ಮಡದಿ, ಮಕ್ಕಳಿಗೆ ಸ್ಮರಣೀಯ ವಸ್ತುಗಳ ಖರೀದಿ; ಮತ್ತೊಮ್ಮೆ ನಾಡಹಬ್ಬಕ್ಕೆ ಬರಲು ಇಂಗಿತ
ಮೈಸೂರು: ದಸರಾ ಹಬ್ಬದ ಬಂದೋಬಸ್ತ್ ಕೆಲಸ ನಿಜಕ್ಕೂ ಸಂತೋಷ ತಂದಿದೆ.. ಭದ್ರತೆಯ ಜೊತೆಜೊತೆಗೆ ಪ್ರವಾಸಿ ಸ್ಥಳಗಳನ್ನೂ ವೀಕ್ಷಿಸಿದ್ದೇವೆ.. ಅವಕಾಶ ಸಿಕ್ಕಲ್ಲಿ ಮುಂದಿನ ದಸರಾಗೂ ಬರ್ತೇವೆ… ಇದು ದಸರಾ ಮಹೋತ್ಸವದ ಬಂದೋಬಸ್ತ್ ಕಾರ್ಯಕ್ಕಾಗಿ ಆಗಮಿಸಿದ್ದ ಕೆಲವು ಪೊಲೀಸರ ಸಂತಸದ ಮಾತುಗಳು.
ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಆರಕ್ಷಕರು ಶುಕ್ರವಾರ ದಸರಾ ಹಬ್ಬದ ಸವಿ ನೆನಪಿನ ಬುತ್ತಿಯೊಂದಿಗೆ ತಂತಮ್ಮ ಊರುಗಳತ್ತ ಹೆಜ್ಜೆ ಹಾಕಿದರು. ದಸರಾ ಮಹೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸುವ ಸಲುವಾಗಿ ಮೈಸೂರಿನ ಪೊಲೀಸರ ಜೊತೆಗೆ ಭದ್ರತೆಗಾಗಿ ಕಲ್ಬುರ್ಗಿ, ಕೋಲಾರ, ಹಾಸನ, ಕೊಡಗು, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ರಾಮನಗರ, ಹಾವೇರಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು ನಾಲ್ಕು ಸಾವಿರ ಪೊಲೀಸರು ಮೈಸೂರಿಗೆ ಬಂದಿಳಿದಿದ್ದರು.
ಕಳೆದ ಎರಡು ವಾರಗಳಿಂದ ಕರ್ತವ್ಯನಿರ್ವಹಿಸಿದ್ದ ಅವರು ಗುರುವಾರ ಪಂಜಿನ ಕವಾಯತು ಕಾರ್ಯಕ್ರಮದ ಬಂದೋಬಸ್ತ್‌ಅನ್ನು ಅಂತಿಮವಾಗಿ ನಿರ್ವಹಿಸಿದ್ದರು. ಹೀಗಾಗಿ ಶುಕ್ರವಾರ ಬೆಳಿಗ್ಗೆಯಿಂದಲೇಅವರು ತಮ್ಮ ಕುಟುಂಬದವರನ್ನು ನೋಡುವ ಕಾತರದಿಂದ ೨೦೨೫ರ ದಸರಾ ಮಹೋತ್ಸವಕ್ಕೆ ವಿದಾಯ ಹೇಳಿ ತಮ್ಮ ಸ್ವಸ್ಥಳ ದತ್ತ ತೆರಳಿದರು.
ಶುಕ್ರವಾರ ಬೆಳಿಗ್ಗೆ ನಗರದ ನಜರ್‌ಬಾದ್‌ನಲ್ಲಿರುವ ಸಿಎಆರ್ ಮೈದಾನದ ಬಳಿಯ ಫುಟ್‌ಪಾತ್ ಬಳಿ ಮಾರಾಟಗಾರರಿಂದ ಪೊಲೀಸರು ತಮ್ಮ ಮಕ್ಕಳು ಹಾಗೂ ಕುಟುಂಬದರಿಗೆ ಬೇಕಾದ ಬಟ್ಟೆ, ಪಾದರಕ್ಷೆ,ಆಟಿಕೆಗಳು, ಅಲಂಕಾರಿಕ ವಸ್ತುಗಳನ್ನು ಖರೀದಿಸಿ ಕೊಂಡೊಯ್ದರು.
ದಸರಾ ಹಬ್ಬದ ಭದ್ರತೆಗಾಗಿ ಆಗಮಿಸಿದ್ದ ಪೊಲೀಸರು ದಸರಾ ಕಾರ್ಯಕ್ರಮಗಳಾದ ಆಹಾರ ಮೇಳ, ಯುವ ದಸರಾ, ಯುವ ಸಂಭ್ರಮ, ಅರಮನೆ, ವಸ್ತುಪ್ರದರ್ಶನ, ಮೃಗಾಲಯ ಸೇರಿದಂತೆ ನಗರದ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ತಮಗೆ ವಹಿಸಿದ್ದ ಭದ್ರತಾ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಬಹುಮುಖ್ಯವಾಗಿ ಲಕ್ಷಾಂತರ ಜನ ಸೇರುವ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಕಾರ್ಯಕ್ರಮಗಳ ಬಂದೋಬಸ್ತ್ ಅನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಕರ್ತವ್ಯವನ್ನು ನಿಭಾಯಿಸಿದರು.
ಭದ್ರತೆಗಾಗಿ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳಿಗಾಗಿ ನಗರದ ಬಹುತೇಕ ವಸತಿಗೃಹಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಪೇದೆ ಹಾಗೂ ಧಪೇದಾರ್‌ಗಳಿಗೆ ಪೊಲೀಸ್ ಭವನ, ಸಮುದಾಯಭವನ ಸೇರಿದಂತೆ ಸುಮಾರು ೩೦ ಸ್ಥಳಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಗಿತು
” ನಾನು ದಸರಾ ಬಂದೋಬಸ್ತ್‌ಗೆ ಬಂದು ಒಂದು ತಿಂಗಳಾಯಿತು. ಬಂದೋಬಸ್ತ್ ಜೊತೆಗೆ ಪೊಲೀಸ್ ಬ್ಯಾಂಡ್‌ನಲ್ಲಿ ಕೂಡ ಕೆಲಸ ಮಾಡುವ ಅವಕಾಶ ದೊರಕಿತು. ಮುಂದಿನ ಬಾರಿಯೂ ಬರುವ ಆಸೆ ಇದೆ.”
ಆರ್.ಮಂಜಪ್ಪ, ಶಿವಮೊಗ್ಗ
” ದಸರಾ ಹಬ್ಬದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತದ್ದು ಸಂತಸದ ವಿಚಾರ. ಕಳೆದ ೧೫ ದಿನಗಳ ಅವಧಿಯಲ್ಲಿ ಭದ್ರತೆಯ ಜೊತೆಗೆ ನಾವು ಕೂಡ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದೆವು. ಜಂಬೂ ಸವಾರಿಯನ್ನೂ ವೀಕ್ಷಿಸುವ ಸದವಕಾಶ ದೊರೆಯಿತು. ಇನ್ನೊಮ್ಮೆ ಮೈಸೂರಿಗೆ ಬರುವ ಆಸೆ ಇದೆ.”
ಬಿ.ಜೆ.ರೆಹಮಾನ್, ಪೇದೆ, ಬಳ್ಳಾರಿ
” ಇದು ನನಗೆ ಮೊದಲನೇ ಅನುಭವ. ದಸರಾ ಭದ್ರತೆಗೆಂದು ನಿಯೋಜನೆಗೊಂಡಾಗ ಸಂತಸದಿಂದಲೇ ಒಪ್ಪಿಕೊಂಡೆ. ಇಲ್ಲಿಗೆ ಬಂದ ನಂತರ ಇಲ್ಲಿನ ವಾತಾವರಣ, ಜನರ ನಡವಳಿಕೆ ನನಗೆ ಬಹಳಇಷ್ಟವಾಯಿತು. ನನ್ನಂತಹ ಯುವ ಪೊಲೀಸರು ಭದ್ರತೆಯ ಅನುಭವ ಪಡೆಯುವ] ಉದ್ದೇಶದಿಂದಲಾದರೂ ದಸರಾಗೆ ಮೈಸೂರಿಗೆ ಬರಬೇಕು.”
ಹರೀಶ್, ಪೇದೆ, ಶಿಗ್ಗಾಂವಿ
ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.…
ಬೆಳಗಾವಿ: ಬೆಳಗಾವಿ ಅಧಿವೇಶನ ವಿರೋಧಿಸಿ ಎಂಇಎಸ್ ಪುಂಡರು ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದಿನಿಂದ…
ಬೆಂಗಳೂರು: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಮೊದಲ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್ ಗೈರಾಗಿದ್ದಾರೆ. ಇಂದಿನಿಂದ ಡಿಸೆಂಬರ್.19ರವರೆಗೆ ಅಧಿವೇಶನ…
ಬೆಂಗಳೂರು: ನಾಯಕತ್ವ ಬದಲಾವಣೆ ಗೊಂದಲ, ಸರ್ಕಾರದಲ್ಲಿ ಶೇಕಡಾ.63 ರ್ಷಟು ಕಮಿಷನ್ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ…
ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದ ಬಳಿಕ ಅಲ್ಲಲ್ಲಿ ಕೆರೆ-ಕಟ್ಟೆ, ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣ ಮೇಲಿಂದ ಮೇಲೆ ಭಾರೀ…