ಎಸ್.ಎಸ್.ಭಟ್
ಶಾಸಕರ ಸೂಚನೆಯ ಮೇರೆಗೆ ೧೫ನೇ ಹಣಕಾಸು ಯೋಜನೆಯಡಿ ೨ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ
ನಂಜನಗೂಡು: ನಗರದಾದ್ಯಂತ ಹದಗೆಟ್ಟ ರಸ್ತೆಗಳಿಗೆ ಈಗ ಅಭಿವೃದ್ದಿಯ ಭಾಗ್ಯ ಬಂದಿದ್ದು, ರಸ್ತೆಗಳ ಮರು ಡಾಂಬರೀಕರಣ ಭರದಿಂದ ಸಾಗಿದೆ. ನಗರದ ವಿವಿಧ ವಾರ್ಡುಗಳಲ್ಲಿ ದುಸ್ಥಿತಿಯಲ್ಲಿದ್ದ ರಸ್ತೆಗಳ ದುರಸ್ತಿಗಾಗಿ ೧೫ನೇ ಹಣಕಾಸು ಯೋಜನೆಯಡಿ ೨ ಕೋಟಿ ರೂ. ಗಳನ್ನು ಬಳಸಿಕೊಳ್ಳುವಂತೆ ಶಾಸಕ ದರ್ಶನ್ ಧ್ರುವ ನಾರಾಯಣ ಅವರು ಸೂಚಿಸಿದ್ದರ ಮೇರೆಗೆ ರಸ್ತೆಗಳ ಮರುಡಾಂಬರೀಕರಣ ಆರಂಭವಾಗಿದೆ.
ನಗರಸಭೆಯ ಜನಪ್ರತಿನಿಧಿಗಳ ಅಧಿಕಾರದ ಅವಧಿ ಮುಗಿದ ೧೭ ದಿನಗಳ ನಂತರ ಈ ರಸ್ತೆ ಅಭಿವೃದ್ಧಿ ಕಾರ್ಯ ಆರಂಭವಾಗಿದ್ದು, ಮೊದಲ ಹಂತವಾಗಿ ೧೩, ೨೪ ಮತ್ತು ೧೬ನೇ ವಾರ್ಡ್ ಹಾಗೂ ದೇವೀರಮ್ಮಹಳ್ಳಿ ಬಡಾವಣೆಗಳ ೩೦ ರಸ್ತೆಗಳ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ನಗರದ ಹದಗೆಟ್ಟ ರಸ್ತೆ, ಚರಂಡಿ ಹಾಗೂ ಸಿಸಿ ರಸ್ತೆಗಳ ಕಾಮಗಾರಿಯನ್ನು ಆದ್ಯತೆ ಮೇಲೆನಡೆಸುವಂತೆ ಶಾಸಕರು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದು, ನಗರದಲ್ಲಿ ಅತ್ಯಂತ ದುಸ್ಥಿತಿಗೆ ತಲುಪಿದ್ದ ೧೫ ರಸ್ತೆಗಳನ್ನು ಮಾತ್ರ ಈ ಬಾರಿ ಮರು ಡಾಂಬರೀಕರಣಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇದಲ್ಲದೆ ಸಿಸಿ ರಸ್ತೆ ಹಾಗೂ ಚರಂಡಿ ಇಲ್ಲದ ಕಡೆಗಳಲ್ಲಿ ಚರಂಡಿ ನಿರ್ಮಿಸಲು ಕೂಡ ನಗರಸಭೆ ಮುಂದಾಗಿದೆ.
ಕಾಮಗಾರಿ ನಡೆಯುವ ಸ್ಥಳದಲ್ಲಿ ಹಾಜರಿದ್ದು, ಗುಣಮಟ್ಟ ಕಾಮಗಾರಿ ನಡೆಸುವಂತೆ ಶಾಸಕರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದು, ಡಿಸೆಂಬರ್ ಅಂತ್ಯದೊಳಗೆ ನಗರದ ಬಹಳಷ್ಟು ರಸ್ತೆಗಳು ಮರು ಡಾಂಬರೀಕರಣಗೊಳ್ಳಲಿವೆ. ಈ ಕಾಮಗಾರಿಗಳ ಹೊಣೆ ಹೊತ್ತಿರುವ ಇಂಜಿನಿಯರ್ ಮಹೇಶ ಹಾಗೂ ಶಮಂತ ಅವರು ಖುದ್ದು ಸ್ಥಳದಲ್ಲೇ ಇದ್ದು, ಕಾಮಗಾರಿಯ ನಿರ್ವಹಣೆ ನಡೆಸುತ್ತಿರುವುದು ಕಾಮಗಾರಿಗಳ ಸ್ಥಳದಲ್ಲಿ ಅಧಿಕಾರಿಗಳನ್ನೇ ಕಾಣದಿದ್ದ ನಂಜನಗೂಡು ನಾಗರಿಕರಲ್ಲಿ ಅಚ್ಚರಿ ಮೂಡಿಸಿದೆ.
” ಈ ಸಾಲಿನಲ್ಲಿ ೫೦ ಕೋಟಿ ರೂ. ವಿಶೇಷ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗಾಗಿ ತರಲಾಗಿದೆ. ಅದರಲ್ಲಿ ೧೦ ಕೋಟಿ ರೂ.ಗಳನ್ನು ನಂಜನಗೂಡು ನಗರದ ಹೊಸಬಡಾವಣೆಗಳ ಸಮಗ್ರ ಅಭಿವೃದ್ಧಿಗಾಗಿ ಮೀಸಲಾಗಿರಿಸಲಾಗಿದ್ದು, ಕಾಮಗಾರಿ ಆರಂಭವಾಗಲಿದೆ.”
-ದರ್ಶನ್ ಧ್ರುವನಾರಾಯಣ, ಶಾಸಕ
ನವೀನ್ ಡಿಸೋಜ ಗಮನ ಸೆಳೆಯಲಿದೆ ೧೮ ಅಡಿ ಎತ್ತರದ ಶ್ರೀ ಭಗಂಡೇಶ್ವರ ದೇವಸ್ಥಾನ ಕಲಾಕೃತಿ; ಹಲವು ವಿಭಿನ್ನತೆಯೊಂದಿಗೆ ಆಯೋಜನೆ ಮಡಿಕೇರಿ:…
ಎಚ್.ಎಸ್.ದಿನೇಶ್‌ಕುಮಾರ್ ಸರ್ಕಾರದ ನಿರ್ಧಾರಕ್ಕೆ ಮಾಜಿ ಮಹಾಪೌರರು, ಮಾಜಿ ಸದಸ್ಯರ ವಿರೋಧ ಮೈಸೂರು: ಬಿಬಿಎಂಪಿ ಹೊರತುಪಡಿಸಿ ಮೈಸೂರು ನಗರಪಾಲಿಕೆ ಸೇರಿದಂತೆ ರಾಜ್ಯದ…
ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…
ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…