ಮಂಜು ಕೋಟೆ
ಮಹಾರಾಜರ ಕಾಲದಲ್ಲಿ ನೀಡಿದ್ದ ಪಂಚಲೋಹದ ವಿಗ್ರಹಗಳಿಗೆ ವಿಶೇಷ ಪೂಜೆ; ಸಾವಿರಾರು ಮಂದಿ ಭಾಗಿ
ಎಚ್.ಡಿ.ಕೋಟೆ: ಪಟ್ಟಣದ ಬೀರಪ್ಪ ದೇವಸ್ಥಾನದಲ್ಲಿ ನವರಾತ್ರಿಯ ಸಮಯದಲ್ಲಿ ಮೈಸೂರು ಮಹಾರಾಜರ ಆಡಳಿತದ ಕಾಲದಲ್ಲಿ ನೀಡಿದ್ದ ಪಂಚಲೋಹದ ವಿಗ್ರಹಗಳನ್ನು ಇರಿಸಿ ನಡೆಸಲಾಗುತ್ತಿದ್ದ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.
ಸುಮಾರು ೪೦೦ ವರ್ಷಗಳ ಹಿಂದೆ ಮೈಸೂರು ಮಹಾರಾಜರು ಕುರುಬಗೌಡ ಸಮುದಾಯದವರಿಗೆ ಲಕ್ಷಾಂತರ ರೂ. ಬೆಲೆಬಾಳುವ ಪಂಚಲೋಹದ ಬೀರೇಶ್ವರ ಮೂರ್ತಿ, ಆನೆ, ಕುದುರೆ, ಸೈನಿಕರು, ಒಂಟೆ, ಇನ್ನಿತರ ನೂರಾರು ವಿಗ್ರಹಗಳನ್ನು ನೀಡಿ ಗೌರವಿಸಿದ್ದರು. ಬೀರೇಶ್ವರ ದೇವಸ್ಥಾನವನ್ನು ಪಟ್ಟಣದ ಕಾಳಿದಾಸ ರಸ್ತೆಯಲ್ಲಿ ಸಮುದಾಯದವರು ನಿರ್ಮಾಣ ಮಾಡಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೈಸೂರು ಮಹಾರಾಜರು ನೀಡಿದ್ದ ಪ್ರತಿಯೊಂದು ವಿಗ್ರಹಕ್ಕೂ ನವರಾತ್ರಿಯ ಸಂದರ್ಭದಲ್ಲಿ ೯ ದಿನಗಳ ಕಾಲ ವಿಶೇಷವಾಗಿ ಪೂಜೆ ನಡೆಸುವ ಜೊತೆಗೆ ರಾತ್ರಿಯಿಂದ ಬೆಳಿಗ್ಗೆವರೆಗೆ ವೀರ ಮಕ್ಕಳ ಕುಣಿತ, ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಕಾಳಿದಾಸ ರಸ್ತೆಯಲ್ಲಿರುವ ಕುರುಬಗೌಡ ಸಮಾಜದ ಎಲ್ಲ ಮನೆಗಳಲ್ಲಿಯೂ ಮಾಂಸಾಹಾರ ಅಡುಗೆ, ಇನ್ನಿತರ ಪದಾರ್ಥಗಳನ್ನು ತಯಾರು ಮಾಡುವುದನ್ನು ನವರಾತ್ರಿಯ ಸಂದರ್ಭದಲ್ಲಿ ಸಂಪೂರ್ಣವಾಗಿ ನಿಷೇಧಿಸಿ ಶ್ರದ್ಧಾ ಭಕ್ತಿಯಿಂದ ಗ್ರಾಮದಲ್ಲಿ ನವರಾತ್ರಿ ಉತ್ಸವ ನಡೆಸಿಕೊಂಡು ಬರುತ್ತಿದ್ದಾರೆ.
ಕಳೆದ ಎಂಟು ದಿನಗಳಿಂದ ಬೀರಪ್ಪ ದೇವಸ್ಥಾನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ನಡೆದು ತೆರೆ ಕಂಡಿತು. ಪಟ್ಟಣ ಹಾಗೂ ತಾಲ್ಲೂಕಿನ ಬಹುತೇಕ ಗ್ರಾಮಗಳಿಂದ ಎಲ್ಲ ಸಮುದಾಯಗಳವರು ಈ ನವರಾತ್ರಿ ಉತ್ಸವದಲ್ಲಿ ಸಡಗರದಿಂದ ಭಾಗವಹಿಸಿದ್ದರು. ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಲು ಕುರುಬ ಸಮಾಜದ ಮುಖಂಡರುಗಳಾದ ಮರುಕೊಳ್ಳೆ ಬೀರೇಗೌಡ, ಗುಡ್ಡಪ್ಪ ಜವರೇಗೌಡರು, ಬೀರಪ್ಪ, ಜವರೇಗೌಡ, ಕುಮಾರೇಗೌಡ, ದೊಡ್ಡೇಗೌಡ, ರುದ್ರೇಗೌಡ, ಹುಚ್ಚೇ ಗೌಡ, ವೀರಭದ್ರೇಗೌಡ, ಪೇಂಟ್ ನಾಗೇಗೌಡ, ಮಾದೇವ, ಮಂಜು, ಹುಚ್ಚೇಗೌಡ, ಯೋಗೀಶ್ ಗೌಡ, ಚೇತು, ಚಂದ್ರು, ಕಾಳಹುಚ್ಚೇಗೌಡ, ಬಾರ್ ಬೀರ, ಗುಡ್ಡಪ್ಪ, ನಾಗಣ್ಣ, ಬೀರೇಗೌಡ, ಮೊಬೈಲ್ ವಿಜಿ, ಹೋಟೆಲ್ ರವಿ, ಸೋಮೇಶ್, ನಿಂಗೇಗೌಡ, ರುದ್ರ, ಟೀಗಾಡಿ ನಾಗ, ಮರಳು ಬೀರಪ್ಪ, ಕುಮಾರೇಗೌಡ, ದೊಡ್ಡೇಗೌಡ, ರುದ್ರೇಗೌಡ, ಹುಚ್ಚೇಗೌಡ, ವೀರ ಭದ್ರೇಗೌಡ, ಮೊದಲಾದವರು ಒಗ್ಗಟ್ಟಾಗಿ ಶ್ರಮಿಸಿದ್ದಾರೆ.
ಹಬ್ಬದ ವಾತಾವರಣ: ಈ ಬಾರಿಯ ನವರಾತ್ರಿ ಉತ್ಸವ ಮತ್ತು ವಿಜಯ ದಶಮಿಯ ಮಿನಿ ದಸರಾ ಪ್ರಯುಕ್ತ ಪಟ್ಟಣದ ವರದರಾಜ ಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ಬೀರಪ್ಪ ದೇವಸ್ಥಾನದಲ್ಲಿ ೯ ದಿನಗಳಿಂದ ನಡೆದ ನವರಾತ್ರಿ ಉತ್ಸವ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ನಡೆಯಲಿರುವ…
ಮೈಸೂರು ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬೇರೆ ಊರುಗಳಿಂದ ಪ್ರತಿನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಆದರೆ ಆಟೋ ಚಾಲಕರು ಪ್ರಯಾಣಿಕರಿಂದ ಮನಸೋ…
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಉತ್ತಮ ಮಳೆ ಅನ್ನದಾತರಲ್ಲಿ ಹೊಸ ಆಶಾಭಾವ ಮೂಡಿಸಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ…
ಮೈಸೂರು: ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆಮಾಡಿದೆ. ನವರಾತ್ರಿ ಉತ್ಸವದ ಅಂಗವಾಗಿ ಜನರು ತಮ್ಮ ಬದುಕಿಗೆ ಆಧಾರವಾಗಿರುವ ಉಪಕರಣಗಳು, ಯಂತ್ರಗಳು…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಅರಮನೆಯ ಆಯುಧ ಪೂಜೆಗೆ ವಿಶೇಷ ಸ್ಥಾನವಿದೆ. ರಾಜವಂಶದ ಪರಂಪರೆ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ…
ರಾಯಚೂರು ಜಿಯ ಐತಿಹಾಸಿಕ ಪಟ್ಟಣ ಎಂದೇ ಗುರುತಿಸಿಕೊಂಡಿರುವ ಮಸ್ಕಿಯ ಶಿಲಾಶಾಸನ ಸ್ಥಳಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಅಶೋಕನ ಹಿಂದಿನ…