂವರೂ ಸ್ಪಷ್ಟವಾಗಿ ವಿವರಿಸಿದ್ದಾರೆ.
ಹಾಗೆ ನೋಡಿದರೆ ಈ ವರ್ಷದ ವಿಜೇತರ ಮೂಲ ಮಂತ್ರ ‘ಸೃಜನಶೀಲ ನಾಶಮಾಡುವಿಕೆ’ ಎನ್ನುವಂತೆ ಭಾಸವಾಗುತ್ತದೆ. ಪ್ರಶಸ್ತಿ ಸಮಿತಿಯ ಸದಸ್ಯ ಪ್ರೊ. ಕರ್‌ಸ್ಟಿನ್‌ಎನ್-ರವರ ಅಭಿಪ್ರಾಯದಂತೆ ‘ಈ ಮೂವರ ಆಳವಾದ ಅಧ್ಯಯನಗಳು ಹೊಸ ತಂತ್ರಜ್ಞಾನವನ್ನು ಸ್ವೀಕರಿಸಲು ಮಾನವ ಸಮಾಜವು ಸಾಂಸ್ಕೃತಿಕವಾಗಿಯೂ ತಯಾರಾಗಿರ ಬೇಕೆಂಬುದನ್ನು ಖಚಿತವಾಗಿ ವಿವರಿಸುತ್ತವೆ’
ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ವಿಜೇತರು ತಮ್ಮ ಬರಹ ಮತ್ತು ಮಾತುಗಳಲ್ಲಿ ಪ್ರತಿಪಾದಿಸುತ್ತಿರುವುದು ಅವರ ಮಾತುಗಳಿಂದಲೇ ತಿಳಿಯುತ್ತದೆ. ಪ್ಯಾರಿಸ್‌ನಲ್ಲಿ ಅಲ್ಲದೇ ಲಂಡನ್ನಿನ ಸ್ಕೂಲ್ ಆಫ್ ಇಕನಾಮಿಕ್ ನಲ್ಲಿಯೂ ಪಾಠಮಾಡುತ್ತಿರುವ ಫಿಲಿಪ್ಪೆ ಆಯಾನ್‌ರವರು ಪ್ರಶಸ್ತಿ ಪ್ರಕಟವಾದ ನಂತರ ಪತ್ರಕರ್ತರೊಡನೆ ಮಾತನಾಡುತ್ತ ‘ಜಾಗತೀಕರಣದ ವಿರುದ್ಧ ನಡೆ ಮತ್ತು ದೇಶಗಳಿಂದ ತೆರಿಗೆ ತಡೆಗೋಡೆಗಳ ನಿರ್ಮಾಣ ಮುಂತಾದವುಗಳು ಆರ್ಥಿಕ ಬೆಳವಣಿಗೆಗೆ ದೊಡ್ಡ ತೊಡಕುಗಳಾಗಿವೆ. ಮಾರುಕಟ್ಟೆಗಳು ತೆರಿಗೆ ಮುಕ್ತವಾಗಿದ್ದು ವಿಶಾಲವಾಗಿದ್ದರೆ ಅಭಿಪ್ರಾಯ ವಿನಿಮಯಕ್ಕೆ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಹೆಚ್ಚು ಅವಕಾಶವಿದ್ದು ಆರೋಗ್ಯಕರ ಸ್ಪರ್ಧೆ ನಡೆಯುತ್ತಿರುತ್ತದೆ’ ಎಂದಿದ್ದಾರೆ.
ತಂತ್ರಜ್ಞಾನ ಬೆಳವಣಿಗೆ ಮತ್ತು ನಾವೀನ್ಯತೆಗಳ ಲಾಭ ಸಮಾಜದ ಕಟ್ಟ ಕಡೆಯ ನಾಗರಿಕನಿಗೂ ತಲುಪಿ ಅವರ ಜೀವನ ಮಟ್ಟ ಸುಧಾರಿಸುವಂತೆ ಮಾಡಲು ಸಮರ್ಥ ಮತ್ತು ಪ್ರಾಮಾಣಿಕ ಪ್ರಜಾತಂತ್ರೀಯ ಸಂಸ್ಥೆಗಳನ್ನು (institutions) ಸರ್ಕಾರಗಳು ಸ್ಥಾಪಿಸಬೇಕು ಎನ್ನುವುದೂ ವಿಜೇತರ ಅಭಿಪ್ರಾಯ. ಹೀಗೆ ತಂತ್ರಜ್ಞಾನ, ನಾವೀನ್ಯತೆ, ಸಂಸ್ಥೆಗಳು ಮತ್ತು ಸಂಸ್ಕೃತಿ ಆರ್ಥಿಕಾಭಿವೃದ್ಧಿಗೆ ಪೂರಕವಾಗಿರಬೇಕಾದರೆ ಸರ್ಕಾರ ಮತ್ತು ಸಮಾಜ ಹೊಸದನ್ನು ಸ್ವೀಕರಿಸುವ ಮತ್ತು ಅದರ ಅನುಕೂಲತೆಗಳು ಎಲ್ಲರಿಗೂ ವಿಶೇಷವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕೆಳಸ್ತರದಲ್ಲಿರುವವರಿಗೆ ತಲುಪುವಂತೆ ಮಾಡುವ ಮನಸ್ಥಿತಿಯಲ್ಲಿರಬೇಕು. ಹಲವು ಎಚ್ಚರಿಕೆಯ ಕ್ರಮಗಳನ್ನು ಜಾರಿಗೊಳಿಸಬೇಕು. ಆರ್ಥಿಕ ಬೆಳವಣಿಗೆಯೊಡನೆ ಅಸಮಾನತೆಗಳನ್ನೂ ಕಡಿಮೆ ಮಾಡುವುದು ಅಷ್ಟೇ ಮುಖ್ಯ
” ತಂತ್ರಜ್ಞಾನ ಬೆಳವಣಿಗೆ ಮತ್ತು ನಾವೀನ್ಯತೆಗಳ ಲಾಭ ಸಮಾಜದ ಕಟ್ಟಕಡೆಯ ನಾಗರಿಕನಿಗೂ ತಲುಪಿ ಅವರ ಜೀವನ ಮಟ್ಟ ಸುಧಾರಿಸುವಂತೆ ಮಾಡಲು ಸಮರ್ಥ ಮತ್ತು ಪ್ರಾಮಾಣಿಕ ಪ್ರಜಾತಂತ್ರೀಯ ಸಂಸ್ಥೆಗಳನ್ನು (institutions) ಸರ್ಕಾರಗಳು ಸ್ಥಾಪಿಸಬೇಕು ಎನ್ನುವುದೂ ನೊಬೆಲ್ ಪ್ರಶಸ್ತಿ ವಿಜೇತರ ಅಭಿಪ್ರಾಯ.”
–ಪ್ರೊ.ಆರ್.ಎಂ.ಚಿಂತಾಮಣಿ
ತುಮಕೂರು : ಈಗಾಗಲೇ ಮದುವೆಯಾಗಿ ಹೆಂಡತಿಯಿದ್ದರೂ 2ನೇಯ ಮದುವೆಗೆ ತಯಾರಿ ನಡೆಸಿ ಕಲ್ಯಾಣ ಮಂಟಪದಲ್ಲಿ ಇನ್ನೇನು ಮಾಂಗಲ್ಯ ಧಾರಣೆ ನಡೆಯಬೇಕು…
ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಮೇಲಿನ ಜಾಹೀರಾತುಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ…
ಬೆಂಗಳೂರು : ಮೆಟ್ರೋ ದರ ಏರಿಕೆಗೆ ಬಿಎಂಆರ್‌ಸಿಎಲ್ ಬ್ರೇಕ್ ಹಾಕಿದೆ. ಸೋಮವಾರದಿಂದ ಶೇ.5ರಷ್ಟು ದರ ಏರಿಕೆಗೆ ಬಿಎಂಆರ್‌ಸಿಎಲ್ ಮುಂದಾಗಿತ್ತು. ಆದರೆ…
ಮೈಸೂರು : ಸಜಾ ಬಂಧಿಗಳು ಕಾರಾಗೃಹದಿಂದ ಬಿಡುಗಡೆಯಾಗುವುದರೊಳಗೆ ಉತ್ತಮ ನಡತೆಯನ್ನು ಹೊಂದಿ ಹೊರಗೆ ಹೋದ ಬಳಿಕ ಸಮಾಜಮುಖಿ ಜೀವನ ಆರಂಭಿಸಬೇಕು…
ಹುಣಸೂರು : 2028ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ…
ಮಳವಳ್ಳಿ : ತಾಯಿ ಮತ್ತು ಮಗಳು ಇಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ದಳವಾಯಿ ಕೋಡಿಹಳ್ಳಿ…