Andolana originals

ನಾಡಹಬ್ಬ ದಸರಾ ಯಶಸ್ವಿ

ಮೊದಲ ದಿನ ಸೌಹಾರ್ದತೆ; ಕೊನೆಯ ದಿನ ಭಾವೈಕ್ಯತೆ

ಗೊಂದಲ, ಗದ್ದಲವಿಲ್ಲದೆ ಅಚ್ಚುಕಟ್ಟಾಗಿ ನಡೆದ ಮಹೋತ್ಸವ

ಕೆ.ಬಿ.ರಮೇಶನಾಯಕ

ಮೈಸೂರು: ಲಕ್ಷಾಂತರ ಮನಸ್ಸುಗಳಿಗೆ ಮುದ ನೀಡಿದ ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವ ಸಂಪನ್ನಗೊಂಡಿದ್ದು, ದಸರಾ ಮಹೋತ್ಸವ ಉದ್ಘಾಟಿಸಿದ ಬಾನು ಮುಷ್ತಾಕ್ ಅವರು ಸೌಹಾರ್ದತೆಯ ಸಂದೇಶವನ್ನು ಸಾರಿದರೆ, ಗಾಂಧಿ ಜಯಂತಿ ದಿನ ದಂದು ನಡೆದ ಜಂಬೂಸವಾರಿ ಭಾವೈಕ್ಯತೆಯ ಭಾವವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಗಾಂಧಿ ಜಯಂತಿ ದಿನವೇ ಜಂಬೂಸವಾರಿ ಮೆರವಣಿಗೆ ಇದ್ದುದರಿಂದ ಬಹುತೇಕ ಸ್ತಬ್ಧಚಿತ್ರಗಳು ಗಾಂಧೀಜಿ ಸತ್ಯಾಗ್ರಹ, ಅಹಿಂಸಾ ಚಳವಳಿ, ಉಪ್ಪಿನ ಸತ್ಯಾಗ್ರಹ ಸೇರಿದಂತೆ ಭಾವೈಕ್ಯತೆಯ ವಿಚಾರ, ಸಂದೇಶಗಳನ್ನು ಪ್ರತಿಪಾದಿಸಿದವು.

ಈ ಬಾರಿಯ ದಸರಾ ಮಹೋತ್ಸವದ ಅಂತಿಮ ದಿನವಾದ ಜಂಬೂ ಸವಾರಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲದಿರುವುದು ಸಮಾಧಾನಕರ ಸಂಗತಿ. ಈ ಸಂಬಂಧ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ಜಂಬೂಸವಾರಿ ಮೆರವಣಿಗೆ ವೇಳೆ ಅನಗತ್ಯವಾಗಿ ಉಂಟಾಗುತ್ತಿದ್ದ ಗೊಂದಲ, ಗದ್ದಲವನ್ನು ತಡೆಯಲು ಜಿಲ್ಲಾಡಳಿತ, ನಗರ ಪೊಲೀಸರು ಹಣೆದ ಕಾರ್ಯತಂತ್ರ ಯಶಸ್ವಿಯಾಗಿದೆ. ಅರಮನೆ ಆವರಣದಲ್ಲಿ ಪ್ರೇಕ್ಷಕರ ಒತ್ತಡ ತಪ್ಪಿಸಲು ಜಿಲ್ಲಾಡಳಿತ, ಈ ಬಾರಿ ೧೧ ಸಾವಿರ ಆಸನಗಳನ್ನು ಕಡಿತಗೊಳಿಸಿ, ೪೮ ಸಾವಿರ ಆಸನಗಳ ವ್ಯವಸ್ಥೆ ಮಾಡಿತ್ತು. ಇದರಿಂದ ಯಾವುದೇ ಗೊಂದಲ ಉಂಟಾಗಲಿಲ್ಲ. ಆದರೆ ಪಾಸ್ ಹೊಂದಿದ್ದ ಸಾವಿರಾರು ಮಂದಿ ೧೨ ಗಂಟೆ ನಂತರ ಅರಮನೆ ಆವರಣ ಪ್ರವೇಶಕ್ಕೆ ಮುಂದಾಗಿದ್ದರಿಂದ ಪೊಲೀಸರು ಅವಕಾಶ ನೀಡಲಿಲ್ಲ.

ಪ್ರತಿವರ್ಷ ಅಂಬಾರಿ ಕಟ್ಟುವುದು, ಪುಷ್ಪಾರ್ಚನೆಗೆ ಆನೆ ಕರೆತರುವುದು ವಿಳಂಬವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರಿಂದ ಈ ಬಾರಿ ಜಿಲ್ಲಾಧಿಕಾರಿಗಳೇ ಮುತುವರ್ಜಿವಹಿಸಿ ಸಕಾಲಕ್ಕೆ ಅಂಬಾರಿ ಹಸ್ತಾಂತರವಾಗುವಂತೆ ನೋಡಿಕೊಂಡಿದ್ದರು. ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಿಗದಿತ ಸಮಯಕ್ಕೆ ಪುಷ್ಪಾರ್ಚನೆಗೆ ಗಜಪಡೆಯನ್ನು ಕರೆತರಲು ಸಫಲರಾದರು. ಮೆರವಣಿಗೆ ವೇಳೆ ಉಪ ಸಮಿತಿ ಸದಸ್ಯರಿಗೆ ನಿರ್ಬಂಧ ಹೇರಿದ್ದರಿಂದ್ದ ಸ್ತಬ್ಧಚಿತ್ರಗಳು, ಜಾನಪದ ಕಲಾತಂಡಗಳು ಕಿರಿಕಿರಿ ಇಲ್ಲದೆ ಸಾಗಿದವು.

ಜನರ ಮನ ಗೆದ್ದ ಕ್ಯಾಪ್ಟನ್ ಅಭಿಮನ್ಯು ಜತೆಗೆ ಮೊದಲ ಬಾರಿಗೆ ಹದಿನಾಲ್ಕು ಆನೆಗಳು ಅರಮನೆಯಿಂದ ಬನ್ನಿಮಂಟಪದ ತನಕ ಹೆಜ್ಜೆ ಸ್ವಲ್ಪವೂ ವಿಚಲಿತವಾಗದೆ ಹೆಜ್ಜೆ ಹಾಕಿದರೆ. ಭವಿಷ್ಯದ ಗಜಪಡೆ ನಾಯಕ ಭೀಮ ಆನೆಯು ಪ್ರೇಕ್ಷಕರ ಗಮನ ಸೆಳೆಯಿತು. ದಸರಾ ಆರಂಭವಾದರೂ ಅನುದಾನದ ಕೊರತೆ ಎದುರಿಸುತ್ತಿದ್ದ ಉಪ ಸಮಿತಿಗಳಿಗೆ ಈ ಬಾರಿ ಬೇಗನೆ ಹಣ ಬಿಡುಗಡೆ ಮಾಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಯಶಸ್ವಿಯಾದರು.

ಆರನೇ ಬಾರಿಗೆ ದಸರಾ ಮಹೋತ್ಸವದ ಹೊಣೆ ಹೊತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಜಿಲ್ಲಾಡಳಿತಕ್ಕೆ ಸಂಪೂರ್ಣ ಹೊಣೆ ವಹಿಸಿದ್ದರು. ಅದರಂತೆ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ನೇತೃತ್ವದ ತಂಡ ಒಂದು ತಿಂಗಳಿಂದ ಪ್ರತಿಯೊಂದು ಉಪ ಸಮಿತಿಗಳ ಕಾರ್ಯಕ್ರಮಗಳೂ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡಿತ್ತು. ಉಪ ಸಮಿತಿಯ ಜವಾಬ್ದಾರಿ ಹೊತ್ತ ಅಧಿಕಾರಿಗಳು ಅಧಿಕಾರೇತರ ಸಮಿತಿಯನ್ನು ನಿಯೋಜಿಸುವ ಹೊತ್ತಿಗೆ ಸಣ್ಣ ಆರೋಪಗಳಿಗೂ ಎಡೆಮಾಡಿಕೊಡದೆ ಕೆಲಸ ಮುಗಿಸಿದ್ದರಿಂದ ಸರ್ಕಾರದ ಮೆಚ್ಚುಗೆಗೆ ಕಾರಣವಾಗಿದ್ದಾರೆ.

ಆಂದೋಲನ ಡೆಸ್ಕ್

Recent Posts

ದಸರಾ ಉನ್ನತ ಮಟ್ಟದ ಸಭೆ: ದಸರಾ ಪಾಸ್‌ಗಳನ್ನು ಸಂಪೂರ್ಣ ತಿರಸ್ಕರಿಸಿದ ಸಂಸದ ಯದುವೀರ್‌ ಒಡೆಯರ್‌

ಬೆಂಗಳೂರು: ಇಂದು ನಡೆದ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಭೆಯಲ್ಲಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು…

22 mins ago

ಜೀಪಿನ ಮೇಲೆ ಬಿದ್ದ ಮರದ ಕೊಂಬೆ: ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

ಗೋಣಿಕೊಪ್ಪ: ಪೊನ್ನಂಪೇಟೆ ಪಟ್ಟಣದಲ್ಲಿ ಭಾರಿ ಗಾಳಿ-ಮಳೆಯ ನಡುವೆ ಚಲಿಸುತ್ತಿದ್ದ ಜೀಪಿನ ಮೇಲೆ ಮರದ ಬೃಹತ್ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ…

59 mins ago

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಅ.11ಕ್ಕೆ ದಸರಾ ಉದ್ಘಾಟನೆ

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಸಂಭ್ರಮಕ್ಕೆ ದಿನಾಂಕ ಫಿಕ್ಸ್‌ ಆಗಿದೆ. ಅಕ್ಟೋಬರ್.‌11ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವ…

2 hours ago

ಜನವಸತಿ ಪ್ರದೇಶದಲ್ಲಿ ಸಂಚರಿಸಿ ಆತಂಕ ಸೃಷ್ಟಿಸಿದ ಕಾಡಾನೆ

ಸುಂಟಿಕೊಪ್ಪ: ಕೊಡಗರಹಳ್ಳಿಯ ಜನವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಸಂಚರಿಸುವ ಮೂಲಕ ಈ ಭಾಗದ ನಿವಾಸಿಗಳಲ್ಲಿ ಅತಂಕ ಮೂಡಿಸಿದ ಘಟನೆಯೊಂದು ವರದಿಯಾಗಿದೆ. ಕಾಡಾನೆಯೊಂದು…

3 hours ago

ವಯನಾಡು ಭೂಕುಸಿತ ದುರಂತ ಪ್ರಕರಣ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ವಯನಾಡು: ವಯನಾಡ್ ಭೂಕುಸಿತ ಸ್ಥಳದಲ್ಲಿ ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ದುರಂತದಲ್ಲಿ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆ ಏಳಕ್ಕೆ ಏರಿದೆ…

3 hours ago

ಚೀನಾ ಪ್ರವಾಹದ ಮಧ್ಯೆ 900ಕ್ಕೂ ಹೆಚ್ಚು ವಿಷಕಾರಿ ಹಾವುಗಳು ನಾಪತ್ತೆ: ನೀರಿಗೆ ಇಳಿಯದಂತೆ ಜನತೆಗೆ ಸೂಚನೆ

ಬೀಜಿಂಗ್:‌ ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾವುಗಳ ಸಂತಾನೋತ್ಪತ್ತಿ ಕೇಂದ್ರಗಳು ಹಾನಿಗೊಳಗಾಗಿವೆ. ಪರಿಣಾಮ ಗುವಾಂಗ್ಕ್ಸಿ ಪ್ರದೇಶದಲ್ಲಿ ಹೆಚ್ಚು ಸರ್ಪಗಳು ತಪ್ಪಿಸಿಕೊಂಡಿವೆ.…

4 hours ago