Andolana originals

ಪ್ರವಾಸಿಗರಿಲ್ಲದೇ ಭಣಗುಡುತ್ತಿರುವ ನೆಹರು ಮಂಟಪ

ಪುನೀತ್ ಮಡಿಕೇರಿ

ನಿತ್ಯ ೫೦-೬೦ ಜನರಷ್ಟೇ ಭೇಟಿ; ನೀಗಬೇಕಿದೆ ಪ್ರಚಾರದ ಕೊರತೆ 

ಮಡಿಕೇರಿ: ಬಣ್ಣ ಬಣ್ಣದ ಹೂಗಳಿಂದ ಆವೃತಗೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ನೆಹರು ಮಂಟಪ ಪ್ರವಾಸಿಗರಿಂದ ದೂರ ಉಳಿದಿದೆ.

ನಗರದ ರಾಜಾಸೀಟ್ ಉದ್ಯಾನದ ಸಮೀಪವಿರುವ ಮಡಿಕೇರಿ ಆಕಾಶವಾಣಿ ಕೇಂದ್ರದ ಮುಖ್ಯ ರಸ್ತೆ ಮೂಲಕ ಸಾಗಿದರೆ ನೆಹರು ಮಂಟಪ ಸಿಗುತ್ತದೆ. ಆರಂಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಮಂಟಪದ ದುರಸ್ತಿಗೆ ನಿರ್ಲಕ್ಷ  ತೋರಿದ್ದವು. ಆದರೆ, ನಂತರದ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಮುಂದಾ ಳತ್ವದಲ್ಲಿ ಸುಮಾರು ೧೮ ಲಕ್ಷ ರೂ. ವೆಚ್ಚದಲ್ಲಿ ಹೊಸ ರೂಪ ಪಡೆದು ಉದ್ಘಾಟನೆಗೊಂಡಿತ್ತು. ಆದರೆ, ಪ್ರಚಾರದ ಕೊರತೆಯಿಂದ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ. ಹಿಂದೆ ಪ್ರವಾಸಿಗರ ಸ್ವರ್ಗವಾಗಿತ್ತು

ಹಲವು ವರ್ಷಗಳ ಕಾಲ ನೆಹರು ಮಂಟಪ ಪ್ರವಾಸಿಗರ ಸ್ವರ್ಗವಾಗಿತ್ತು. ನಿತ್ಯವೂ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಆದರೆ, ಇಲಾಖೆ ನಿರ್ಲಕ್ಷ  ಹಾಗೂ ನಿರ್ವಹಣೆಯಿಲ್ಲದೇ ದುಸ್ಥಿತಿಗೆ ತಲುಪಿತ್ತು. ಆ ನಂತರ ಅಭಿವೃದ್ಧಿ ಕಾಮಗಾರಿ ಕೈಗೊಂಡು ಇಂದು ಪ್ರವಾಸಿ ಗರನ್ನು ಆಕರ್ಷಿಸುವಂತಿದೆ. ಪ್ರಚಾರದ ಕೊರತೆಯಿಂದ ಬೆರಳೆಣಿಕೆ ಪ್ರವಾಸಿಗರಷ್ಟೇ ಭೇಟಿ ನೀಡು ತ್ತಿದ್ದಾರೆ. ಸ್ಥಳೀಯರು ಕೂಡ ವಾಯುವಿಹಾರಕ್ಕೆ ಬರುತ್ತಿಲ್ಲ.

ಪ್ರವಾಸಿಗರನ್ನು ಸೆಳೆಯಲಿದೆ ವ್ಯೂವ್ ಪಾಯಿಂಟ್: ರಾಜಾಸೀಟ್ ಉದ್ಯಾನ ಮಾದರಿಯಲ್ಲೇ ಬೆಟ್ಟದ ತುದಿಯಲ್ಲಿರುವ ನೆಹರು ಮಂಟಪದಿಂದ ಅಕರ್ಷಕ ಬೆಟ್ಟದ ಸಾಲು ಹಾಗೂ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಕುಳಿತುಕೊಳ್ಳಲು ಗ್ರಾನೈಟ್ ಬೆಂಚ್‌ಗಳನ್ನು ಅಳವಡಿಸಲಾಗಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಪ್ರವಾಸಕ್ಕೆಂದು ಮಡಿಕೇರಿಗೆ ಬರುವವರು ರಾಜಾಸೀಟ್, ರಾಜರ ಕೋಟೆ, ಗದ್ದುಗೆ, ಅಬ್ಬಿಫಾಲ್ಸ್, ಓಂಕಾರೇಶ್ವರ ದೇಗುಲಕ್ಕೆ ಭೇಟಿ ನೀಡಿ ವಾಪಸಾಗುತ್ತಿದ್ದರು. ಇಂದು ನೆಹರು ಮಂಟಪ ಕೂಡ ಆಕರ್ಷಣೀಯವಾಗಿದ್ದು, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾಗಿದೆ.

ರಾಜಾಸೀಟ್ ಉದ್ಯಾನಕ್ಕೆ ಗಿಡ: ಪ್ರವಾಸಿಗರ ನೆಚ್ಚಿನ ತಾಣ ರಾಜಾಸೀಟ್ ಉದ್ಯಾನಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಪ್ರವಾಸಿಗರನ್ನು ಆಕರ್ಷಿಸಲು ಇಲ್ಲಿ ಕೂಡ ಬಣ್ಣಬಣ್ಣದ ಹೂಗಿಡಗಳನ್ನು ಬೆಳೆಸಲಾಗಿದೆ. ರಾಜಾಸೀಟ್, ಗದ್ದಿಗೆ, ಹಾರಂಗಿಗೆ ಹೂವಿನ ಗಿಡಗಳು ಬೇಕಾದಲ್ಲಿ ನೆಹರು ಮಂಟಪ ಉದ್ಯಾನದಲ್ಲಿ ಹೂವಿನ ಬೀಜಗಳನ್ನು ಬಿತ್ತನೆ ಮಾಡಿ ಪಾಟ್‌ಗಳನ್ನು ತಯಾರಿ ಮಾಡಲಾಗುತ್ತದೆ. ಒಂದೇ ಗಿಡದಲ್ಲಿ ೩-೪ ಬಣ್ಣದ ಹೂಗಳನ್ನು ಬೆಳೆಸುವ ಕಾರ್ಯದಲ್ಲಿ ಕಾವಲುಗಾರ ಜಯಣ್ಣ ನಿರತರಾಗಿದ್ದಾರೆ.

ಏನೇನು ಆಗಬೇಕಿದೆ?: ಗುಲಾಬಿ, ಕನಕಾಂಬರ, ದಾಸವಾಳ, ಡೇಲಿಯಾ ಸೇರಿದಂತೆ ವಿವಿಧ ಜಾತಿಯ ಹೂಗಳೊಂದಿಗೆ ರಾರಾಜಿಸುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಗೃಹದ ವ್ಯವಸ್ಥೆಯಾಗಬೇಕಿದೆ. ಈಗಾಗಲೇ ಅಳವಡಿಸಿದ್ದ ಬಣ್ಣದ ವಿದ್ಯುತ್ ಬಲ್ಬ್‌ಗಳು ಹಾಳಾಗಿವೆ. ನೆಹರುಮಂಟಪಕ್ಕೆ ತೆರಳುವ ಮೆಟ್ಟಿಲುಗಳಿಗೆ ಬಣ್ಣ ಬಳಿಯುವ ಅವಶ್ಯವಿದೆ. ಈ ಹಿಂದೆ ಇದ್ದ ವಿದ್ಯುತ್ ಸಂಪರ್ಕ ಹಾಳಾಗಿದೆ. ಜತೆಗೆ ಸಿಸಿ ಕ್ಯಾಮೆರಾ ಹಾಳಾಗಿದ್ದು, ದುರಸ್ತಿಯಾಗಬೇಕಿದೆ. ಸಾಕಷ್ಟು ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ನೆಹರು ಮಂಟಪವನ್ನು ನಿರ್ಮಾಣ ಮಾಡಿದೆ. ಇದರ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆ ಮಾಡುತ್ತಿದ್ದು, ಮಂಟಪದ ಹಿತದೃಷ್ಟಿಯಿಂದ ಕಾವಲುಗಾರರನ್ನು ನೇಮಿಸಿದೆ. ಜತೆಗೆ ಗಿಡಗಳ ನಿರ್ವಹಣೆ ಮಾಡಲು ಇಬ್ಬರು ಕೆಲಸಗಾರರಿದ್ದಾರೆ. ಗಿಡಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ.

ನೆಹರು ಮಂಟಪ ಹೆಸರು ಬರಲು ಕಾರಣ: ಕೊಡಗು ಜಿಲ್ಲೆಗೆ ೧೯೫೭ರಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾ ಹರಲಾಲ್ ನೆಹರು ಭೇಟಿ ನೀಡಿದ್ದಾಗ ಈ ಸ್ಥಳದಲ್ಲಿ ಕುಳಿತು ಮಡಿಕೇರಿಯ ಪ್ರಕೃತಿಯ ಸೊಬಗನ್ನು ಆಸ್ವಾದಿಸಿದ್ದರು. ಅವರ ಭೇಟಿಯ ನೆನಪಿಗೆ ಮಂಟಪವನ್ನು ನಿರ್ಮಿಸಿ, ನೆಹರು ಮಂಟಪ ಎಂದು ಕರೆಯಲಾಗಿದೆ.

” ಪ್ರವಾಸಿಗರು ರಾಜಾಸೀಟ್ ಮತ್ತು ಅಬ್ಬಿ ಜಲಪಾತ ಮಾತ್ರ ಪ್ರವಾಸಿ ತಾಣಗಳೆಂದು ತಿಳಿದುಕೊಂಡಿದ್ದಾರೆ. ನೆಹರುಮಂಟಪದ ಬಗ್ಗೆ ನಾವು ಸಾಧ್ಯವಾದಷ್ಟುಪ್ರಚಾರಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪ್ರವಾಸಿಗರನ್ನು ಸೆಳೆಯಲು ಪ್ರಯತ್ನಿಸಲಾಗುವುದು. ಈ ಮೊದಲು ಅಳವಡಿಸಿದ್ದ ಸಿಸಿ ಕ್ಯಾಮೆರಾ ಹಾಳಾಗಿದ್ದು, ಬ್ಯಾಟರಿ ಅಥವಾ ಸೋಲಾರ್ ವ್ಯವಸ್ಥೆಯಿರುವ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸಲಾಗುವುದು.”

-ಶಶಿಧರ್, ಉಪನಿದೇರ್ಶಕರು, ತೋಟಗಾರಿಕೆ ಇಲಾಖೆ

ಆಂದೋಲನ ಡೆಸ್ಕ್

Recent Posts

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

46 mins ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

1 hour ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

1 hour ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

2 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

2 hours ago

ಕಿಚ್ಚ ಸುದೀಪ್‌ ಮಾರ್ಕ್‌ ಟ್ರೈಲರ್‌ ಅದ್ಧೂರಿ ಬಿಡುಗಡೆ

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್‌ ಸಿನಿಮಾ ಟ್ರೈಲರ್‌ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್‌ ಕಾರ್ತಿಕೇಯ-ಸುದೀಪ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…

3 hours ago